ಚಳಿಗಾಲದಲ್ಲಿ (Winter) ವಿವಿಧ ರೀತಿಯ ತರಕಾರಿಗಳು (Vegetables) ಮಾರುಕಟ್ಟೆಗೆ (Market) ಲಗ್ಗೆ ಇಡುತ್ತವೆ. ರುಚಿ ಹಾಗೂ ಪೋಷಕಾಂಶ (Sweet And Nutrients) ಸಮೃದ್ಧ ತಾಜಾ ತರಕಾರಿಗಳು ಆರೋಗ್ಯ ವೃದ್ಧಿಸುತ್ತವೆ. ಸಾಕಷ್ಟು ಆರೋಗ್ಯಕಾರಿ ಪ್ರಯೋಜನ ನೀಡುತ್ತವೆ. ಅಂತಹ ತರಕಾರಿಗಳಲ್ಲಿ ಟರ್ನಿಪ್ ಕೂಡ ಒಂದು. ಟರ್ನಿಪ್ ತರಕಾರಿ ಮತ್ತು ಎಲೆಗಳು ಮಧುಮೇಹ ರೋಗಿಗಳು ತಿನ್ನಬಹುದಾದ ತರಕಾರಿ ಆಗಿವೆ. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿವೆ. ಇದು ಪೂರ್ವ ಮಧುಮೇಹ ಮತ್ತು ಮಧುಮೇಹಿಗಳ ಆರೋಗ್ಯ ಕಾಪಾಡುತ್ತದೆ. ಚಳಿಗಾಲದಲ್ಲಿ ಮಧುಮೇಹಿಗಳು ಹೆಚ್ಚು ಆರೋಗ್ಯ ಕಾಳಜಿ ತೆಗೆದುಕೊಳ್ಳಬೇಕು. ಆಂಟಿ ಡಯಾಬಿಟಿಕ್ ಟರ್ನಿಪ್ ಹೇಗೆ ಮಧುಮೇಹಿಗಳು ಆಹಾರದಲ್ಲಿ ಸೇರಿಸಬೇಕು ಅನ್ನೋದನ್ನ ನೋಡೋಣ.
ಮಧುಮೇಹಿಗಳು ಟರ್ನಿಪ್ ತರಕಾರಿ ಆಹಾರದಲ್ಲಿ ಸೇರಿಸಿ
ಒಂದು ಸಂಶೋಧನಾ ಲೇಖನದ ಪ್ರಕಾರ, ಇರಾನ್ ಸಂಶೋಧಕ ಮೊಹಮ್ಮದ್ ಮೆಹದಿ ಹಸನ್, ಮೊಹಮ್ಮದ್ ಹಸನ್ಪೋರ್ ಫರ್ಡ್ ತಂಡ, ಟರ್ನಿಪ್ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿದೆ. ಅದರ ಪ್ರಕಾರ, ಪ್ರಾಯೋಗಿಕವಾಗಿ ಸಹ ಟರ್ನಿಪ್ ವಿವಿಧ ಔಷಧೀಯ ಗುಣ ಹೊಂದಿದ್ದು ಮುಖ್ಯವಾಗಿ ಮಧುಮೇಹ ವಿರೋಧಿ ಗುಣ ಹೊಂದಿದೆ ಎಂದು ತಿಳಿಸಿವೆ.
ಟರ್ನಿಪ್ ತರಕಾರಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಟರ್ನಿಪ್ ತರಕಾರಿಯಲ್ಲಿ ವಿಟಮಿನ್, ಕ್ಯಾಲ್ಸಿಯಂ, ಫೋಲೇಟ್, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಫೈಬರ್ ಮತ್ತು ಫೈಟೊಕೆಮಿಕಲ್ ಇದೆ. ವಿಟಮಿನ್ ಸಿ ಟರ್ನಿಪ್ ನಲ್ಲಿದೆ. ಜೊತೆಗೆ ರೋಗ ನಿರೋಧಕ ಶಕ್ತಿ ಇಂಪ್ರೂವ್ ಮಾಡುತ್ತದೆ. ವಿಟಮಿನ್ ಕೆ ಮತ್ತು ವಿಟಮಿನ್ ಬಿ-ಕಾಂಪ್ಲೆಕ್ಸ್ ನಲ್ಲಿ ಸಮೃದ್ಧವಾಗಿರುವ ಟರ್ನಿಪ್ ಗಳು ಹೃದಯ ರಕ್ತನಾಳದ ಕಾಯಿಲೆ ತಡೆಯುತ್ತವೆ.
ಸ್ಥೂಲಕಾಯ ಸಮಸ್ಯೆ ಕಡಿಮೆ ಮಾಡುತ್ತದೆ
ಟರ್ನಿಪ್ ತರಕಾರಿ 90 ಪ್ರತಿಶತ ನೀರು ಹೊಂದಿದೆ. ಇದರಲ್ಲಿರುವ ನೀರು ಮತ್ತು ಫೈಬರ್ ದೇಹದಿಂದ ವಿಷ ಹೊರ ಹಾಕುತ್ತದೆ. ನೀರು ಮತ್ತು ಫೈಬರ್ ಬೊಜ್ಜು ಕಡಿಮೆ ಮಾಡಲು ಸಹಕಾರಿ ಆಗಿದೆ.
ಆಲೂಗಡ್ಡೆಗೆ ಟರ್ನಿಪ್ ಉತ್ತಮ ಪರ್ಯಾಯ ಪದಾರ್ಥ
ಮಧುಮೇಹಿಗಳು ಆಲೂಗಡ್ಡೆ ಬದಲು ಟರ್ನಿಪ್ ಬಳಸಿ. ಟರ್ನಿಪ್ ನಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇದೆ. ಕಚ್ಚಾ ಟರ್ನಿಪ್ ಗ್ಲೈಸೆಮಿಕ್ ಸೂಚ್ಯಂಕವು 30 ಆಗಿದೆ. ಇದನ್ನು ಬೇಯಿಸಿದರೆ GI 85 ತಲುಪುತ್ತದೆ. ಹಾಗಾಗಿ ಟರ್ನಿಪ್ ಮಧುಮೇಹಿಗಳಿಗೆ ಉತ್ತಮ ಆಯ್ಕೆ ಆಗಿದೆ.
ಮಧುಮೇಹಿಗಳಿಗಾಗಿ ಆರೋಗ್ಯಕರ ಟರ್ನಿಪ್ ಪಾಕವಿಧಾನ ಹೀಗಿದೆ
ಟರ್ನಿಪ್ ರೈತ ಪಾಕವಿಧಾನ
ಟರ್ನಿಪ್ ಅನ್ನು ತುರಿಯಿರಿ. ಸಾಸಿವೆ ಪುಡಿ, ಉಪ್ಪು, ಕರಿಮೆಣಸಿನ ಪುಡಿ, ಸಣ್ಣದಾಗಿ ಕೊಚ್ಚಿದ ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಮಿಶ್ರಣ ಮಾಡಿ. ತುಪ್ಪ ಬೆರೆಸಿ ತಿನ್ನಿ.
ಟರ್ನಿಪ್ ಪಲ್ಯ ರೆಸಿಪಿ
ಟರ್ನಿಪ್ ಸಣ್ಣ ತುಂಡುಗಳಾಗಿ ಕತ್ತರಿಸಿ. ಇಂಗು ಮತ್ತು ಸಾಸಿವೆ ಹಾಕಿ. ನಂತರ ಈರುಳ್ಳಿ, ಟೊಮ್ಯಾಟೊ ಹಾಕಿ ಫ್ರೈ ಮಾಡಿ. ಮತ್ತು ಸ್ವಲ್ಪ ಸಮಯದ ಟರ್ನಿಪ್ ಹಾಕಿ ಫ್ರೈ ಮಾಡಿ ಬೇಯಿಸಿ ತಿನ್ನಿ.
ಟರ್ನಿಪ್ ಸಾಗ್ ರೆಸಿಪಿ
ಟರ್ನಿಪ್ ಎಲೆಗಳನ್ನು ಚೆನ್ನಾಗಿ ತೊಳೆದು ಕತ್ತರಿಸಿ. ನೀರು ಹೊರ ತೆಗೆಯಿರಿ. ನಂತರ ಉಪ್ಪಿನ ಜೊತೆ ಕುದಿಸಿ. ಮಿಕ್ಸಿಯಲ್ಲಿ ರುಬ್ಬಿರಿ. ಸಾಸಿವೆ ಎಣ್ಣೆ, ಸಾಸಿವೆ, ಹಸಿ ಮೆಣಸಿನಕಾಯಿ, ಇಂಗು ಹಾಕಿ, ಎಲೆ ಸೇರಿಸಿ, ಬೇಯಿಸಿ.
ಇದನ್ನೂ ಓದಿ: ಮಧುಮೇಹ ಕಾಯಿಲೆ ನಿಯಂತ್ರಿಸಲು ಈ ಚಹಾ ಉತ್ತಮವಂತೆ, ಒಮ್ಮೆ ಟ್ರೈ ಮಾಡಿ ನೋಡಿ
ಟರ್ನಿಪ್ ಸೂಪ್ ರೆಸಿಪಿ
ಟರ್ನಿಪ್ ಎಲೆಗಳನ್ನು ಕ್ಯಾರೆಟ್ ಮತ್ತು ಟೊಮೆಟೊ ರಸದ ಜೊತೆ ಬಳಸಬಹುದು. ಕೆಲವು ಟರ್ನಿಪ್ ಎಲೆ ತೊಳೆದು ಕತ್ತರಿಸಿ. ಕ್ಯಾರೆಟ್, ಟೊಮ್ಯಾಟೊ, ಬೆಳ್ಳುಳ್ಳಿ, ಅರಿಶಿನ, ಉಪ್ಪು ಮತ್ತು ಮಸಾಲೆ ಹಾಕಿ, ಬೇಯಿಸಿ. ನಂತರ ನೀರನ್ನು ಮಿಶ್ರಣ ಮಾಡಿ. ಬೆಣ್ಣೆ ಮತ್ತು ಕಪ್ಪು ಉಪ್ಪು, ಜೀರಿಗೆ ಪುಡಿ, ಕರಿಮೆಣಸಿನ ಪುಡಿ ಹಾಕಿ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ