• Home
  • »
  • News
  • »
  • lifestyle
  • »
  • Health Care: ಚಳಿಗಾಲದಲ್ಲಿ ಬಿಟ್ಟೂ ಬಿಡದೇ ಕಾಡುವ ಅನಾರೋಗ್ಯಕ್ಕಿದೆ ಆಯುರ್ವೇದದಲ್ಲಿ ಪರಿಹಾರ

Health Care: ಚಳಿಗಾಲದಲ್ಲಿ ಬಿಟ್ಟೂ ಬಿಡದೇ ಕಾಡುವ ಅನಾರೋಗ್ಯಕ್ಕಿದೆ ಆಯುರ್ವೇದದಲ್ಲಿ ಪರಿಹಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಯುರ್ವೇದ ತಜ್ಞರು ಕೆಮ್ಮು ಮತ್ತು ಶೀತ, ಗಂಟಲು ಕಿರಿಕಿರಿ ಕಡಿಮೆ ಮಾಡಲು ಕೆಲವು ಪದಾರ್ಥಗಳ ಬಳಕೆ ಬಗ್ಗೆ ಹೇಳಿದ್ದಾರೆ. ಅದರಲ್ಲಿ ಪ್ರಮುಖವಾದದ್ದು ಶುಂಠಿ. ಚಳಿಗಾಲದ ಆರೋಗ್ಯ ಸಮಸ್ಯೆ ಮತ್ತು ಅಸ್ವಸ್ಥತೆ ತೊಡೆದು ಹಾಕಲು ಇದು ಸಹಾಯ ಮಾಡುತ್ತದೆ. ಒಣ ಶುಂಠಿ ಮತ್ತು ಕರಿಮೆಣಸು ಸೋಂಕು ತಡೆಯುತ್ತದೆ.

ಮುಂದೆ ಓದಿ ...
  • Share this:

    ಚಳಿಗಾಲ (Winter) ಆರಂಭವಾಗಿದ್ದು, ರಾತ್ರಿ ಮತ್ತು ಬೆಳಗ್ಗೆ (Night And Morning) ಹೆಚ್ಚು ಚಳಿಯ ವಾತಾವರಣ (Cold Weather) ಇರುತ್ತದೆ. ಈ ವಾತಾವರಣ ಹಲವು ಜನರಲ್ಲಿ (People) ಶೀತ ಮತ್ತು ನೆಗಡಿ, ಜ್ವರಕ್ಕೂ ಕಾರಣವಾಗಿದೆ. ಹಗಲಿನಲ್ಲಿಯೂ ಈ ತಂಪಿನ ಪರಿಣಾಮ ಗೋಚರಿಸುತ್ತದೆ. ಬದಲಾಗುತ್ತಿರುವ ತಾಪಮಾನ ಹಲವು ಕಾಯಿಲೆಗಳನ್ನು ಹೊತ್ತು ತರುತ್ತದೆ. ಅದರಲ್ಲಿ ನೆಗಡಿ, ಕೆಮ್ಮು, ಕಫ, ಗಂಟಲು ನೋವು ಇತ್ಯಾದಿ ಸಾಮಾನ್ಯ ಸಮಸ್ಯೆಗಳು. ಇದನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯವಾಗಿದೆ. ಸರಿಯಾಗಿ ನೋಡಿಕೊಳ್ಳದಿದ್ದರೆ ಸಮಸ್ಯೆಯು ಹೆಚ್ಚು ಕಫ, ಒಣ ಕೆಮ್ಮು ಉಂಟು ಮಾಡುತ್ತದೆ. ಇದು ಬೇಗ ಕಡಿಮೆ ಆಗಲ್ಲ. ತುಂಬಾ ದಿನಗಳವರೆಗೆ ಕಾಡುತ್ತದೆ.


    ಚಳಿಗಾಲದ ಆರೋಗ್ಯ ಸಮಸ್ಯೆ ಮತ್ತು ಅಸ್ವಸ್ಥತೆ ತೊಡೆದು ಹಾಕಲು ಆಯುರ್ವೇದ ಸಲಹೆ


    ಇದನ್ನು ತೊಡೆದು ಹಾಕುವುದು ತುಂಬಾ ಕಷ್ಟಕರ. ಹೀಗಾಗಿ ನೆಗಡಿ, ಕೆಮ್ಮು, ಕಫ ದೂರ ಮಾಡಲು ಈ ಗಿಡಮೂಲಿಕೆ ಬಳಸಿ. ಆಯುರ್ವೇದ ತಜ್ಞರು ಕೆಮ್ಮು ಮತ್ತು ಶೀತ, ಗಂಟಲು ಕಿರಿಕಿರಿ ಕಡಿಮೆ ಮಾಡಲು ಕೆಲವು ಪದಾರ್ಥಗಳ ಬಳಕೆ ಬಗ್ಗೆ ಹೇಳಿದ್ದಾರೆ. ಅದರಲ್ಲಿ ಒಂದು ಶುಂಠಿ. ಚಳಿಗಾಲದ ಆರೋಗ್ಯ ಸಮಸ್ಯೆ ಮತ್ತು ಅಸ್ವಸ್ಥತೆ ತೊಡೆದು ಹಾಕಲು ಸಹಾಯ ಮಾಡುತ್ತದೆ.


    ಶೀತ ಮತ್ತು ಕೆಮ್ಮು ತೊಡೆದು ಹಾಕಲು ಪರಿಣಾಮಕಾರಿ ಮಾರ್ಗಗಳು


    ಕರಿಮೆಣಸು, ತುಳಸಿ, ವೀಳ್ಯದೆಲೆ ಮತ್ತು ಒಣ ಶುಂಠಿ ಮಿಶ್ರಣ


    ಒಣ ಶುಂಠಿ ಮತ್ತು ಕರಿಮೆಣಸು ಉರಿಯೂತದ ಗುಣಲಕ್ಷಣ ಹೊಂದಿದೆ. ತುಳಸಿ ಮತ್ತು ಪಾನ್ ಪ್ರತಿಕಾಯ ಉತ್ಪಾದನೆ ಹೆಚ್ಚಿಸುತ್ತದೆ. ಇದರಿಂದ ಸೋಂಕನ್ನು ಹರಡುವ ಸೂಕ್ಷ್ಮಜೀವಿಗಳ ಪರಿಣಾಮ ಕಡಿಮೆಯಾಗುತ್ತದೆ. ಶೀತ ಮತ್ತು ಕೆಮ್ಮಿನ ಸೋಂಕನ್ನು ತೊಡೆದುಹಾಕಬಹುದು.




    ಒಂದು ಪಾತ್ರೆಯಲ್ಲಿ 1 ಗ್ಲಾಸ್ ನೀರು ಮತ್ತು ಎಲ್ಲಾ ಪದಾರ್ಥಗಳನ್ನು ಹಾಕಿ. ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಅದು ಕುದಿಯುವಾಗ ನೀರನ್ನು ಫಿಲ್ಟರ್ ಮಾಡಿ ಮತ್ತು ಕುಡಿಯಿರಿ. ಇದಕ್ಕೆ ಬೇಕೆನಿಸಿದರೆ ಬೆಲ್ಲವನ್ನು ಸೇರಿಸಬಹುದು. ದಿನಕ್ಕೆ ಎರಡು ಬಾರಿ ಕುಡಿಯಿರಿ.


    ಅರಿಶಿನ, ಜೇನುತುಪ್ಪ ಮತ್ತು ಶುಂಠಿ ರಸ ಮಿಶ್ರಣ


    ಅರಿಶಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಲಕ್ಷಣ ಸೋಂಕು ಉಂಟು ಮಾಡುವ ಬ್ಯಾಕ್ಟೀರಿಯಾವನ್ನು ತಡೆಯುತ್ತದೆ. ಜೇನುತುಪ್ಪವು ಗಂಟಲಿಗೆ ಪರಿಹಾರ ನೀಡುತ್ತದೆ. ಶುಂಠಿಯಲ್ಲಿರುವ ಉರಿಯೂತದ ಗುಣಲಕ್ಷಣ ಶೀತ ಮತ್ತು ಕೆಮ್ಮನ್ನು ತಡೆಯುತ್ತದೆ.


    ಒಂದು ಬಟ್ಟಲಿನಲ್ಲಿ ಒಂದು ಚಮಚ ಜೇನುತುಪ್ಪ, ಅರ್ಧ ಚಮಚ ಶುಂಠಿ ರಸ ಮತ್ತು ಎರಡು ಚಿಟಿಕೆ ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಚಮಚದಲ್ಲಿ ಸಿರಪ್‌ ನಂತೆ ಕುಡಿಯಿರಿ. ಶೀತ ಮತ್ತು ಕೆಮ್ಮು ಸೋಂಕು ತಡೆಗೆ ಇದು ಪರಿಣಾಮಕಾರಿ.


    ಒಣ ಶುಂಠಿ ಪುಡಿ, ಬೆಲ್ಲ ಮತ್ತು ಅರಿಶಿನ ಮಿಶ್ರಣ


    ಬೆಲ್ಲವು ನೈಸರ್ಗಿಕ ಕ್ಲೆನ್ಸಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ದೀರ್ಘ ಕಾಲದಿಂದ ಸಂಗ್ರಹವಾಗಿರುವ ಕಫ ತೆಗೆಯುತ್ತದೆ. ಅರಿಶಿನ ಮತ್ತು ಶುಂಠಿಯ ಗುಣಲಕ್ಷಣಗಳು ಸೋಂಕನ್ನು ಉಂಟು ಮಾಡುವ ಸೂಕ್ಷ್ಮಜೀವಿಗಳನ್ನು ತಡೆಯುತ್ತವೆ. ಶುಂಠಿ ಪುಡಿ, ಬೆಲ್ಲ ಮತ್ತು ಅರಿಶಿನವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಸಣ್ಣ ಉಂಡೆ ಮಾಡಿ. ಗಂಟಲು ತುಂಬಾ ನೋಯುತ್ತಿದ್ದರೆ ಮತ್ತು ನಿಮಗೆ ಒಣ ಕಫದ ಸಮಸ್ಯೆ ಇದ್ದರೆ ಅಥವಾ ಕೆಮ್ಮು ಮತ್ತು ಶೀತ ಇದ್ದರೆ ಅದಕ್ಕೆ ಕೆಲವು ಹನಿ ತುಪ್ಪ ಸೇರಿಸಿ ಸೇವಿಸಿ.


    ಇದನ್ನೂ ಓದಿ: ಬ್ರೌನ್ ಬ್ರೆಡ್​ ಅನ್ನು ಹೀಗೆ ತಿಂದ್ರೆ ಬಿಪಿ ಸಮಸ್ಯೆಗೆ ಪರಿಹಾರ ಸಿಗುತ್ತೆ


    ಉಪ್ಪು ನೀರು ಗಾರ್ಗ್ಲಿಂಗ್ ಮಾಡಿ


    ಗಾರ್ಗಲ್ ಮಾಡಿದರೆ ಕಫ ತೆಗೆಯುತ್ತದೆ. ಒಂದು ಲೋಟ ನೀರನ್ನು ಬಿಸಿ ಮಾಡಿ ಮತ್ತು ಅದಕ್ಕೆ ಅರ್ಧ ಚಮಚಕ್ಕಿಂತ ಸ್ವಲ್ಪ ಕಡಿಮೆ ಉಪ್ಪನ್ನು ಸೇರಿಸಿ ಗಾರ್ಗಲ್ ಮಾಡಿ. ದಿನಕ್ಕೆ 3 ಬಾರಿ ಇದನ್ನು ಮಾಡಿದರೆ ಪರಿಣಾಮ ಕಾಣಬಹುದು.

    Published by:renukadariyannavar
    First published: