ಜೀವನದಲ್ಲಿ (Life) ವಿಶೇಷ ದಿನಗಳು (Special Days) ಬರುತ್ತಿದ್ದಾಗಲೇ ಹೊಸ ಡ್ರೆಸ್ ಖರೀದಿ ಮಾಡುತ್ತೇವೆ. ಕೆಲವೊಮ್ಮೆ ಹೊಸ ಡ್ರೆಸ್ ಸೈಜ್ ಫಿಟ್ (Size Fit) ಆಗದೇ ಮೂಲೆಗುಂಪಾಗುತ್ತದೆ. ಆಗೆಲ್ಲಾ ಸಖತ್ ಬೇಜಾರಾಗುತ್ತೆ. ಅಯ್ಯೋ, ಇಷ್ಟ ಪಟ್ಟು ಕೊಟ್ಟು ತಂದ ದುಬಾರಿ ಡ್ರೆಸ್ ಹಾಕಲೇ ಇಲ್ಲ ಅಂತಾ ಬೇಸರ ಪಡ್ತೀವಿ. ಇನ್ನು ಕೆಲವರು ಸ್ಪೆಶಲ್ ಹಬ್ಬ, ಮದುವೆ, ಸಮಾರಂಭ ಬರುವ ಮೊದಲೇ ಸಣ್ಣ ಆಗ್ಬೇಕು ಅಂತಾ ಪ್ಲಾನ್ ಹಾಕೊಂಡು ತೂಕ ಇಳಿಸೋಕೆ (Weight Loss) ಸರ್ಕಸ್ ಮಾಡ್ತೀವಿ. ತೂಕ ಜಾಸ್ತಿ ಆಗಿದ್ರೆ ಚೆನ್ನಾಗಿ ಕಾಣಲ್ಲ ಅಂತಾ ವಾರ ಮತ್ತು ತಿಂಗಳ ಮೊದಲೇ ವರ್ಕೌಟ್, ಡಯಟ್, ವಾಕಿಂಗ್ ಮಾಡ್ತೀವಿ.
ತೂಕ ಇಳಿಸೋಕೆ ಏನೆಲ್ಲಾ ಮಾಡ್ತಾರೆ!
ತೂಕ ಇಳಿಸೋಕೆ ಜನರು ಜಿಮ್ ಗೆ ಹೋಗ್ತಾರೆ. ಮನೆಯಲ್ಲಿ ವ್ಯಾಯಾಮ, ಯೋಗ ಮಾಡ್ತಾರೆ. ನಿತ್ಯವೂ ಆಹಾರ ಕ್ರಮ ಫಾಲೋ ಮಾಡ್ತಾರೆ. ಹೀಗೆ ದೇಹದ ತೂಕವನ್ನು ಕಾಪಾಡಿಕೊಳ್ತಾರೆ. ಆದರೆ ವ್ಯಾಯಾಮ ಮಾಡುವಾಗ ತೆಳ್ಳಗಾಗುವುದರ ಬಗ್ಗೆ ಮಾತ್ರ ಯೋಚಿಸುತ್ತೇವೆ.
ದೇಹವು ದಣಿದಿದೆಯೇ ಅಂತಾ ನೋಡಲ್ಲ. ಹಾಗೆಯೇ ವ್ಯಾಯಾಮ ಮಾಡಲು ಇದು ಸರಿಯಾದ ಸಮಯವೇ? ಹೀಗೆ ಹಲವು ವಿಷಯಗಳನ್ನು ನಿರ್ಲಕ್ಷ್ಯ ಮಾಡುತ್ತೇವೆ.
ಈಗ ಕ್ರಿಸ್ ಮಸ್ ಮತ್ತು ಹೊಸ ವರ್ಷಕ್ಕೆ ಈಗಲೇ ಜನರು ತಯಾರಿ ಶುರು ಮಾಡ್ತಿದ್ದಾರೆ. ಜೊತೆಗೆ ತೂಕ ಇಳಿಸಿ, ಪಾರ್ಟಿಯಲ್ಲಿ ಚೆನ್ನಾಗಿ ಕಾಣ್ಬೇಕು ಅಂತಾ ತೂಕ ಇಳಿಸುತ್ತಿದ್ದಾರೆ. ತ್ವರಿತವಾಗಿ ಫಿಟ್ ಆಗಲು ಪ್ರಯತ್ನಿಸಿ,
ಆತುರ ಪಡಬೇಡಿ ಅಂತಾರೆ ಸೆಲೆಬ್ರಿಟಿ ಪೌಷ್ಟಿಕ ತಜ್ಞೆ ರುಜುತಾ ದಿವೇಕರ್. ಹಾಗಾದ್ರೆ ಅವರು ತೂಕ ಇಳಿಕೆಗೆ ಚಳಿಗಾಲದಲ್ಲಿ ಯಾವೆಲ್ಲಾ ಕ್ರಮಗಳನ್ನು ಫಾಲೋ ಮಾಡ್ಬೇಕು ಅಂತಾ ಹೇಳಿದ್ದಾರೆ. ಇಲ್ಲಿ ನೋಡೋಣ.
ಚಳಿಗಾಲದಲ್ಲಿ ಕೆಲವು ಫಿಟ್ನೆಸ್ ಸಲಹೆ
ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬೇಡಿ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವುದೇ ರೀತಿಯ ವ್ಯಾಯಾಮ ಮಾಡಬೇಡಿ. ಹೀಗೆ ಮಾಡಿದರೆ ಶಕ್ತಿಯಲ್ಲಿ ಭಾರೀ ಇಳಿಕೆ ಆಗುತ್ತೆ ಅಂತಾರೆ ತಜ್ಞರು. ನೀವು ಕ್ಯಾಲೊರಿ ಸರಿಯಾಗಿ ಬರ್ನ್ ಮಾಡಲು ಸಾಧ್ಯವಾಗಲ್ಲ. ಹಾಗಾಗಿ ವ್ಯಾಯಾಮ ಮಾಡುವ ಅಥವಾ ಜಿಮ್ಗೆ ಹೋಗುವ 15 ರಿಂದ 20 ನಿಮಿಷ ಮೊದಲು ಕಡಲೆಕಾಯಿ, ಬಾಳೆಹಣ್ಣು, ಸ್ಮೂಥಿ ಮುಂತಾದ ಪ್ರೋಟೀನ್ ತುಂಬಿರುವ ಆಹಾರ ಸೇವಿಸಿ.
ವಾರ್ಮ್ ಅಪ್ ಮಾಡುವುದು ಮುಖ್ಯ
ವ್ಯಾಯಾಮ ಮಾಡುವ ಮುನ್ನ ಸ್ವಲ್ಪ ವಾರ್ಮ್ ಅಪ್ ಮಾಡುವುದು ಬಹಳ ಮುಖ್ಯ ಎನ್ನುತ್ತಾರೆ ರುಜುತಾ. ದೇಹವು ಈಗ ವ್ಯಾಯಾಮ ಮಾಡಬೇಕು ಎಂದು ತಿಳಿಯಬಹುದು. ಈ ರೀತಿಯಾಗಿ ದೇಹವು ಸ್ವಲ್ಪ ತರಬೇತಿ ಪಡೆಯುತ್ತದೆ. ಮತ್ತು ಹೊಸ ವ್ಯಾಯಾಮ ಮಾಡಲು ಸಿದ್ಧವಾಗುತ್ತದೆ. ವ್ಯಾಯಾಮದ ಮೊದಲು 12 ನಿಮಿಷ ವಾರ್ಮ್ ಅಪ್ ಮಾಡಿ.
ಪ್ರತಿದಿನ ಒಂದೇ ವ್ಯಾಯಾಮ ಮಾಡಬೇಡಿ
ತೂಕ ಇಳಿಸಲು ಯೋಜಿಸಿದ್ದರೆ ದಿನವೂ ಒಂದೇ ರೀತಿಯ ವ್ಯಾಯಾಮ ಮಾಡ್ಬೇಡಿ. ಯೋಗ ಇತ್ಯಾದಿ ಲಘು ವ್ಯಾಯಾಮ ಮಾಡಿ. ಯೋಗ ಮಾಡಿದ್ದರೆ ಮಾರನೇ ದಿನ ವಾಕಿಂಗ್ ಮಾಡಿ. ಇದರಿಂದ ನಿಮ್ಮ ದೇಹ ಮತ್ತು ಸ್ನಾಯುಗಳು ವಿಶ್ರಾಂತಿ ಪಡೆಯಲು ಸ್ವಲ್ಪ ಸಮಯ ಪಡೆಯುತ್ತವೆ.
ಫಿಟ್ ಆಗಿರಲು ಅಥವಾ ತೂಕ ಇಳಿಸಲು ಪ್ರತಿದಿನ ವ್ಯಾಯಾಮ ಮಾಡುವ ಅಗತ್ಯವಿಲ್ಲ. ಏಕೆಂದರೆ ಸ್ನಾಯುಗಳು ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕು. ಇದು ಕ್ಯಾಲೊರಿ ಸುಡುತ್ತದೆ. ಪರ್ಯಾಯ ದಿನಗಳಲ್ಲಿ ವ್ಯಾಯಾಮ ಮಾಡಿ. ದೈಹಿಕವಾಗಿ ಸಕ್ರಿಯವಾಗಿರಿ. ಕನಿಷ್ಠ 1 ದಿನ ನಿಮ್ಮ ದೇಹಕ್ಕೆ ವಿರಾಮ ನೀಡಿ.
ಇದನ್ನೂ ಓದಿ: ಕೆಂಪು ಬಣ್ಣದ ಸುಂದರ ತುಟಿ ಬೇಕು ಅಂದ್ರೆ ಮನೆಯಲ್ಲಿಯೇ ಸುಲಭವಾಗಿ ಈ ಸ್ಕ್ರಬ್ ರೆಡಿ ಮಾಡಿ
ಕಾಳಜಿ ವಹಿಸಿ
ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುವುದು ಮುಖ್ಯ. ಆಯಾಸ ಅನುಭವಿಸುತ್ತಿದ್ದರೆ ಅಥವಾ ಹೆಚ್ಚಿನ ತೀವ್ರತೆಯ ವ್ಯಾಯಾಮ ಮಾಡಬೇಕೆನಿಸದೇ ಹೋದ್ರೆ ವಿಶ್ರಾಂತಿ ತೆಗೆದುಕೊಳ್ಳಿ. ಚಳಿಗಾಲದಲ್ಲಿ ಬೆಳಗ್ಗೆ ಏಳಲು ಆಗದಿದ್ದರೆ, ಸಂಜೆಯ ವ್ಯಾಯಾಮ ಮಾಡಿ. ಫಿಟ್ನೆಸ್ ಸಲಹೆ ಪಾಲಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ