ಪ್ರತಿಯೊಬ್ಬರಿಗೂ ಚಳಿಗಾಲ (Winter) ಬಂದ್ರೆ ತಂಪಾದ ವಾತಾವರಣ (Cold Weather) ಖುಷಿ ಕೊಡುತ್ತದೆ. ಆದ್ರೆ ಬೆಳಗ್ಗೆ (Morning) ಬೇಗ ಏಳೋದು ಅಂದ್ರೆ ಸಖತ್ ಬೋರ್ ಆಗುತ್ತದೆ. ಹಾಗೇ ಚಳಿಗಾಲದಲ್ಲಿ ಕಾಯಿಲೆಗಳ (Diseases) ಕಾಟವೂ ಹೆಚ್ಚು. ಅದರಲ್ಲೂ ತಂಪು ವಾತಾವರಣದಿಂದಾಗಿ ಶೀತ, ನೆಗಡಿ, ಕೆಮ್ಮು, ಜ್ವರ ಕಾಡುತ್ತಲೇ ಇರುತ್ತವೆ. ಹೀಗಾಗಿ ಮಕ್ಕಳಿಂದ ದೊಡ್ಡವರವರೆಗೆ ಸೂಕ್ತ ಕಾಳಜಿ (Care) ವಹಿಸುವುದು ಹಾಗೂ ಕೆಲವು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ತುಂಬಾ ಮುಖ್ಯ ಆಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ವಿಶೇಷವಾಗಿ ಮಕ್ಕಳ ಆರೋಗ್ಯ ಕಾಪಾಡುವುದು ಮುಖ್ಯವಾಗುತ್ತದೆ. ಯಾಕಂದ್ರೆ ಸೋಂಕು ಮತ್ತು ಶೀತ ಮಕ್ಕಳಿಗೆ ಬೇಗ ಹರಡುತ್ತದೆ.
ಚಳಿಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಇರಲಿ ಕಾಳಜಿ
ಈ ಋತುಮಾನದ ಸಮಸ್ಯೆಗಳು ಮಕ್ಕಳು ಮತ್ತು ವೃದ್ಧರನ್ನು ಹೆಚ್ಚು ಬಾಧಿಸುತ್ತವೆ. ಯಾಕಂದ್ರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಅವರ ಬಗ್ಗೆ ತಂಪಾದ ವಾತಾವರಣದಲ್ಲಿ ಸ್ವಲ್ಪ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಅದನ್ನು ತೆಗೆದು ಹಾಕ್ಬೇಕು.
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಮತ್ತು ಸಾಮಾನ್ಯ, ನೆಗಡಿ, ಕೆಮ್ಮು, ಶೀತ ನಿವಾರಣೆಗೆ ಕೆಲವು ಮನೆಮದ್ದುಗಳು ಸಹಕಾರಿ. ಇವುಗಳು ಗಂಟಲು ಕಟ್ಟುವಿಕೆ, ನೋವಿನ ಸಮಸ್ಯೆ ನಿವಾರಿಸುತ್ತವೆ.
ಅಂತಹ ಕೆಲವು ಮನೆಮದ್ದುಗಳು ಅಂದ್ರೆ ಅರಿಶಿನ, ಶುಂಠಿ ಮತ್ತು ಜೇನುತುಪ್ಪ ಬಳಕೆ ಮಾಡುವುದು ಆಗಿದೆ. ಜೇನು ಮತ್ತು ಶುಂಠಿ ಪದಾರ್ಥಗಳು ಶೀತ ಮತ್ತು ಕೆಮ್ಮು ಗುಣಪಡಿಸಲು ಅತ್ಯಂತ ಪರಿಣಾಮಕಾರಿ ಪರಿಹಾರ ಆಗಿದೆ. ಮಕ್ಕಳು ಅವುಗಳನ್ನು ಸೇವಿಸುವಂತೆ ಮಾಡುವುದು ತುಂಬಾ ಕಷ್ಟ. ಹಾಗಾಗಿ ನೀವು ಮಿಠಾಯಿ ಅಥವಾ ಸಿಹಿ ತಿಂಡಿಯ ರೂಪದಲ್ಲಿ ಅವುಗಳನ್ನು ತಯಾರಿಸಿ ಮಕ್ಕಳಿಗೆ ತಿನ್ನಿಸಬಹುದು.
ಮಕ್ಕಳು ಏನಾದರೂ ಪೌಷ್ಟಿಕಾಂಶ ತಿನ್ನಲು ಬಯಸಿದರೆ ಅವರಿಗೆ ಜೇನು ಮತ್ತು ಶುಂಠಿಯ ಮಿಠಾಯಿ ಕೊಡಿ. ಇದು ಅವರಿಗೆ ಹಲವು ಪ್ರಯೋಜನ ನೀಡುತ್ತದೆ. ಜೇನುತುಪ್ಪ ಮತ್ತು ಶುಂಠಿ ಮಿಠಾಯಿಗಳು ರುಚಿ ಮತ್ತು ಪೋಷಕಾಂಶ ಹೊಂದಿವೆ.
ಜ್ವರವನ್ನು ಬೇರು ಸಹಿತ ಶಮನಮಾಡುತ್ತದೆ
ಶುಂಠಿ ಮತ್ತು ಜೇನುತುಪ್ಪವು ನೋಯುತ್ತಿರುವ ಗಂಟಲಿಗೆ ಪರಿಹಾರ ನೀಡುತ್ತದೆ. ಎನ್ ಸಿಬಿಐ ಪ್ರಕಾರ, ಇದು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣ ಹೊಂದಿದೆ. ದೇಹದೊಳಗಿನ ವೈರಸ್ ಅಥವಾ ಜ್ವರವನ್ನು ತೆಗೆದು ಹಾಕಲು ಪರಿಣಾಮಕಾರಿ ಆಗಿದೆ.
ನೋಯುತ್ತಿರುವ ಗಂಟಲಿಗೆ ಮದ್ದು
ನೋಯುತ್ತಿರುವ ಗಂಟಲಿನ ಸಮಸ್ಯೆ ನಿವಾರಿಸುತ್ತದೆ. ಜೇನುತುಪ್ಪವು ಮಾಯಿಶ್ಚರೈಸರ್ ಆಗಿ ಕೆಲಸಮಾಡುತ್ತದೆ. ಶುಂಠಿಯ ಉರಿಯೂತದ ಗುಣಲಕ್ಷಣಗಳು ಊತವನ್ನು ಕಡಿಮೆ ಮಾಡುತ್ತದೆ.
ದೇಹವನ್ನು ಬೆಚ್ಚಗಿಡುತ್ತದೆ
ಎನ್ ಸಿಬಿಐನ ಆನ್ಲೈನ್ ಜರ್ನಲ್ ಪ್ರಕಾರ, ಜೇನುತುಪ್ಪ ಮತ್ತು ಶುಂಠಿ ಎರಡೂ ಬೆಚ್ಚಗಾಗುವ ಪರಿಣಾಮ ಹೊಂದಿವೆ. ಅವುಗಳ ಸೇವಎನೆ ದೇಹದ ಉಷ್ಣತೆ ಹೆಚ್ಚಿಸುತ್ತದೆ. ದೇಹವನ್ನು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಕೆಮ್ಮು ಮತ್ತು ಶೀತ ಗುಣಪಡಿಸುತ್ತದೆ.
ಮನೆಯಲ್ಲಿ ಜೇನುತುಪ್ಪ ಮತ್ತು ಶುಂಠಿ ಮಿಠಾಯಿ ತಯಾರಿಸಿ
ಮನೆಯಲ್ಲಿ ಶೀತ ಮತ್ತು ಕೆಮ್ಮು ನಿವಾರಣೆಗೆ ಮಿಠಾಯಿ ಮಾಡಲು ಒಂದು ಶುಂಠಿ, ಕಾಲು ಕಪ್ ಜೇನು ತುಪ್ಪ, ದಾಲ್ಚಿನ್ನಿ ಅರ್ಧ ಟೀಸ್ಪೂನ್, ಅರ್ಧ ನಿಂಬೆ ರಸ, ಒಂದು ಕಪ್ ಬೆಲ್ಲ ಬೇಕು.
ಜೇನುತುಪ್ಪ ಮತ್ತು ಶುಂಠಿ ಮಿಠಾಯಿ ಹೇಗೆ ತಯಾರಿಸುವುದು?
ಒಂದು ದೊಡ್ಡ ಶುಂಠಿ ಸಿಪ್ಪೆ ತೆಗೆಯಿರಿ. ಚಾಕುವಿನಿಂದ ದಪ್ಪವಾಗಿ ಕತ್ತರಿಸಿ. ನಂತರ ಅದನ್ನು ಗ್ರೈಂಡರ್ನಲ್ಲಿ ಪುಡಿಮಾಡಿ. ಹೆಚ್ಚು ನೀರು ಬಳಸಬೇಡಿ. ನಂತರ ಒಂದು ಕಪ್ ಬೆಲ್ಲ, ನೀರು ಮತ್ತು ಶುಂಠಿ ಪೇಸ್ಟ್ನೊಂದಿಗೆ ಪ್ಯಾನ್ ಅನ್ನು ಬಿಸಿ ಮಾಡಿ. ಬೆಲ್ಲ ಕರಗುವ ತನಕ ಬೆರೆಸಿ. ನಂತರ ಕಾಲು ಕಪ್ ಜೇನುತುಪ್ಪ ಮತ್ತು ಅರ್ಧ ಟೀಸ್ಪೂನ್ ದಾಲ್ಚಿನ್ನಿ ಪುಡಿ ಸೇರಿಸಿ. ಬೆರೆಸಿ.
ಇದನ್ನೂ ಓದಿ: ಸಿಟ್ರಸ್ ಅಂಶದ ಹಣ್ಣು ತಿಂದ ನಂತರ ಅಲರ್ಜಿ ಉಂಟಾಗುತ್ತದೆಯೇ? ಹಾಗಾದರೆ ಈ ವಿಷಯಗಳ ಬಗ್ಗೆ ಎಚ್ಚರಿಕೆ ಇರಲಿ
ಮಿಶ್ರಣವು ಕುದಿಯಲು ಪ್ರಾರಂಭಿಸಿದ ನಂತರ, ನಿಂಬೆ ರಸ ಹಾಕಿ. ದಪ್ಪವಾಗುವವರೆಗೆ ಬೆರೆಸಿ. ನಂತರ ಕೈಗಳಿಗೆ ತುಪ್ಪ ಹಚ್ಚಿಕೊಂಡು ಸಣ್ಣ ಸಣ್ಣ ಉಂಡೆ ಮಾಡಿ ಮಿಠಾಯಿ ತಯಾರಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ