• Home
  • »
  • News
  • »
  • lifestyle
  • »
  • Dry Skin: ಚಳಿಗಾಲದಲ್ಲಿ ಒಣ ಚರ್ಮ ಸಮಸ್ಯೆ ಕಾಡುತ್ತಿದೆಯಾ? ಹಾಗಿದ್ರೆ ಈ ಮನೆಮದ್ದು ಟ್ರೈ ಮಾಡಿ

Dry Skin: ಚಳಿಗಾಲದಲ್ಲಿ ಒಣ ಚರ್ಮ ಸಮಸ್ಯೆ ಕಾಡುತ್ತಿದೆಯಾ? ಹಾಗಿದ್ರೆ ಈ ಮನೆಮದ್ದು ಟ್ರೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿಯೊಬ್ಬರಿಗೂ ಆರೈಕೆಯ ಅಗತ್ಯವಿದೆ. ಚಳಿಗಾಲದಲ್ಲಿ ಚರ್ಮ ಉರಿ, ದದ್ದು, ಕೆರೆತ ಸಮಸ್ಯೆ ಶುರುವಾಗುತ್ತದೆ. ಈ ಸಮಸ್ಯೆ ಹೋಗಲಾಡಿಸಲು ನೀವು ಕೆಲವು ಮನೆಮದ್ದುಗಳನ್ನು ಸಹ ಪ್ರಯತ್ನಿಸಬಹುದು. ಹಾಗಾದರೆ ಒಣ ತ್ವಚೆಯ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬ ಬಗ್ಗೆ ತಿಳಿಯೋಣ...

  • Share this:

    ಪ್ರತಿಯೊಬ್ಬರ ಚರ್ಮ ವಿಭಿನ್ನವಾಗಿರುತ್ತದೆ (Different). ಹಾಗಾಗಿಯೇ ತ್ವಚೆಯ ಆರೈಕೆಯು (Skin Care) ವಿಭಿನ್ನವಾಗಿರುತ್ತದೆ. ಕೆಲವರು ನಮಗೆ ಈ ಕ್ರೀಂ (Cream) ತ್ವಚೆಗೆ ಆಗಿ ಬರಲ್ಲ, ಗುಳ್ಳೆ, ಅಲರ್ಜಿ (Allergy) ಉಂಟಾಗುತ್ತದೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ಹಾಗಾಗಿ ಕೆಲವರು ಕೆಲವು ಬ್ರ್ಯಾಂಡ್ ನ (Brand) ತ್ವಚೆಯ ಕ್ರೀಂ ಮತ್ತು ತ್ವಚೆಯ ಉತ್ಪನ್ನಗಳನ್ನು ಬಳಕೆ ಮಾಡುವುದಿಲ್ಲ. ಹಾಗಂತ ತ್ವಚೆಯ ಆರೈಕೆ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು. ಪ್ರತಿಯೊಬ್ಬರಿಗೂ ಆರೈಕೆಯ ಅಗತ್ಯವಿದೆ.  ಆದರೆ ಈ ಬದಲಾಗುತ್ತಿರುವ ಋತುವಿನಲ್ಲಿ ಒಣ ತ್ವಚೆಗೆ ವಿಶೇಷ ಕಾಳಜಿಯ ಅಗತ್ಯವಿದೆ. ಯಾಕಂದ್ರೆ ಒಣ ತ್ವಚೆಯ ಮೇಲೆ ಲೇಪಿಸಲಾದ ಕ್ರೀಮ್‌ ಗಳು, ಮಾಯಿಶ್ಚರೈಸರ್‌ಗಳು ಮತ್ತು ತೈಲಗಳು ಸ್ವಲ್ಪ ಸಮಯ ಮಾತ್ರ ಪರಿಣಾಮ ಬೀರುತ್ತವೆ.


    ಚಳಿಗಾಲದಲ್ಲಿ ಡ್ರೈ ಸ್ಕಿನ್ ಸಮಸ್ಯೆ


    ಚಳಿಗಾಲದಲ್ಲಿ ಸಾಕು ಚರ್ಮ ಉರಿ, ದದ್ದು, ಕೆರೆತ ಸಮಸ್ಯೆ ಶುರುವಾಗುತ್ತದೆ. ಈ ಸಮಸ್ಯೆ ಹೋಗಲಾಡಿಸಲು ನೀವು ಕೆಲವು ಮನೆಮದ್ದು ಸಹ ಪ್ರಯತ್ನಿಸಬಹುದು. ಹಾಗಾದರೆ ಒಣ ತ್ವಚೆಯ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂದು ತಿಳಿಯೋಣ.


    ಒಣ ಚರ್ಮದ ಪೋಷಣೆಗೆ ಈ ಮನೆ ಮದ್ದು ಪ್ರಯತ್ನಿಸಿ


    ಅಲೋವೆರಾ


    ಎನ್‌ಸಿಬಿಐ ಸೈಟ್‌ನಲ್ಲಿ ಪ್ರಕಟವಾದ ಪಬ್‌ಮೆಡ್ ಸೆಂಟ್ರಲ್ ಸಂಶೋಧನೆಯ ಪ್ರಕಾರ, ಅಲೋವೆರಾದಲ್ಲಿರುವ ಪಾಲಿಸ್ಯಾಕರೈಡ್ ಗುಣಲಕ್ಷಣಗಳು ಚರ್ಮದಲ್ಲಿ ತೇವಾಂಶ ಉಳಿಸಲು ಸಹಕಾರಿ. ಮತ್ತು ಚರ್ಮವು ಒಣಗುವುದನ್ನು ತಡೆಯುತ್ತದೆ. ಅಲ್ಲದೆ ಇದರಲ್ಲಿರುವ ಉರಿಯೂತದ ಗುಣಲಕ್ಷಣಗಳು ಎಸ್ಜಿಮಾ ಸಮಸ್ಯೆ,




    ಚರ್ಮದ ಸ್ಥಿತಿಗಳ ಮೇಲೆ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತದೆ. ಅಲೋವೆರಾ ಎಲೆ ಕತ್ತರಿಸಿ ಅದರ ಜೆಲ್ ತೆಗೆದು ರಾತ್ರಿ ಮಲಗುವ ಮುನ್ನ ಚರ್ಮಕ್ಕೆ ಹಚ್ಚಿರಿ. ನೀವು ಬಯಸಿದರೆ ನೀವು ಅದನ್ನು ದಿನದಲ್ಲಿ ಬಳಸಬಹುದು.


    ಅವಕಾಡೊ


    ಸಂಶೋಧನೆಯ ಪ್ರಕಾರ, ಆವಕಾಡೊದಲ್ಲಿರುವ ವಿಟಮಿನ್ ಎ ಚರ್ಮವನ್ನು ಆರೋಗ್ಯವಾಗಿಡುತ್ತದೆ. ಇದು ತಿರುಳಿನಿಂದ ಬೇರ್ಪಡಿಸಿದ ಎಣ್ಣೆಯಲ್ಲಿರುವ ಖನಿಜ ಮತ್ತು ವಿಟಮಿನ್‌ ಚರ್ಮಕ್ಕೆ ಪ್ರಯೋಜನಕಾರಿ ಎಂದು ಹೇಳಿದೆ. ಮತ್ತು ಒಣ ಚರ್ಮವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.


    ಒಂದು ಬಟ್ಟಲಿನಲ್ಲಿ ಅರ್ಧ ಆವಕಾಡೊ ಮ್ಯಾಶ್ ಮಾಡಿ ಅದಕ್ಕೆ 2 ಚಮಚ ಜೇನುತುಪ್ಪ ಸೇರಿಸಿ. ಈಗ ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಚ್ಚಿರಿ. 20 ನಿಮಿಷದ ನಂತರ ಸರಳ ನೀರಿನಿಂದ ಮುಖ ಸ್ವಚ್ಛಗೊಳಿಸಿ. ವಾರಕ್ಕೆ ಎರಡು ಬಾರಿ ಅನ್ವಯಿಸಿ.


    ಗ್ಲಿಸರಿನ್ ತೇವಾಂಶ ಇರಿಸುತ್ತದೆ


    ಗ್ಲಿಸರಿನ್ ಬಳಕೆಯು ಒಣ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಒಣ ಚರ್ಮ ಮತ್ತು ತುಟಿ ಒಡೆದವರು ಬಳಸಿ. ಗ್ಲಿಸರಿನ್ ಚರ್ಮದ ತೇವಾಂಶ ಉಳಿಸುತ್ತದೆ. ಶುಷ್ಕತೆಯಿಂದ ರಕ್ಷಿಸುತ್ತದೆ ಮತ್ತು ದೀರ್ಘಕಾಲದವರೆಗೆ ಚರ್ಮವನ್ನು ಮೃದುವಾಗಿರಿಸುತ್ತದೆ.


    ಗ್ಲಿಸರಿನ್‌ನಲ್ಲಿ ಅಗತ್ಯವಿರುವಷ್ಟು ರೋಸ್ ವಾಟರ್ ಅನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಸ್ನಾನದ ನಂತರ ನೀವು ಅದನ್ನು ದೇಹದಾದ್ಯಂತ ಅನ್ವಯಿಸಬಹುದು. ಒಡೆದ ಹಿಮ್ಮಡಿಗೂ ಹಚ್ಚಬಹುದು.


    ಜೇನುತುಪ್ಪ


    ಚರ್ಮದ ಸಮಸ್ಯೆ ಹೋಗಲಾಡಿಸಲು ಜೇನುತುಪ್ಪವನ್ನು ವರ್ಷಗಳಿಂದ ಬಳಸಲಾಗುತ್ತಿದೆ. ಇದು ನೈಸರ್ಗಿಕವಾಗಿ ಚರ್ಮವನ್ನು ತೇವಗೊಳಿಸುತ್ತದೆ. ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


    ಇದನ್ನೂ ಓದಿ: ಚಳಿಗಾಲದಲ್ಲಿ ಬಿರಿಯುವ ತುಟಿಗಳ ಆರೈಕೆಗೆ ಗ್ಲಿಸರಿನ್ ಹೀಗೆ ಬಳಸಿ!


    ಒಂದು ಬಟ್ಟಲಿನಲ್ಲಿ ಎರಡು ಚಮಚ ಜೇನುತುಪ್ಪ ಮತ್ತು ಅರ್ಧ ಚಮಚ ದಾಲ್ಚಿನ್ನಿ ಪುಡಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ 20 ನಿಮಿಷಗಳ ಕಾಲ ಅನ್ವಯಿಸಿ ಮತ್ತು ನಂತರ ಸರಳ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ. ವಾರಕ್ಕೆ ಮೂರು ಬಾರಿ ಅನ್ವಯಿಸಿ.

    Published by:renukadariyannavar
    First published: