ಚಳಿಗಾಲದಲ್ಲಿ (Winter) ಹೆಚ್ಚು ವೈರಲ್ ಸೋಂಕು (Viral Infection) ಮತ್ತು ಜ್ವರ ಹಾಗೂ ಇತರೆ ಆರೋಗ್ಯ ಸಮಸ್ಯೆಗಳು (Health Problems) ಬಾಧಿಸುತ್ತವೆ. ಶ್ವಾಸಕೋಶ ಸಮಸ್ಯೆಗಳು (Lungs Problems) ಹೆಚ್ಚು. ಇದರ ಮಧ್ಯೆ ಶ್ವಾಸಕೋಶ ಕ್ಯಾನ್ಸರ್ ಕೆಲವು ಸಂಕೇತ ನೀಡುತ್ತದೆ. ಆದರೆ ಇದು ಚಳಿಗಾಲದಲ್ಲಿ ಸಾಮಾನ್ಯ ಎಂದುಕೊಂಡು ಎಷ್ಟೋ ಜನರು ನಿರ್ಲಕ್ಷ್ಯ ಮಾಡಿ ಬಿಡುತ್ತಾರೆ. ಆದರೆ ಶ್ವಾಸಕೋಶ ಸಂಬಂಧಿ ಸಮಸ್ಯೆಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ, ಕೂಡಲೇ ವೈದ್ಯರ ಬಳಿ ತೋರಿಸಿ. ಶ್ವಾಸಕೋಶ ನಮ್ಮ ಇಡೀ ದೇಹಕ್ಕೆ ಆಮ್ಲಜನಕ ಸಾಗಿಸುತ್ತದೆ. ಇದರಲ್ಲಿ ಸಮಸ್ಯೆ ಆಗುವುದು ಹಲವು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ.
ಚಳಿಗಾಲದಲ್ಲಿ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಮತ್ತು ಕ್ಯಾನ್ಸರ್ ಅಪಾಯ
ಚಳಿಗಾಲದಲ್ಲಿ ರೋಗಗಳು ಮತ್ತು ಸೋಂಕುಗಳು ಹೆಚ್ಚು ಬಾಧಿಸುತ್ತವೆ. ಶೀತ, ಜ್ವರ, ನೆಗಡಿ, ಕೆಮ್ಮು, ಕಫ ಸಮಸ್ಯೆ ಸಾಮಾನ್ಯವಾಗಿದೆ. ಇನ್ನು ಕೆಲ ವರ್ಷಗಳಿಂದ ಕೊರೊನಾ ಅಪಾಯ ಕೂಡ ಹೆಚ್ಚಿದೆ. ಉಸಿರಾಟದ ವ್ಯವಸ್ಥೆ ಹೆಚ್ಚು ಅಪಾಯಕಾರಿ ಸ್ಥಿತಿಗೆ ತಲುಪುತ್ತದೆ. ವೈರಲ್ ಸೋಂಕಿನಲ್ಲಿ ಕೆಮ್ಮು ಸಮಸ್ಯೆ ಮುಖ್ಯವಾಗಿದೆ.
ಸಾಮಾನ್ಯವಾದ ಕೆಮ್ಮು ವಾರದೊಳಗೆ ಸರಿ ಹೋಗುತ್ತದೆ. ಆದರೆ ಹಲವು ವಾರಗಳು ಕಳೆದ್ರೂ ಸಮಸ್ಯೆ ಉತ್ತಮವಾಗದೇ ಹೋದ್ರೆ ವೈದ್ಯರ ಬಳಿ ಪರೀಕ್ಷೆ ಮಾಡಿಸಿ. ಯಾಕಂದ್ರೆ ಇದು ಗಂಭೀರ ಕ್ಯಾನ್ಸರ್ ಅಪಾಯದ ಸೂಚನೆಯೂ ಆಗಿರಬಹುದು.
ದೀರ್ಘಕಾಲದ ಕೆಮ್ಮು ಮಾರಣಾಂತಿಕ ಶ್ವಾಸಕೋಶದ ಕ್ಯಾನ್ಸರ್ ಲಕ್ಷಣದಲ್ಲಿ ಒಂದಾಗಿದೆ. ಇಲ್ಲಿ ನಾವು ಕೆಮ್ಮು ಸಾಮಾನ್ಯವೋ ಅಥವಾ ಶ್ವಾಸಕೋಶದ ಕ್ಯಾನ್ಸರ್ ನ ಸಂಕೇತವೋ ಎಂದು ಹೇಗೆ ತಿಳಿಯುವುದು ಅಂತಾ ನೋಡೋಣ.
ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಲಕ್ಷಣವಾಗಿದೆ ಕೆಮ್ಮು
ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಲಕ್ಷಣ ಕೆಮ್ಮು ಆಗಿದೆ. ಮೂರು ವಾರಗಳ ನಂತರ ಕೆಮ್ಮು ವಾಸಿಯಾಗದೇ ಹೋದರೆ, ಶ್ವಾಸಕೋಶದಲ್ಲಿ ನೋವು, ರಕ್ತ ಬರುತ್ತಿದ್ದರೆ ಇದು ಶ್ವಾಸಕೋಶದ ಕ್ಯಾನ್ಸರ್ ಸಂಕೇತ ಆಗಿದೆ. ನಿರ್ಲಕ್ಷ್ಯ ಮಾಡದೇ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯಿರಿ.
ಶ್ವಾಸಕೋಶದ ಕ್ಯಾನ್ಸರ್ ರೋಗ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆ ಆಗಬಹುದು. ಇನ್ನು ಮುಖ್ಯವಾದ ವಿಷಯ ಅಂದ್ರೆ ಕೆಲವು ರೋಗಿಗಳಲ್ಲಿ ಕ್ಯಾನ್ಸರ್ ಕೊನೆಯ ಹಂತ ತಲುಪುವವರೆಗೆ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಅದಾಗ್ಯೂ ಕೆಲವು ಲಕ್ಷಣಗಳು ಶ್ವಾಸಕೊಶದ ಕ್ಯಾನ್ಸರ್ ಮುನ್ಸೂಚನೆ ನೀಡುತ್ತವೆ. ಅವು ಹೀಗಿವೆ.
ಎದೆ ನೋವು ಬರುವುದು, ಉಸಿರಾಟದಲ್ಲಿ ಸಮಸ್ಯೆ ಆಗುವುದು, ಯಾವಾಗಲೂ ನರ್ವಸ್ನೆಸ್ ಇರುವುದು, ಎಲ್ಲಾ ಸಮಯದಲ್ಲು ದಣಿದ ಭಾವನೆ, ತ್ವರಿತ ತೂಕ ನಷ್ಟ ಹಾಗೂ ದೀರ್ಘ ಸಮಯದ ಕೆಮ್ಮು ಸಮಸ್ಯೆಗಳು, ಶ್ವಾಸಕೋಶ ಕ್ಯಾನ್ಸರ್ ಲಕ್ಷಣಗಳು ಆಗಿವೆ.
ದೀರ್ಘಕಾಲದವರೆಗೆ ಕೆಮ್ಮು ಸಮಸ್ಯೆ ಇರುವುದು ಶ್ವಾಸಕೋಶ ಕ್ಯಾನ್ಸರ್ ನ ಮುಖ್ಯ ಸಂಕೇತ
ದೀರ್ಘಕಾಲದ ಕೆಮ್ಮು ಎಂಟು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಇರುತ್ತದೆ. ಇದು ಸಾಕಷ್ಟು ಆಯಾಸ, ದಣಿವು ಉಂಟು ಮಾಡುತ್ತದೆ. ಅಲ್ಲದೇ ಉಸಿರಾಟ ಸಮಸ್ಯೆಗೂ ಕಾರಣವಾಗುತ್ತದೆ. ಆದ್ರೆ ಈ ಸಂಕೇತವು ಬೇರೆ ಕಾಯಿಲೆಯ ಸಂಕೇತವೂ ಆಗಿರಬಹುದು ಅಂತಾರೆ ತಜ್ಞರು.
ಮೂಗು ಸೋರುವಿಕೆ, ಅಸ್ತಮಾ, ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ, ಸೋಂಕು, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD) ಮತ್ತು ರಕ್ತದೊತ್ತಡದ ಸಂಕೇತವೂ ಆಗಿರಬಹುದು.
ಕೆಮ್ಮು ಸಮಸ್ಯೆ ಹೋಗಲಾಡಿಸಲು ಕೆಲವು ಮನೆಮದ್ದುಗಳು ಹೀಗಿವೆ
ಬೆಚ್ಚಗಿನ ನೀರು, ಕಷಾಯ ಸೇವನೆ ಮಾಡಿ. ಕೆಮ್ಮು ಹೋಗಲಾಡಿಸುವ ಸಿರಪ್, ಗಟ್ಟಿಯಾದ ಕ್ಯಾಂಡಿ, ಜೇನುತುಪ್ಪ ಸೇವನೆ ಮಾಡಿ. ತಂಬಾಕು ತಿನ್ನುವುದು, ಗುಟ್ಕಾ, ಪಾನ್ ಮಸಾಲಾ, ಧೂಮಪಾನ ಮಾಡುವುದು ತಪ್ಪಿಸಿ.
ಇದನ್ನೂ ಓದಿ: ಹೊಟ್ಟೆ ಭಾಗದಲ್ಲಿಯ ಹಠಮಾರಿ ಕೊಬ್ಬನ್ನು ಕರಗಿಸಲು ಇಲ್ಲಿದೆ ಸರಳ ಟಿಪ್ಸ್
ಶ್ವಾಸಕೋಶದ ಕ್ಯಾನ್ಸರ್ ತಡೆಯಲು ಸಿಗರೇಟ್ ಸೇವನೆ ತಪ್ಪಿಸಿ. ಸಮತೋಲಿತ ಆಹಾರ ಸೇವಿಸಿ, ನಿಯಮಿತ ಉಸಿರಾಟದ ವ್ಯಾಯಾಮ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ