• Home
  • »
  • News
  • »
  • lifestyle
  • »
  • Winter Health: ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣಗಳೇನು? ಇದರ ಲಕ್ಷಣಗಳೇನು?

Winter Health: ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣಗಳೇನು? ಇದರ ಲಕ್ಷಣಗಳೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ಕೆಮ್ಮು ಮತ್ತು ಶೀತ ಎಷ್ಟು ಕಾಡುತ್ತದೆಯೋ ಅದೇ ರೀತಿ ದೇಹದೊಳಗೆ ರಕ್ತವು ಸಹ ದಪ್ಪವಾಗುವುದು ಹೆಪ್ಪುಗಟ್ಟುವ ಅಪಾಯ ಹೆಚ್ಚು. ದೇಹದ ರಕ್ತವು ದಪ್ಪವಾಗುವ ಈ ಸಮಸ್ಯೆಯನ್ನು ಹೈಪರ್‌ಕೋಗ್ಯುಲಬಿಲಿಟಿ ಎಂದು ಕರೆಯುತ್ತಾರೆ. ಹಾಗಾದ್ರೆ ಈ ಸಮಸ್ಯೆಗೆ ಕಾರಣಗಳೇನು? ಇದರ ಲಕ್ಷಣಗಳೇನು?

ಮುಂದೆ ಓದಿ ...
  • Share this:

    ಚಳಿಗಾಲದಲ್ಲಿ (Winter) ಹಲವು ಕಾಯಿಲೆಗಳು (Disease) ಕಾಡುತ್ತವೆ. ದೇಹವು (Body) ಸಾಕಷ್ಟು ನೋವು (Pain) ಹಾಗೂ ಕಾಯಿಲೆಗೆ ತುತ್ತಾಗುತ್ತದೆ. ಅದರಲ್ಲಿ ಮುಖ್ಯವಾಗಿ ಶೀತ, ಕೆಮ್ಮು, ನೆಗಡಿ, ಜ್ವರ, ಒಣ ಚರ್ಮ ಸಮಸ್ಯೆ, ಚರ್ಮ ಬಿರಿಯುವುದು, ಅಸ್ತಮಾ, ಮೊಣಕಾಲು ಹಾಗೂ ಸಂಧಿವಾತ ಸಮಸ್ಯೆ ಕಾಡುತ್ತದೆ. ಅಷ್ಟೇ ಅಲ್ಲದೇ ಹೊಟ್ಟೆ ಸಂಬಂಧಿ ಸಮಸ್ಯೆಗಳು ಸಹ ಹೆಚ್ಚು ಕಾಡುತ್ತವೆ. ಇವಿಷ್ಟೇ ಅಲ್ಲದೇ ರಕ್ತ ದಪ್ಪವಾಗುವ ಸಮಸ್ಯೆ (Blood Thicken Problem) ಸಹ ಹೆಚ್ಚು. ಚಳಿಗಾಲದಲ್ಲಿ ಚಳಿಯಿಂದಾಗಿ ದೇಹವನ್ನು ಬೆಚ್ಚಗಿರಿಸುವುದು ತುಂಬಾ ಮುಖ್ಯ. ಹಾಗಾಗಿ ದೇಹವನ್ನು ಬೆಚ್ಚಗಿರಿಸುವ ಪದಾರ್ಥಗಳ ಸೇವನೆ ಮಾಡುವುದು ತುಂಬಾ ಮುಖ್ಯ.


    ಚಳಿಗಾಲದಲ್ಲಿ ರಕ್ತ ದಪ್ಪವಾಗುವ ಸಮಸ್ಯೆ


    ಚಳಿಗಾಲದಲ್ಲಿ ಕೆಮ್ಮು ಮತ್ತು ಶೀತ ಎಷ್ಟು ಕಾಡುತ್ತದೆಯೋ ಅದೇ ರೀತಿ ದೇಹದೊಳಗೆ ರಕ್ತವು ಸಹ ದಪ್ಪವಾಗುವುದು, ಹೆಪ್ಪುಗಟ್ಟುವ ಅಪಾಯ ಹೆಚ್ಚು. ದೇಹದ ರಕ್ತವು ದಪ್ಪವಾಗುವ ಈ ಸಮಸ್ಯೆಯನ್ನು ಹೈಪರ್‌ಕೋಗ್ಯುಲಬಿಲಿಟಿ ಎಂದು ಕರೆಯುತ್ತಾರೆ.


    ಈ ಸಮಸ್ಯೆ ಉಂಟಾದಾಗ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಶುರು ಆಗುತ್ತದೆ. ಜೊತೆಗೆ ರಕ್ತದ ಕೊರತೆಯು ಅಂಗಾಂಶ ಹಾನಿ ಉಂಟು ಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಆರೋಗ್ಯ ಕಾಳಜಿಯತ್ತ ಹೆಚ್ಚು ಗಮನಹರಿಸಬೇಕಾಗುತ್ತದೆ.




    ರಕ್ತ ದಪ್ಪವಾಗಲು ಯಾವೆಲ್ಲಾ ಅಂಶಗಳು ಕಾರಣವಾಗುತ್ತವೆ?


    ರಕ್ತ ದಪ್ಪವಾಗಲು ಹಲವು ಕಾರಣಗಳಿವೆ. ಹೆಲ್ತ್‌ ಲೈನ್ ಪ್ರಕಾರ, ಕ್ಯಾನ್ಸರ್, ಪ್ರೋಟೀನ್, ವಿಟಮಿನ ಸಿ ಸೇರಿದಂತೆ ಕೆಲವು ಪೋಷಕಾಂಶಗಳ ಕೊರತೆಯು ಮತ್ತು ಧೂಮಪಾನವು ರಕ್ತ ದಪ್ಪವಾಗಲು ಕಾರಣ ಆಗುತ್ತದೆ ಅಂತಾರೆ ತಜ್ಞರು.


    ಅದೇ ವೇಳೆ ಚಳಿಗಾಲದಲ್ಲಿ ತಂಪು ಗಾಳಿ,ಶೀತ ವಾತಾವರಣದಲ್ಲಿ ದೇಹವನ್ನು ಬೆಚ್ಚಗಿರಿಸುವ ಮೂಲಕ ರಕ್ತದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲದೇ ಹೋದ್ರೆ ಈ ಸಮಸ್ಯೆ ಗಂಭೀರ ಆಗುವ ಸಾಧ್ಯತೆ ಹೆಚ್ಚು.


    ಚಳಿಗಾಲದಲ್ಲಿ ರಕ್ತ ಯಾಕೆ ದಪ್ಪ ಆಗುತ್ತದೆ?


    ಚಳಿಗಾಲದಲ್ಲಿ ರಕ್ತ ದಪ್ಪ ಆಗಲು ಹಲವು ಕಾರಣಗಳಿವೆ. ಅದರಲ್ಲಿ ಕಡಿಮೆ ತಾಪಮಾನ ಮತ್ತು ಶೀತ ವಾತಾವರಣದಿಂದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ.


    ಇದು ಅಧಿಕ ರಕ್ತದೊತ್ತಡ ಸಮಸ್ಯೆಗೆ ಕಾರಣ ಆಗುತ್ತದೆ. ಜೊತೆಗೆ ತೀವ್ರ ಶೀತ ವಾತಾವರಣದಿಂದ ರಕ್ತ ದಪ್ಪ ಆಗುತ್ತದೆ. ಮತ್ತು ರಕ್ತ ಹೆಪ್ಪುಗಟ್ಟುವಿಕೆ ಅಪಾಯ ಹೆಚ್ಚಿಸುತ್ತದೆ.


    ರಕ್ತ ದಪ್ಪವಾಗುವುದು ಮತ್ತು ಹೆಪ್ಪುಗಟ್ಟುವಿಕೆಯ ಲಕ್ಷಣಗಳು ಯಾವವು?


    ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಲಕ್ಷಣಗಳು ಬೇಗ ಕಂಡು ಬರುವುದಿಲ್ಲ. ರಕ್ತ ಹೆಪ್ಪುಗಟ್ಟಿದ ನಂತರ ಲಕ್ಷಣಗಳು ಗೋಚರಿಸುತ್ತವೆ. ರಕ್ತ ಹೆಪ್ಪುಗಟ್ಟುವಿಕೆ ಪ್ರಾರಂಭವಾದ ನಂತರ ಈ ಕೆಳಗಿನ ಲಕ್ಷಣಗಳು ಕಾಣಿಸುತ್ತವೆ.


    ಸಾಂದರ್ಭಿಕ ಚಿತ್ರ


    ದೃಷ್ಟಿ ಮಂದವಾಗುವುದು, ತಲೆ ಸುತ್ತು ಬರುವುದು, ಚರ್ಮದ ಮೇಲೆ ಮೂಗೇಟುಗಳು, ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವ ಆಗುವುದು, ಗೌಟ್ ಸಮಸ್ಯೆ, ತಲೆ ನೋವು ಬರುವುದು, ತೀವ್ರ ರಕ್ತದೊತ್ತಡ ಸಮಸ್ಯೆ, ಚರ್ಮದಲ್ಲಿ ತುರಿಕೆ ಬರುವುದು, ಹೆಚ್ಚು ಆಯಾಸವಾಗುವುದು, ಉಸಿರಾಟದ ತೊಂದರೆ ಆಗುವುದು ಲಕ್ಷಣಗಳು ಕಾಣಿಸುತ್ತವೆ.


    ಯಾವ ವಿಟಮಿನ್ ರಕ್ತ ದಪ್ಪ ಆಗಿಸುತ್ತದೆ?


    ರಕ್ತದ ಸಾಮಾನ್ಯ ಹೆಪ್ಪುಗಟ್ಟುವಿಕೆಗೆ ವಿಟಮಿನ್ ಕೆ ಮುಖ್ಯ ಕಾರಣವಾಗಿದೆ. ಅಧಿಕ ರಕ್ತದೊತ್ತಡ ಅಥವಾ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಇದ್ದರೆ, ವಿಟಮಿನ್-ಕೆ ಆಹಾರಗಳ ಅತಿಯಾದ ಸೇವನೆ ತಪ್ಪಿಸಿ.


    ಯಾವ ಆಹಾರಗಳಲ್ಲಿ ವಿಟಮಿನ್ ಕೆ ಇರುತ್ತದೆ ಎಂದು ನೋಡೋಣ. ವಿಟಮಿನ್ ಕೆ ಸಮೃದ್ಧ ಪದಾರ್ಥಗಳೆಂದರೆ ಕೇಲ್, ಸೊಪ್ಪು, ಬ್ರೊಕೊಲಿ, ಸೋಯಾಬೀನ್, ಕುಂಬಳಕಾಯಿ ಪದಾರ್ಥಗಳಲ್ಲಿದೆ.


    ಇದನ್ನೂ ಓದಿ: ಚಳಿಗಾಲದಲ್ಲಿ ಈ ಪಾನೀಯಗಳನ್ನು ಕುಡಿದ್ರೆ ಬೊಜ್ಜು ಕರಗುತ್ತೆ 


    ಯಾವ ಆಹಾರಗಳು ರಕ್ತ ತೆಳುವಾಗಲು ಸಹಾಯ ಮಾಡುತ್ತವೆ?


    ರಕ್ತ ದಪ್ಪವಾಗುವ ಸಮಸ್ಯೆ ತಡೆಯಲು ಆಹಾರದಲ್ಲಿ ಅರಿಶಿನ, ಶುಂಠಿ, ಬೆಳ್ಳುಳ್ಳಿ, ಅಲೋವೆರಾ ಮತ್ತು ವಿಟಮಿನ್ ಇ ಹೊಂದಿರುವ ಆಹಾರ ಸೇವಿಸಿ. ಇವು ರಕ್ತ ತೆಳುಗೊಳಿಸುತ್ತವೆ.

    Published by:renukadariyannavar
    First published: