• Home
  • »
  • News
  • »
  • lifestyle
  • »
  • Home Remedy: ಚಳಿಗಾಲದಲ್ಲಿ ಬರುವ ಶೀತ, ಗಂಟಲು ನೋವು ನಿವಾರಣೆಗೆ ಇಲ್ಲಿದೆ ಸೂಪರ್ ಮನೆಮದ್ದು!

Home Remedy: ಚಳಿಗಾಲದಲ್ಲಿ ಬರುವ ಶೀತ, ಗಂಟಲು ನೋವು ನಿವಾರಣೆಗೆ ಇಲ್ಲಿದೆ ಸೂಪರ್ ಮನೆಮದ್ದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಯಿಂದ ಮುಕ್ತರಾಗಲು ಜನರು ಔಷಧ ಸೇವನೆ ಮಾಡುತ್ತಾರೆ. ಹೀಗೆ ಪದೇಪದೇ ದಿನವೂ ಮಾತ್ರೆ ಸೇವನೆ ದೇಹದ ಮೇಲೆ ಮತ್ತಷ್ಟು ಅಡ್ಡ ಪರಿಣಾಮ ಉಂಟು ಮಾಡುತ್ತದೆ. ಇದು ದೇಹಕ್ಕೂ ಮತ್ತಷ್ಟು ಹಾನಿ ಮಾಡುತ್ತದೆ. ಇಂತಹ ಸಾಮಾನ್ಯ ಕಾಯಿಲೆಗಳನ್ನು ತಪ್ಪಿಸಲು ನೀವು ಮನೆಮದ್ದು ಮಾಡಿಕೊಳ್ಳಬಹುದು.

ಮುಂದೆ ಓದಿ ...
  • Share this:

    ಚಳಿಗಾಲ (Winter) ಆರಂಭವಾಗಿದೆ. ಚಳಿಗಾಲ ಹಲವು ಆರೋಗ್ಯ ತೊಂದರೆಗಳನ್ನೂ (Health Problems) ಹೊತ್ತು ತರುತ್ತದೆ. ಅದರಲ್ಲಿ ತ್ವಚೆಯ ಸಮಸ್ಯೆಗಳು (Skin Problems) ಮೊದಲ ಸ್ಥಾನದಲ್ಲಿ ಬರುತ್ತವೆ. ಹಾಗೆಯೇ ಚಳಿಗಾಲದ ತಂಪು (Cold) ಗಾಳಿ ಶೀತ, ಜ್ವರ ಹಾಗೂ ಇತರೆ ಕಾಯಿಲೆಗಳನ್ನು (Disease) ಉಂಟು ಮಾಡುತ್ತದೆ. ಚಳಿಯಿಂದ ಬರುವ ರೋಗಗಳು ಜನರನ್ನು (People) ಹೆಚ್ಚು ಕಾಡುತ್ತವೆ. ಚಳಿಗಾಲದಲ್ಲಿ ಎಲ್ಲಾ ವಯಸ್ಸಿನ ಜನರು ಗಂಟಲಿನಲ್ಲಿ ಊತ ಮತ್ತು ಕೆಮ್ಮು ಮತ್ತು ಶೀತ ಸಮಸ್ಯೆ ಹೊಂದುತ್ತಾರೆ. ಯಾಕಂದ್ರೆ ಈ ಋತುವಿನಲ್ಲಿ ತಾಪಮಾನ ಕುಸಿಯುತ್ತದೆ. ಜೊತೆಗೆ ವಾತಾವರಣದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಹೀಗಾಗಿ ಜನರು ಹಲವು ಆರೋಗ್ಯ ತೊಂದರೆ ಅನುಭವಿಸುತ್ತಾರೆ.


    ಹೀಗೆ ಚಳಿಗಾಲದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಯಿಂದ ಮುಕ್ತರಾಗಲು ಜನರು ಔಷಧ ಸೇವನೆ ಮಾಡುತ್ತಾರೆ. ಹೀಗೆ ಪದೇಪದೇ ದಿನವೂ ಮಾತ್ರೆ ಸೇವನೆ ದೇಹದ ಮೇಲೆ ಮತ್ತಷ್ಟು ಅಡ್ಡ ಪರಿಣಾಮ ಉಂಟು ಮಾಡುತ್ತದೆ. ಇದು ದೇಹಕ್ಕೂ ಮತ್ತಷ್ಟು ಹಾನಿ ಮಾಡುತ್ತದೆ.


    ಚಳಿಗಾಲದಲ್ಲಿ ಬರುವ ಕಾಯಿಲೆ ತಪ್ಪಿಸುವುದು ಹೇಗೆ?


    ಚಳಿಗಾಲದಲ್ಲಿ ಕೆಲವು ಆರೋಗ್ಯ ತೊಂದರೆಗಳು ಕಾಮನ್ ಆಗಿ ಕಾಡುತ್ತವೆ. ಇಂತಹ ಸಾಮಾನ್ಯ ಕಾಯಿಲೆಗಳನ್ನು ತಪ್ಪಿಸಲು ನೀವು ಮನೆಮದ್ದು ಮಾಡಿಕೊಳ್ಳಬಹುದು. ಇವುಗಳು ನಿಮಗೆ ಪರಿಹಾರ ನೀಡುತ್ತವೆ. ಇದರಲ್ಲಿ ಲೈಲೋರೈಸ್ ಅಥವಾ ಮೂಲೇತಿ ಉತ್ತಮ ಔಷಧ ಆಗಿದೆ.


    ಇದನ್ನೂ ಓದಿ: ಹೊಟ್ಟೆ ಸಮಸ್ಯೆ ತಪ್ಪಿಸಲು ಅಗಸೆ ಬೀಜಗಳನ್ನು ಆಹಾರದಲ್ಲಿ ಈ ರೀತಿ ಸೇರಿಸಿ ಸೇವಿಸಿ!


    ಅಂದ ಹಾಗೇ ಆಯುರ್ವೇದದಲ್ಲಿ ಲೈಲೋರೈಸ್ ಅಥವಾ ಮೂಲೇತಿಯನ್ನು 8 ರೋಗಗಳ ಚಿಕಿತ್ಸೆ ಜೊತೆಗೆ ಸಂಯೋಜಿಸಲಾಗಿದೆ. ಲೈಕೋರೈಸ್‌ ನಲ್ಲಿರುವ ಆ್ಯಂಟಿಆಕ್ಸಿಡೆಂಟ್, ಉರಿಯೂತ ನಿವಾರಕ ಮತ್ತು ಆ್ಯಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಈ ಕಾಯಿಲೆಗಳನ್ನು ಮೂಲದಿಂದ ತೆಗೆದು ಹಾಕುತ್ತವೆ. ಚಳಿಗಾಲದಲ್ಲೂ ನೀವು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ.


    ಲೈಲೋರೈಸ್ ಅಥವಾ ಮೂಲೇತಿ ಪ್ರಯೋಜನಗಳು


    ನೋಯುತ್ತಿರುವ ಗಂಟಲು ಮತ್ತು ನೋವು ನಿವಾರಣೆ ಮಾಡುತ್ತದೆ.


    ಕೆಮ್ಮು ಮತ್ತು ಶೀತ ಕಡಿಮೆ ಮಾಡಲು ಸಹಕಾರಿ ಆಗಿದೆ.


    ಶ್ವಾಸಕೋಶದ ರೋಗಗಳು ಗುಣವಾಗಿಸಲು ಪ್ರಯೋಜನಕಾರಿಯಾಗಿದೆ.


    ಅಧಿಕ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ.


    ದುರ್ಬಲತೆ ಕಡಿಮೆ ಮಾಡುತ್ತದೆ.


    ಯಕೃತ್ತಿನ ರೋಗ ನಿವಾರಣೆಗೆ ಸಹಾಯ ಮಾಡುತ್ತದೆ.


    ಚರ್ಮದ ಅಸ್ವಸ್ಥತೆ ತೆಗೆದು ಹಾಕುತ್ತದೆ.


    ಬೊಜ್ಜು ಇಳಿಕೆಗೆ ಸಹಕಾರಿ.


    ಲೈಕೋರೈಸ್ ಅನ್ನು ಹೇಗೆ ಬಳಸುವುದು?


    ಲೈಕೋರೈಸ್ ನೀರು


    ಲೈಕೋರೈಸ್ ಅನ್ನು ಮನೆಮದ್ದಾಗಿ ಬಳಸಲು ಸುಲಭವಾದ ಮಾರ್ಗ ಅಂದ್ರೆ ನೀರನ್ನು ತಯಾರಿಸುವುದು. ಗಂಟಲಿನ ಸೋಂಕು, ನೋಯುತ್ತಿರುವ ಗಂಟಲು ಅಥವಾ ಊತ ತಪ್ಪಿಸಲು, ಪ್ರತಿದಿನ ಲೈಕೋರೈಸ್ ನೀರನ್ನು ಕುಡಿಯಿರಿ. ಇದಕ್ಕಾಗಿ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಟೀಸ್ಪೂನ್ ಲೈಕೋರೈಸ್ ಪುಡಿ ಬೆರೆಸಿ ಸೇವಿಸಿ.


    ಲೈಕೋರೈಸ್ ಚಹಾ


    ಆಯುರ್ವೇದ ತಜ್ಞ ವಿಕಾಸ್ ಚಾವ್ಲಾ, ವೇದಾಸ್ ಕ್ಯೂರ್‌ನ ಸಂಸ್ಥಾಪಕ ಮತ್ತು ನಿರ್ದೇಶಕ, ಲಿಕ್ಕೋರೈಸ್ ಚಹಾ ನೋಯುತ್ತಿರುವ ಗಂಟಲಿಗೆ ಪರಿಣಾಮಕಾರಿ ಮನೆಮದ್ದು ಎಂದಿದ್ದಾರೆ. ಒಂದು ಕಪ್ ಕುದಿಯುವ ನೀರಿನಲ್ಲಿ ಸಣ್ಣ ಲೈಕೋರೈಸ್ ಬೇರನ್ನು ಹಾಕಿ, ತುರಿದ ಶುಂಠಿ ಸೇರಿಸಿ, ಕೆಲವು ನಿಮಿಷ ಬೇಯಿಸಿ. ನಂತರ ಫಿಲ್ಟರ್ ಮಾಡಿ ಮತ್ತು ಟೀ ಬ್ಯಾಗ್ ಸೇರಿಸಿ ಕುಡಿಯಿರಿ.


    ಲೈಕೋರೈಸ್ ರೂಟ್ ಅನ್ನು ಅಗಿಯುವುದು


    ಲೈಕೋರೈಸ್ ಶೀತದಲ್ಲಿ ಕೆಮ್ಮನ್ನು ಗುಣಪಡಿಸಲು ಉತ್ತಮ ಮನೆಮದ್ದು. ಲೈಕೋರೈಸ್ ರೂಟ್ ನ್ನು ಕಚ್ಚಾ ಅಗಿಯಿರಿ. ಲೈಕೋರೈಸ್‌ನ ಬೇರನ್ನು ಜಗಿಯುವುದರಿಂದ ಕೆಮ್ಮು ಮತ್ತು ಗಂಟಲು ನೋವಿನಿಂದ ತ್ವರಿತ ಪರಿಹಾರ ಸಿಗುತ್ತದೆ.


    ಲೈಕೋರೈಸ್ ಕಷಾಯ


    ಶೀತ ರೋಗಗಳನ್ನು ತಪ್ಪಿಸಲು ಲೈಕೋರೈಸ್ ಕಷಾಯ ಮಾಡಿ ಕುಡಿಯಿರಿ. ಇದಕ್ಕಾಗಿ ಕಾಲು ಟೀಚಮಚ ಲೈಕೋರೈಸ್ ಪುಡಿ, ಒಂದು ಚಿಟಿಕೆ ದಾಲ್ಚಿನ್ನಿ ಪುಡಿ, ಒಂದು ಚಿಟಿಕೆ ಕರಿಮೆಣಸಿನ ಪುಡಿ ಮತ್ತು ಕೆಲವು ತುಳಸಿ ಎಲೆಗಳನ್ನು ಒಂದು ಲೋಟ ನೀರಿನಲ್ಲಿ ಕುದಿಸಿ.


    ಇದನ್ನೂ ಓದಿ: ಕೈಗಳಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮಧುಮೇಹ ಕಾಯಿಲೆಯ ಸಂಕೇತಗಳಾಗಿರಬಹುದು ಎಚ್ಚರ!


    ಮಿಶ್ರಣವು ಅರ್ಧಕ್ಕೆ ಬಂದಾಗ ಫಿಲ್ಟರ್ ಮಾಡಿ, ಚಮಚ ಜೇನುತುಪ್ಪ ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿಯಿರಿ. ಇದು ಶ್ವಾಸಕೋಶದ ಕಾಯಿಲೆ, ಕೆಮ್ಮು, ಗಂಟಲಿನ ಸೋಂಕು, ಕೊಲೆಸ್ಟ್ರಾಲ್ ಸಮಸ್ಯೆ ನಿವಾರಣೆ ಮಾಡಲು ಸಹಕಾರಿ ಆಗಿದೆ.

    Published by:renukadariyannavar
    First published: