ಚಳಿಗಾಲದಲ್ಲಿ (Winter) ಕೂದಲಿನ ರಕ್ಷಣೆ (Hair Protect) ಮಾಡುವುದು ತುಂಬಾ ಕಷ್ಟಕರ. ಯಾಕಂದ್ರೆ ಚಳಿಗಾಲದ ಗಾಳಿಗೆ (Wind) ಕೂದಲು ಒಣಗಿ (Dry), ನಿರ್ಜೀವವಾಗಿ ಬಿಡುತ್ತವೆ. ಇದು ನಿಮ್ಮ ಕೂದಲಿನ ಮೇಲೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ. ಈ ಚಳಿಗಾಲದ ಋತುವಿನಲ್ಲಿ ಕೂದಲು ಶುಷ್ಕ ಮತ್ತು ನಿರ್ಜೀವವಾಗಿ ಕಾಣಲು ಶುರು ಆಗುತ್ತದೆ. ಆಗ ನೀವು ನಿಮ್ಮ ಆರೋಗ್ಯದ (Health) ಜೊತೆಗೆ ಕೂದಲಿಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವ ಅಗತ್ಯವಿದೆ. ಚಳಿಗಾಲದಲ್ಲಿ ಬೆಲ್ಲ, ಸಾಸಿವೆ ಮತ್ತು ಎಳ್ಳನ್ನು ಸೇವಿಸಲಾಗುತ್ತದೆ. ಅದೇ ರೀತಿ ನಮ್ಮ ಕೂದಲಿಗೆ ಕೂಡ ಎಳ್ಳು ಉತ್ತಮ ಪದಾರ್ಥ. ಇದು ಚಳಿಗಾಲದ ಆರೈಕೆಯ ಭಾಗವಾದ್ರೆ ಹೆಚ್ಚು ಕೂದಲ ರಕ್ಷಣೆಗೆ ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ಕೂದಲ ಸಂರಕ್ಷಣೆ ಸಲಹೆ
ಅನೇಕ ಜನರು ಚಳಿಗಾಲದಲ್ಲಿ ಕೂದಲಿಗೆ ಎಳ್ಳೆಣ್ಣೆ ಬಳಕೆ ಮಾಡಲು ಮುಂದಾಗುತ್ತಾರೆ. ಎಳ್ಳೆಣ್ಣೆಯಿಂದ ಕೂದಲ ಆರೈಕೆ ಮಾಡುವಂತೆ ಸೂಚನೆ ನೀಡುತ್ತಾರೆ. ಮತ್ತು ಇದು ತುಂಬಾ ಪ್ರಯೋಜನಕಾರಿ ಆಗಿದೆ. ಆದರೆ ಎಳ್ಳಿನ ಎಣ್ಣೆ ಕೂದಲಿಗೆ ಪ್ರಯೋಜನಕಾರಿಯೇ ಎಂದು ಮೊದಲು ತಿಳಿಯಬೇಕು.
ಎಳ್ಳೆಣ್ಣೆ ಒಂದು ರೀತಿಯ ಚಳಿಗಾಲದ ಆಹಾರ ಆಗಿದೆ. ಎಳ್ಳ ಸೇವನೆ ಮಾಡಿದರೆ ದೇಹವು ಬೆಚ್ಚಗೆ ಇರುತ್ತದೆ. ಆದರೆ ಕೂದಲಿನ ಆರೋಗ್ಯಕ್ಕೆ ಎಳ್ಳೆಣ್ಣೆ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ? ಎಳ್ಳಿನ ಎಣ್ಣೆಯ ಬಗ್ಗೆ ಅಧ್ಯಯನ ಏನು ಹೇಳುತ್ತವೆ ಅಂತಾ ಇಲ್ಲಿ ನೋಡೋಣ.
ಎನ್ ಸಿಬಿಐ ಪ್ರಕಾರ, ಕೂದಲಿಗೆ ಎಳ್ಳು ಎಣ್ಣೆ ಪ್ರಯೋಜನಕಾರಿ ಅಂತಾ ಹೇಳಲಾಗಿದೆ. ಎಳ್ಳು ಎಣ್ಣೆ ಇದು ಕೂದಲಿನ ಬೆಳವಣಿಗೆ ಉತ್ತೇಜಿಸುತ್ತದೆ. ಎಳ್ಳಿನ ಎಣ್ಣೆ ವಿಟಮಿನ್ ಇ, ಬಿ ಕಾಂಪ್ಲೆಕ್ಸ್ ಮತ್ತು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಫಾಸ್ಫರಸ್ ಮತ್ತು ಪ್ರೋಟೀನ್ ಸೇರಿ ಹಲವು ರೀತಿಯ ಖನಿಜಗಳಿವೆ. ಇದು ಕೂದಲನ್ನು ಬೇರುಗಳಿಂದ ಬಲಪಡಿಸುವ ಕೆಲಸ ಮಾಡುತ್ತದೆ ಮತ್ತು ಅದನ್ನು ಆಳವಾಗಿ ಪೋಷಿಸಲು ಸಹಕಾರಿ ಆಗಿದೆ.
ಎಳ್ಳಿನ ಎಣ್ಣೆ ಕೂದಲ ಆರೈಕೆಗೆ ಹೇಗೆ ಪ್ರಯೋಜನ ನೀಡುತ್ತದೆ?
ಎಳ್ಳಿನ ಎಣ್ಣೆ ಕೂದಲು ಬೆಳವಣಿಗೆಗೆ ಸಹಕಾರಿ
ಆಯುರ್ವೇದ ತಜ್ಞರ ಪ್ರಕಾರ, ಎಳ್ಳಿನ ಎಣ್ಣೆಯಿಂದ ನೆತ್ತಿಗೆ ಮಸಾಜ್ ಮಾಡಿದರೆ ಕೂದಲಿನ ಕಿರುಚೀಲಗಳು ಮತ್ತು ಸಾಫ್ಟ್ ಆಗುತ್ತವೆ. ಮತ್ತು ಸೂಕ್ತ ಹಾಗೂ ಅಗತ್ಯ ಪೋಷಣೆ ಪಡೆಯಲು ಸಹಾಯ ಮಾಡುತ್ತದೆ. ಇದು ಉತ್ತಮ ಕೂದಲು ಬೆಳವಣಿಗೆಗೆ ಕಾರಣವಾಗಿದೆ. ಕೂದಲಿಗೆ ಎಳ್ಳಿನ ಎಣ್ಣೆ ಬಳಕೆಯು ರಾಸಾಯನಿಕಗಳಿಂದ ಉಂಟಾಗುವ ಯಾವುದೇ ಹಾನಿ ಸರಿಪಡಿಸಲು ಸಹಾಯ ಮಾಡುತ್ತದೆ.
ಒಣ ಕೂದಲ ಆರೈಕೆಗೆ ಇದು ಪ್ರಯೋಜನಕಾರಿ
ಎಳ್ಳು ಎಣ್ಣೆಯು ಕೂದಲು ಮತ್ತು ನೆತ್ತಿ ಮೃದುಗೊಳಿಸಲು ಸಹಕಾರಿ. ಜೊತೆಗೆ ಉತ್ತಮ ಕಂಡೀಷನಿಂಗ್ ನೀಡುತ್ತದೆ. ಇದು ಶಾಖದ ಹಾನಿಕಾರಕ ಪರಿಣಾಮಗಳಿಂದ ಕೂದಲನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಹಾಗೂ ಕೂದಲನ್ನು ಆರೋಗ್ಯವಾಗಿಸುತ್ತದೆ. ಎಳ್ಳಿನ ಎಣ್ಣೆ ಕೂದಲಿನ ಬೇರುಗಳಲ್ಲಿನ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ. ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗುವ ಸಮಸ್ಯೆ ತಡೆಯುತ್ತದೆ. ಕೂದಲಿನ ನೈಸರ್ಗಿಕ ಬಣ್ಣವನ್ನು ದೀರ್ಘಕಾಲ ಕಾಪಾಡುತ್ತದೆ.
ಎಳ್ಳಿನ ಎಣ್ಣೆ ಬ್ಯಾಕ್ಟೀರಿಯಾ ಸೋಂಕು ತಗುಲದಂತೆ ರಕ್ಷಿಸುತ್ತದೆ
ಎಳ್ಳಿನ ಎಣ್ಣೆ ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಇದು ತಲೆಹೊಟ್ಟು ಹೋಗಲಾಡಿಸಿ, ನೆತ್ತಿಯ ತುರಿಕೆ ಗುಣಪಡಿಸುತ್ತದೆ.
ಇದನ್ನೂ ಓದಿ: ಬೆಳಗಿನ ತಿಂಡಿಗೆ ಟೇಸ್ಟಿ ಮತ್ತು ಹೆಲ್ದೀ ಗ್ರಾನೋಲಾ ರೆಸಿಪಿ ಮಾಡುವುದು ಹೇಗೆ?
ಕೂದಲಿಗೆ ಎಳ್ಳಿನ ಎಣ್ಣೆ ಹೀಗೆ ಬಳಸಿ
ಸ್ವಲ್ಪ ಎಳ್ಳಿನ ಎಣ್ಣೆ ಬಿಸಿ ಮಾಡಿ, ಕೂದಲನ್ನು ಚೆನ್ನಾಗಿ ಮಸಾಜ್ ಮಾಡಿ. ಸುಮಾರು 20 ನಿಮಿಷ ಬಿಡಿ. ನಂತರ ಸೌಮ್ಯ ಶಾಂಪೂ ಬಳಸಿ ತೊಳೆಯಿರಿ. ತೆಂಗಿನ ಎಣ್ಣೆಯಲ್ಲಿ ಎಳ್ಳಿನ ಎಣ್ಣೆ ಬೆರೆಸಿ ಸ್ವಲ್ಪ ಬಿಸಿ ಮಾಡಿ. ಅದನ್ನು ಕೂದಲು ತೊಳೆಯುವ ಮೊದಲು ಹಚ್ಚಿ ರಾತ್ರಿ ಹಾಗೇ ಬಿಟ್ಟು ಬೆಳಗ್ಗೆ ತೊಳೆಯಿರಿ. ಎಳ್ಳೆಣ್ಣೆ ಜೊತೆ ಬೇವಿನ ಎಣ್ಣೆ ಸೇರಿಸಿ ಕೂದಲಿಗೆ ಹಚ್ಚಿ. ಇದು ತಲೆಹೊಟ್ಟು, ತುರಿಕೆ ಎಲ್ಲ ಹೋಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ