Hair care Tips: ಚಳಿಗಾಲದಲ್ಲಿ ಚರ್ಮದಷ್ಟೇ ಕೂದಲಿನ ಆರೈಕೆಯ ಕಡೆ ಇರಲಿ ಗಮನ

ಕೂದಲು

ಕೂದಲು

Winter Hair care Tips :ಸಾಮಾನ್ಯವಾಗಿ ಚಳಿಗಾಲದಲ್ಲಿ ಮನುಷ್ಯ ಹೆಚ್ಚು ಸೋಮಾರಿತನದಿಂದ ಕೂಡಿರುತ್ತಾನೆ.. ಹೀಗಾಗಿ ದೇಹ ಸೌಂದರ್ಯದ ಬಗ್ಗೆ ಆಸಕ್ತಿ ತೋರುವುದಿಲ್ಲ.. ಚರ್ಮ ಹಾಗೂ ಕೂದಲು ಆರೈಕೆ ಬಗ್ಗೆಯೂ ಮರೆತು ಬಿಡುತ್ತಾನೆ.ಇದರಿಂದ ಕೂದಲು ಒರಟಾಗುವುದು, ತಲೆ ಹೊಟ್ಟು, ಕೂದಲು ಉದುರುವುದು ಈ ರೀತಿಯ ಸಮಸ್ಯೆ ಕಂಡು ಬರುವುದು ಅಧಿಕ

ಮುಂದೆ ಓದಿ ...
  • Share this:

    ಕೂದಲು (Hair)ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಉದ್ದ ಹಾಗೂ ದಟ್ಟವಾದ ಕೂದಲನ್ನು(Long and Thick Hair) ಪಡೆಯಲು ಹೆಣ್ಣು ಮಕ್ಕಳು ಪಡುವ ಹರಸಾಹಸ ಅಷ್ಟಿಷ್ಟಲ್ಲ. ಚಿಕ್ಕ ವಯಸ್ಸಿನಿಂದಲೇ ದಪ್ಪ ಮತ್ತು ಉದ್ದ ಕೂದಲಿನ ಕನಸು ಕಾಣುತ್ತಾರೆ. ಆದರೆ ಚಳಿಗಾಲದಲ್ಲಿ(Winter) ಕೂದಲಿನ ಆರೈಕೆ ಮಾಡುವುದು ಹೇಗೆ ಎಂದು ಗೊತ್ತಿಲ್ಲದೆ ಕೂದಲು ಉದುರುವ(Hair fall) ಗಂಭೀರ ಸಮಸ್ಯೆಗಳನ್ನು(Problems) ಎದುರಿಸುತ್ತಾರೆ. ಚಳಿಗಾಲದಲ್ಲಿ ವಾತಾವರಣ ತಂಪಾಗಿರುವುದರಿಂದ ಕೂದಲು ಶುಷ್ಕವಾಗಿದ್ದು, ಕೂದಲು ಕವಲೊಡೆದು ಉದುರುವ ಸಾಧ್ಯತೆ ಇರುತ್ತದೆ.. ಹೀಗಾಗಿ ಚಳಿಗಾಲದಲ್ಲಿ ಚರ್ಮದ ರೀತಿಯಲ್ಲಿಯೇ ಕೂದಲಿನ ಆರೈಕೆ ಮಾಡಬೇಕು. ಹಾಗಿದ್ರೆ ಚಳಿಗಾಲದಲ್ಲಿ ಕೂದಲಿನ ಆರೈಕೆ ಹೇಗೆ ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ.


    ಚಳಿಗಾಲದಲ್ಲಿ ಕೂದಲಿನ ಸಮಸ್ಯೆ ಹೆಚ್ಚು


    ಸಾಮಾನ್ಯವಾಗಿ ಚಳಿಗಾಲದಲ್ಲಿ ಮನುಷ್ಯ ಹೆಚ್ಚು ಸೋಮಾರಿತನದಿಂದ ಕೂಡಿರುತ್ತಾನೆ.. ಹೀಗಾಗಿ ದೇಹ ಸೌಂದರ್ಯದ ಬಗ್ಗೆ ಆಸಕ್ತಿ ತೋರುವುದಿಲ್ಲ.. ಚರ್ಮ ಹಾಗೂ ಕೂದಲು ಆರೈಕೆ ಬಗ್ಗೆಯೂ ಮರೆತು ಬಿಡುತ್ತಾನೆ.ಇದರಿಂದ ಕೂದಲು ಒರಟಾಗುವುದು, ತಲೆ ಹೊಟ್ಟು, ಕೂದಲು ಉದುರುವುದು ಈ ರೀತಿಯ ಸಮಸ್ಯೆ ಕಂಡು ಬರುವುದು ಅಧಿಕ. ಆದರೆ ಸರಿಯಾದ ಆರೈಕೆ ಮಾಡಿದರೆ ಕೂದಲಿನ ಸೌಂದರ್ಯ ಹಾಗೂ ಆರೋಗ್ಯ ಕಾಪಾಡಬಹುದು.


    1) ಟೋಪಿ ಧರಿಸಿ :


    ನಾವು ಮನೆಯಿಂದ ಹೊರಗೆ ಹೋಗುವಾಗ ಕೂದಲನ್ನು ಬಿಡುವುದರಿಂದ ಕೂದಲನ್ನು ತೇವಾಂಶ-ದೋಚುವ ಶುಷ್ಕ ಗಾಳಿ, ಹಿಮ, ಗಾಳಿ ಹಾನಿ ಮಾಡುವ ಸಾಧ್ಯತೆಯಿರುತ್ತದೆ..ಹೀಗಾಗಿ ಉಣ್ಣೆ, ಹತ್ತಿ ಮತ್ತು ಇತರ ಬಟ್ಟೆಗಳಿಂದ ಮಾಡಿದ ಟೋಪಿಯನ್ನು ಚಳಿಗಾಲದಲ್ಲಿ ಧರಿಸುವುದರಿಂದ ಹೊರಗೆ ಹೋದಾಗ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು..ಇನ್ನು ಟೋಪಿ ಧರಿಸುವ ಮುನ್ನ ಡ್ರೈ ಆಯಿಲ್ ಸ್ಪ್ರೇ ಬಳಸಿದರೆ ಕೂದಲಿನ ಹೊಳಪು ಮೊದಲಿನ ಹೊಳಪು ರೀತಿ ಇರುತ್ತದೆ..


    ಇದನ್ನೂ ಓದಿ :ಸಪ್ತ ಸೂತ್ರ ಅನುಸರಿಸಿದ್ರೆ ನಿಮ್ಮ ಕೂದಲು ದಟ್ಟವಾಗಿ ಬೆಳೆಯುತ್ತದೆ


    2) ಕೂದಲನ್ನು ಸ್ಟೀಮ್ ಮಾಡುವುದು


    ಚಳಿಗಾಲದಲ್ಲಿ ಹದಿನೈದು ನಿಮಿಷಗಳಷ್ಟು ಕಾಲ ಕೂದಲನ್ನು ಸ್ಟೀಮ್ ಮಾಡುವುದರಿಂದ ಕೂದಲಿನ ಬುಡವನ್ನು ಸುಚಿ ಮಾಡಬಹುದು.. ಇದರಿಂದ ಕೂದಲಿನಲ್ಲಿ ಸೇರಿಕೊಂಡಿರುವ ಕೊಳೆಯನ್ನು ಸುಲಭವಾಗಿ ತೆಗೆದುಹಾಕಬಹುದು.. ಅಲ್ಲದೆ ಸ್ಟೀಮಿಂಗ್ ಮಾಡುವುದರಿಂದ ಕೂದಲಿನ ಬುಡಕ್ಕೆ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ರಕ್ತ ಪರಿಚಯನೇ ಚೆನ್ನಾಗಿ ಆದಾಗ ಕೂದಲು ಉದುರುವುದು ಕಡಿಮೆಯಾಗುತ್ತದೆ.


    3) ನಿಯಮಿತವಾಗಿ ಕೂದಲಿಗೆ ಕತ್ತರಿ ಹಾಕಿರಿ


    ಚಳಿಗಾಲದಲ್ಲಿ ಪ್ರತಿ ನಾಲ್ಕರಿಂದ ಎಂಟು ವಾರಗಳಿಗೊಮ್ಮೆ ಕೂದಲನ್ನು ಟ್ರಿಮ್ ಮಾಡಿಕೊಳ್ಳುವುದರಿಂದ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು.. ಒಣಗಿರುವ ಹಾಕೋ ಕವಲೊಡೆದಿರುವ ಕೂದಲು ಕೆಳಭಾಗದಿಂದ ಚೇತರಿಕೆ ಕಾಣಲು ಚಳಿಗಾಲದಲ್ಲಿ ನಿಯಮಿತವಾಗಿ ಟ್ರೀಮ್ ಮಾಡುವುದು ಸಹಕಾರಿ.


    4) ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು


    ಕೆಲವರು ಚಳಿಗಾಲದಲ್ಲಿ ಹೆಚ್ಚು ಬಿಸಿಯಾಗಿರುವ ನೀರನ್ನು ತಲೆಯ ಮೇಲೆ ಸುರಿದು ಕೊಳ್ಳುತ್ತಾರೆ.. ಹೀಗಾಗಿ ಇದು ಕೂದಲು ಸುಲಭವಾಗಿ ಮುರಿಯಲು ಕಾರಣವಾಗುತ್ತದೆ.. ಹೀಗಾಗಿ ಚಳಿಗಾಲದಲ್ಲಿ ನಿಮ್ಮ ಕೂದಲಿನ ಆರೈಕೆ ಉತ್ತಮವಾಗಿರಬೇಕೆಂದರೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು..


    ಇದನ್ನೂ ಓದಿ :ಪುರುಷರೇ, ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದ್ರೆ ಈ ರೀತಿ ಮಾಡಿ ಸಾಕು


    5) ಡ್ರೈಯರ್ ಬಳಸಬೇಡಿ


    ಚಳಿಗಾಲದಲ್ಲಿ ಕೂದಲು ಹೋಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಕೆಲವರು ಕೂದಲಿನ ತೇವಾಂಶ ಬೇಗ ಹೀರಿಕೊಳ್ಳುವಂತೆ ಮಾಡಲು ಡ್ರೈಯರ್ ಬಳಕೆ ಹೆಚ್ಚು ಮಾಡುತ್ತಾರೆ..ಜೊತೆಗೆ ಚಳಿಗಾಲದಲ್ಲಿಯೂ ಸ್ಟ್ರೈಟ್ನಿಂಗ್, ಕರ್ಲಿಂಗ್ ಬಳಸಿ ವಿವಿಧ ಬಗೆಯ ಹೇರ್ ಸ್ಟೈಲ್ ಮಾಡಿಕೊಳ್ಳಲು ಮುಂದಾಗುತ್ತಾರೆ.. ಹೀಗಾಗಿ ಇದು ನಮ್ಮ ಕೂದಲು ಬಿರುಕು ಬಿಡಲು ಕಾರಣ ಆಗಬಹುದು..


    6)ಒದ್ದೆಯಾದ ಕೂದಲಿನೊಂದಿಗೆ ಮನೆಯಿಂದ ಹೊರಹೋಗಬೇಡಿ :


    ಒದ್ದೆ ಕೂದಲು ಒಣ ಕೂದಲಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಒದ್ದೆಯಾದ ತಲೆಯೊಂದಿಗೆ ಚಳಿಗಾಲದಲ್ಲಿ ಹೊರಗೆ ನಡೆಯುವುದು ಕೂದಲು ಫ್ರೀಜ್ ಮತ್ತು ಒಡೆಯಲು ಕಾರಣವಾಗಬಹುದು.


    7)ಆಯಿಲ್ ಮಸಾಜ್


    ಚರ್ಮದ ಆರೈಕೆಗೆ ನೀವು ವಾರಕ್ಕೊಮ್ಮೆ ಮಸಾಜ್ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಂಡತೆ . ಕೊಬ್ಬರಿ ಎಣ್ಣೆ ಸೇರಿ ನೀವು ಬಳಸುವ ವಿವಿಧ ಎಣ್ಣೆಗಳಿಂದ ನಿಯಮಿತವಾಗಿ ಕೂದಲಿನ ಬುಡದ ಮಸಾಜ್ ಮಾಡಿಕೊಳ್ಳುವುದು ಚಳಿಗಾಲದಲ್ಲಿ ಉತ್ತಮ

    Published by:ranjumbkgowda1 ranjumbkgowda1
    First published: