• Home
  • »
  • News
  • »
  • lifestyle
  • »
  • Health Care: ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಯೇ? ಆಹಾರದಲ್ಲಿ ಸೇರಿಸಿ ಸಾಸಿವೆ ಸೊಪ್ಪು

Health Care: ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಯೇ? ಆಹಾರದಲ್ಲಿ ಸೇರಿಸಿ ಸಾಸಿವೆ ಸೊಪ್ಪು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಾವುದೇ ಪದಾರ್ಥ ತಯಾರಿಸುವಾಗಲೂ ಸಾಸಿವೆ ಹಾಕಲಾಗುತ್ತದೆ. ಸಾಸಿವೆ ಆಹಾರದ ರುಚಿ ಹೆಚ್ಚಿಸುತ್ತದೆ. ಜೊತೆಗೆ ಆರೋಗ್ಯವರ್ಧಕವಾಗಿದೆ. ಸಾಸಿವೆ ಸೊಪ್ಪು ಕೂಡ ಹಲವು ಪೋಷಕಾಂಶಗಳನ್ನು ಹೊಂದಿದೆ. ಸಾಸಿವೆ ಎಣ್ಣೆ ಮತ್ತು ಬೀಜಗಳನ್ನು ಬಹುತೇಕ ಪ್ರತಿ ಮನೆಯಲ್ಲೂ ಅಡುಗೆಗೆ ಬಳಕೆ ಮಾಡಲಾಗುತ್ತದೆ.

ಮುಂದೆ ಓದಿ ...
  • Share this:

    ದೆಹಲಿ ಭಾಗಗಳಲ್ಲಿ (Delhi Parts) ಸಾಸಿವೆ ಸೊಪ್ಪು (Mustard Leaves) ತುಂಬಾ ಆರೋಗ್ಯಕರ ಮತ್ತು ಜನಪ್ರಿಯ ಪದಾರ್ಥವಾಗಿದೆ (Healthy And Famous Ingredient). ಸರಸೋಂಕಾ ಸಾಗ್ – ಸಾಸಿವೆ ಸೊಪ್ಪಿನ ಖಾದ್ಯ ಹೆಚ್ಚು ಜನಪ್ರಿಯವಾಗಿದೆ. ಅಂದ ಹಾಗೇ ಕರ್ನಾಟಕದಲ್ಲಿ ಸಾಸಿವೆ ಕಾಳನ್ನು ಒಗ್ಗರಣೆ ಹಾಕಲು ಬಳಕೆ ಮಾಡಲಾಗುತ್ತದೆ. ಯಾವುದೇ ಪದಾರ್ಥ ತಯಾರಿಸುವಾಗಲೂ ಸಾಸಿವೆ ಹಾಕಲಾಗುತ್ತದೆ. ಸಾಸಿವೆ ಆಹಾರದ ರುಚಿ ಹೆಚ್ಚಿಸುತ್ತದೆ. ಜೊತೆಗೆ ಆರೋಗ್ಯವರ್ಧಕವಾಗಿದೆ. ಸಾಸಿವೆ ಸೊಪ್ಪು ಕೂಡ ಹಲವು ಪೋಷಕಾಂಶಗಳನ್ನು ಹೊಂದಿದೆ. ಸಾಸಿವೆ ಎಣ್ಣೆ ಮತ್ತು ಬೀಜಗಳನ್ನು ಬಹುತೇಕ ಪ್ರತಿ ಮನೆಯಲ್ಲೂ ಅಡುಗೆಗೆ ಬಳಕೆ ಮಾಡಲಾಗುತ್ತದೆ. ಸಾಸಿವೆ ಬೀಜವನ್ನು ಬಳಸಿದಷ್ಟು, ಸಾಸಿವೆ ಸೊಪ್ಪನ್ನು ಖಾದ್ಯ ಮತ್ತು ಅಡುಗೆಗೆ ಬಹುತೇಕರು ಬಳಕೆ ಮಾಡುವುದಿಲ್ಲ.


    ಸಾಸಿವೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು


    ಕೆಲವೇ ಜನರು ಸಾಸಿವೆ ಸೊಪ್ಪನ್ನು ಸೇವಿಸುತ್ತಾರೆ. ನೀವು ಸಾಸಿವೆ ಸೊಪ್ಪನ್ನು ಎಂದಿಗೂ ಸೇವನೆ ಮಾಡದೇ ಇದ್ದರೆ, ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದರೆ ನೀವೇ ತಿನ್ನಲು ಮುಂದಾಗುತ್ತೀರಿ. ಸಾಸಿವೆ ಸೊಪ್ಪು ಬಲವಾದ ಸುವಾಸನೆ ಹೊಂದಿರುತ್ತದೆ.


    ಇದನ್ನು ಹೆಚ್ಚಾಗಿ ಚಟ್ನಿ ಮತ್ತು ಸಲಾಡ್ ಹಾಗೂ ಪಲ್ಯದ ರೂಪದಲ್ಲಿ ಬಳಸಲಾಗುತ್ತದೆ. ಇದಲ್ಲದೇ ಸಾಸಿವೆ ಸೊಪ್ಪಿನಲ್ಲಿ ಅನೇಕ ಪೋಷಕಾಂಶಗಳಿವೆ. ವಿಟಮಿನ್ ಮತ್ತು ಔಷಧೀಯ ಗುಣಗಳು ಹೇರಳವಾಗಿವೆ.




    ಚಳಿಗಾಲದಲ್ಲಿ ಆರೋಗ್ಯ ಕಾಪಾಡುತ್ತದೆ ಸಾಸಿವೆ ಸೊಪ್ಪು


    ಚಳಿಗಾಲದಲ್ಲಿ ಆರೋಗ್ಯ ರಕ್ಷಣೆಗೆ ಸಾಸಿವೆ ಸೊಪ್ಪು ಸೇವಿಸುವಂತೆ ಪೌಷ್ಟಿಕ ತಜ್ಞ ಲವ್ನೀತ್ ಬಾತ್ರಾ ಸೂಚಿಸುತ್ತಾರೆ. ಸಾಸಿವೆ ಎಲೆ ಹಸಿರು, ಇತರ ಡಾರ್ಕ್ ಎಲೆಗಳ ತರಕಾರಿಗಳಂತೆ, ವಿಭಿನ್ನ ಪೌಷ್ಟಿಕಾಂಶದ ಮೌಲ್ಯ ಮತ್ತು ಪರಿಮಳ ನೀಡುತ್ತದೆ ಎನ್ನುತ್ತಾರೆ.


    ಸಾಸಿವೆ ಸೊಪ್ಪು ಬಳಸಿ ಆರೋಗ್ಯ ಕಾಪಾಡಿ


    ಸಾಸಿವೆ ಸೊಪ್ಪು ವಿಟಮಿನ್ ಕೆ ಯ ಅತ್ಯುತ್ತಮ ಮೂಲ. ವಿಟಮಿನ್ ಕೆ ನಿಮ್ಮ ಮೂಳೆಗಳ ಬಲಿಷ್ಠತೆಗೆ ಹಾಗೂ ಹೃದಯವನ್ನು ಆರೋಗ್ಯವಾಗಿಡುತ್ತದೆ. ಇದರಲ್ಲಿರುವ ವಿಟಮಿನ್ ಅಂಶ ಗಾಯ ಹಾಗೂ ಅತಿಯಾದ ರಕ್ತದ ನಷ್ಟವನ್ನು ತಡೆಯಲು ಹೆಪ್ಪುಗಟ್ಟುವ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ.


    ಕ್ಯಾನ್ಸರ್ ವಿರೋಧಿ ಗುಣ ಹೊಂದಿದೆ ಸಾಸಿವೆ ಸೊಪ್ಪು


    ಸಾಸಿವೆ ಸೊಪ್ಪು ಶಕ್ತಿಯುತ ಉತ್ಕರ್ಷಣ ನಿರೋಧಕ ಮತ್ತು ಕಾರ್ಸಿನೋಜೆನಿಕ್ ಗುಣಲಕ್ಷಣ ಹೊಂದಿದೆ. ಮಾರಣಾಂತಿಕ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ಗ್ಲುಕೋಸಿನೋಲೇಟ್‌ ಗಳು ಸಾಸಿವೆ ಸೊಪ್ಪಿನಲ್ಲಿದೆ. ಆರೋಗ್ಯಕರ ಕೋಶಗಳನ್ನು ಡಿಎನ್‌ಎ ಹಾನಿಯಿಂದ ರಕ್ಷಿಸುತ್ತದೆ. ಕ್ಯಾನ್ಸರ್ ಕೋಶಗಳ ಬೆಳವಣಿಗೆ ತಡೆಯುತ್ತದೆ.


    ಹೃದಯದ ಆರೋಗ್ಯ ಕಾಪಾಡುತ್ತದೆ


    ಸಾಸಿವೆ ಸೊಪ್ಪಿನಲ್ಲಿ ವಿಟಮಿನ್ ಸಿ, ಫ್ಲೇವನಾಯ್ಡ್‌ಗಳು ಮತ್ತು ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ. ಸಾಸಿವೆ ಸೊಪ್ಪು ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವಿನ ಅಪಾಯ ತಡೆಯಲು ಮತ್ತು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಾಸಿವೆ ಸೊಪ್ಪು ಗ್ರೀನ್ಸ್ ಜೀರ್ಣಾಂಗದಲ್ಲಿ ಪಿತ್ತರಸ ಆಮ್ಲ ನಿರ್ಮಿಸಲು ಸಹಾಯ ಮಾಡುವ ಸಂಯುಕ್ತ ಹೊಂದಿದೆ. ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ.


    ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ದೈಹಿಕ ಸಂಪರ್ಕ, ಆರೋಗ್ಯದ ಮೇಲೇನು ಪರಿಣಾಮ?


    ಸಾಸಿವೆ ಸೊಪ್ಪು ಕಣ್ಣುಗಳಿಗೆ ಪ್ರಯೋಜನ ನೀಡುತ್ತದೆ


    ಸಾಸಿವೆ ಸೊಪ್ಪು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಸಾಸಿವೆ ಸೊಪ್ಪಿನಲ್ಲಿರುವ ಉತ್ಕರ್ಷಣ ನಿರೋಧಕ ಪ್ರೊಫೈಲ್ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಕಣ್ಣಿನ ಆರೋಗ್ಯ ಕಾಪಾಡುತ್ತದೆ.


    ಸಂಶೋಧನೆಯೊಂದರ ಪ್ರಕಾರ, ಈ ಎರಡು ಪೋಷಕಾಂಶಗಳು ಆರೋಗ್ಯಕರ ಕಣ್ಣು ಮತ್ತು ಕಣ್ಣಿನ ಸಮಸ್ಯೆ ತಡೆಯಲು ಮತ್ತು ವಯಸ್ಸಿಗೆ ಸಂಬಂಧಿಸಿದ ದೃಷ್ಟಿ ನಷ್ಟ ಕಡಿಮೆ ಮಾಡಲು ಸಹಕಾರಿ ಆಗಿದೆ ಅಂತಾರೆ ತಜ್ಞರು.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು