• Home
  • »
  • News
  • »
  • lifestyle
  • »
  • Hair Care: ಚಳಿಗಾಲದಲ್ಲಿ ಒಣ ಕೂದಲ ಸಮಸ್ಯೆಯೇ? ನಿಮ್ಮ ಕೇಶ ರಕ್ಷಣೆಗಾಗಿ ಹೀಗೆ ಮಾಡಿ

Hair Care: ಚಳಿಗಾಲದಲ್ಲಿ ಒಣ ಕೂದಲ ಸಮಸ್ಯೆಯೇ? ನಿಮ್ಮ ಕೇಶ ರಕ್ಷಣೆಗಾಗಿ ಹೀಗೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲ ಆರಂಭವಾದ ಕೂಡಲೇ ತೇವಾಂಶವು ಕೂದಲಿನಿಂದ ಕಣ್ಮರೆಯಾಗುತ್ತದೆ. ಇದು ಕೂದಲು ಒಣಗಿ ನಿರ್ಜೀವವಾಗುವಂತೆ ಮಾಡುತ್ತದೆ. ಹೆಚ್ಚಿನ ಜನರು ಕೂದಲ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಹೀಗಾಗಿ ಕೂದಲ ಸಮಸ್ಯೆ ಹೆಚ್ಚುತ್ತದೆ.

  • Share this:

    ಬದಲಾಗುತ್ತಿರುವ ಋತುವಿನಲ್ಲಿ ಕೂದಲ ಆರೈಕೆ (Hair Care) ಮಾಡುವುದು ತುಂಬಾ ಮುಖ್ಯ. ಅದರಲ್ಲೂ ಚಳಿಗಾಲದಲ್ಲಿ (Winter) ಉಂಟಾಗುವ ಒಣ ಕೂದಲು ಸಮಸ್ಯೆ (Hair Problem) ಮತ್ತು ತೇವಾಂಶ ಕಳೆದುಕೊಳ್ಳುವ ಸಮಸ್ಯೆ ಹೆಚ್ಚು ಕಾಡುತ್ತದೆ. ಹೀಗಾಗಿ ಚಳಿಗಾಲದಲ್ಲಿ ಕೂದಲ ಆರೈಕೆ ಮಾಡುವುದು ಒಂದು ಸವಾಲಿದ್ದಂತೆ. ಕೂದಲು ಆರೈಕೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದರೆ, ಕೆಲವು ಟಿಪ್ಸ್ ಇಲ್ಲಿದೆ. ಚಳಿಗಾಲದ ಆರಂಭವಾದ ಕೂಡಲೇ ತೇವಾಂಶವು ಕೂದಲಿನಿಂದ ಕಣ್ಮರೆಯಾಗುತ್ತದೆ. ಇದು ಕೂದಲು ಒಣಗಿ ನಿರ್ಜೀವವಾಗುವಂತೆ ಮಾಡುತ್ತದೆ. ಹೀಗಾಗಿ ತಲೆಹೊಟ್ಟು, ಕೂದಲು ಉದುರುವುದು, ಬಿಳಿ ಕೂದಲು ಸೇರಿ ಹಲವು ಸಮಸ್ಯೆಗಳು ಕಾಡುತ್ತವೆ.


    ಕೂದಲ ಆರೋಗ್ಯ ಕಡೆಗಣಿಸದಿರಿ


    ಹೆಚ್ಚಿನ ಜನರು ಕೂದಲ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಹೆಚ್ಚಾಗಿ ಕಡೆಗಣಿಸುತ್ತಾರೆ. ಹೀಗಾಗಿ ಕೂದಲ ಸಮಸ್ಯೆ ಹೆಚ್ಚುತ್ತದೆ. ಚಳಿಗಾಲದಲ್ಲಿ ಕೂದಲಿನ ಆರೈಕೆಯಲ್ಲಿ ಸ್ವಲ್ಪ ಅಸಡ್ಡೆ ತೋರಿದ್ರೂ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕೂದಲಿನ ತೇವಾಂಶದ ಕೊರತೆಯು ಕೂದಲು ಒಣಗುವಂತೆ ಮಾಡುತ್ತದೆ.


    ಚಳಿಗಾಲದಲ್ಲಿ ಕೂದಲಿಗೆ ವಿಶೇಷ ಕಾಳಜಿ ಬೇಕು. ಇಂದು ನಾವು ಚಳಿಗಾಲದಲ್ಲಿ ಕೂದಲ ಆರೋಗ್ಯಕ್ಕೆ ಕೆಲವು ವಿಶೇಷ ವಿಷಯಗಳನ್ನು ಇಲ್ಲಿ ನೋಡೋಣ. ಈ ಮೂಲಕ ಕೂದಲಿನ ಸಮಸ್ಯೆ ಹೋಗಲಾಡಿಸಬಹುದು.


    ಇದನ್ನೂ ಓದಿ:


    ಉಗುರು ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡುವುದು


    ಬದಲಾಗುತ್ತಿರುವ ಋತುವಿನಲ್ಲಿ ಕೂದಲು ಒಣಗಿ ನಿರ್ಜೀವವಾಗುತ್ತದೆ. ಇದಕ್ಕೆ ದೊಡ್ಡ ಕಾರಣವೆಂದರೆ ತೇವಾಂಶದ ಕೊರತೆ. ಹಾಗಾಗಿ ನೆತ್ತಿಯಿಂದ ತುದಿಗೆ ಎಣ್ಣೆ ಹಚ್ಚಿ. ಇದು ಕೂದಲು ಅಗತ್ಯವಾದ ಪೋಷಣೆ ಪಡೆಯುವಂತೆ ಮಾಡುತ್ತದೆ. ತೇವಾಂಶವು ಉಳಿಯುತ್ತದೆ.


    ತೆಂಗಿನ ಎಣ್ಣೆಗೆ 4 ರಿಂದ 5 ಬಾದಾಮಿ ಸೇರಿಸಿ ಮತ್ತು ಅಗತ್ಯವಿರುವಂತೆ ಬಿಸಿ ಮಾಡಿ. ನಂತರ ಹಗುರವಾದ ಕೈಗಳಿಂದ ಉಗುರು ಬೆಚ್ಚಗಿನ ಎಣ್ಣೆಯಿಂದ ನಿಮ್ಮ ನೆತ್ತಿಗೆ ಮಸಾಜ್ ಮಾಡಿ ಮತ್ತು ರಾತ್ರಿಯಿಡೀ ಬಿಡಿ.


    ಸೌಮ್ಯ ಶಾಂಪೂ ಬಳಸಿ


    ನೆತ್ತಿಯ ಮೇಲಿರುವ ಕೊಳೆ ಅಥವಾ ಹೆಚ್ಚುವರಿ ಎಣ್ಣೆ, ಡ್ಯಾಂಡ್ರಫ್ ಸಮಸ್ಯೆ ತೆಗೆದು ಹಾಕಲು ಶಾಂಪೂ ಸಹಾಯ ಪಡೆಯಿರಿ. ಚಳಿಗಾಲದಲ್ಲಿ ಮೈಲ್ಡ್ ಶಾಂಪೂ ಬಳಸಿ. ಇದು ಕೂದಲಿನಲ್ಲಿ ತೇವಾಂಶ ಉಳಿಸಿಕೊಳ್ಳುತ್ತದೆ. ಶಾಂಪೂ ಮಾಡುವಾಗ ನಿಮ್ಮ ಕೂದಲನ್ನು ಸರಳ ನೀರಿನಿಂದ ತೊಳೆಯಿರಿ.


    ಕಂಡೀಷನಿಂಗ್ ಮಾಡುವುದು


    ಚಳಿಗಾಲದಲ್ಲಿ ಗಾಳಿಯ ಶುಷ್ಕತೆ ಕೂದಲಿನಲ್ಲಿ ತೇವಾಂಶದ ಕೊರತೆ ಉಂಟು ಮಾಡುತ್ತದೆ. ಹಾಗಾಗಿ ಕೂದಲಿಗೆ ಅಗತ್ಯ ಪೋಷಣೆ ನೀಡಲು ಕಂಡಿಷನರ್ ಬಳಸಿ. ಶಾಂಪೂ ಮಾಡಿದ ನಂತರ ಕಂಡಿಷನರ್ ಹಾಕಿ. ಇದು ಅಗತ್ಯ ಪೋಷಣೆ ನೀಡುತ್ತದೆ.


    ಹೇರ್ ಪ್ಯಾಕ್ ಹಾಕಿರಿ


    ಶೀತ ವಾತಾವರಣದಲ್ಲಿ ಕೂದಲು ತನ್ನ ಹೊಳಪು ಕಳೆದುಕೊಳ್ಳುತ್ತದೆ. ತಿಂಗಳಿಗೆ 2 ಬಾರಿ ಹೇರ್ ಮಾಸ್ಕ್ ಅನ್ನು ಬಳಸಿ. ಮೊಟ್ಟೆಗೆ ಒಂದು ಚಮಚ ತೆಂಗಿನ ಎಣ್ಣೆ, ಒಂದು ಚಮಚ ಗ್ಲಿಸರಿನ್ ಮತ್ತು ಒಂದು ಚಮಚ ಜೇನುತುಪ್ಪ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಅನ್ವಯಿಸಿ. ಎರಡು ಗಂಟೆಗಳ ನಂತರ ಸೌಮ್ಯವಾದ ಶಾಂಪೂವಿನಿಮದ ಕೂದಲು ತೊಳೆಯಿರಿ.


    ಇದನ್ನೂ ಓದಿ: ಈ ಲಕ್ಷಣಗಳಿದ್ರೆ ನಿಮ್ಮ ಕಿಡ್ನಿಯಲ್ಲಿ ಸಮಸ್ಯೆ ಇದೆ ಎಂದರ್ಥ..!


    ಹೇರ್ ಸೀರಮ್ ಬಳಸಿ


    ಚಳಿಗಾಲದಲ್ಲಿ ಕೂದಲಿಗೆ ಸ್ವಲ್ಪ ಹೆಚ್ಚಿನ ಕಾಳಜಿ ಬೇಕು. ಕೂದಲನ್ನು ಕಂಡೀಷನಿಂಗ್ ಮಾಡಿದ ನಂತರವೂ ಸೀರಮ್ ಬಳಸಿ. 6 ಹನಿ ಕೈಯಲ್ಲಿ ತೆಗೆದುಕೊಂಡು ಸ್ವಲ್ಪ ಒದ್ದೆಯಾದ ಕೂದಲಿನ ಮೇಲೆ ಅನ್ವಯಿಸಿ. ಆದರೆ ನೆತ್ತಿಗೆ ಮಸಾಜ್ ಮಾಡಬೇಡಿ.

    Published by:renukadariyannavar
    First published: