• Home
  • »
  • News
  • »
  • lifestyle
  • »
  • Guava Fruit Punch Drinks: ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬೇಕು ಪೇರಳೆ ಹಣ್ಣಿನ ಪಂಚ್ ಪಾನೀಯ, ಸುಲಭದ ರೆಸಿಪಿ ಹೀಗಿದೆ ನೋಡಿ

Guava Fruit Punch Drinks: ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬೇಕು ಪೇರಳೆ ಹಣ್ಣಿನ ಪಂಚ್ ಪಾನೀಯ, ಸುಲಭದ ರೆಸಿಪಿ ಹೀಗಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪೇರಳೆ ಹಣ್ಣನ್ನು ಕತ್ತರಿಸಿ ಸಲಾಡ್ ಮಾಡಿ ತಿನ್ನುವುದು ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಇದು ಎಲ್ಲರಿಗೂ ಪ್ರಿಯವಾದ ಹಣ್ಣು ಮತ್ತು ಆರೋಗ್ಯಕ್ಕೆ ತುಂಬಾ ಲಾಭಕಾರಿ. ಹಾಗಾಗಿ ಇಂದು ನಾವು ಪೇರಳ ಹಣ್ಣಿನ ರೆಸಿಪಿ ಒಂದನ್ನು ತಂದಿದ್ದೇವೆ.

  • Share this:

    ಬದಲಾಗುತ್ತಿರುವ ಋತುಮಾನಕ್ಕೆ ತಕ್ಕಂತೆ ನಮ್ಮ ಆಹಾರದ (Food) ಆಯ್ಕೆಗಳೂ ಸಹ ಬದಲಾಗುತ್ತವೆ. ಆಯಾ ಸೀಸನ್ ನಲ್ಲಿ (Season) ಆಯಾ ಹಣ್ಣು ಮತ್ತು ತರಕಾರಿಗಳ (Fruit And Vegetables) ಸೇವನೆ ದೇಹಕ್ಕೆ (Body) ಬೇಕಾದ ಪೋಷಣೆ ನೀಡುತ್ತದೆ. ಚಳಿಗಾಲದ ಸೀಸನ್ ನಲ್ಲಿ (Winter Season) ಸಾಕಷ್ಟು ಹಣ್ಣು ಮತ್ತು ತರಕಾರಿಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತವೆ. ಹೊಸ ಬಗೆಯ ಹಣ್ಣುಗಳು ಮತ್ತು ತರಕಾರಿಗಳು ಆರೋಗ್ಯ ವೃದ್ಧಿಗೆ ಪ್ರಯೋಜನ ನೀಡುತ್ತವೆ.  ಈ ಸೀಸನಲ್ ಹಣ್ಣು ಮತ್ತು ತರಕಾರಿಗಳು ಸದೃಢ ದೇಹ ಮತ್ತು ವಿಟಮಿನ್ ಒದಗಿಸುತ್ತವೆ. ಅಂತಹ ಕೆಲವು ಋತುಮಾನದ ಹಣ್ಣುಗಳಲ್ಲಿ ಪೇರಳೆ (Guva) ಹಣ್ಣು ಸಹ ಒಂದಾಗಿದೆ.


    ಪೇರಳೆ ಹಣ್ಣನ್ನು ಕತ್ತರಿಸಿ ಸಲಾಡ್ ಮಾಡಿ ತಿನ್ನುವುದು ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಇದು ಎಲ್ಲರಿಗೂ ಪ್ರಿಯವಾದ ಹಣ್ಣು ಮತ್ತು ಆರೋಗ್ಯಕ್ಕೆ ತುಂಬಾ ಲಾಭಕಾರಿ. ಹಾಗಾಗಿ ಇಂದು ನಾವು ಪೇರಳೆ ಹಣ್ಣಿನ ರೆಸಿಪಿ ಒಂದನ್ನು ತಂದಿದ್ದೇವೆ. ಪೇರಳೆ ಹಣ್ಣಿನ ಪಾನೀಯವು ನಿಮಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ.


    ನಿಮ್ಮ ಮನೆಯ ಪಾರ್ಟಿಗಳಲ್ಲಿ ಈ ಪೇರಳೆ ಹಣ್ಣಿನ ಡ್ರಿಂಕ್ ನ್ನು ಇರಿಸಬಹುದು. ಇದನ್ನು ತಯಾರಿಸುವುದು ತುಂಬಾ ಸುಲಭ. ಇದು ರೆಸ್ಟೋರೆಂಟ್ ಶೈಲಿಯ ಪಾನೀಯದಂತೆ ರುಚಿ ನೀಡುತ್ತದೆ. ಹಾಗಾದ್ರೆ ಬನ್ನಿ ಪೇರಳೆ ಹಣ್ಣಿನ ಡ್ರಿಂಕ್ ರೆಸಿಪಿ ಮಾಡುವುದು ಹೇಗೆ ಅಂತಾ ತಿಳಿಯೋಣ.


    ಪೇರಳೆ ಹಣ್ಣಿನ ಪಂಚ್ ಪಾನೀಯ ರೆಸಿಪಿ


    ಬೇಕಾಗುವ ಸಾಮಗ್ರಿಗಳು


    ನಾಲ್ಕು ಪೇರಳೆ ಹಣ್ಣು, ನಾಲ್ಕು ಟೀ ಸ್ಪೂನ್ ನಿಂಬೆ ರಸ, ಶುಂಠಿ ರಸ ಎರಡು ಟೀ ಸ್ಪೂನ್, ರುಚಿಗೆ ತಕ್ಕಂತೆ ಬೆಲ್ಲದ ಪುಡಿ, ಅಲಂಕಾರಕ್ಕಾಗಿ ಪುದೀನ ಎಲೆಗಳು


    ಪೇರಳೆ ಹಣ್ಣಿನ ಪಂಚ್ ಪಾನೀಯ ರೆಸಿಪಿ ಮಾಡುವುದು ಹೇಗೆ?


    ಪೇರಳೆ ಪಂಚ್ ಮಾಡಲು, ಮೊದಲು ಪೇರಳೆ ಹಣ್ಣನ್ನು ಕತ್ತರಿಸಿ ಮಧ್ಯದ ಬೀಜಗಳನ್ನು ತೆಗೆಯಿರಿ. ನಂತರ ನಿಂಬೆ ರಸ ಮತ್ತು ಶುಂಠಿ ತುರಿದು ಅದರ ರಸ ಹೊರಕ್ಕೆ ತೆಗೆಯಿರಿ. ಈಗ ಪೇರಳೆ ತುಂಡು, ನಿಂಬೆ ರಸ ಮತ್ತು ಶುಂಠಿ ಎಲ್ಲವನ್ನೂ ಒಟ್ಟಿಗೆ ಸೇರಿಸಿ ಮತ್ತು ಅವುಗಳನ್ನು ಮಿಕ್ಸರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿರಿ. ಅಗತ್ಯಕ್ಕೆ ಅನುಗುಣವಾಗಿ ನೀರನ್ನು ಸೇರಿಸಿ.


    ಕೊನೆಯಲ್ಲಿ ನಿಮ್ಮ ಅಗತ್ಯ ಮತ್ತು ರುಚಿಗೆ ಅನುಗುಣವಾಗಿ ಬೆಲ್ಲದ ಪುಡಿ ಸೇರಿಸಿ. ಮತ್ತೊಮ್ಮೆ ಮಿಕ್ಸರ್ ನಲ್ಲಿ ರುಬ್ಬಿರಿ ನಂತರ ಜ್ಯೂಸ್ ಹೊರಕ್ಕೆ ತೆಗೆದು ಗ್ಲಾಸ್ ಗೆ ಹಾಕಿ ಪುದೀನ ಎಲೆಗಳಿಂದ ಅಲಂಕರಿಸಿ. ಈಗ ನಿಮ್ಮ ನೆಚ್ಚಿನ ಪೇರಳೆ ಹಣ್ಣಿನ ಪಂಚ್ ಪಾನೀಯ ಸಿದ್ಧವಾಗಿದೆ. ಖುಷಿಯಿಂದ ಸೇವಿಸಿ.


    ಪೇರಳೆ ಹಣ್ಣಿನ ಪಂಚ್ ಪಾನೀಯದಲ್ಲಿ ಎಷ್ಟು ಪೌಷ್ಟಿಕಾಂಶವಿದೆ?


    ಕ್ಯಾಲೋರಿ 162, ಕಾರ್ಬೋಹೈಡ್ರೇಟ್ 44 ಮಿಗ್ರಾಂ, ಸೋಡಿಯಂ 4.5 ಮಿಗ್ರಾಂ, ಸಕ್ಕರೆ 5 ಗ್ರಾಂ, ಕೊಬ್ಬು 7 ಗ್ರಾಂ, ಫೈಬರ್ 8 ಗ್ರಾಂ ಇದೆ.


    ಪೇರಳೆ ಪಂಚ್ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?  


    ಪೇರಳೆ ಹಣ್ಣಿನಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಈ ಪಾನೀಯವು ಉತ್ತಮ ಪ್ರಮಾಣದ ವಿಟಮಿನ್ ಸಿ ಅನ್ನು ಹೊಂದಿದೆ. ಹಾಗಾಗಿ ಇದು ನಿಮ್ಮ ರೋಗ ನಿರೋಧಕ ಶಕ್ತಿ, ತೂಕ ನಷ್ಟ, ಹೃದಯದ ಆರೋಗ್ಯ ಮತ್ತು ಮೂತ್ರಪಿಂಡ ಆರೋಗ್ಯದ ಲಾಭ ತಂದು ಕೊಡುತ್ತದೆ.


    ಇದನ್ನೂ ಓದಿ: ಟೇಸ್ಟಿ ಎಂದು ಅತಿಯಾಗಿ ತಿನ್ನುವ ಚೀಸ್ ಯಾವೆಲ್ಲಾ ಅಡ್ಡ ಪರಿಣಾಮ ಉಂಟು ಮಾಡುತ್ತದೆ?


    ಜೊತೆಗೆ ಪೇರಳೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಮಧುಮೇಹ ಹೊಂದಿದ್ದರೆ ಅದನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಬೆಲ್ಲ, ಪುದೀನಾ ಮತ್ತು ಪೇರಳೆಯಿಂದ ಮಾಡಿದ ಈ ಜ್ಯೂಸ್ ಉತ್ಕರ್ಷಣ ನಿರೋಧಕಗಳ ಶಕ್ತಿ ಕೇಂದ್ರವಾಗಿದೆ.

    Published by:renukadariyannavar
    First published: