• Home
  • »
  • News
  • »
  • lifestyle
  • »
  • Kidney Health Tips: ಚಳಿಗಾಲದಲ್ಲಿ ಈ ತಪ್ಪು ಮಾಡಿದ್ರೆ ಕಿಡ್ನಿ ಸಮಸ್ಯೆ ಕಟ್ಟಿಟ್ಟಬುತ್ತಿ

Kidney Health Tips: ಚಳಿಗಾಲದಲ್ಲಿ ಈ ತಪ್ಪು ಮಾಡಿದ್ರೆ ಕಿಡ್ನಿ ಸಮಸ್ಯೆ ಕಟ್ಟಿಟ್ಟಬುತ್ತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Mistakes Which Affect Kidney: ಕಿಡ್ನಿ ಸಂಬಂಧಿತ ಕಾಯಿಲೆಯಿದ್ದರೆ ಮತ್ತು 3 ತಿಂಗಳಿಗಿಂತ ಹೆಚ್ಚು ಕಾಲ ಈ ಸಮಸ್ಯೆ ಮುಂದುವರೆದರೆ, ಅಂತಹ ರೋಗವನ್ನು ಗುಣಪಡಿಸಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ, ಮೂತ್ರಪಿಂಡದ ಬಗ್ಗೆ ಮುಂಚಿತವಾಗಿ ಕಾಳಜಿ ವಹಿಸುವುದು ಅವಶ್ಯಕ. 

  • News18 Kannada
  • Last Updated :
  • New Delhi, India
  • Share this:

ಬದಲಾದ ಜೀವನಶೈಲಿಯಿಂದ (Lifestyle) ಹಲವಾರು ರೋಗಗಳ (Health Problem) ಅಪಾಯವೂ ಹೆಚ್ಚುತ್ತಿದೆ. ಈಗ ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಜನರನ್ನು ಕಾಡುವುದು ಸಾಮಾನ್ಯವಾಗಿದೆ. ಇದರೊಂದಿಗೆ ಕಿಡ್ನಿ ರೋಗಗಳಿಂದ (Kidney Problem) ಬಳಲುತ್ತಿರುವವರ ಜನರ ಸಂಖ್ಯೆಯೂ ಹೆಚ್ಚುತ್ತಿದೆ. ಬದಲಾಗುತ್ತಿರುವ ಜೀವನಶೈಲಿಯ ಕಾರಣದಿಂದ ನಮ್ಮ ಕೆಲವು ಅಭ್ಯಾಸಗಳು ಮೂತ್ರಪಿಂಡಗಳಿಗೆ ಅಪಾಯಕಾರಿ ಎಂಬುದರ ಅರಿವು ಜನರಿಗಿಲ್ಲ. ಆದ್ದರಿಂದ ಮೂತ್ರಪಿಂಡದ ಆರೋಗ್ಯವನ್ನು (Health) ಕಾಪಾಡಿಕೊಳ್ಳಲು ಕೆಲ ಕಾಳಜಿವಹಿಸುವುದು ಮುಖ್ಯವಾಗುತ್ತದೆ. ಆದರೆ, ನಾವು ಚಳಿಗಾಲದಲ್ಲಿ ಮಾಡುವ ಕೆಲ ತಪ್ಪುಗಳು ಕಿಡ್ನಿ ಆರೋಗ್ಯಕ್ಕೆ ಅಪಾಯ. ಈ ತಪ್ಪು ಅಭ್ಯಾಸಗಳನ್ನು ಬದಲಾಯಿಸುವುದು ಬಹಳ ಅವಶ್ಯಕ. ಆ ಅಭ್ಯಾಸಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.  


ಮೂತ್ರಪಿಂಡವು ದೇಹದ ಒಂದು ಪ್ರಮುಖ ಅಂಗವಾಗಿದೆ,ಇದರಲ್ಲಿ ಯಾವುದೇ ಸಮಸ್ಯೆ ಇದ್ದರೂ ಸಹ ಅದು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮೂತ್ರಪಿಂಡಗಳು ಕೆಲಸ ಮಾಡುವುದನ್ನು ನಿಲ್ಲಿಸಿದಂತೆ, ಎಲ್ಲಾ ಅಂಗಗಳು ಕ್ರಮೇಣ ವಿಫಲವಾಗಲು ಪ್ರಾರಂಭಿಸುತ್ತವೆ. ಒಂದು ವೇಳೆ ಕಿಡ್ನಿ ಸಂಬಂಧಿತ ಕಾಯಿಲೆಯಿದ್ದರೆ ಮತ್ತು 3 ತಿಂಗಳಿಗಿಂತ ಹೆಚ್ಚು ಕಾಲ ಈ ಸಮಸ್ಯೆ ಮುಂದುವರೆದರೆ, ಅಂತಹ ರೋಗವನ್ನು ಗುಣಪಡಿಸಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ, ಮೂತ್ರಪಿಂಡದ ಬಗ್ಗೆ ಮುಂಚಿತವಾಗಿ ಕಾಳಜಿ ವಹಿಸುವುದು ಅವಶ್ಯಕ.


winter mistakes which affect kidney


ಅಭ್ಯಾಸಗಳು ಮೂತ್ರಪಿಂಡಗಳಿಗೆ ಅಪಾಯಕಾರಿ


ಉಪ್ಪಿನ ಅತಿಯಾದ ಬಳಕೆ: ನಾವು ಸಾಮಾನ್ಯವಾಗಿ ರುಚಿಗಾಗಿ ಹೆಚ್ಚು ಉಪ್ಪನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತೇವೆ. ಆದರೆ ಉಪ್ಪಿನ ಬಳಕೆಯನ್ನು ಸೀಮಿತಗೊಳಿಸಬೇಕು. ಏಕೆಂದರೆ ಇದು ಮೂತ್ರಪಿಂಡದ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ಆಹಾರವನ್ನು ತಯಾರಿಸಿದ ನಂತರ ಮತ್ತೆ ಅದಕ್ಕೆ ಉಪ್ಪು ಹಾಕಿಕೊಂಡು ಸೇವನೆ ಮಾಡುವುದು ಒಳ್ಳೆಯದಲ್ಲ.


ಇದನ್ನೂ ಓದಿ: ಪಪ್ಪಾಯಿ ಹಣ್ಣು ಮಾತ್ರ ಅಲ್ಲ, ಬೀಜ ತಿಂದ್ರೆ ಸಹ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ


ಧೂಮಪಾನ: ಅರಿವಿಲ್ಲದೆ ಜನರು ಕೆಲವು ಅಭ್ಯಾಸಗಳಿಗೆ ಅಡಿಕ್ಟ್ ಆಗುತ್ತಾರೆ.  ಇದು ಮೂತ್ರಪಿಂಡಗಳಿಗೆ ಮಾತ್ರವಲ್ಲದೆ ಒಟ್ಟಾರೆ ಆರೋಗ್ಯಕ್ಕೂ ಹಾನಿಕಾರಕವಾಗಿದೆ. ಅಂತಹ ಒಂದು ಅಭ್ಯಾಸವೆಂದರೆ ಧೂಮಪಾನ. ಧೂಮಪಾನವು ಮೂತ್ರಪಿಂಡದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಅದನ್ನು ಬಿಡುವುದು ಬಹಳ ಒಳ್ಳೆಯದು.




ಕಡಿಮೆ ನೀರು ಕುಡಿಯುವುದು: ಇತ್ತೀಚಿನ ದಿನಗಳಲ್ಲಿ ಜನರು ತುಂಬಾ ಕಾರ್ಯನಿರತರಾಗಿದ್ದಾರೆ, ಅವರಿಗೆ ಆಗಾಗ ನೀರು ಕುಡಿಯಲು ಸಮಯವಿರುವುದಿಲ್ಲ. ಚಳಿಗಾಲದಲ್ಲಿ, ಬಾಯಾರಿಕೆ ಆಗುವುದಿಲ್ಲ  ಎಂದು ನೀರು ಕುಡಿಯುವ ಅಗತ್ಯತೆಯನ್ನು ಮರೆಯುತ್ತಾರೆ. ಆದರೆ ಇದು ತುಂಬಾ ತಪ್ಪು. ಏಕೆಂದರೆ ಕಡಿಮೆ ನೀರು ಕುಡಿಯುವುದರಿಂದ ಜನರು ಮೂತ್ರಪಿಂಡದ ಕಾಯಿಲೆಗೆ ತುತ್ತಾಗುತ್ತಾರೆ.




ನೋವು ನಿವಾರಕಗಳನ್ನು ತೆಗೆದುಕೊಳ್ಳುವುದು: ಔಷಧಗಳು ಈಗ ಅತ್ಯಂತ ಅಗ್ಗವಾಗಿದ್ದು, ಜನರಿಗೆ ಸುಲಭವಾಗಿ ಲಭ್ಯವಿವೆ. ಸಣ್ಣಪುಟ್ಟ ನೋವುಗಳಿಗೆ ಯಾವ ಔಷಧಿ ತೆಗೆದುಕೊಳ್ಳಬೇಕು ಎಂಬ ಗೊಂದಲದಲ್ಲಿ ಜನರು ಇದ್ದಾರೆ. ಆದ್ದರಿಂದ ಜನರು  ನೋವು ನಿವಾರಕಗಳನ್ನು ಹೆಚ್ಚಾಗಿ ಬಳಸುತ್ತಾರೆ.




ಆದರೆ ಈ ರೀತಿಯ ನೋವು ನಿವಾರಕಗಳ ಅತಿಯಾದ ಬಳಕೆ ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜನರು ವೈದ್ಯರನ್ನು ಸಂಪರ್ಕಿಸದೆ ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ, ಇದು ತಿಳಿಯದೆ ಮೂತ್ರಪಿಂಡದ ಮೇಲೆ ಪರಿಣಾಮ ಬೀರುತ್ತದೆ.


ಇದನ್ನೂ ಓದಿ: ಮನೆಯಲ್ಲಿರೋ ಈ ಸಾಮಾನ್ಯ ವಸ್ತುಗಳನ್ನೇ ಬಾಡಿವಾಶ್​ ಆಗಿ ಬಳಸಬಹುದಂತೆ!


ಮೂತ್ರದ ಸೋಂಕು: ಯಾರಾದರೂ ಮೂತ್ರದ ಸೋಂಕಿನಿಂದ ಬಳಲಬಹುದು. ಈ ಸಮಸ್ಯೆ ಈಗ ಸಾಮಾನ್ಯವಾಗಿದೆ. ವಿಶೇಷವಾಗಿ ಮಹಿಳೆಯರು ಮೂತ್ರದ ಸೋಂಕಿಗೆ ಬೇಗ ಒಳಗಾಗುತ್ತಾರೆ. ಈ ಮೂತ್ರದ ಸೋಂಕಿನ ಕಾರಣದಿಂದ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಆದ್ದರಿಂದ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ, ನೆಗ್ಲೆಕ್ಟ್ ಮಾಡದೇ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ.ಆಗ ಮಾತ್ರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

Published by:Sandhya M
First published: