• Home
  • »
  • News
  • »
  • lifestyle
  • »
  • Hand Dryness: ಚಳಿಗಾಲದಲ್ಲಿ ಕೈಗಳಿಗೂ ಬೇಕು ಆರೈಕೆ, ಇಲ್ಲಿದೆ ನೋಡಿ ಸೂಪರ್ ಮನೆಮದ್ದುಗಳು

Hand Dryness: ಚಳಿಗಾಲದಲ್ಲಿ ಕೈಗಳಿಗೂ ಬೇಕು ಆರೈಕೆ, ಇಲ್ಲಿದೆ ನೋಡಿ ಸೂಪರ್ ಮನೆಮದ್ದುಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲ ಬಂತೆಂದರೆ ಜನ ನೀರಿನ ಸೇವನೆ ಕಡಿಮೆ ಮಾಡುತ್ತಾರೆ. ಇದು ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಲು ಕಾರಣ. ಚಳಿಗಾಲದಲ್ಲಿ ಬೀಸುವ ತಂಪಾದ ಗಾಳಿ ಕೈಗಳು ಒಣಗಲು ಕಾರಣ. ಜನರು ಮಾಯಿಶ್ಚರೈಸರ್ ಅನ್ನು ಮತ್ತೆ ಮತ್ತೆ ಬಳಸುತ್ತಾರೆ. ಇದು ಚರ್ಮವು ಇನ್ನಷ್ಟು ಒಣಗಲು ಕಾರಣವಾಗುತ್ತದೆ.

  • Share this:

    ಬದಲಾಗುತ್ತಿರುವ ಋತುಮಾನದಲ್ಲಿ (Season) ತುಂಬಾ ಕಷ್ಟಕರವಾದ ಕೆಲಸ  ಹಾಗೂ ಹೆಚ್ಚು ತಾಳ್ಮೆ ವಹಿಸಿ ಮಾಡಬೇಕಾದ ಕೆಲಸ ಅಂದ್ರೆ ಅದು ಚರ್ಮದ ಆರೈಕೆ (Skin Care). ಹೊರಗಿನ ತಂಪು ಮತ್ತು ಒಣ ಗಾಳಿಯಿಂದ ಚರ್ಮದ ರಕ್ಷಣೆ ಮಾಡುವುದೇ ದೊಡ್ಡ ಕೆಲಸವಾಗುತ್ತದೆ. ಮತ್ತು ಶುಷ್ಕತೆಯಿಂದ ರಕ್ಷಣೆ ಮಾಡಲು ಸರ್ಕಸ್ ಮಾಡಬೇಕಾಗುತ್ತದೆ. ಹೆಚ್ಚಿನ ಜನರು (People) ಮುಖದ ಆರೈಕೆಗೆ (Face Care) ಹೆಚ್ಚು ಗಮನ ಹರಿಸುತ್ತಾರೆ. ಮತ್ತು ಕೈ, ಕಾಲುಗಳ ಆರೈಕೆಯನ್ನು ಮರೆತುಬಿಡ್ತಾರೆ. ತಂಪಾದ ಗಾಳಿ ಮತ್ತು ನೀರು ಕೈಗಳಿಂದ ತೇವಾಂಶವನ್ನು ತೆಗೆದು ಹಾಕುತ್ತದೆ. ಹಾಗಾಗಿ ಕೈಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ. ತೇವಾಂಶವನ್ನು ಕಾಪಾಡಿಕೊಳ್ಳಲು ಕೆಲವು ವಿಶೇಷ ಮನೆಮದ್ದು (Home Remedies)  ಟ್ರೈ ಮಾಡಬಹುದು.


    ಚಳಿಗಾಲದಲ್ಲಿ ಕೈಗಳ ಆರೈಕೆಗೆ ಮನೆಮದ್ದು


    ನಿರ್ಜಲೀಕರಣ ಸಮಸ್ಯೆ


    ಚಳಿಗಾಲ ಬಂತೆಂದರೆ ಜನ ನೀರಿನ ಸೇವನೆ ಕಡಿಮೆ ಮಾಡುತ್ತಾರೆ. ಇದು ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಲು ಕಾರಣ. ಚರ್ಮವು ಒಣಗಲು ಪ್ರಾರಂಭಿಸುತ್ತದೆ.


    ರಾಸಾಯನಿಕ ಉತ್ಪನ್ನಗಳ ಬಳಕೆ


    ಚಳಿಗಾಲದಲ್ಲಿ ಬೀಸುವ ತಂಪಾದ ಗಾಳಿ ಕೈಗಳು ಒಣಗಲು ಕಾರಣ. ಜನರು ಮಾಯಿಶ್ಚರೈಸರ್ ಅನ್ನು ಮತ್ತೆ ಮತ್ತೆ ಬಳಸುತ್ತಾರೆ. ಇದು ಚರ್ಮವು ಇನ್ನಷ್ಟು ಒಣಗಲು ಕಾರಣವಾಗುತ್ತದೆ.




    ತಪ್ಪಾದ ಉತ್ಪನ್ನ ಬಳಕೆ


    ಬದಲಾಗುತ್ತಿರುವ ಋತುವಿನಲ್ಲಿ ಚರ್ಮದ ಆರೈಕೆಯ ದಿನಚರಿಯಲ್ಲಿ ಬದಲಾವಣೆ ಮಾಡಬೇಕ. ದಿನಚರಿ ಮತ್ತು ಉತ್ಪನ್ನ ಬದಲಾಯಿಸದಿದ್ದರೆ ತ್ವಚೆಗೆ ಅನೇಕ ಹಾನಿ ಉಂಟು ಮಾಡುತ್ತದೆ.


    ಬಿಸಿ ನೀರಿನ ಅತಿಯಾದ ಬಳಕೆ


    ಶೀತದಲ್ಲಿ ಕೈಗಳು ಬಿಸಿ ನೀರಿನ ಸಂಪರ್ಕಕ್ಕೆ  ಹೆಚ್ಚು ಬರುತ್ತವೆ. ಬಿಸಿ ನೀರು ನಿಮ್ಮ ಚರ್ಮದಿಂದ ತೇವಾಂಶ ಕಸಿದು ಒಣಗಿಸುತ್ತದೆ. ಹಾಗಾಗಿ ಕೈಗಳು ಹೆಚ್ಚು ಒಣಗುತ್ತವೆ.


    ಕೈಗಳ ಬಗ್ಗೆ ಹೇಗೆ ಕಾಳಜಿ ವಹಿಸಬೇಕು?


    ಚಳಿಗಾಲದಲ್ಲಿ ಚರ್ಮ ಬಹುಬೇಗ ಒಣಗುತ್ತದೆ. ಸತ್ತ ಜೀವ ಕೋಶಗಳು ಕೈಯಲ್ಲಿ ಉಗುರುಗಳ ಸುತ್ತಲಿನ ಚರ್ಮವು ಗಟ್ಟಿಯಾಗುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಪ್ರತಿ ತಿಂಗಳು ಹಸ್ತಾಲಂಕಾರ ಮಾಡಿ.


    ಮಾಯಿಶ್ಚರೈಸರ್ ಹಚ್ಚಿರಿ


    ಕೈಯಲ್ಲಿ ತೇವಾಂಶ ಮತ್ತು ಮೃದುತ್ವ ಇರುವಂತೆ ನೋಡಿಕೊಳ್ಳಿ. ನೀರಿನ ಬಳಕೆ ನಂತರ ಕೈಗಳನ್ನು ಒರೆಸಿಕೊಳ್ಳಿ. ತಕ್ಷಣವೇ ಅವುಗಳನ್ನು ತೇವಗೊಳಿಸಿ. ಮಾಯಿಶ್ಚರೈಸರ್ ಅನ್ನು ಅನ್ವಯಿಸಿ. 2 ನಿಮಿಷ ಮಸಾಜ್ ಮಾಡಿ.


    ಸಾರಭೂತ ತೈಲ ಅನ್ವಯಿಸಿ


    ಉಗುರು ಬೆಚ್ಚಗಿನ ನೀರಿಗೆ ಚಮಚ ಆಲಿವ್ ಎಣ್ಣೆ, ಎಳ್ಳು ಎಣ್ಣೆ ಅಥವಾ ಜೊಜೊಬಾ ಎಣ್ಣೆ ಸೇರಿಸಿ. ಕೈಗಳನ್ನು ಈ ನೀರಿನಲ್ಲಿ ಸುಮಾರು 15 ನಿಮಿಷ ನೆನೆಸಿ. ಇದು ಕೈಗಳ ಚರ್ಮವು ಮೃದುವಾಗಿ ಮತ್ತು ಆರೋಗ್ಯಕರವಾಗಿಸುತ್ತದೆ


    ಮಸಾಜ್ ಮಾಡಿ


    ರಾತ್ರಿಯಲ್ಲಿ ಮಲಗುವ ಮೊದಲು ಕೈಗಳನ್ನು ಮಸಾಜ್ ಮಾಡಿ. ಚರ್ಮವು ಸಂಪೂರ್ಣ ಪೋಷಣೆ ಪಡೆಯಲು ಸಹಕಾರಿ. ಕೈಗಳಲ್ಲಿ ಮೃದುತ್ವ ಮತ್ತು ತೇವಾಂಶವು ಉಳಿಯುತ್ತದೆ.


    ಚಳಿಗಾಲದಲ್ಲಿ ಮಸಾಜ್ ಮಾಡಲು ಯಾವ ತೈಲ ಬಳಸಬೇಕು?


    ತೆಂಗಿನ ಎಣ್ಣೆ


    ತೆಂಗಿನ ಎಣ್ಣೆ ಚರ್ಮವನ್ನು ತೇವಗೊಳಿಸಲು ಕೆಲಸ ಮಾಡುತ್ತದೆ. ಇದು ಉರಿಯೂತ ಕಡಿಮೆ ಮಾಡುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣ ಹೊಂದಿದೆ. ಅಟೊಪಿಕ್ ಡರ್ಮಟೈಟಿಸ್ನಂತಹ ಚರ್ಮದ ಸಮಸ್ಯೆಗೆ ತೆಂಗಿನ ಎಣ್ಣೆ ಸಹ ಬಳಸಲಾಗುತ್ತದೆ.


    ಬಾದಾಮಿ ಎಣ್ಣೆ


    ಬಾದಾಮಿ ಎಣ್ಣೆಯು ಚರ್ಮದಿಂದ ಶುಷ್ಕತೆ ಹೋಗಲಾಡಿಸುತ್ತದೆ. ಬಾದಾಮಿ ಎಣ್ಣೆಯು ಮೃದುಗೊಳಿಸುತ್ತದೆ. ಚರ್ಮದ ತೇವಾಂಶ ಸಮತೋಲನಗೊಳಿಸುತ್ತದೆ. ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.


    ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಕಾಂತಿಯುತ ತ್ವಚೆಗಾಗಿ ಈ ಫೇಸ್ ಮಾಸ್ಕ್ ಟ್ರೈ ಮಾಡಿ!


    ಸಾಸಿವೆ ಎಣ್ಣೆ


    ಸಾಸಿವೆ ಎಣ್ಣೆ ವಯಸ್ಸಾದ ಸಮಸ್ಯೆ ನಿವಾರಿಸುತ್ತದೆ. ಸಾಸಿವೆ ಎಣ್ಣೆ ಹಚ್ಚುವುದರಿಂದ ತ್ವಚೆಯಲ್ಲಿ ತೇವಾಂಶ ಉಳಿದು ಮೃದುವಾಗುತ್ತದೆ.

    Published by:renukadariyannavar
    First published: