ಚಳಿಗಾಲದ (Winter) ತಂಪಾದ ದಿನಗಳು (Cold Days) ಸಾಕಷ್ಟು ಉಸಿರಾಟ (Breathing) ಪ್ರಕ್ರಿಯೆಗೆ ತೊಂದರೆ ಉಂಟು ಮಾಡುತ್ತವೆ. ಬಹುಬೇಗ ಶೀತ, ನೆಗಡಿ, ಕೆಮ್ಮು ಸಮಸ್ಯೆ ಕಾಡುತ್ತವೆ. ಇದರಿಂದ ರಾತ್ರಿ (Night) ಸರಿಯಾಗಿ ನಿದ್ದೆ (Sleeping) ಮಾಡಲು ಆಗುವುದಿಲ್ಲ. ಉಸಿರಾಟ ಸರಿಯಾಗಿ ಆಗಲ್ಲ. ಹಾಗಾಗಿ ತಂಪಾದ ದಿನಗಳಲ್ಲಿ ಶೀತ, ಮೂಗು, ಗಂಟಲು ಮತ್ತು ಎದೆಯನ್ನು ಒತ್ತಿ ಹಿಡಿಯುತ್ತದೆ. ಜೊತೆಗೆ ಕಫ ಹೆಪ್ಪುಗಟ್ಟುತ್ತದೆ. ಲೋಳೆಯು ಸಂಗ್ರಹವಾದಂತೆ ಕೆಮ್ಮು ಮತ್ತು ನೆಗಡಿ, ಎದೆಯಲ್ಲಿ ಬಿಗಿತ ಉಂಟಾಗಿ ದೇಹದಲ್ಲಿ ಹಲವು ಅಸ್ವಸ್ಥತೆಗಳು ಕಾಡುತ್ತವೆ. ಈ ಕಾಯಿಲೆ ನಿವಾರಣೆಗೆ ಕೆಲವು ಯೋಗ ಮಾಡುವುದು ತುಂಬಾ ಪ್ರಯೋಜನ ನೀಡುತ್ತವೆ. ಶೀತ, ಉಸಿರಾಟ ತೊಂದರೆ ಸಮಸ್ಯೆ ನಿವಾರಿಸುತ್ತದೆ. ಆರೋಗ್ಯ ಕಾಪಾಡುತ್ತದೆ.
ಚಳಿಗಾಲದ ಆರೋಗ್ಯ ಸಮಸ್ಯೆ ನಿವಾರಿಸಲು ಯೋಗ ಮಾಡಿ
ಯೋಗ ತಜ್ಞರು ಚಳಿಗಾಲದ ಆರೋಗ್ಯ ಸಮಸ್ಯೆ ದೂರ ಮಾಡಲು ಕೆಲವು ಯೋಗ ಭಂಗಿಗಳ ಬಗ್ಗೆ ಹೇಳಿದ್ದಾರೆ. ಅದಾಗ್ಯೂ ಕೆಲವರು ಈ ಯೋಗ ಮಾಡಬಾರದು ಎಂದು ಸೂಚನೆ ನೀಡಿದ್ದಾರೆ. ಯೋಗ ಗತಿಯ ಪ್ರಯೋಜನ, ವಿಧಾನ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹೇಳಿದ್ದಾರೆ. ಅವುಗಳ ಬಗ್ಗೆ ಇಲ್ಲಿ ನೋಡೋಣ.
ಶೀತದಲ್ಲಿ ಯೋಗ ಮಾಡಿದ್ರೆ ಯಾವೆಲ್ಲಾ ಪ್ರಯೋಜನಗಳು ಸಿಗುತ್ತವೆ?
ಚಳಿಗಾಲದಲ್ಲಿ ಯೋಗ ಮಾಡಿದ್ರೆ ಸಾಕಷ್ಟು ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಇದು ನಿಮ್ಮ ಉಸಿರಾಟದ ವ್ಯವಸ್ಥೆ ಹೆಚ್ಚಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ.
ಶೀತದ ವೇಳೆ ಈ ಯೋಗ ಮಾಡಿದ್ರೆ ಯಾವುದೇ ಸ್ನಾಯು ನೋವು ಇರಲ್ಲ. ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ. ಯೋಗ ಮಾಡಿದ್ರೆ ತ್ವಚೆಗೆ ಹೊಳಪು ಬರುತ್ತದೆ. ಇವುಗಳ ಹೊರತಾಗಿ ಶೀತದಲ್ಲಿ ಯೋಗ ಮಾಡಿದ್ರೆ ಸಾಕಷ್ಟು ಅನೇಕ ಪ್ರಯೋಜನ ಸಿಗುತ್ತವೆ.
ಯೋಗ ಗತಿಯ ಪ್ರಯೋಜನಗಳು
ಶೀತ ಮತ್ತು ಕೆಮ್ಮು ಸಮಸ್ಯೆ ನಿವಾರಣೆಯಾಗುತ್ತದೆ. ಅಲರ್ಜಿಕ್ ರಿನಿಟಿಸ್ನಿಂದ ಪರಿಹಾರ ಸಿಗುತ್ತದೆ. ಸೈನಸ್ ಸಮಸ್ಯೆ ದೂರವಾಗುತ್ತದೆ. ಕಟ್ಟಿದ ಮೂಗು ತೆರವಾಗುತ್ತದೆ. ಗಂಟಲು ನೋವು ಕಡಿಮೆ ಆಗುತ್ತದೆ. ಎದೆಯ ಬಿಗಿತ ಕಡಿಮೆ ಆಗುತ್ತದೆ.
ಯೋಗ ಗತಿ ಮಾಡುವುದು ಹೇಗೆ?
ಯೋಗ ತಜ್ಞೆ ಸ್ಮೃತಿ ಅವರು ಯೋಗ ಗತಿ ಮಾಡುವ ಕ್ರಮಗಳ ಬಗ್ಗೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಮೊದಲು ಪದ್ಮಾಸನ ಭಂಗಿಯಲ್ಲಿ ಕುಳಿತುಕೊಳ್ಳಿ. ನಂತರ ಎರಡೂ ಕೈಗಳಿಂದ ಬಿಗಿಯಾಗಿ ಮುಷ್ಟಿ ಮಾಡಿ. ನಂತರ ಎರಡೂ ಮುಷ್ಟಿಗಳನ್ನು ಎದೆಯ ಮುಂಭಾಗ ಭುಜದ ಕೆಳಕ್ಕೆ ತನ್ನಿ. ಕಣ್ಣು ಮುಚ್ಚಿ ಮತ್ತು ತಲೆಯನ್ನು ಮುಂದಕ್ಕೆ ಇರಿಸಿ.
ಇದರ ನಂತರ ಮುಷ್ಟಿ ಸ್ಥಿರವಾಗಿ ಇರಿಸಿ. ರೆಕ್ಕೆಯಂತೆ ಹಾರುತ್ತಿರುವಂತೆ ಮೊಣಕೈ ಇರಿಸಿ. ಗಮನವನ್ನು ಉಸಿರಾಟದ ಮೇಲೆ ಕೇಂದ್ರೀಕರಿಸಿ. ಯೋಗ ಚಲನೆ ವೇಳೆ, ಸಂಪೂರ್ಣ ಗಮನ ಉಸಿರಾಟದತ್ತ ಇರಬೇಕು ಎಂದು ಯೋಗ ತಜ್ಞರು ಹೇಳಿದ್ದಾರೆ.
ನಂತರ ಮೊಣಕೈಗಳನ್ನು ಮೇಲಕ್ಕೆ ಎತ್ತುತ್ತಾ ವೇಗವಾಗಿ ಉಸಿರಾಡಿ. ನೀವು ಮೊಣಕೈಗಳನ್ನು ಕೆಳಕ್ಕೆ ತರುತ್ತಾ ವೇಗವಾಗಿ ಉಸಿರಾಡಿ. ನಂತರ ವೇಗವನ್ನು ನಿಯಂತ್ರಿಸಿ.
ನೀವು ಯೋಗ ಗತಿ ಅಭ್ಯಾಸ ಮಾಡುವಾಗ ವೇಗ ತುಂಬಾ ಮುಖ್ಯವಾಗುತ್ತದೆ ಅಂತಾರೆ ತಜ್ಞರು. ನೀವು ತುಂಬಾ ವೇಗವಾಗಿ ಮತ್ತು ನಿಧಾನವಾಗಿ ಅಭ್ಯಾಸ ಮಾಡುವುದು ಬೇಡ. ಬದಲಿಗೆ ವೇಗ ನಿಯಂತ್ರಿಸುವುದನ್ನು ಕಲಿಯಿರಿ, ಈ ಯೋಗದಿಂದ ಸಾಕಷ್ಟು ಆರೋಗ್ಯ ಪ್ರಯೋಜನವಿದೆ.
ಇದನ್ನೂ ಓದಿ: ಮಲಬದ್ಧತೆ ಸಮಸ್ಯೆಗೆ ಪರಿಹಾರ ಒದಗಿಸುವ ಭಾರತೀಯ ಮನೆಮದ್ದುಗಳು..!
ಯಾರು ಯೋಗ ಗತಿ ಯೋಗ ಮಾಡಬಾರದು?
ಯೋಗ ತಜ್ಞರು, ಯೋಗ ಗತಿ ಅಭ್ಯಾಸ ಯಾರೆಲ್ಲಾ ಮಾಡಬಾರದು ಎಂಬುದರ ಬಗ್ಗೆ ಸೂಚನೆ ನೀಡಿದ್ದಾರೆ. ಅದರಂತೆ ಗರ್ಭಿಣಿಯರು, ಅಧಿಕ ಬಿಪಿ ಕಾಯಿಲೆಯಿದ್ದವರು, ಕಡಿಮೆ ಬಿಪಿ ಸಮಸ್ಯೆ ಇದ್ದವರು ಇದನ್ನು ತಪ್ಪಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ