Pregnancy Tips: ಚಳಿಗಾಲದಲ್ಲಿ ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಿ, ಜೋಪಾನ!

ಚಳಿಗಾಲದಲ್ಲೂ ಕೂಡ ಡಿಹೈಡ್ರೇಟ್ ಆಗುವ ಸಾಧ್ಯತೆಗಳಿರುತ್ತವೆ. ಅದರಲ್ಲೂ ಗರ್ಭಿಣಿಯರು ಅಗತ್ಯವಾಗಿ ನೀರಿನ ಸೇವನೆ ಹೆಚ್ಚಿಸಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಳಿಗಾಲದ ಅಂದ್ರೆ ಶೀತ, ಕೆಮ್ಮು, ಜ್ವರ, ಚರ್ಮದ ಸಮಸ್ಯೆ (Skin problems) ಸೇರಿ ಇನ್ನಿತರ ಕಾಯಿಲೆಗಳು (Illnesses) ಎಲ್ಲರನ್ನು ಬಾಧಿಸುತ್ತವೆ. ಚಳಿಗಾಲದಲ್ಲಿ ನಮ್ಮ ಆರೋಗ್ಯದ ಮೇಲೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆನೇ. ಅದರಲ್ಲೂ ಗರ್ಭಿಣಿಯರು (Pregnant women) ಚಳಿಗಾಲದಲ್ಲಿ ತುಂಬಾ ಎಚ್ಚರಿಕೆಯಿಂದಿರಬೇಕು. ಚಳಿಗಾಲದಲ್ಲಿ (Winter months)ವೈರಸ್, ಬ್ಯಾಕ್ಟೀರಿಯಾ, ಸೋಂಕು ಎಲ್ಲಾ ಹೆಚ್ಚಿರುತ್ತೆ. ಇದು ಕೇವಲ ಗರ್ಭಿಣಿಯರಲ್ಲದೆ, ಸಾಮಾನ್ಯರಿಗೂ ತಟ್ಟುವುದು. ಆದರೆ ಗರ್ಭಿಣಿಯರು ಇದರ ಬಗ್ಗೆ ತುಂಬಾ ಕಾಳಜಿ ವಹಿಸಬೇಕು..

ಎಚ್ಚರಿಕೆ ಇರಲಿ
ಗರ್ಭಾವಸ್ಥೆಯ ಹಂತ ಹೆಣ್ಣು ಮಕ್ಕಳಿಗೆ ತುಂಬಾ ಅಮೂಲ್ಯವಾದ ಘಟ್ಟ. ಹೊಟ್ಟೆಯಲ್ಲಿ ಮತ್ತೊಂದು ಜೀವವನ್ನು 9 ತಿಂಗಳ ಹೊತ್ತು ಸಲಹುತ್ತಾಳೆ. ಈ ಹಂತದಲ್ಲಿ ಅವಳು ಮತ್ತು ಮಗುವಿನ ಕಾಳಜಿ ತುಂಬಾ ಅವಶ್ಯಕ. ಹೊತ್ತಿಗೆ ಸರಿಯಾಗಿ ಊಟ, ಒಳ್ಳೆಯ ವಾತಾವರಣ, ಒಳ್ಳೆಯ ಗಾಳಿ ಎಲ್ಲಾವು ಮಗುವಿನ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ. ಹಾಗೆ ಆಕೆಯು ತನ್ನ ಆರೋಗ್ಯದ ಮೇಲೆ ಗಮನ ಕೊಡಲೇಬೇಕು.

ಇವರು ಆರೋಗ್ಯವಾಗಿ, ಖುಷಿಯಾಗಿದ್ದರೆ ಮಗುವು ಆರೋಗ್ಯವಾಗಿರುತ್ತದೆ. ಚಳಿಗಾಲದಲ್ಲಿ ಗರ್ಭಿಣಿಯರು ಹೇಗೆಲ್ಲಾ ಕಾಳಜಿ ವಹಿಸಬೇಕು, ಸಾಮಾನ್ಯ ರೋಗ ರುಜಿನಗಳು ಬರದಂತೆ ಹೇಗೆ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಯೋಣ..

ಗರ್ಭಿಣಿಯರೇ ಚಳಿಗಾಲದಲ್ಲಿ ನಿಮ್ಮ ಆರೋಗ್ಯದ ಕಾಳಜಿ ಹೀಗಿರಲಿ

ಗರ್ಭಾವಸ್ಥೆಯನ್ನು ಬೇರೆ ರೀತಿ ಭಾವಿಸದೇ ಈ ಜರ್ನಿಯನ್ನು ಎಂಜಾಯ್ ಮಾಡಿ. ಒಳ್ಳೆಯ ಆಹಾರ, ಉತ್ತಮ ನಿದ್ರೆ, ಉತ್ತಮ ಹವ್ಯಾಸ, ಸಂಗೀತ ಕೇಳುವುದು - ಹೀಗೆ ನಿಮ್ಮ ದಿನಚರಿ ಚಟುವಟಿಕೆಯಿಂದ ಕೂಡಿರಲಿ. ಇದರ ಜೊತೆಗೆ ಚಳಿಗಾಲದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕೊಂಚ ಹೆಚ್ಚಿನ ಗಮನವಿರಲಿ. ಚಳಿಗಾಲದಲ್ಲಿ ಈ ಕೆಳಕಂಡ ಜೀವನಶೈಲಿಗಳನ್ನು ಅಳವಡಿಸಿಕೊಂಡಲ್ಲಿ ನಿಮ್ಮ ಪ್ರೆಗ್ನೆನ್ಸಿ ಪ್ರಯಾಣ ಆಹ್ಲಾದಕರವಾಗಿರುತ್ತದೆ.

ಇದನ್ನೂ ಓದಿ: Pregnancy Tips: ಗರ್ಭಿಣಿಯಾಗಿ ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ಆರೋಗ್ಯದ ಬಗ್ಗೆ ಇರಲಿ ಎಚ್ಚರ

1) ಹೆಚ್ಚು ಹೆಚ್ಚು ನೀರು ಕುಡಿಯಿರಿ

ಚಳಿಗಾಲದಲ್ಲಿ ಹೆಚ್ಚು ಬಾಯಾರಿಕೆ ಆಗದೆ ಇರುವ ಕಾರಣದಿಂದಾಗಿ ತುಂಬಾ ಕಡಿಮೆ ನೀರು ಕುಡಿಯುತ್ತೇವೆ. ಆದರೆ ಇದು ಸರಿಯಲ್ಲ, ಚಳಿಗಾಲದಲ್ಲೂ ಕೂಡ ಡಿಹೈಡ್ರೇಟ್ ಆಗುವ ಸಾಧ್ಯತೆಗಳಿರುತ್ತವೆ. ಅದರಲ್ಲೂ ಗರ್ಭಿಣಿಯರು ಅಗತ್ಯವಾಗಿ ನೀರಿನ ಸೇವನೆ ಹೆಚ್ಚಿಸಬೇಕು.

ನಿರ್ಜಲೀಕರಣದಿಂದಾಗಿ ಗರ್ಭಿಣಿಯರಲ್ಲಿ ಆಮ್ನಿಯೋಟಿಕ್ ದ್ರವದ ಮಟ್ಟವು ಕಡಿಮೆ ಆಗುವುದು. ಚಳಿಗಾಲದಲ್ಲೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ನೀರಿನಿಂದ ದೇಹವನ್ನು ಹೈಡ್ರೇಟ್ ಆಗಿಡಬಹುದು. ಎಳನೀರು, ಸೂಪ್ ಮತ್ತು ನಿಂಬೆ ಹಣ್ಣಿನ ಜ್ಯೂಸ್ ಸೇವನೆ ಒಳ್ಳೆಯದು. ಆದರೆ ಹೆಚ್ಚು ಕಾಫಿ, ಟೀ ಮತ್ತು ಇತರ ಸಿಹಿಯಾದ ಪಾನೀಯಗಳಿಂದ ದೂರವಿರಿ.

2) ಉತ್ತಮ ಆಹಾರ ಕ್ರಮ

ಹಣ್ಣು ಹಾಗೂ ತರಕಾರಿಗಳು ನಮ್ಮ ದೇಹದ ಆರೋಗ್ಯ ವೃದ್ಧಿಸುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಚಳಿಗಾಲದಲ್ಲಿ ಗರ್ಭಿಣಿಯರು ಹಣ್ಣುಗಳು, ತರಕಾರಿಗಳಂತಹ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬೇಕು. ಎಣ್ಣೆಯಲ್ಲಿ ಕರಿದ, ಸಂಸ್ಕರಿಸಿದ ಫುಡ್‌ಗಳಿಂದ ದೂರವಿರಿ. ಇವುಗಳನ್ನು ಹೆಚ್ಚು ಸೇವಿಸಿದಲ್ಲಿ ಅಸಿಡಿಟಿ ಉಂಟಾಗಿ ಎದೆಯುರಿ ಕಾಣಿಸುತ್ತದೆ.

3) ಲಸಿಕೆ ಪಡೆದುಕೊಳ್ಳಿ

ಜ್ವರದಿಂದ ದೂರವಿರಲು ಇನ್ಫ್ಲುಯೆನ್ಜ ಲಸಿಕೆ ತೆಗೆದುಕೊಳ್ಳುವುದು ಅತ್ಯಗತ್ಯ. ಜ್ವರಕ್ಕೆ ಲಸಿಕೆ ಪಡೆದುಕೊಂಡರೆ ಅದರಿಂದ ನೀವು ಹಾಗೂ ಮಗು ಆರೋಗ್ಯವಾಗಿ ಇರಬಹುದು. ಗರ್ಭಧಾರಣೆ ವೇಳೆ ನೀವು ಇಂತಹ ಲಸಿಕೆ ತೆಗೆದುಕೊಂಡರೆ ಆಗ ಮಗುವನ್ನು ಅದು ಜನನದ 6 ತಿಂಗಳ ಕಾಲ ಜ್ವರದಿಂದ ಕಾಪಾಡುವುದು ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಿರಿ, ಹ್ಯಾಂಡ್ ಸ್ಯಾನಿಟೈಸರ್ ಬಳಸಿ.

ಇದನ್ನೂ ಓದಿ: Health tips: ಗಂಟಲು ನೋವಿಗೆ ಮನೆಯಲ್ಲಿಯೇ ಇದೆ ಮದ್ದು

4) ಚಟುವಟಿಕೆಯಿಂದಿರಿ

ಚಳಿಗಾಲದಲ್ಲಿ ಹೊರಗಿನ ವಾತಾವರಣವು ತಂಪಾಗಿರುವ ಕಾರಣ ಮನೆಯೊಳಗೆ ವಾಕಿಂಗ್, ಯೋಗ, ವ್ಯಾಯಾಮ ಮಾಡುವುದು ಅತ್ಯಗತ್ಯ. ಆದರೆ ವೈದ್ಯರ ಸಲಹೆಯ ನಂತರವೇ ಫಿಟ್ನೆಸ್ ದಿನಚರಿಯನ್ನು ಪ್ರಾರಂಭಿಸಿ.

5) ತ್ವಚೆಯ ಆರೈಕೆ ಮಾಡಿ

ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳು ಸಾಮಾನ್ಯ. ಒಣ ಚರ್ಮ, ತುರಿಕೆ, ಕಿರಿಕಿರಿ ಉಂಟಾಗುತ್ತದೆ. ಅಲ್ಲದೇ ಗರ್ಭಧಾರಣೆ ವೇಳೆ ಹೊಟ್ಟೆಯು ದೊಡ್ಡದಾಗಿ ಬಿರಿಯುವುದರಿಂದ ಇದು ಕಲೆಗಳನ್ನು ಕೂಡ ಉಂಟು ಮಾಡಬಹುದು. ಹೀಗಾಗಿ ನೀವು ಪದೇ ಪದೇ ಕ್ರೀಮ್, ಲೋಷನ್‌ಗಳನ್ನು ಹಚ್ಚಿಕೊಂಡು ಚರ್ಮವನ್ನು ಹೈಡ್ರೇಟ್ ಆಗಿಡಬೇಕು. ಇವುಗಳ ಜೊತೆಗೆ ಬೆಚ್ಚನೆಯ ಬಟ್ಟೆಗಳನ್ನು ಹಾಕಿಕೊಳ್ಳುವುದು ಉತ್ತಮ.
Published by:vanithasanjevani vanithasanjevani
First published: