ಚಳಿಗಾಲದಲ್ಲಿ (Winter) ಶಿಶುಗಳ ಆರೋಗ್ಯ (Infants Health) ಕಾಪಾಡುವುದು ತುಂಬಾ ಕಷ್ಟದ ವಿಚಾರ. ಶೀತಗಾಳಿಯಲ್ಲಿ (Cold Wave) ಶಿಶುಗಳು ಪದೇ ಪದೇ ಅನಾರೋಗ್ಯಕ್ಕೆ (Unhealthy) ತುತ್ತಾಗುತ್ತಲೇ ಇರುತ್ತವೆ. ಹಾಗಾಗಿ ಶಿಶುಗಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ (Care) ವಹಿಸುವುದು ತುಂಬಾ ಮುಖ್ಯವಾಗುತ್ತದೆ. ಶಿಶುಗಳು ಜ್ವರ, ಶೀತದಿಂದ ಬಳಲುತ್ತವೆ. ಈಗ ಶೀತಗಾಳಿ ಜೋರಾಗಿ ಬೀಸುತ್ತಿದ್ದು ಚಳಿಗಾಲದ ಈ ಋತುವಿನಲ್ಲಿ ವೈರಲ್ ಕಾಯಿಲೆಗಳು (Viral Disease) ಬೇಗ ತಗುಲುವ ಅಪಾಯವಿದೆ. ಮಕ್ಕಳು ಬೇಗ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗುತ್ತವೆ. ದೌರ್ಬಲ್ಯ ಹೆಚ್ಚುತ್ತದೆ. ರೋಗ ನಿರೋಧಕ ಶಕ್ತಿ ಕೊರತೆ ಕಾಡುತ್ತದೆ. ಹಾಗಾಗಿ ಚಳಿಗಾಲದ ಈ ಋತು ಮಕ್ಕಳ ಆರೋಗ್ಯಕ್ಕೆ ಸಾಕಷ್ಟು ಚಿಂತಾಜನಕವಾಗಿ ಇರುತ್ತದೆ.
ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡುವುದು ಹೇಗೆ?
ಚಳಿಗಾಲದ ಈ ಋತುವಿನಲ್ಲಿ ವೈವಿಧ್ಯಮಯ ಆಹಾರ ಸೇವನೆ ಸಾಂಕ್ರಾಮಿಕ ಕಾಯಿಲೆ ಅಪಾಯದಿಂದ ಕಾಪಾಡುತ್ತದೆ. ಹಸಿರು ತರಕಾರಿ ಮತ್ತು ಬಣ್ಣ ಬಣ್ಣದ ಹಣ್ಣುಗಳು, ತರಕಾರಿ ಸೇವನೆ ರೋಗ ನಿರೋಧಕ ಶಕ್ತಿ ಬಲಪಡಿಸುತ್ತವೆ.
ಹಾಗಾಗಿ ನಿಮ್ಮ ಮಗುವಿನ ಆಹಾರದಲ್ಲಿ ವೆರೈಟಿ ತರಕಾರಿ, ಹಣ್ಣು ಸೇರಿಸಿ. ಇದು ನಿಮ್ಮ ಮಕ್ಕಳ ಆರೋಗ್ಯ ಕಾಪಾಡುತ್ತದೆ. ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು, ರೋಗ ನಿರೋಧಕ ಶಕ್ತಿ ಬಲಪಡಿಸಲು ಹಾಗೂ ರೋಗಗಳಿಂದ ದೂರವಿರಿಸಲು ಸಹಕಾರಿ.
ಚಳಿಗಾಲದಲ್ಲಿ ಶಿಶುಗಳನ್ನು ತುಂಬಾ ಚೆನ್ನಾಗಿ ಮತ್ತು ಹೆಚ್ಚಿನ ಕಾಳಜಿಯಿಂದ ನೋಡಿಕೊಳ್ಳಬೇಕಾಗುತ್ತದೆ. ಇಲ್ಲಿ ನಾವು ಕೆಲವು ಟೇಸ್ಟಿ ಮತ್ತು ಆರೋಗ್ಯಕರ ಆಹಾರಗಳನ್ನು ಮಕ್ಕಳಿಗೆ ನೀಡಿದರೆ ಅವರ ಆರೋಗ್ಯ ಚೆನ್ನಾಗಿರುತ್ತದೆ. ಮತ್ತು ಸಾಂಕ್ರಾಮಿಕ ಕಾಯಿಲೆಯಿಂದ ರಕ್ಷಣೆ ನೀಡುತ್ತದೆ ಎಂಬುದನ್ನು ನೋಡೋಣ.
ಖರ್ಜೂರ
ಖರ್ಜೂರ ಪದಾರ್ಥವು ಹೆಚ್ಚಿನ ಖನಿಜಾಂಶ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಖರ್ಜೂರ ಸಿಹಿಯಾಗಿರುತ್ತದೆ. ಹೀಗಾಗಿ ನಿಮ್ಮ ಮಗುವಿಗೆ ಇದನ್ನು ತಿನ್ನಿಸಿ. ಅದು ಮಗುವಿಗೆ ಆರೋಗ್ಯಕ್ಕೆ ಉತ್ತಮ. ಮಗುವಿಗೆ ಆರು ತಿಂಗಳಾದ ನಂತರ ಖರ್ಜೂರ ತಿನ್ನಿಸಿ.
ಮಗುವಿಗೆ ಮಧ್ಯಮ ಪ್ರಮಾಣದಲ್ಲಿ ಖರ್ಜೂರವನ್ನು ಮಿತವಾಗಿ ತಿನ್ನಿಸಿ. ಆರು ತಿಂಗಳ ಮಗುವಿಗೆ ಹಲ್ಲು ಇರುವುದಿಲ್ಲ. ಖರ್ಜೂರ ಗಂಟಲಲ್ಲಿ ಸಿಕ್ಕಿ ಹಾಕಿಕೊಳ್ಳದಂತೆ ಎಚ್ಚರ ವಹಿಸಿ. ಖರ್ಜೂರ ಮಗುವಿನ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುತ್ತದೆ. ಇದು ಮಗುವನ್ನು ಆಂತರಿಕವಾಗಿ ಬೆಚ್ಚಗಿಡುತ್ತದೆ. ಹೊಟ್ಟೆಯ ಸಮಸ್ಯೆ ನಿವಾರಿಸುತ್ತದೆ.
ಮೊಟ್ಟೆ
ಮೊಟ್ಟೆ ಪ್ರೋಟೀನ್ ಸಮೃದ್ಧ ಪದಾರ್ಥ ಎಂಬುದು ಎಲ್ಲರಿಗೂ ಗೊತ್ತಿದೆ. ಮಗು 8 ತಿಂಗಳದ್ದಾದ ನಂತರ ನೀವು ಮೊಟ್ಟೆ ತಿನ್ನಿಸಿ. ವಾರಕ್ಕೆ 2 ಅಥವಾ 3 ಬಾರಿ ಮೊಟ್ಟೆ ತಿನ್ನಿಸಿ. ಅಂಬೆಗಾಲಿಡುವ ಮಗುವಿಗೆ ಸ್ವಲ್ಪ ತರಕಾರಿ, ಉಪ್ಪು ಮತ್ತು ಮೆಣಸು ಸೇರಿಸಿ ಆಮ್ಲೆಟ್ ಮಾಡಿ ತಿನ್ನಿಸಿ. ಬೇಯಿಸಿದ ಮೊಟ್ಟೆ ತಿನ್ನಿಸಬಹುದು.
ಮೀನು ಮತ್ತು ಕೋಳಿ
ಮಗು ಒಂದು ವರ್ಷವಾದ ನಂತರ ಮೀನು, ಚಿಕನ್ ಪದಾರ್ಥ ತಿನ್ನಿಸಿ. ಮಗುವಿಗೆ ಮೀನು ಮತ್ತು ಚಿಕನ್ ನೀಡುವ ಮೊdಲು ಚೆನ್ನಾಗಿ ಬೇಯಿಸಿ. ಮೀನು ಮತ್ತು ಚಿಕನ್ ಪ್ರೋಟೀನ್ ಸಮೃದ್ಧ ಪದಾರ್ಥಗಳಾಗಿವೆ. ಮೀನು ತುಂಬಾ ಮೃದು ಮತ್ತು ತಿನ್ನಲು ಸುಲಭವಾಗಿರುತ್ತದೆ. ಹಾಗಾಗಿ ಮಗು ಖಂಡಿತವಾಗಿ ತಿನ್ನಲು ಇಷ್ಟ ಪಡುತ್ತದೆ.
ಸೂಪ್
ಚಳಿಗಾಲದಲ್ಲಿ ಮಗುವಿನ ಆರೋಗ್ಯ ಕಾಪಾಡಲು ಸೂಪ್ ಮಾಡಿ ಕುಡಿಸಿ. ಸೂಪ್ ಮಕ್ಕಳ ದೇಹವನ್ನು ಬೆಚ್ಚಗಿಡಲು ಸಹಕಾರಿ ಆಗಿದೆ. ಮಗು ಘನ ಆಹಾರ ಸೇವಿಸಲು ಪ್ರಾರಂಭಿಸಿದ ನಂತರ ಸೂಪ್ ನೀಡಿ.
ತುಪ್ಪ
ದೇಸಿ ತುಪ್ಪದಲ್ಲಿ ಖನಿಜ ಪದಾರ್ಥ ಹೇರಳವಾಗಿವೆ. ಶಿಶುಗಳಿಗೆ ಒಳ್ಳೆಯದು. ಬೇಳೆಕಾಳು, ಖಿಚಡಿ, ಓಟ್ಸ್ ಮತ್ತು ಸಿರಿಧಾನ್ಯಗಳಿಗೆ ತುಪ್ಪ ಸೇರಿಸಿ ಮಗುವಿಗೆ ನೀಡಬಹುದು.
ಇದನ್ನೂ ಓದಿ: ಈ ತರಕಾರಿಗಳನ್ನು ಫ್ರಿಡ್ಜ್ನಲ್ಲಿಟ್ಟು ನಂತರ ಸೇವಿಸಲೇಬಾರದು, ಎಚ್ಚರ!
ಜೇನು
ಮಗುವಿಗೆ ಒಂದು ವರ್ಷ ತುಂಬಿದ ನಂತರ ಜೇನುತುಪ್ಪ ತಿನ್ನಿಸಿ. ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಅರ್ಧ ಟೀ ಚಮಚ ಜೇನುತುಪ್ಪ ನೀಡಿ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಗುವಿಗೆ ರಾತ್ರಿ ಮಲಗುವ ಮೊದಲು ಕೆಮ್ಮು ಗುಣಪಡಿಲಸು 1.5 ಚಮಚ ಜೇನುತುಪ್ಪ ನೀಡಿ. ಇದು ಶೀತ ಮತ್ತು ಕೆಮ್ಮನ್ನು ನಿವಾರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ