• Home
  • »
  • News
  • »
  • lifestyle
  • »
  • Lip Care: ಚಳಿಗಾಲದಲ್ಲಿ ಬಿರಿಯುವ ತುಟಿಗಳ ಆರೈಕೆಗೆ ಗ್ಲಿಸರಿನ್ ಹೀಗೆ ಬಳಸಿ!

Lip Care: ಚಳಿಗಾಲದಲ್ಲಿ ಬಿರಿಯುವ ತುಟಿಗಳ ಆರೈಕೆಗೆ ಗ್ಲಿಸರಿನ್ ಹೀಗೆ ಬಳಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ಮುಖ ಮತ್ತು ದೇಹದ ಚರ್ಮವನ್ನು ಮೃದುವಾಗಿಸಲು ತುಂಬಾ ಜನರು ಗ್ಲಿಸರಿನ್ ಬಳಕೆ ಮಾಡುತ್ತಾರೆ. ನಾವು ತುಟಿಗಳಿಗೂ ಗ್ಲಿಸರಿನ್ ಬಳಕೆ ಮಾಡುತ್ತೇವೆ. ಇದು ತುಟಿಗಳಿಗೆ ಪೋಷಣೆ ನೀಡಿ ಆರೋಗ್ಯಕರ ಮತ್ತು ಮೃದುವಾಗಿಸುತ್ತದೆ. ಗ್ಲಿಸರಿನ್ ಸತ್ತ ಚರ್ಮದ ಕೋಶಗಳನ್ನು ರಿಮೂವ್ ಮಾಡುತ್ತೆ.

ಮುಂದೆ ಓದಿ ...
  • Share this:

    ಚಳಿಗಾಲ (Winter) ಬರುತ್ತಿದ್ದಂತೆಯೇ ತ್ವಚೆಯಲ್ಲಿ ಬದಲಾವಣೆ (Skin Changes) ಆಗುತ್ತದೆ. ಚಳಿಗಾಲದಲ್ಲಿ ತ್ವಚೆ ಒಣಗುತ್ತದೆ (Skin Dry) ಹಾಗೂ ಬಿರಿಯುತ್ತದೆ. ಕೆಲವರು ಡ್ರೈ ಸ್ಕಿನ್ ಸಮಸ್ಯೆ ಹೊಂದಿದ್ದರೆ ಅವರಿಗೆ ಮತ್ತಷ್ಟು ಸಮಸ್ಯೆ ಹೆಚ್ಚುತ್ತದೆ. ಅಂತಹವರು ತ್ವಚೆಯ ಆರೈಕೆ (Skin Care) ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಚಳಿಗೆ ತಕ್ಷಣ ನಮ್ಮ ತ್ವಚೆ ಒಣಗುತ್ತದೆ. ಮುಖ ಡ್ರೈ ಆಗುತ್ತದೆ. ತುಟಿ ಒಣಗಿ ಸಿಪ್ಪೆ ಸುಲಿಯುತ್ತದೆ. ಇದು ದಿನವೂ ಚಳಿಗಾಲ ಮುಗಿಯುವವರೆಗೆ ಇರುವ ಸಮಸ್ಯೆ ಆಗಿದೆ. ತೇವಾಂಶದ ಕೊರತೆಯಿಂದ ಕೆಲವರು ತುಟಿಗಳನ್ನು ಆಗಾಗ್ಗೆ ನಾಲಿಗೆಯಿಂದ ಸ್ಪರ್ಶಿಸುತ್ತಾರೆ. ಆದರೆ ಇದು ತುಟಿಗಳು ಮತ್ತಷ್ಟು ಬಿರುಕು ಬಿಡಲು ಕಾರಣವಾಗುತ್ತದೆ.


    ತುಟಿಗಳ ಆರೈಕೆಗೆ ಗ್ಲಿಸರಿನ್ ಬಳಕೆ


    ಚಳಿಗಾಲದಲ್ಲಿ ಮುಖ ಮತ್ತು ದೇಹದ ಚರ್ಮವನ್ನು ಮೃದುವಾಗಿಸಲು ತುಂಬಾ ಜನರು ಗ್ಲಿಸರಿನ್ ಬಳಕೆ ಮಾಡುತ್ತಾರೆ. ನಾವು ತುಟಿಗಳಿಗೂ ಗ್ಲಿಸರಿನ್ ಬಳಕೆ ಮಾಡುತ್ತೇವೆ. ಇದು ತುಟಿಗಳಿಗೆ ಪೋಷಣೆ ನೀಡಿ, ಆರೋಗ್ಯಕರ ಮತ್ತು ಮೃದುವಾಗಿಸುತ್ತದೆ. ಗ್ಲಿಸರಿನ್ ಸತ್ತ ಚರ್ಮದ ಕೋಶಗಳನ್ನು ರಿಮೂವ್ ಮಾಡುತ್ತೆ.


    ತುಟಿಗಳಿಗೆ ಗ್ಲಿಸರಿನ್ ಬಳಸುವುದು ಹೇಗೆ?


    ಡಾ.ಶಿಪ್ರಾ ಅವರು ತುಳಿಗಳಿಗೆ ಗ್ಲಿಸರಿನ್ ನ್ನು ಹೇಗೆ ಬಳಸಬೇಕೆಂದು ಹೇಳಿದ್ದಾರೆ. ಜೊತೆಗೆ ತುಟಿಗಳಿಗೆ ಗ್ಲಿಸರಿನ್ ಹೇಗೆ ಕೆಲಸ ಮಾಡುತ್ತೆ ಎಂದು ಹೇಳಿದ್ದಾರೆ. ಗ್ಲಿಸರಿನ್ ತುಟಿ ಮೃದುವಾಗಿಸುತ್ತದೆ. ಪ್ರತಿದಿನ ತುಟಿಗಳಿಗೆ ಗ್ಲಿಸರಿನ್ ಹಚ್ಚುವುದು ಪೋಷಿಸುತ್ತದೆ. ತುಟಿಗಳ ಚರ್ಮವು ಮೃದು ಮತ್ತು ಆರೋಗ್ಯವಾಗಿರುತ್ತದೆ.




    ಗ್ಲಿಸರಿನ್ ಬಳಕೆ ಸುರಕ್ಷಿತ


    ಆಹಾರ ಮತ್ತು ಔಷಧ ಆಡಳಿತ ಗ್ಲಿಸರಿನ್ ಬಳಕೆ ಸುರಕ್ಷಿತ ಎನ್ನುತ್ತದೆ. ಗ್ಲಿಸರಿನ್ ಬಾಯೊಳಗೆ ಹೋಗುವುದು ಆರೋಗ್ಯಕ್ಕೆ ಹಾನಿಕರ. ಚಳಿಗಾಲದಲ್ಲಿ ತುಟಿಗಳು ಒಣಗಿ, ಸಿಪ್ಪೆ ಸುಲಿಯುತ್ತಿದ್ದರೆ ಗ್ಲಿಸರಿನ್ ತುಟಿಗಳನ್ನು ಹೈಡ್ರೀಕರಿಸುತ್ತದೆ. ಗ್ಲಿಸರಿನ್ ಒಣ, ಫ್ಲಾಕಿ ತುಟಿ, ರಕ್ತಸ್ರಾವ, ಒಡೆದ ಮತ್ತು ಕಪ್ಪು ತುಟಿಗಳ ಸಮಸ್ಯೆ ನಿವಾರಿಸುತ್ತದೆ.


    ತುಟಿಗಳಿಗೆ ಗ್ಲಿಸರಿನ್ ಅನ್ವಯಿಸುವ ಪ್ರಯೋಜನಗಳು


    ಚರ್ಮದ ಕಿರಿಕಿರಿ ತಡೆಯುತ್ತದೆ


    ತುಟಿಗಳ ಶುಷ್ಕತೆ ಚರ್ಮದ ಕಿರಿಕಿರಿ ಉಂಟು ಮಾಡುತ್ತದೆ. ಗ್ಲಿಸರಿನ್ ತುಟಿಗಳನ್ನು ಹೈಡ್ರೀಕರಿಸುತ್ತದೆ. ಮಾಲಿನ್ಯ ಅಥವಾ ಬಲವಾದ ಸೂರ್ಯನ ಬೆಳಕಿನಿಂದ ತುಟಿಗಳ ಚರ್ಮ ಸುಡುತ್ತಿದ್ದರೆ ಗ್ಲಿಸರಿನ್ ತುಟಿಗಳ ಮೇಲೆ ರಕ್ಷಣಾತ್ಮಕ ಪದರ ರೂಪಿಸುತ್ತದೆ.


    ಸತ್ತ ಚರ್ಮ ತೆಗೆದು ಹಾಕುತ್ತದೆ


    ತುಟಿಗಳ ಮೇಲೆ ಡೆಡ್ ಸ್ಕಿನ್ ಸಂಗ್ರಹ ಸಮಸ್ಯೆ ಗ್ಲಿಸರಿನ್ ನಿವಾರಿಸುತ್ತದೆ.  ತುಟಿಗಳನ್ನು ಹೈಡ್ರೀಕರಿಸಿ, ಮೃದುಗೊಳಿಸುತ್ತದೆ. ಪ್ರತಿದಿನ ತುಟಿಗಳಿಗೆ ಗ್ಲಿಸರಿನ್ ಹಚ್ಚಿದರೆ ಪೋಷಣೆ ನೀಡುತ್ತದೆ.


    ಕಪ್ಪು ತುಟಿಗಳಿಗೆ ಗುಲಾಬಿ ಹೊಳಪು ನೀಡುವುದು ಹೇಗೆ?


    ಕಪ್ಪು ತುಟಿ ಸಮಸ್ಯೆ ನಿವಾರಿಸಿ, ಗುಲಾಬಿ ತುಟಿ ಹೊಂದಲು ಗ್ಲಿಸರಿನ್ ಬಳಸಿ. ಇದರ ಬಳಕೆಯು ತುಟಿಗಳ ಕಲೆಗಳನ್ನು ತೆಗೆದು ಹಾಕುತ್ತದೆ.


    ಲಿಪ್ ಪಿಗ್ಮೆಂಟೇಶನ್ ನಿವಾರಣೆಗೆ ಗ್ಲಿಸರಿನ್ ಬಳಸುವುದು ಹೇಗೆ?


    ತುಟಿಗಳ ಮೇಲೆ ಗ್ಲಿಸರಿನ್ ನ್ನು ನೇರವಾಗಿ ಅನ್ವಯಿಸಿ. ಒಳ್ಳೆಯ ಕಂಪನಿಯ ಗ್ಲಿಸರಿನ್ ಖರೀದಿಸಿ. ಹತ್ತಿ ಉಂಡೆಗಳನ್ನು ಗ್ಲಿಸರಿನ್‌ ನಲ್ಲಿ ಅದ್ದಿ ತುಟಿಗಳ ಮೇಲೆ ಅನ್ವಯಿಸಿ. ರಾತ್ರಿ ಮಲಗುವ ಮುನ್ನ ಅನ್ವಯಿಸಬಹುದು.


    ನಿಂಬೆ ಜೊತೆ ಗ್ಲಿಸರಿನ್


    ಒಂದು ಟೀಸ್ಪೂನ್ ನಿಂಬೆ ರಸದಲ್ಲಿ ಎರಡು ಪಿಂಚ್ ಗ್ಲಿಸರಿನ್ ಮಿಶ್ರಣ ಮಾಡಿ. ಪ್ರತಿ ರಾತ್ರಿ ಮಲಗುವ ಮುನ್ನ ತುಟಿಗೆ ಹಚ್ಚಿ. ಇದು ಒಡೆದ ತುಟಿಗಳನ್ನು ಗುಣಪಡಿಸುತ್ತದೆ. ಕಪ್ಪು ತುಟಿಗಳ ಬಣ್ಣ ಕಡಿಮೆ ಮಾಡುತ್ತದೆ.


    ಹಗಲಲ್ಲೂ ಹಚ್ಚಬಹುದು


    ಗ್ಲಿಸರಿನ್ ಅನ್ನು ದಿನದ ಯಾವುದೇ ಸಮಯದಲ್ಲಿ ತುಟಿಗಳಿಗೆ ಹಚ್ಚಬಹುದು. ಗ್ಲಿಸರಿನ್ ಕೆಲವು ಹನಿಗಳನ್ನು ತಟಿಗೆ ಹಚ್ಚಿರಿ. ಆಹಾರ ಸೇವನೆ ಮೊದಲು ಗ್ಲಿಸರಿನ್ ತೆಗೆದುಹಾಕಿ.


    ಇದನ್ನೂ ಓದಿ: ತೆಂಗಿನ ಎಣ್ಣೆ v/s ಆಲಿವ್ ಎಣ್ಣೆಯಲ್ಲಿ ಯಾವುದು ಬೆಸ್ಟ್? ಯಾಕೆ? ಫುಲ್ ಡೀಟೆಲ್ಸ್ ಇಲ್ಲಿದೆ


    ರೋಸ್ ವಾಟರ್ ಮತ್ತು ಗ್ಲಿಸರಿನ್


    ಅರ್ಧ ಟೀಚಮಚ ಗ್ಲಿಸರಿನ್ ಮತ್ತು ಟೀ ಚಮಚ ರೋಸ್ ವಾಟರ್ ಮಿಶ್ರಣ ಮಾಡಿ ಹಚ್ಚಿರಿ.

    Published by:renukadariyannavar
    First published: