• Home
 • »
 • News
 • »
 • lifestyle
 • »
 • Cholesterol Problem: ಚಳಿಗಾಲದಲ್ಲಿ ಇವುಗಳನ್ನು ಸೇವಿಸಿದ್ರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತೆ ಎಚ್ಚರ!

Cholesterol Problem: ಚಳಿಗಾಲದಲ್ಲಿ ಇವುಗಳನ್ನು ಸೇವಿಸಿದ್ರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತೆ ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳವು ಅನೇಕ ಆರೋಗ್ಯ ಸಮಸ್ಯೆ ತಂದೊಡ್ಡುತ್ತದೆ. ಹೃದ್ರೋಗ, ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿ ಹಲವು ಮಾರಣಾಂತಿಕ ಸಮಸ್ಯೆ ಹೆಚ್ಚುವ ಅಪಾಯವಿದೆ ಯಾವ ರೀತಿಯ ಆಹಾರ ಸೇವಿಸುತ್ತೇವೆ ಎಂಬುದು ಸಹ ಕೊಲೆಸ್ಟ್ರಾಲ್ ಉತ್ಪತ್ತಿಗೆ ಕಾರಣವಾಗುತ್ತದೆ.

 • Share this:

  ಗಂಭೀರವಾದ ಆರೋಗ್ಯ ಸಮಸ್ಯೆಗಳಲ್ಲಿ (Serious Health Issues) ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (Body Bad Cholesterol) ಹೆಚ್ಚಳ ಸಹ ಒಂದಾಗಿದೆ. ಕೊಲೆಸ್ಟ್ರಾಲ್ ರಕ್ತದಲ್ಲಿ (Blood) ಕಂಡು ಬರುವ ವಸ್ತು ಆಗಿದೆ. ಕೊಲೆಸ್ಟ್ರಾಲ್ ನಲ್ಲಿ ಎರಡು ವಿಧಗಳಿವೆ. ಒಂದು ಒಳ್ಳೆಯ ಕೊಲೆಸ್ಟ್ರಾಲ್, ಮತ್ತೊಂದು ಕೆಟ್ಟ ಕೊಲೆಸ್ಟ್ರಾಲ್. ಈ ಎರಡು ವಿಧದ ಕೊಲೆಸ್ಟ್ರಾಲ್ ದೇಹದಲ್ಲಿರುತ್ತವೆ. ದೇಹದ ಉತ್ತಮ ಕಾರ್ಯ ಚಟುವಟಿಕೆಗೆ ಉತ್ತಮ ಕೊಲೆಸ್ಟ್ರಾಲ್ ಅಗತ್ಯತೆ ಇದೆ. ಆದ್ರೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ದೇಹದ ಶತ್ರುವಿದ್ದಂತೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳವು ಅನೇಕ ಆರೋಗ್ಯ ಸಮಸ್ಯೆ ತಂದೊಡ್ಡುತ್ತದೆ. ಹೃದ್ರೋಗ, ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿ ಹಲವು ಮಾರಣಾಂತಿಕ ಸಮಸ್ಯೆ ಹೆಚ್ಚುವ ಅಪಾಯ ಇದೆ


  ಕೊಲೆಸ್ಟ್ರಾಲ್ ಮತ್ತು ಆರೋಗ್ಯ


  ಯಕೃತ್ತಿನಿಂದ ಕೊಲೆಸ್ಟ್ರಾಲ್ ಉತ್ಪತ್ತಿ ಆಗುತ್ತದೆ. ಜೊತೆಗೆ ಯಾವ ರೀತಿಯ ಆಹಾರ ಸೇವಿಸುತ್ತೇವೆ ಎಂಬುದು ಸಹ ಕೊಲೆಸ್ಟ್ರಾಲ್ ಉತ್ಪತ್ತಿಗೆ ಕಾರಣವಾಗುತ್ತದೆ. ಕೊಬ್ಬಿನ ಪದಾರ್ಥಗಳು, ಎಣ್ಣೆ, ಮಸಾಲೆ ಮತ್ತು ಕ್ಯಾಲೋರಿ ಹೆಚ್ಚಿನ ಆಹಾರಗಳ ಸೇವನೆಯಿಂದ ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ನಿರ್ಮಾಣ ಆಗುತ್ತದೆ.


  ತಿನ್ನುವುದು ಮಾತ್ರವಲ್ಲದೇ ಯಾವುದೇ ರೀತಿಯ ದೈಹಿಕ ಚಟುವಟಿಕೆ ಇಲ್ಲದಿರುವುದು ಸಹ ಕೆಟ್ಟ ಕೊಲೆಸ್ಟ್ರಾಲ್ ರಚನೆಗೆ ಮುಖ್ಯ ಕಾರಣವಾಗಿದೆ. ಅದರಲ್ಲೂ ಚಳಿಗಾಲದಲ್ಲಿ ಕೊಲೆಸ್ಟ್ರಾಲ್ ರಚನೆ ಹೆಚ್ಚುವ ಅಪಾಯ ಇದೆ. ತಂಪು ವಾತಾವರಣದಲ್ಲಿ ಜನರು ಹೆಚ್ಚು ಕರಿದ ಹಾಗೂ ಜಂಕ್ ಫುಡ್ ಸೇವನೆಗೆ ಮುಖ್ಯ ಆದ್ಯತೆ ನೀಡ್ತಾರೆ.
  ಹಾಗಾಗಿ ಶೀತದ ದಿನಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುವ ಅಪಾಯವಿದೆ. ಜೊತೆಗೆ ಶೀತದ ದಿನಗಳಲ್ಲಿ ಹೃದಯಾಘಾತ ಅಥವಾ ಹೃದ್ರೋಗದ ಅಪಾಯ ಹೆಚ್ಚುತ್ತದೆ ಎಂಬುದು ತಜ್ಞರ ಮಾತು. ರಕ್ತದಲ್ಲಿ ಕೊಳಕು ವಸ್ತುವಿನ ಶೇಖರಣೆ ಅಪಾಯ ಹೆಚ್ಚು. ಚಳಿಗಾಲದಲ್ಲಿ ಕೆಲವು ಆಹಾರ ಸೇವಿಸದಂತೆ ಮತ್ತು ತಪ್ಪದೆ ನಿಯಮಿತವಾಗಿ ವ್ಯಾಯಾಮ ಮಾಡುವಂತೆ ತಜ್ಞರು ಸೂಚಿಸುತ್ತಾರೆ.


  ಸಿಹಿ ಪದಾರ್ಥ ಸೇವನೆ


  ಚಳಿಗಾಲದಲ್ಲಿ ಹೆಚ್ಚಿನ ಜನರು ಸಿಹಿ ತಿನ್ನುತ್ತಾರೆ. ಜನರು ಚಹಾ ಅಥವಾ ಕಾಫಿಯನ್ನು ಅನೇಕ ಬಾರಿ ಕುಡಿಯುತ್ತಾರೆ. ಜೊತೆಗೆ ಚಳಿಗಾಲದ ಕಡು ಬಯಕೆ ಹೋಗಲಾಡಿಸಲು ಐಸ್ ಕ್ರೀಂ, ಕೇಕ್, ಪೇಸ್ಟ್ರಿ, ಕುಕೀಸ್, ಸಿಹಿ ತಿಂಡಿಗಳು ಮತ್ತು ಕ್ಯಾರೆಟ್ ಪುಡಿಂಗ್ ತಿನ್ನುತ್ತಾರೆ.


  ಸಕ್ಕರೆ ಹೆಚ್ಚಿರುವ ಈ ಸಿಹಿ ಪದಾರ್ಥಗಳ ಸೇವನೆ ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬಿರುತ್ತದೆ. ಸಕ್ಕರೆಯ ಅತಿಯಾದ ಸೇವನೆಯಿಂದ ದೇಹದಲ್ಲಿ ಟ್ರೈಗ್ಲಿಸರೈಡ್‌ ಮತ್ತು ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟ ತ್ವರಿತವಾಗಿ ಹೆಚ್ಚುತ್ತದೆ.


  ಸಾಂದರ್ಭಿಕ ಚಿತ್ರ


  ಕೆಂಪು ಮಾಂಸ


  ಚಳಿಗಾಲದಲ್ಲಿ ದೇಹದಲ್ಲಿ ಶಾಖ ಹೆಚ್ಚಿಸಲು ಜನರು ರೆಡ್ ಮೀಟ್ ಸೇವಿಸುತ್ತಾರೆ. ಕೆಂಪು ಮಾಂಸದಲ್ಲಿ ಕೊಲೆಸ್ಟ್ರಾಲ್ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೆಚ್ಚು. ಅಧಿಕ ಕೊಲೆಸ್ಟ್ರಾಲ್‌ ಹೊಂದಿರುವ ವ್ಯಕ್ತಿಗೆ ಇದು ಅಪಾಯಕಾರಿ. ಒಮೆಗಾ -3 ಕೊಬ್ಬಿನಾಮ್ಲ ಸಮೃದ್ಧ ಮೀನು ಅಥವಾ ಚಿಕನ್ ಅನ್ನು ಸೇವಿಸಿ.


  ಕರಿದ ಆಹಾರ


  ಚಳಿಗಾಲದಲ್ಲಿ, ಸಮೋಸಾ, ಪಕೋಡಾ, ಫ್ರೈ, ಚಿಪ್ಸ್, ಚಿಕನ್ ವಿಂಗ್ಸ್ ಮತ್ತು ಭಜಿ ಸೇರಿದಂತೆ ಕರಿದ ಪದಾರ್ಥಗಳ ಸೇವನೆ ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.


  ತ್ವರಿತ ಆಹಾರ


  ತ್ವರಿತ ಆಹಾರ ಸೇವನೆಯು ಸ್ಥೂಲಕಾಯ, ಹೃದ್ರೋಗ ಮತ್ತು ಮಧುಮೇಹ ಕಾಯಿಲೆ ಹೆಚ್ಚಿಸುತ್ತದೆ. ಬರ್ಗರ್, ಪಿಜ್ಜಾ ವಸ್ತುಗಳು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ದೇಹದ ರಕ್ತದ ಸಕ್ಕರೆ ಮಟ್ಟ ಹಾಳು ಮಾಡುತ್ತದೆ.


  ಇದನ್ನೂ ಓದಿ: ಪಿಸ್ತಾ ಗುಣಮಟ್ಟದ್ದಾ? ಕಳಪೆಯದ್ದಾ? ಕಂಡುಹಿಡಿಯೋದು ಹೇಗೆ?


  ಚೀಸ್


  ಚೀಸ್ ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ ಉತ್ತಮ ಮೂಲ. ಇದು ಸ್ಯಾಚುರೇಟೆಡ್ ಕೊಬ್ಬು ಹೊಂದಿದೆ. ಇದನ್ನು ಚಳಿಗಾಲದಲ್ಲಿ ವ್ಯಾಪಕವಾಗಿ ಬಳಸ್ತಾರೆ. ಉಪ್ಪನ್ನು ಹೊಂದಿದೆ. ರಕ್ತದೊತ್ತಡ ಹೆಚ್ಚಿಸುತ್ತದೆ. ಚೀಸ್ ಸೇವನೆ ಮಿತಿಯಲ್ಲಿರಿಸಿ.

  Published by:renukadariyannavar
  First published: