ಚಳಿಗಾಲದ (Winter) ಅತ್ಯಂತ ಸಾಮಾನ್ಯವಾದ ಅಡ್ಡ ಪರಿಣಾಮ (Side Effects) ಅಂದ್ರೆ ಕೆಮ್ಮು ಮತ್ತು ಶೀತ ಆಗಿದೆ. ಮತ್ತು ಪ್ರತಿಯೊಬ್ಬರೂ (Everyone) ಚಳಿಗಾಲದಲ್ಲಿ ನೆಗಡಿ, ಕಫ, ಜ್ವರ ಸಮಸ್ಯೆ (Problem) ಎದುರಿಸುತ್ತಾರೆ. ಕೆಲವು ಸಮಯದಲ್ಲಿ ಜ್ವರ ಕಡಿಮೆ ಆಗಲ್ಲ. ಕೆಮ್ಮು ಶುರುವಾದರೆ ತಿಂಗಳು, ಎರಡು ತಿಂಗಳವರೆಗೆ ಬಾಧಿಸುತ್ತದೆ. ನಿರಂತರವಾಗಿ ಬರುವ ಕೆಮ್ಮು ಬಳಲಿಕೆ ಮತ್ತು ತ್ರಾಸ ಉಂಟು ಮಾಡುತ್ತದೆ. ನೋಯುತ್ತಿರುವ ಗಂಟಲು, ಕಫ, ಸೋರುವ ಮೂಗು ಹೆಚ್ಚು ಸಮಸ್ಯೆ ಉಂಟು ಮಾಡುತ್ತದೆ. ಇದನ್ನು ಶಮನಗೊಳಿಸಲು ಏನು ಮಾಡಬೇಕು? ಉಸಿರಾಟ ತೊಂದರೆ ತೊಡೆದು ಹಾಕಲು ಯಾವ ಮನೆಮದ್ದು ಬಳಸಬೇಕು? ಎಂಬುದನ್ನು ಇಲ್ಲಿ ನೋಡೋಣ.
ಕೆಮ್ಮು, ಜ್ವರ, ಕಫ, ನೆಗಡಿ ಸಮಸ್ಯೆ ಶಮನಗೊಳಿಸಲು ಮೂಲೇತಿ ಬಳಸಿ
ನೋಯುತ್ತಿರುವ ಗಂಟಲು, ಕಫ, ಸೋರುವ ಮೂಗು ಹೆಚ್ಚು ಸಮಸ್ಯೆ ಉಂಟು ಮಾಡುತ್ತದೆ. ಇದನ್ನು ಶಮನಗೊಳಿಸಲು ಮೂಲೇತಿ ಸಾಕಷ್ಟು ಪ್ರಯೋಜನಕಾರಿ ಆಗಿದೆ. ಮೂಲೇತಿ ಆಯುರ್ವೇದ ಗಿಡಮೂಲಿಕೆ ಆಗಿದೆ. ಕೆಮ್ಮು ಕಡಿಮೆ ಆಗಲು ಮೂಲೇತಿಯನ್ನು ಅಗಿಯಲು ತಿಳಿಸುತ್ತಾರೆ. ಕೆಮ್ಮನ್ನು ಕಡಿಮೆ ಮಾಡಲು, ತೊಡೆದು ಹಾಕಲು ಮೂಲೇತಿ ಮನೆಮದ್ದು ಪರಿಣಾಮಕಾರಿ ಆಗಿದೆ.
ಮೂಲೇತಿಯನ್ನು ಕೆಮ್ಮು ಮತ್ತು ನೋಯುತ್ತಿರುವ ಗಂಟಲಿಗೆ ಹಳೆಯ ಮನೆಮದ್ದಾಗಿ ಬಳಕೆ ಮಾಡಲಾಗುತ್ತದೆ. ಇದು ವೈಜ್ಞಾನಿಕ ಪ್ರಯೋಜನ ಸಹ ನೀಡುತ್ತದೆ. ಮೂಲೇತಿ ಆಯುರ್ವೇದ ವೈದ್ಯಕೀಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಹಲವು ಪ್ರಯೋಜನ ನೀಡುವ ಮೂಲಕ ಆರೋಗ್ಯಕರ ಆಯ್ಕೆ ಆಗಿದೆ.
ಮೂಲೇತಿ ಜೀರ್ಣಕ್ರಿಯೆ ಸುಧಾರಿಸುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.
ಮುಟ್ಟಿನ ಸೆಳೆತ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಮೂಲೇತಿ ಸೇವನೆ ಬಾಯಿ ಆರೋಗ್ಯ ಸುಧಾರಿಸುತ್ತದೆ .
ಮೂಲೇತಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ.
ಚರ್ಮದ ಆರೈಕೆಗೂ ಮೂಲೇತಿ ಪ್ರಯೋಜನಕಾರಿ.
ತಲೆಹೊಟ್ಟು ಮತ್ತು ಕೂದಲು ಉದುರುವಿಕೆ ಸಮಸ್ಯೆ ತೊಡೆದು ಹಾಕುತ್ತದೆ.
ಕೆಮ್ಮು ನಿವಾರಣೆಗೆ ಮೂಲೇತಿ ಬಳಸುವ ವಿಧಾನ ಹೀಗಿದೆ
ಮೂಲೇತಿ ನೀರು ಬಳಕೆ
ನೋಯುತ್ತಿರುವ ಗಂಟಲು ಸಮಸ್ಯೆ ನಿವಾರಣೆಗೆ ಮತ್ತು ಗಂಟಲು ಕಿರಿಕಿರಿಗೆ ಪರಿಹಾರ ನೀಡಲು ಪ್ರತಿದಿನ ಬೆಳಿಗ್ಗೆ ಮೂಲೇತಿ ನೀರಿನಿಂದ ಗಾರ್ಗಲ್ ಮಾಡಿ. ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಮೂಲೇತಿ ಪುಡಿ ಬೆರೆಸಿ. ಹಾಗೂ ಆ ನೀರಿನಿಮದ ಗಾರ್ಗ್ಲ್ ಮಾಡಿ. ಮೂಲೇತಿ ಪುಡಿ ಇಲ್ಲದಿದ್ದರೆ ತುಂಡನ್ನು ನೀರಿನಲ್ಲಿ ಕುದಿಸಿ, ತಣ್ಣಗಾದ ನಂತರ ಬಳಸಬಹುದು.
ಮೂಲೇತಿ ಚಹಾ ಸೇವಿಸಿ
ಮೂಲೇತಿ ಚಹಾ ಅನೇಕ ಪ್ರಯೋಜನ ನೀಡುತ್ತದೆ. ಮೂಲೇತಿ ಚಹಾ ಬಿಸಿ ಮತ್ತು ರುಚಿಕರವಾಗಿದೆ. ದಿನಕ್ಕೆ ಮೂರು ಬಾರಿ ಮೂಲೇತಿ ಚಹಾ ಕುಡಿಯಿರಿ. ಇದು ನಿಮ್ಮ ಕೆಮ್ಮು, ಗಂಟಲು ಕಿರಿಕಿರಿ ಸಮಸ್ಯೆ ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.
ಮೂಲೇತಿ ಬೇರುಗಳನ್ನು ಪುಡಿ ಮಾಡಿ, ಒಂದು ಕಪ್ ನೀರಿನಲ್ಲಿ ಕುದಿಸಿ. ಅದು ಕುದ್ದ ನಂತರ, 5 ನಿಮಿಷ ಬೇಯಿಸಿ. ನಂತರ ಸೋಸಿ ಕುಡಿಯಿರಿ. ಅದಕ್ಕೆ ಸ್ವಲ್ಪ ಶುಂಠಿ, ತುಳಸಿ ಮತ್ತು ಜೇನುತುಪ್ಪ ಸೇರಿಸಬಹುದು.
ಇದನ್ನೂ ಓದಿ: ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಯೇ? ಆಹಾರದಲ್ಲಿ ಸೇರಿಸಿ ಸಾಸಿವೆ ಸೊಪ್ಪು
ಮೂಲೇತಿ ಪುಡಿ ಸೇವನೆ
ಲೈಕೋರೈಸ್ ಬೇರುಗಳನ್ನು ಮಿಕ್ಸರ್ ನಲ್ಲಿ ಪುಡಿ ಮಾಡಿ ಇಡಿ. ಇದು ನೀರು ಅಥವಾ ಚಹಾ ತಯಾರಿಸಲು ಸರಳ ಮತ್ತು ಸುಲಭ ಆಯ್ಕೆ ಆಗಿದೆ. ಸ್ವಲ್ಪ ಬೆಚ್ಚಗಿನ ನೀರಿನಿಂದ ಒಂದು ಚಮಚ ಮೂಲೇತಿ ಪುಡಿ ಸಹ ಕುಡಿಯಬಹುದು. ಹೀಗೆ ಮೂಲೇತಿ ಬಳಕೆ ಮಾಡಿದರೆ ಕೆಮ್ಮು ಮತ್ತು ಗಂಟಲು ನೋವು ಕಡಿಮೆ ಆಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ