• Home
  • »
  • News
  • »
  • lifestyle
  • »
  • Constipation Problem: ಚಳಿಗಾಲದಲ್ಲಿ ಮಲಬದ್ಧತೆ ಸಮಸ್ಯೆ ಕಾಡ್ತಿದೆಯೇ? ಹಾಗಾದರೆ ಈ ಪದಾರ್ಥಗಳ ಸೇವನೆ ಮಾಡಿ

Constipation Problem: ಚಳಿಗಾಲದಲ್ಲಿ ಮಲಬದ್ಧತೆ ಸಮಸ್ಯೆ ಕಾಡ್ತಿದೆಯೇ? ಹಾಗಾದರೆ ಈ ಪದಾರ್ಥಗಳ ಸೇವನೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ಗ್ಯಾಸ್ ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆ ಕಾಡುತ್ತವೆ. ಜೀರ್ಣಾಂಗ ವ್ಯವಸ್ಥೆಯು ಯಾವಾಗಲೂ ಆರೋಗ್ಯಕರವಾಗಿದ್ದರೆ ಅಂತಹ ಜನರೂ ಸಹ ತಂಪು ವಾತಾವರಣದಲ್ಲಿ ಮಲಬದ್ಧತೆ ಅನುಭವಿಸುವುದು ಸಾಮಾನ್ಯವಾಗಿದೆ. ಇದಕ್ಕೆ ಇಲ್ಲಿದೆ ಮನೆ ಮದ್ದು...

  • Share this:

    ಚಳಿಗಾಲದಲ್ಲಿ (Winter) ನಮ್ಮ ದೇಹವು (Body) ಆಲಸ್ಯಕ್ಕೆ ತುತ್ತಾಗುತ್ತದೆ. ಬೆಳಗ್ಗೆ (Morning) ಬೇಗ ಏಳೋಕೆ ಆಗಲ್ಲ. ಚಳಿಯಿಂದಾಗಿ ಮತ್ತಷ್ಟು ಹೊತ್ತು ಮಲಗಬೇಕು ಅನ್ನಿಸುತ್ತದೆ. ಯಾವುದೇ ಕೆಲಸ ಮಾಡೋಕೆ ಮನಸ್ಸಿರಲ್ಲ. ಜೊತೆಗೆ ಬೆಳಗ್ಗೆ ವಾಕಿಂಗ್, ವ್ಯಾಯಾಮ (Exercise) ಮಾಡ್ಬೇಕು ಅನ್ನಿಸಲ್ಲ. ದೈಹಿಕ ಚಟುವಟಿಕೆ ಸಹ ಬೇಡ ಅನ್ನಿಸುತ್ತೆ. ಚಳಿಯಲ್ಲಿ ಹೊರಗೆ ಹೋಗಬೇಕು ಅನ್ನಿಸೋದೇ ಇಲ್ಲ. ಜೊತೆಗೆ ಹೆಚ್ಚು ನೀರು ಕುಡಿಯೋಕೆ ಆಗಲ್ಲ. ಇದೆಲ್ಲಾ ಕಾರಣಗಳು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲೂ ವಿಶೇಷವಾಗಿ ಜೀರ್ಣಕಾರಿ ಸಮಸ್ಯೆ ಹೆಚ್ಚಾಗುತ್ತವೆ. ಇದಕ್ಕೆ ಮುಖ್ಯ ಕಾರಣ ಅಂದ್ರೆ ದೈಹಿಕ ಚಟುವಟಿಕೆ ಮತ್ತು ನೀರಿನ ಕೊರತೆ, ಜೀರ್ಣಾಂಗ ವ್ಯವಸ್ಥೆ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.


    ಚಳಿಗಾಲದಲ್ಲಿ ಜೀರ್ಣಕಾರಿ ಸಮಸ್ಯೆ


    ಚಳಿಗಾಲದಲ್ಲಿ ಗ್ಯಾಸ್, ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆ ಕಾಡುತ್ತವೆ. ಜೀರ್ಣಾಂಗ ವ್ಯವಸ್ಥೆಯು ಯಾವಾಗಲೂ ಆರೋಗ್ಯಕರವಾಗಿದ್ದರೆ ಅಂತಹ ಜನರೂ ಸಹ ತಂಪು ವಾತಾವರಣದಲ್ಲಿ ಮಲಬದ್ಧತೆ ಅನುಭವಿಸುವುದು ಸಾಮಾನ್ಯವಾಗಿದೆ.


    ಮಲಬದ್ಧತೆ ಎಂದರೆ ಒಬ್ಬ ವ್ಯಕ್ತಿಯು ಒಂದು ವಾರದಲ್ಲಿ ಮೂರಕ್ಕಿಂತ ಕಡಿಮೆ ಕರುಳಿನ ಚಲನೆ ಹೊಂದುವುದು. ಇಲ್ಲವೇ ಮಲ ವಿಸರ್ಜನೆ ವೇಳೆ ಕಷ್ಟ ಪಡುವುದು ಆಗಿದೆ.




    ಅತಿಯಾಗಿ ಚಹಾ ಮತ್ತು ಕಾಫಿ ಕುಡಿದರೆ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಬಹಳಷ್ಟು ಬಿಸಿ ಪದಾರ್ಥ ಸೇವಿಸಿದರೆ ಕರುಳು ಒಣಗುತ್ತವೆದೆ. ಹಾಗಗಿ ಚಳಿಗಾಲದಲ್ಲಿ ಆಹಾರ ಪದ್ಧತಿ ಸರಿಯಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಫೈಬರ್, ಗಿಡಮೂಲಿಕೆ, ಮಸಾಲೆ, ಉತ್ತಮ ಕೊಬ್ಬು, ಕಾಲೋಚಿತ ಹಣ್ಣು ಮತ್ತು ತರಕಾರಿ ಹೊಂದಿರುವ ಖಾದ್ಯ ಸೇವಿಸುವುದು ಮುಖ್ಯ.


    ಹಾಗಾದ್ರೆ ಚಳಿಗಾಲದಲ್ಲಿ ಮಲಬದ್ಧತೆ ತೊಡೆದು ಹಾಕಲು ಯಾವ ಆಹಾರಗಳನ್ನು ಸೇವಿಸಬೇಕು ಎಂದು ತಿಳಿಯೋಣ. ಮಲಬದ್ಧತೆಗೆ ಕೆಲವು ಮುಖ್ಯ ಕಾರಣಗಳನ್ನು ತಿಳಿದುಕೊಳ್ಳೋಣ.


    ಮಲಬದ್ಧತೆಗೆ ಮುಖ್ಯ ಕಾರಣಗಳು ಹೀಗಿವೆ


    ಮಲಬದ್ಧತೆಯ ಸಮಸ್ಯೆಗೆ ಆಹಾರದ ಬಗ್ಗೆ ಕಾಳಜಿ ಇಲ್ಲದಿರುವುದು, ಮಸಾಲೆಯುಕ್ತ ಆಹಾರ ಸೇವನೆ, ಫೈಬರ್ ಕೊರತೆ, ಕರಿದ ಆಹಾರ ಸೇವನೆ, ಕಳಪೆ ಚಯಾಪಚಯ, ನಿದ್ರೆ ಸರಿಯಾಗದಿರುವುದು, ಸೋಮಾರಿತನ, ತಡರಾತ್ರಿಯ ಊಟ ಸೇವನೆ, ದ್ರವ ಪದಾರ್ಥ ಸೇವಿಸದಿರುವುದು, ಶೀತ ಮತ್ತು ಒಣ ಆಹಾರ ಸೇವನೆ ಮಲಬದ್ಧತೆಗೆ ಕಾರಣಗಳಾಗಿವೆ.


    ಮಲಬದ್ಧತೆ ತೊಡೆದು ಹಾಕುವ ಆಹಾರಗಳು ಹೀಗಿವೆ


    ಪ್ರತಿದಿನ ತುಪ್ಪ ಸೇವಿಸುವುದು


    ತುಪ್ಪವು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿ. ಮಲಬದ್ಧತೆಯಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ಇದು ಕರುಳನ್ನು ನಯಗೊಳಿಸುತ್ತದೆ. ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ. ಪ್ರತಿ ರಾತ್ರಿ ಹಾಲಿನೊಂದಿಗೆ ಒಂದು ಚಮಚ ತುಪ್ಪ ಸೇವಿಸಿ. ಆಹಾರದಲ್ಲಿ ಚಮಚ ದೇಸಿ ತುಪ್ಪ ತಿನ್ನಬಹುದು.


    ಖರ್ಜೂರ ಸೇವನೆ


    ಆಯುರ್ವೇದ ತಜ್ಞ ಡಾ.ದೀಕ್ಷಾ ಭಾವಸರ್ ಪ್ರಕಾರ, ಖರ್ಜೂರ ಆಹಾರದಲ್ಲಿ ಸೇರಿಸಿದರೆ ಹಲವು ಪ್ರಯೋಜನಗಳಿವೆ. ಇದು ದೇಹದಲ್ಲಿ ವಾತ ಮತ್ತು ಪಿತ್ತವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಹೈಪರ್ಆಸಿಡಿಟಿ, ಕೀಲು ನೋವು, ಆತಂಕ, ಕೂದಲು ಉದುರುವಿಕೆ ಕಡಿಮೆ ಮಾಡಲು ಪ್ರಯೋಜನಕಾರಿ. 3 ನೆನೆಸಿದ ಖರ್ಜೂರವನ್ನು ಬೆಚ್ಚಗಿನ ನೀರಿನಿಂದ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.


    ಬೆಲ್ಲ ತಿನ್ನುವುದು


    ಬೆಲ್ಲವನ್ನು ಲಡ್ಡೂ ಮತ್ತು ಹಲ್ವಾದ ಮೂಲಕ ಸೇವಿಸುವುದು. ಇದು ನೈಸರ್ಗಿಕ ವಿರೇಚಕ. ಇದು ನಿಮ್ಮ ಕರುಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. ಕರುಳಿನ ಆರೋಗ್ಯ ಸುಧಾರಿಸುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ.


    ನೆನೆಸಿದ ಒಣದ್ರಾಕ್ಷಿ ಮತ್ತು ಅಂಜೂರ ಸೇವನೆ


    ನೆನೆಸಿದ ಒಣದ್ರಾಕ್ಷಿ ಮತ್ತು ಅಂಜೂರ ಹಣ್ಣುಗಳು ಜೀರ್ಣಾಂಗ ವ್ಯವಸ್ಥೆಗೆ ಅತ್ಯಂತ ಪ್ರಯೋಜನಕಾರಿ. ನೆನೆಸಿ ತಿಂದರೆ ಮಲಬದ್ಧತೆ ಸಮಸ್ಯೆ ನಿವಾರಿಸುತ್ತದೆ. ರಕ್ತ ಹೆಚ್ಚಿಸಬಹುದು. ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿವೆ.


    ಒಣದ್ರಾಕ್ಷಿಗಳನ್ನು ನೆನೆಸಿದರೆ ವಾತ ದೋಷ ಕಡಿಮೆ, ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ, ಜೀರ್ಣಕ್ರಿಯೆ ಸುಲಭವಾಗುತ್ತದೆ.


    ಇದನ್ನೂ ಓದಿ: ರಾತ್ರಿ ಮುಖಕ್ಕೆ ತೆಂಗಿನ ಎಣ್ಣೆ ಹಚ್ಚೋದರ ಪ್ರಯೋಜನಗಳು ಇಲ್ಲಿವೆ


    ಪಾಲಕ ಮತ್ತು ಗ್ರೀನ್ಸ್


    ಪಾಲಕ ಮತ್ತು ಗ್ರೀನ್ಸ್ ಹಸಿರು ತರಕಾರಿಗಳು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ. ಕಣ್ಣಿನ ಆರೋಗ್ಯ ಕಾಪಾಡುತ್ತದೆ. ಕರುಳಿನ ಶುದ್ಧೀಕರಣ ಮತ್ತು ನಿರ್ವಿಶೀಕರಣಕ್ಕೆ ಪ್ರಯೋಜನಕಾರಿ.

    Published by:renukadariyannavar
    First published: