• Home
 • »
 • News
 • »
 • lifestyle
 • »
 • Protection from Cold: ಚಳಿಗಾಲದಲ್ಲಿ ಶೀತದಿಂದ ರಕ್ಷಿಸಿಕೊಳ್ಳಬೇಕೇ? ಹಾಗಿದ್ರೆ ಈ ಐದು ಪದಾರ್ಥ ಸೇವಿಸಿ!

Protection from Cold: ಚಳಿಗಾಲದಲ್ಲಿ ಶೀತದಿಂದ ರಕ್ಷಿಸಿಕೊಳ್ಳಬೇಕೇ? ಹಾಗಿದ್ರೆ ಈ ಐದು ಪದಾರ್ಥ ಸೇವಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇರಿಸುವಂತಹ ಆಹಾರ ಸೇವನೆ ಮಾಡಬೇಕು. ಇದು ಆರೋಗ್ಯ ಕಾಪಾಡಲೂ ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇರಿಸಲು ದುಬಾರಿ ಆಯ್ಕೆಗಳ ಬದಲಿಗೆ ಮನೆಮದ್ದು ಮತ್ತು ಮನೆ ಆಹಾರ ಆಯ್ಕೆ ಮಾಡಬೇಕು.

 • Share this:

  ಚಳಿಗಾಲದಲ್ಲಿ (Winter) ಎಲ್ಲರೂ ಬದುಕಲು ಬೆಚ್ಚಗಿನ ಬಟ್ಟೆ, ಹೊದಿಕೆ ಮತ್ತು ಆಹಾರ (Food) ಬೇಕು. ಚೆನ್ನಾಗಿ  ಉತ್ತಮ ಬೆಚ್ಚಗಿನ ಬಟ್ಟೆ ಮತ್ತು ಹೊದಿಕೆಗಳನ್ನು ಆಯ್ಕೆ ಮಾಡಿಕೊಂಡರೆ ದೇಹವನ್ನು (Body) ಆರಾಮವಾಗಿ ಇಟ್ಟುಕೊಳ್ಳಲು ಸಾಧ್ಯ. ಇದು ಸುಲಭದ ಕೆಲಸ ಕೂಡ ಆಗಿದೆ. ಆದರೆ ಸಮಸ್ಯೆಯು (Problem) ದೇಹವನ್ನು ಬೆಚ್ಚಗಾಗುವ ಆಹಾರ ಆಯ್ಕೆ ಮಾಡುತ್ತದೆ. ಚಳಿಗಾಲದಲ್ಲಿ ಅಂತಹ ಆಹಾರ ಸೇವನೆ ಮಾಡಬೇಕು. ಇದು ಬೆಚ್ಚಗೆ ಇಡುತ್ತದೆ. ಮತ್ತು ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇರಿಸಲು ದುಬಾರಿ ಆಯ್ಕೆಗಳ ಬದಲಿಗೆ, ಮನೆಮದ್ದು ಮತ್ತು ಆಹಾರ ಆಯ್ಕೆ ಮಾಡಬೇಕು. ಈ ಪರಿಹಾರವು ಚಳಿಗಾಲದಲ್ಲಿ ಶೀತವನ್ನು ನಿವಾರಿಸುತ್ತದೆ.

  ಜೊತೆಗೆ ನಿಮ್ಮ ಜೇಬಿಗೆ ಮಿತವ್ಯಯ ಆಗಿದೆ. ಚಳಿಗಾಲದಲ್ಲಿ ದೇಹ ಬೆಚ್ಚಗೆ ಇರಿಸಲು ಏನು ಮಾಡಬೇಕು ಎಂದು ತಿಳಿಯೋಣ?


  ಬಿಸಿ ಸೂಪ್ ಕುಡಿಯುವುದು


  ಹೆಲ್ತ್‌ ಲೈನ್ ಪ್ರಕಾರ, ತರಕಾರಿಗಳಿಂದ ಸಮೃದ್ಧ ಮತ್ತು ಬೇಳೆಕಾಳು, ಧಾನ್ಯ ಅಥವಾ ಇತರ ಯಾವುದೇ ಅರೆ ದ್ರವದಿಂದ ತಯಾರಿಸಿದ ಸೂಪ್‌ ಸೇವನೆ ಮಾಡುವುದು ಚಳಿಗಾಲದಲ್ಲಿ ಶೀತ ಹೊಡೆದೋಡಿಸಲು ಉತ್ತಮ ಮಾರ್ಗ ಆಗಿದೆ.


  ಸೂಪ್ ಒಳಗೆ ಒಂದು ಪಿಂಚ್ ಉಪ್ಪು, ಮೆಣಸು, ದಾಲ್ಚಿನ್ನಿ ಮತ್ತು ಇತರ ಮಸಾಲೆ ಸೇರಿಸಿ. ಟೇಸ್ಟಿ ಸೂಪ್ ಮಾಡಲು ಇದು ಉತ್ತಮ ಪಾಕ ವಿಧಾನ ಆಗಿದೆ. ಇದು ದೇಹ ಬೆಚ್ಚಗೆ ಇರಿಸಲು ಸಹಾಯ ಮಾಡುತ್ತದೆ.


  ಇದನ್ನೂ ಓದಿ: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ


  ಮಾಂಸಾಹಾರಿ ಆಹಾರಗಳು


  ಮಾಂಸಾಹಾರಿ ಆಹಾರ ಸೇವನೆ ಮಾಡಿದರೆ ದೇಹದ ಉಷ್ಣತೆ ಹೆಚ್ಚುತ್ತದೆ. ಮತ್ತು ಶಕ್ತಿ ಸಿಗುತ್ತದೆ. ಕಬ್ಬಿಣ ಮತ್ತು ಪ್ರೊಟೀನ್ ಮಾಂಸಾಹಾರಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಮತ್ತು ಚಯಾಪಚಯ ಹೆಚ್ಚಿಸುವ ಮೂಲಕ ರೋಗದಿಂದ ರಕ್ಷಿಸುವಲ್ಲಿ ಕೊಡುಗೆ ನೀಡುತ್ತದೆ. ನೀವು ಮಾಂಸಾಹಾರಿ ಆಹಾರವನ್ನು ಸಂಪೂರ್ಣವಾಗಿ ಬೇಯಿಸಿ, ಸೂಪ್, ಸಾಂಬಾರ್, ಪಲ್ಯದ ರೂಪದಲ್ಲಿ ಕರಿದು, ಹುರಿದು ತಿನ್ನಬಹುದು.


  ಬಿಸಿ ಪಾನೀಯ ಸೇವನೆ ಮಾಡುವುದು


  ಶೀತ ಬರದಂತೆ ತಡೆಯಲು ಬಿಸಿ ಪಾನೀಯಗಳನ್ನು ಕುಡಿಯುವುದು ಎಲ್ಲಾ ಗೃಹಿಣಿಯರು, ಕೆಲಸ ಮಾಡುವ ಜನರು ಅಥವಾ ಕುಟುಂಬದ ನಿವೃತ್ತ ಸದಸ್ಯರಿಗೆ ಸಹಕಾರಿ ಆಗಿದೆ. ಪ್ರತಿಯೊಬ್ಬರೂ ತಮ್ಮ ನೆಚ್ಚಿನ ಬಿಸಿ ಪಾನೀಯವಾದ ಚಹಾ, ಕಾಫಿ, ಸುವಾಸನೆಯುಕ್ತ ಹಾಲು, ಸೂಪ್, ಜ್ಯೂಸ್ ಮತ್ತು ಡಿಕೊಕ್ಷನ್ಗಳನ್ನು ಸೇವಿಸುವುದು ಉತ್ತಮ. ಈ ಟೇಸ್ಟಿ ಪಾನೀಯಗಳು ನಿಮ್ಮನ್ನು ದಿನವಿಡೀ ಬೆಚ್ಚಗೆ ಇರಿಸುತ್ತದೆ.


  ತುಪ್ಪದ ಸೇವನೆ


  ತುಪ್ಪವು ಅತ್ಯಂತ ಆದ್ಯತೆಯ ನೈಸರ್ಗಿಕ ಪದಾರ್ಥ ಆಗಿದೆ. ಇದನ್ನು ಪ್ರತಿ ಊಟ, ದಾಲ್, ತರಕಾರಿ, ಚಪಾತಿ, ಹಾಲು ಇತ್ಯಾದಿ ಜೊತೆ ಬಳಕೆ ಮಾಡ್ತಾರೆ. ಮೊಸರು ನಿಮ್ಮ ದೇಹದ ಉಷ್ಣತೆ ಅಧಿಕವಾಗಿ ಇರಿಸುತ್ತದೆ. ಮತ್ತು ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ. ಇದನ್ನು ಅಡುಗೆಯಲ್ಲಿ ಮತ್ತು ಹಸಿಯಾಗಿ ತಿನ್ನಬಹುದು.


  ಶುಂಠಿ ಸೇವನೆ


  ಕೆಮ್ಮು ಮತ್ತು ಶೀತಕ್ಕೆ ಅತ್ಯಂತ ಪರಿಣಾಮಕಾರಿ ಮೂಲಿಕೆ ಅಂದ್ರೆ ಶುಂಠಿ. ಇದು ರಕ್ತದ ಹರಿವು ಹೆಚ್ಚಿಸುತ್ತದೆ. ದೇಹವನ್ನು ಬೆಚ್ಚಗೆ ಇರಿಸಲು ಪರಿಣಾಮಕಾರಿ ಮಾರ್ಗ ಆಗಿದೆ. ಇದನ್ನು ಚಹಾದಲ್ಲಿ ಗಿಡಮೂಲಿಕೆಯಾಗಿ ಅಥವಾ ನೀರಿನಲ್ಲಿ ಕುದಿಸಿ ಸೇವನೆ ಮಾಡಿದರೆ ಗಂಟಲಿನ ಸೋಂಕಿನಿಂದ ತ್ವರಿತ ಪರಿಹಾರ ಸಿಗುತ್ತದೆ.


  ಒಣ ಹಣ್ಣುಗಳು


  ಒಣ ಹಣ್ಣುಗಳು ಆರೋಗ್ಯಕರ ಕೊಬ್ಬಿನ ಅತ್ಯುತ್ತಮ ಮೂಲ. ಮತ್ತು ದೇಹದ ಉಷ್ಣತೆ ಹೆಚ್ಚಿಸುತ್ತದೆ. ಒಣ ಹಣ್ಣುಗಳು ಉತ್ತಮ ಆಯ್ಕೆ. ಅದನ್ನು ಕಡಿಮೆ ಪ್ರಮಾಣದಲ್ಲಿ ತಿಂದರೆ ಹೆಚ್ಚಿನ ಶಕ್ತಿ ಸಿಗುತ್ತದೆ. ಕೆಲವು ಒಣ ಹಣ್ಣುಗಳು ಕಬ್ಬಿಣ ಒದಗಿಸುತ್ತವೆ. ಮತ್ತು ಯಾವುದೇ ಋತುವಿನಲ್ಲಿ ಸೇವಿಸಲು ಉತ್ತಮ ಆಗಿದೆ.


  ಬೆಲ್ಲದ ಸೇವನೆ


  ಸಿಹಿಕಾರಕವಾಗಿ ಬೆಲ್ಲವನ್ನು ಬಳಕೆ ಮಾಡಲಾಗುತ್ತದೆ. ಕಬ್ಬಿಣದ ಅಂಶವಿರುವ ಬೆಲ್ಲವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮತ್ತು ದೇಹದ ಶಾಖ ಉಳಿಸಿಕೊಳ್ಳುತ್ತದೆ. ಇದು ಮಲಬದ್ಧತೆ ನಿವಾರಿಸುತ್ತದೆ. ಮತ್ತು ಚಯಾಪಚಯ ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಪ್ರತಿದಿನವೂ ಊಟದ ನಂತರ ಸ್ವಲ್ಪ ಪ್ರಮಾಣದ ಬೆಲ್ಲ ಸೇವಿಸುವುದು ಉತ್ತಮ.


  ಇದನ್ನೂ ಓದಿ: ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಮತ್ತು ಕಣ್ಣುಗಳ ಆರೋಗ್ಯಕ್ಕೆ ಈ ಹಣ್ಣು ಪ್ರಯೋಜನಕಾರಿ


  ಎಳ್ಳು


  ಎಳ್ಳನ್ನು ಹಲ್ವಾ, ಲಡ್ಡೂ, ಪುಡಿ ಅಥವಾ ಇನ್ನಾವುದೇ ಮಿಶ್ರಣದ ರೂಪದಲ್ಲಿ ಸೇವಿಸಬಹುದು. ಇದು ದೇಹವನ್ನು ಬೆಚ್ಚಗಿಡಲು ಇದು ಉತ್ತಮ ಮಾರ್ಗ. ಎಳ್ಳು ಸೇವನೆ ದೇಹವು ಕಬ್ಬಿಣ ಮತ್ತು ಕ್ಯಾಲ್ಸಿಯಂ ಪಡೆಯಲು ಸಹಕಾರಿ. ಶೀತ ನಿಲ್ಲುತ್ತದೆ.

  Published by:renukadariyannavar
  First published: