• Home
  • »
  • News
  • »
  • lifestyle
  • »
  • Winter Season: ಚಳಿಗಾಲದಲ್ಲಿ ಮೊಸರು ತಿನ್ನಬಹುದಾ, ಆಯುರ್ವೇದ ಏನು ಹೇಳುತ್ತದೆ?

Winter Season: ಚಳಿಗಾಲದಲ್ಲಿ ಮೊಸರು ತಿನ್ನಬಹುದಾ, ಆಯುರ್ವೇದ ಏನು ಹೇಳುತ್ತದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ಕೆಲವು ಪದಾರ್ಥಗಳ ಸೇವನೆ ಮಾಡಬೇಕೋ ಬೇಡವೋ ಎಂಬ ಗೊಂದಲ ಉಂಟಾಗುತ್ತದೆ. ಅವುಗಳಲ್ಲಿ ಒಂದು ಪದಾರ್ಥ ಮೊಸರು ಆಗಿದೆ. ಚಳಿಗಾಲದಲ್ಲಿ ಇದನ್ನು ಸೇವಿಸಬೇಕೋ ಬೇಡವೋ ಎಂಬ ಪ್ರಶ್ನೆ ಮೂಡುತ್ತದೆ. ಮೊಸರಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿ ಕಂಡು ಬರುತ್ತದೆ.

  • Share this:

    ಬದಲಾಗುತ್ತಿರುವ ಋತುವಿನಲ್ಲಿ ಅನೇಕ ಆರೋಗ್ಯ ಸಮಸ್ಯೆ (Health Care) ಕಾಡುತ್ತವೆ. ಈಗ ಚಳಿಗಾಲ ಪ್ರಾರಂಭ ಆಗಿದೆ. ಹಾಗಾಗಿ ನಾವು ತಿನ್ನುವ ಆಹಾರ (Food) ಕ್ರಮದಲ್ಲಿ ಅಗತ್ಯ ಮತ್ತು ಮುಖ್ಯ ಬದಲಾವಣೆ (Changes) ಮಾಡಲೇಬೇಕಾದ ಸ್ಥಿತಿ ಇದೆ. ಆಹಾರ ಪ್ರಿಯರು (Food Lovers) ವಿವಿಧ ರುಚಿಕರ ಆಹಾರ ಸೇವಿಸಲು ಬಯಸುತ್ತಾರೆ. ಕೆಲವರು ಡೈರಿ ಪದಾರ್ಥ, ಸಿಹಿ ಪದಾರ್ಥ, ಜಂಕ್ ಫುಡ್ (Junk Food) ಹೆಚ್ಚಾಗಿ ಬಿಸಿಬಿಸಿ ಪದಾರ್ಥ ಸೇವಿಸಲು ಹೆಚ್ಚು ಇಷ್ಟ ಪಡುತ್ತಾರೆ. ಈ ಋತುವಿನಲ್ಲಿ ಅನೇಕ ಹಣ್ಣು ಮತ್ತು ತರಕಾರಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಇದು ಆರೋಗ್ಯ ವೃದ್ಧಿಗೆ ತುಂಬಾ ಪ್ರಯೋಜನಕಾರಿ ಆಗಿದೆ.


    ಚಳಿಗಾಲದಲ್ಲಿ ಮೊಸರು ಸೇವಿಸಬೇಕೋ ಅಥವಾ ಬೇಡವೋ?


    ಆದರೆ ಚಳಿಗಾಲದಲ್ಲಿ ಕೆಲವು ಪದಾರ್ಥಗಳ ಸೇವನೆ ಮಾಡಬೇಕೋ ಬೇಡವೋ ಎಂಬ ಗೊಂದಲ ಉಂಟಾಗುತ್ತದೆ. ಅವುಗಳಲ್ಲಿ ಒಂದು ಪದಾರ್ಥ ಮೊಸರು ಆಗಿದೆ. ಚಳಿಗಾಲದಲ್ಲಿ ಇದನ್ನು ಸೇವಿಸಬೇಕೋ ಬೇಡವೋ ಎಂಬ ಪ್ರಶ್ನೆ ಮೂಡುತ್ತದೆ.




    ಚಳಿಗಾಲದಲ್ಲಿ ಅನೇಕ ಪದಾರ್ಥಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಅವುಗಳಲ್ಲಿ ವಿಶೇಷವಾಗಿ ಮೂಲಂಗಿ, ಆಲೂಗಡ್ಡೆ, ಮೆಂತ್ಯ ಸೊಪ್ಪು, ಕೊತ್ತಂಬರಿ ಸೊಪ್ಪು ಹೀಗೆ ತರಕಾರಿ ಮತ್ತು ಹಣ್ಣುಗಳು ಕಾಣ ಸಿಗುತ್ತವೆ.


    ಇವುಗಳನ್ನು ರೊಟ್ಟಿಯ ಜೊತೆ ಸಲಾಡ್ ರೂಪದಲ್ಲಿ ಹೆಚ್ಚಿನ ಜನರು ಸೇವನೆ ಮಾಡುತ್ತಾರೆ. ಆದರೆ ಅದರ ಜೊತೆಗೆ ರೈತಾ ಮಾಡಲು ಅಥವಾ ಫುಲಾವ್ ಮಾಡಿದಾಗ ಅದಕ್ಕೆ ಮೊಸರಿನ ರೈತಾ ಬೇಕೆನಿಸುತ್ತದೆ. ರೈತಾ ಇಲ್ಲದೇ ಫುಲಾವ್ ರುಚಿಸುವುದಿಲ್ಲ. ಕೆಲವರು ಮೊಸರು ಇಲ್ಲದೇ ಫುಲಾವ್ ಸೇವನೆ ಮಾಡುವುದಿಲ್ಲ.


    ಮೊಸರು ಪೋಷಕಾಂಶಗಳ ಖಜಾನೆ ಆಗಿದೆ


    ಮೊಸರಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಮತ್ತು ಸಮೃದ್ಧವಾಗಿ ಕಂಡು ಬರುತ್ತದೆ. ಇದು ಉತ್ತಮ ಬ್ಯಾಕ್ಟೀರಿಯಾ ಮತ್ತು ಪ್ರೋಟೀನ್‌ ನ ಉತ್ತಮ ಮೂಲ ಆಗಿದೆ. ಇದು ವಿಟಮಿನ್ , ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅನ್ನು ಸಹ ಹೊಂದಿದೆ. ಇದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ವಿಟಮಿನ್ ಬಿ 6 ಮತ್ತು ಬಿ 12 ನಂತಹ ಪೋಷಕಾಂಶ ನೀಡುತ್ತದೆ.


    ಚಳಿಗಾಲದಲ್ಲಿ ಮೊಸರು ಸೇವನೆ ಬಗ್ಗೆ ಆಯುರ್ವೇದ ಏನು ಹೇಳುತ್ತದೆ?


    ಆಯುರ್ವೇದ ತಜ್ಞ ಡಾ.ದೀಕ್ಷಾ ಭಾವಸರ್ ಸವಲಿಯಾ ಅವರ ಪ್ರಕಾರ, ಮೊಸರು ರುಚಿಯಲ್ಲಿ ಹುಳಿ, ಸ್ವಭಾವದಲ್ಲಿ ಬಿಸಿ ಆಗಿರುತ್ತದೆ. ಮತ್ತು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದನ್ನು ಸೇವಿಸಿದರೆ ತೂಕ ಹೆಚ್ಚುತ್ತದೆ, ದೈಹಿಕ ಶಕ್ತಿ ಹೆಚ್ಚುತ್ತದೆ ಮತ್ತು ಜೀರ್ಣಶಕ್ತಿ ಸುಧಾರಿಸುತ್ತದೆ.


    ಶೀತದಲ್ಲಿ ಮೊಸರು ತಿನ್ನುವುದನ್ನು ತಪ್ಪಿಸಬೇಕು. ಯಾಕಂದ್ರೆ ಇದು ಗ್ರಂಥಿಗಳಿಂದ ಸ್ರವಿಸುವಿಕೆ ಹೆಚ್ಚಿಸುತ್ತದೆ. ಇದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಕಫ ಸಮಸ್ಯೆಗೆ ಕಾರಣ ಆಗುತ್ತದೆ. ಉಸಿರಾಟದ ತೊಂದರೆ, ಅಸ್ತಮಾ, ಶೀತ ಮತ್ತು ಕೆಮ್ಮು ಇರುವವರಿಗೆ ಲೋಳೆಯ ಶೇಖರಣೆ ಬಹಳಷ್ಟು ಸಮಸ್ಯೆ ಉಂಟು ಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಮತ್ತು ವಿಶೇಷವಾಗಿ ರಾತ್ರಿ ಮೊಸರು ಸೇವಎ ತಪ್ಪಿಸಿ.


    ಮೊಸರನ್ನು ಯಾವಾಗ ಮತ್ತು ಹೇಗೆ ಸೇವಿಸಬೇಕು?


    ಸ್ಥೂಲಕಾಯ, ಕೆಮ್ಮು ಅಸ್ವಸ್ಥತೆ, ರಕ್ತಸ್ರಾವದ ತೊಂದರೆ ಮತ್ತು ಉರಿಯೂತ ಸಮಸ್ಯೆ ಹೊಂದಿದವರು ಮೊಸರು ಸೇವನೆ ತಪ್ಪಿಸಿ ಎನ್ನುತ್ತಾರೆ ತಜ್ಞರು. ರಾತ್ರಿ ಮೊಸರು ಸೇವಿಸಬಾರದು. ಮೊಸರನ್ನು ತಿನ್ನಲು ಬಯಸಿದರೆ, ಮಧ್ಯಾಹ್ನ ಮತ್ತು ಸಣ್ಣ ಪ್ರಮಾಣದಲ್ಲಿ ಸೇವಿಸಿ.


    ಮೊಸರನ್ನು ಪ್ರತಿದಿನ ಸೇವಿಸಬಾರದು. ನೀವು ಪ್ರತಿದಿನ ಮೊಸರು ಸೇವಿಸಲು ಬಯಸಿದರೆ ಕಲ್ಲು ಉಪ್ಪು, ಕರಿಮೆಣಸು ಮತ್ತು ಜೀರಿಗೆಯಂತಹ ಮಸಾಲೆ ಜೊತೆ ಹಾಲೊಡಕು ಮಜ್ಜಿಗೆ ಕುಡಿಯಿರಿ.


    ಇದನ್ನೂ ಓದಿ: ದೈನಂದಿನ ತ್ವಚೆಯ ಕಾಳಜಿ ಹೀಗಿರಲಿ! ಆಹಾರದಲ್ಲಿ ಇವುಗಳನ್ನು ಮಿಸ್ ಮಾಡಬೇಡಿ


    ಮೊಸರನ್ನು ಹಣ್ಣುಗಳ ಜೊತೆ ಬೆರೆಸದೆ ತಿನ್ನಬಾರದು. ದೀರ್ಘಕಾಲದವರೆಗೆ ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆ ಮತ್ತು ಅಲರ್ಜಿ ಉಂಟಾಗಬಹುದು. ಮೊಸರನ್ನು ಮಾಂಸ ಮತ್ತು ಮೀನಿನೊಂದಿಗೆ ತಿನ್ನಬಾರದು. ಬಿಸಿ ಪದಾರ್ಥದ ಜೊತೆಗೆ ಮೊಸರು ದೇಹದಲ್ಲಿ ವಿಷ ಉಂಟು ಮಾಡುತ್ತದೆ.

    Published by:renukadariyannavar
    First published: