ಚಳಿಗಾಲದಲ್ಲಿ (Winter) ಬರುವ ಸಾಂಕ್ರಾಮಿಕ ಕಾಯಿಲೆ (Viral Disease) ತಡೆಗಟ್ಟಲು ಕೇವಲ ಆಸ್ಪತ್ರೆಗೆ ಅಲೆಯುವುದು, ಹೆಚ್ಚು ಔಷಧ (Medicine) ಸೇವಿಸುವ ಬದಲು ಕೆಲವು ಮನೆಮದ್ದು (Home Remedies) ಟ್ರೈ ಮಾಡಿ. ಇದು ನೈಸರ್ಗಿಕವಾಗಿ ನಿಮ್ಮ ಅಸ್ವಸ್ಥತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೆಗಡಿ, ಶೀತ, ಜ್ವರ ಚಳಿಗಾಲದಲ್ಲಿ ಕಾಡುವ ಸಾಮಾನ್ಯ ಕಾಯಿಲೆ ಇವುಗಳ ನಿವಾರಣೆಗೆ ನೀವು ಕೆಲವು ಪಾನೀಯ ಮಾಡಿ ಸೇವಿಸಿ, ಇದು ನಿಮಗೆ ನೈಸರ್ಗಿಕವಾಗಿ ಕಾಯಿಲೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚಳಿಯ ತಂಪು ವಾತಾವರಣವು ಹಲವು ಕಾಯಿಲೆ ಹೊತ್ತು ತರುತ್ತದೆ. ಈ ಋತುವಿನಲ್ಲಿ ವೈವಿಧ್ಯಮಯ ಪೌಷ್ಟಿಕಾಂಶಭರಿತ ಆಹಾರ ಸೇವನೆ ಮಾಡಿದ್ರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.
ಕಾಲೋಚಿತ ಕಾಯಿಲೆ ತಡೆಗೆ ಮನೆಮದ್ದು
ಚಳಿಗಾಲದಲ್ಲಿ ದುರ್ಬಲವಾಗುವ ರೋಗ ನಿರೋಧಕ ಶಕ್ತಿ ಹೆಚ್ಚಿಸುಲು ಸಹ ಕೆಲವು ಪಾನೀಯ ಸೇವನೆ ಸಹಾಯ ಮಾಡುತ್ತದೆ. ಈ ಪಾನೀಯಗಳು ಕೆಮ್ಮು, ನೆಗಡಿ, ಜ್ವರ ಸೇರಿ ಕೆಲವು ಕಾಲೋಚಿತ ಕಾಯಿಲೆ ತಡೆಗೆ ಸಹಕಾರಿ. ನೀವು ಮನೆಮದ್ದಾಗಿ ಅರಿಶಿನ ಬಳಸಿ.
ಅರಿಶಿನ ಹಾಲು
ಅರಿಶಿನ ಶೀತ ಮತ್ತು ಜ್ವರ ತಡೆಯುತ್ತದೆ. ಹಾಗೂ ಸೈನಸ್, ಕೀಲು ನೋವು ಮತ್ತು ಅಜೀರ್ಣ ಸಮಸ್ಯೆ ನಿವಾರಿಸಲು ಸಹಕಾರಿ. ಜೊತೆಗೆ ಕಾಲೋಚಿತ ಕಾಯಿಲೆ ಗುಣಪಡಿಸಲು ಹಾಗೂ ದೇಹದಲ್ಲಿ ಉಂಟಾಗುವ ಗಾಯಗಳನ್ನು ಗುಣಪಡಿಸುತ್ತದೆ. ಇದಕ್ಕಾಗಿ ಅರಿಶಿನ ಹಾಲು ಸೇವಿಸಿ ಅಂತಾರೆ ತಜ್ಞರು.
ಪೌಷ್ಟಿಕತಜ್ಞ ಮತ್ತು ಆಹಾರ ತಜ್ಞೆ ಶಿಖಾ ಅಗರ್ವಾಲ್ ಶರ್ಮಾ ಹೇಳುವ ಪ್ರಕಾರ, ಅರಿಶಿನ ಹಾಲು ಸೇವಿಸಿದರೆ ನೋಯುತ್ತಿರುವ ಗಂಟಲು ಮತ್ತು ಬ್ಯಾಕ್ಟೀರಿಯಾದ ಸೋಂಕು ಸಮಸ್ಯೆಯಿಂದ ಪರಿಹಾರ ಪಡೆಯಬಹುದು ಅಂತಾರೆ. ಅನೇಕ ರೋಗಗಳಿಂದ ರಕ್ಷಣೆ ನೀಡುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಹಾಲಿನಲ್ಲಿ ಅರಿಶಿನದ ಜೊತೆಗೆ ಜಾಯಿಕಾಯಿ, ಜೇನುತುಪ್ಪ ಮತ್ತು ದಾಲ್ಚಿನ್ನಿ ಸಹ ಸೇರಿಸಿ ಕುಡಿಯಬಹುದು. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಅರಿಶಿನದ ಜೊತೆಗೆ ಅಜ್ವೈನ್ ನೀರು ಸೇವಿಸಿ
ನೀರಿಗೆ ಅರಿಶಿನ ಹಾಕಿ ಸೇವಿಸಬಹುದು. ಬೆಳಿಗ್ಗೆ ಅಜ್ವೈನ್ ನೀರು ಹಾಗೂ ಅದಕ್ಕೆ ಅರಿಶಿನ ಹಾಕಿ ಕುಡಿದರೆ ಆರೋಗ್ಯ ಚೆನ್ನಾಗಿರುತ್ತದೆ. ಅರಿಶಿನ ಮತ್ತು ಅಜ್ವೈನ್ ನೀರು ಜೀರ್ಣಕ್ರಿಯೆ, ಚಯಾಪಚಯ ಹೆಚ್ಚಿಸಿ, ತೂಕವನ್ನು ಕಡಿಮೆ ಮಾಡುತ್ತದೆ. ಅರಿಶಿನ ಮತ್ತು ಅಜ್ವೈನ್ ನೀರು ತುಂಬಾ ಸುಲಭ. ರಾತ್ರಿಯಿಡೀ ನೀರಿನಲ್ಲಿ ಅಜ್ವೈನ್ ನೆನೆಸಿ ಮತ್ತು ಬೆಳಿಗ್ಗೆ ಆ ನೀರಿಗೆ ಅರಿಶಿನ ಹಾಕಿ ಫಿಲ್ಟರ್ ಮಾಡಿ ಕುಡಿಯಿರಿ.
ಅರಿಶಿನ ಮತ್ತು ಕಿತ್ತಳೆ ಸ್ಮೂಥಿ
ಕಿತ್ತಳೆ ರಸಕ್ಕೆ ವೆನಿಲ್ಲಾ, ಮೊಸರು, ದಾಲ್ಚಿನ್ನಿ ಮತ್ತು ಸ್ವಲ್ಪ ಅರಿಶಿನ ಸೇರಿಸಿ ಕುಡಿಯಿರಿ. ಇದು ರುಚಿ ಮತ್ತು ಆರೋಗ್ಯ ಎರಡನ್ನೂ ವೃದ್ಧಿಸುತ್ತದೆ. ಆರೋಗ್ಯಕ್ಕೆ ಅರಿಶಿನ ಕಿತ್ತಳೆ ಸ್ಮೂಥಿ ಹಲವು ಲಾಭ ತಂದು ಕೊಡುತ್ತದೆ.
ಅರಿಶಿನ ಮತ್ತು ಕಿತ್ತಳೆಯ ಡಿಟಾಕ್ಸ್ ಪಾನೀಯ
ಕಿತ್ತಳೆ ರಸಕ್ಕೆ ಶುಂಠಿಯ ರಸ ಸೇರಿಸಿ ಕುಡಿದರೆ ಇದು ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ. ನೈಸರ್ಗಿಕವಾಗಿ ದೇಹವು ಡಿಟಾಕ್ಸ್ ಆಗುತ್ತದೆ. ದೇಹವನ್ನು ನಿರ್ವಿಷಗೊಳಿಸುವುದು ತುಂಬಾ ಮುಖ್ಯ. ಕಿತ್ತಳೆ ರಸಕ್ಕೆ ಅರಿಶಿನ, ಶುಂಠಿ, ಕ್ಯಾರೆಟ್ ರಸ ಮತ್ತು ನಿಂಬೆ ರಸ ಸೇರಿಸಿದರೆ ಹೆಚ್ಚು ಆರೋಗ್ಯ ಲಾಭ ಸಿಗುತ್ತದೆ.
ಇದನ್ನೂ ಓದಿ: ಡಯೆಟ್ ಹಾಗೂ ವ್ಯಾಯಾಮವಿಲ್ಲದೆ ಹೊಟ್ಟೆ ಬೊಜ್ಜು ಕಡಿಮೆ ಮಾಡಬಹುದು? ಈ 5 ಟಿಪ್ಸ್ ಟ್ರೈ ಮಾಡಿ!
ಒಂದು ಪಾತ್ರೆಗೆ ಹಾಲು ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ ಅರಿಶಿನ, ದಾಲ್ಚಿನ್ನಿ ಪುಡಿ ಮತ್ತು ಕರಿಮೆಣಸು ಸೇರಿಸಿ ಕುದಿಸಿ, ಜೇನುತುಪ್ಪ ಅಥವಾ ಬೆಲ್ಲ ಹಾಕಿ ಸೇವಿಸಿದರೆ ಆರೋಗ್ಯಕ್ಕೆ ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ