ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು (Skin Related Problems) ಚಳಿಗಾಲದಲ್ಲಿ ಹೆಚ್ಚುತ್ತದೆ. ಚರ್ಮ ಸಮಸ್ಯೆಗಳು ವಿಶೇಷವಾಗಿ ಮಕ್ಕಳನ್ನು (Specially in Children) ಮತ್ತು ಎಲ್ಲಾ ವಯಸ್ಸಿನ ಜನರನ್ನು (People) ಬಾಧಿಸುತ್ತದೆ. ಚಳಿಗಾಲದ ದದ್ದುಗಳ ಸಮಸ್ಯೆ ಮಕ್ಕಳು ಮತ್ತು ಶಿಶುಗಳಲ್ಲಿ ತುಂಬಾ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ (Problem) ಆಗಿದೆ. ಮಗುವಿನ ಜೀವನದಲ್ಲಿ ಒಮ್ಮೆಯಾದರೂ ದದ್ದುಗಳ ಸಮಸ್ಯೆ, ಚರ್ಮದ ಅಲರ್ಜಿ ಸಮಸ್ಯೆ ಸಂಭವಿಸುತ್ತದೆ. ದದ್ದುಗಳು ಮತ್ತು ಅಲರ್ಜಿ ಸಮಸ್ಯೆ ಕೆಲವೊಮ್ಮೆ ಅಪಾಯಕಾರಿ ಸ್ಥಿತಿ ತಲುಪುತ್ತದೆ. ಇನ್ನು ಕೆಲವು ಸಲ ಇದು ಅಪಾಯಕಾರಿಯಾಗಿರದೆ, ಚರ್ಮದ ಸ್ಥಿತಿ ಅಥವಾ ಸಮಸ್ಯೆ ಇದೆ ಎಂಬುದನ್ನು ಸೂಚಿಸುತ್ತದೆ.
ಚಳಿಗಾಲದಲ್ಲಿ ಮಕ್ಕಳಲ್ಲಿ ಉಂಟಾಗುವ ಚರ್ಮದ ಸಮಸ್ಯೆಗಳು
ದಡಾರ ಕಾಯಿಲೆ
ಚಿಕ್ಕ ಮಕ್ಕಳ ಮೇಲೆ ದಡಾರ ಕಾಯಿಲೆ ಹೆಚ್ಚು ಪರಿಣಾಮ ಬೀರುತ್ತದೆ. ದಡಾರ ಕಾಯಿಲೆ ಹೆಚ್ಚು ಸಾಂಕ್ರಾಮಿಕ ರೋಗವಾಗಿದೆ. ಇದು ಸಾಮಾನ್ಯವಾಗಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದಡಾರ ಕಾಯಿಲೆಯು ದೇಹದ ತಲೆ ಅಥವಾ ಕುತ್ತಿಗೆಯ ಮೇಲ್ಭಾಗದಲ್ಲಿ ಸಾಮಾನ್ಯವಾಗಿ ಪ್ರಾರಂಭ ಆಗುತ್ತದೆ. ಕೆಂಪು ಬಣ್ಣದ ಚುಕ್ಕೆ ಉಂಟಾಗುತ್ತವೆ. ಇದು ದೇಹದ ಉಳಿದ ಭಾಗಗಳಿಗೆ ಹರಡುತ್ತದೆ.
ದಡಾರ ಕಾಯಿಲೆಯಿದ್ದಾಗ ಮಗುವಿಗೆ ಜ್ವರ ಮತ್ತು ಶೀತ ಸಮಸ್ಯೆ ಉಂಟಾಗುತ್ತದೆ. ದಡಾರಕ್ಕೆ ಪ್ಯಾರಸಿಟಮಾಲ್ ಅಥವಾ ಐಬುಪ್ರೊಫೇನ್ ಜ್ವರ ಮತ್ತು ನೋವಿನಿಂದ ಪರಿಹಾರ ನೀಡುತ್ತದೆ. 10 ದಿನಗಳಲ್ಲಿ ಯಾವುದೇ ತೊಂದರೆಗಳಿಲ್ಲದೆ ಕಾಯಿಲೆ ವಾಸಿಯಾಗುತ್ತೆ. ಇದು ಮಕ್ಕಳ ಮೂಗಿನಲ್ಲಿ ಕಂಡು ಬರುವ ವೈರಸ್ ನಿಂದ ಉಂಟಾಗುತ್ತದೆ.
ಪಿತ್ತದ ಗುಳ್ಳೆ
ಪಿತ್ತದ ಗುಳ್ಳೆ ಅಲರ್ಜಿ ಅಥವಾ ವೈರಸ್ ಗೆ ಒಡ್ಡಿಕೊಂಡಾಗ ಉಂಟಾಗುವ ಪ್ರತಿಕ್ರಿಯೆ ಆಗಿದೆ. ಇದು ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತದೆ. ಅಲರ್ಜಿ ಅಥವಾ ವೈರಸ್ ಹಿಸ್ಟಮೈನ್ ಬಿಡುಗಡೆ ಮಾಡುವ ಪ್ರತಿರಕ್ಷಣಾ ಕೋಶ ಸಕ್ರಿಯವಾಗಿಸುತ್ತದೆ. ಇದರಿಂದ ಕೆಂಪು ಮತ್ತು ತುರಿಕೆ ದದ್ದು ಉಂಟಾಗುತ್ತದೆ. ಹೊಟ್ಟೆಯಲ್ಲಿ ಹುಳು ಇದ್ದರೆ ಆಗಾಗ್ಗೆ ಸಂಭವಿಸುತ್ತದೆ. ತುಂಬಾ ಚಿಕ್ಕ ಗುಳ್ಳೆ ಆಗಿ ತುರಿಕೆ ಉಂಟಾಗುತ್ತದೆ. ಮಕ್ಕಳಲ್ಲಿ ಪಿತ್ತದ ಗುಳ್ಳೆಗಳು ಶೀತ ಮತ್ತು ಬಿಸಿಯಿಂದ ಹಾಗೂ ಹೊಟ್ಟೆ ಅಸ್ವಸ್ಥತೆಯಿಂದ ಉಂಟಾಗುತ್ತದೆ.
ಎಸ್ಜಿಮಾ ಸಮಸ್ಯೆ
ಎಸ್ಜಿಮಾ ಎಂಬುದು ತುರಿಕೆ, ಕೆಂಪು ತೇಪೆ, ಒಣ ಮತ್ತು ಬಿರುಕು ಬಿಟ್ಟ ಚರ್ಮದ ದದ್ದು ಸಮಸ್ಯೆ ಉಂಟು ಮಾಡುವ ದೀರ್ಘಾವಧಿಯ ಸ್ಥಿತಿ. ಇದರಲ್ಲಿ ಮಕ್ಕಳ ಮೇಲೆ ಅಟೊಪಿಕ್ ಎಸ್ಜಿಮಾ ಪರಿಣಾಮ ಬೀರುತ್ತದೆ. ಹವಾಮಾನ, ಧೂಮಪಾನ ಮತ್ತು ಆನುವಂಶಿಕತೆ, ತೇವಾಂಶದ ಕೊರತೆ ಕಾರಣವಾಗಿದೆ. ಮೊಣಕಾಲುಗಳ ಹಿಂದೆ ಅಥವಾ ಮೊಣಕೈ, ಕುತ್ತಿಗೆ, ಕಣ್ಣು ಮತ್ತು ಕಿವಿಗಳ ಮೇಲೆ ಅಟೊಪಿಕ್ ಎಸ್ಜಿಮಾ ಉಂಟಾಗುತ್ತದೆ.
ಸೆಲ್ಯುಲೈಟಿಸ್ ಸಮಸ್ಯೆ
ಚರ್ಮದ ಅಂಗಾಂಶದೊಳಗೆ ಸಂಭವಿಸುವ ದದ್ದು ಸಮಸ್ಯೆ ಆಗಿದೆ ಸೆಲ್ಯುಲೈಟಿಸ್. ಚರ್ಮವು ಕೆಂಪು, ಊತ ಮತ್ತು ಬಿಸಿಯಾಗುತ್ತದೆ. ಕಾಲುಗಳ ಮೇಲೆ ಪರಿಣಾಮ ಬೀರುತ್ತದೆ. ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುತ್ತೆ. ದೇಹದ ಯಾವ ಭಾಗದ ಮೇಲೆ ಬೇಕಾದ್ರೂ ಪರಿಣಾಮ ಬೀರುತ್ತದೆ. ಮಗುವಿಗೆ ಜ್ವರ ಇರುತ್ತೆ.
ಇದನ್ನೂ ಓದಿ: ನವಜಾತ ಶಿಶುಗಳಲ್ಲಿ ಈ ಲಕ್ಷಣ ಕಂಡ್ರೆ ನೆಗ್ಲೆಕ್ಟ್ ಮಾಡ್ಬೇಡಿ
ಚಿಕನ್ ಫಾಕ್ಸ್ ಸಮಸ್ಯೆ
ಸಾಮಾನ್ಯವಾಗಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುವ ಚರ್ಮದ ಸಮಸ್ಯೆಯಾಗಿದೆ ಚಿಕನ್ ಫಾಕ್ಸ್. ಇದು ವರಿಸೆಲ್ಲಾ ಜೋಸ್ಟರ್ ವೈರಸ್ ನಿಂದ ಉಂಟಾಗುವ ವೈರಲ್ ಕಾಯಿಲೆಯಾಗಿದೆ. ದೇಹದ ಮೇಲೆ ಮೊಡವೆ, ದದ್ದು, ರಕ್ತ ಬರುತ್ತದೆ. ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯಿಲ್ಲ. ಜ್ವರ ಕಡಿಮೆ ಮಾಡಲು ಪ್ಯಾರಸಿಟಮಾಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ