ಚುಮುಚುಮು ಚಳಿಗಾಲ(Winter) ಬಂದೇ ಬಿಟ್ಟಿದೆ. ಸೂರ್ಯ (Sun)ನೆತ್ತಿ ಮೇಲೆ ಬಂದ್ರೂ ಹಾಸಿಗೆಯಿಂದ(Bed) ಏಳೋದೇ ಬೇಡ ಅನಿಸೋ ಈ ಕಾಲದಲ್ಲಿ ಒಂದಷ್ಟು ಆರೋಗ್ಯ ಸಮಸ್ಯೆಗಳು(Health Problem) ಕಾಡೋದು ಮಾಮೂಲು. ಹೀಗಾಗಿ ಚಳಿಗಾಲದಲ್ಲಿ ಶೀತ(Cold), ನೆಗಡಿ, ತಲೆನೋವಿನಂತಹ(headache) ಅನೇಕ ಆರೋಗ್ಯ ಸಮಸ್ಯೆಗಳು ಕಾಣಬಹುದು.. ಆದ್ರೆ ಇನ್ನೂ ಕೆಲವರಿಗೆ ಸಣ್ಣ ಆರೋಗ್ಯ ಸಮಸ್ಯೆ ಮಾತ್ರವಲ್ಲದೆ ದೊಡ್ಡ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದರಿಂದ ಚಳಿಗಾಲದಲ್ಲಿ ಹೆಚ್ಚು ಮುಂಜಾಗೃತೆಯಿಂದ ಇರುವುದು ಸೂಕ್ತ.. ಸದ್ಯ ರಾಜ್ಯದಲ್ಲಿ(State) ಕಳೆದ ಕೆಲವು ದಿವಸಗಳಿಂದ ಚಳಿಯ ಪ್ರಮಾಣದ ಹೆಚ್ಚಾಗಿದ್ದು, ಇದು ಮುಂದಿನ ದಿವಸಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗುವದುರಿಂದ ಬೆಳಗ್ಗೆ ಮತ್ತು ಸಾಯಂಕಾಲ ಚಳಿ ಹೆಚ್ಚಾಗಿರುವ ಸಮಯದಲ್ಲಿ ವ್ಯಾಯಾಮ ಮಾಡುವುದು, ಸುತ್ತಾಡುವುದು, ಕೆಲಸ ಮಾಡುವುದು ಬೇಡ. ಬೆಚ್ಚಗಿನ ಉಡುಪುಗಳನ್ನು ಧರಿಸಬೇಕು. ಎಣ್ಣೆಯಲ್ಲಿ ಬೇಯಿಸಿದ ಆಹಾರ ಸೇವನೆ ಬೇಡ. ಚಳಿಯಲ್ಲಿ ಹೆಚ್ಚಿನ ಚಲನೆ ಹೃದಯಘಾತಕ್ಕೆ ಪೂರಕವಾಗುವದರಿಂದ ಚಳಿಗಾಲದ ಬಗ್ಗೆ ಪ್ರತಿಯೊಬ್ಬರು ಮುಂಜಾಗ್ರತೆಯಿಂದ ಇರುಬೇಕು.. ಹೀಗಾಗಿ ಚಳಿಗಾಲದಲ್ಲಿ ಕೆಲವೊಂದಷ್ಟು ಆಹಾರ ಸೇವನೆ ಮಾಡುವುದರಿಂದ ನಾವು ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಬಹುದು.
ಚಳಿಗಾಲದಲ್ಲಿ ಈ ಆಹಾರಗಳನ್ನ ಸೇವನೆ ಮಾಡುವುದು ಸೂಕ್ತ
ಚಳಿಗಾಲದಲ್ಲಿ ಹೊರಗಿನ ತಾಪಮಾನ ಕಡಿಮೆಯಾದರೆ, ಮನೆಯೊಳಗೂ ಕೂಡ ಅದೇ ರೀತಿ ವಾತಾವರಣ ನಿರ್ಮಾಣವಾಗುತ್ತದೆ. ಈ ಸಂದರ್ಭದಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸೋಂಕುಕಾರಕ ಕ್ರಿಮಿಗಳು ಹರಡುವ ಸಾಧ್ಯತೆ ಇರುತ್ತದೆ.ಹೀಗಾಗಿ ನಾವು ಚಳಿಗಾಲದಲ್ಲಿ ನಮ್ಮ ಆಹಾರ ಸೇವನೆಯ ಬಗ್ಗೆ ಸಾಕಷ್ಟು ಜಾಗೃತಿ ವಹಿಸಬೇಕು.. ನಾವು ಸೇವಿಸುವ ಆಹಾರದಲ್ಲಿ ಪೌಷ್ಠಿಕಾಂಶಗಳು, ವಿಟಮಿನ್ ಗಳು ಹೇರಳವಾಗಿ ಇರುವಂತೆ ನೋಡಿಕೊಳ್ಳಬೇಕು. ಹೀಗಾಗಿ ಚಳಿಗಾಲದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ರೆ ಈ ಆಹಾರಗಳನ್ನ ಸೇವನೆ ಮಾಡುವುದು ಸೂಕ್ತ
ಇದನ್ನೂ ಓದಿ: ಚಳಿಗಾಲಕ್ಕೆ ಬೆಳಗ್ಗೆ ಈ ಆಹಾರ ಪದಾರ್ಥಗಳನ್ನು ಟ್ರೈ ಮಾಡಿ
1)ವಿಟಮಿನ್ ಡಿ ಇರುವ ಆಹಾರ: ನಮ್ಮೆಲ್ಲರಿಗೂ ತಿಳಿದಿರುವ ಹಾಗೆ ವಿಟಮಿನ್ ಡಿ ಪ್ರತಿಯೊಂದು ಜೀವಿಗೂ ಅವಶ್ಯಕವಾಗಿದೆ.ಇದು ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಫೋಸ್ಪಟ್ ಅಂಶಗಳನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ. ಈ ಅಂಶಗಳು ಮೂಳೆಗಳಿಗೆ, ಹಲ್ಲುಗಳಿಗೆ ಮತ್ತು ಸ್ನಾಯುಗಳ ಆರೋಗ್ಯಕ್ಕೆ ಅತ್ಯಂತ ಅವಶ್ಯವಾಗಿದೆ. ಇದು ಹೆಚ್ಚು ದೊರೆಯುವುದು ಸೂರ್ಯನ ಬೆಳಕಿನಿಂದ.ಚಳಿಗಾಲದಲ್ಲಿ ಸೂರ್ಯನ ಬೆಳಕು ಅಷ್ಟಾಗಿ ಕಾಣದೆ ಇರುವುದರಿಂದ ವಿಟಮಿನ್ ಡಿ ಆಹಾರ ಸೇವನೆ ಮಾಡುವುದು ಸೂಕ್ತ. ಮೀನು ಹಾಗೂ ಸಮುದ್ರ ಆಹಾರಗಳಲ್ಲಿ ವಿಟಮಿನ್ ಡಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ ಚಳಿಗಾಲದ್ಲಿ ಇದನ್ನು ಸೇವನೆ ಮಾಡಬೇಕು
2)ವಿಟಮಿನ್ ಸಿ: ವಿಟಮಿನ್ ಸಿ ಇರುವ ಆಹಾರವನ್ನ ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಶೀತ ಹಾಗೂ ವೈರಲ್ ಫೀವರ್ ಗಳಿಂದ ಮಕ್ತಿ ಪಡೆಯಬಹುದು. ಪಾಲಕ್ ಸೊಪ್ಪು, ಸಿಟ್ರಿಕ್ ಅಂಶವಿರುವ ಕಿತ್ತಳೆ, ನೆಲ್ಲಿಕಾಯಿ, ಪಾಲಕ್ ಸೊಪ್ಪು ಸೇರಿ ಹಲವು ಆಹಾರಗಳು ಚಳಿಗಾಲದಲ್ಲಿ ನಮ್ಮನ್ನ ಆರೋಗ್ಯದಿಂದ ಇರಲು ಸಹಾಯ ಮಾಡುತ್ತವೆ.
3)ಕಬ್ಬಿಣಾಂಶ ಇರುವ ಆಹಾರ: ಕಬ್ಬಿಣದ ಅಂಶದ ಕೊರತೆ ಎದುರಾದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಇದನ್ನು ಆರಂಭದಲ್ಲೇ ಸರಿಪಡಿಸಿಕೊಳ್ಳುವುದು ಒಳ್ಳೆಯದು. ತಲೆ ಸುತ್ತುವುದು, ಆಯಾಸ, ರಕ್ತದ ಕೊರತೆ ಇವೆಲ್ಲವೂ ಕಭ್ಭಿಣಾಂಶದ ಕೊರತೆಯಿಂದ ಉಂಟಾಗುತ್ತವೆ. ಅದ್ರಲ್ಲೂ ಚಳಿಗಾಲದಲ್ಲಿ ಹೃದಯದ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಾಗಿರುವುದರಿಂದ ಪಾಲಕ್, ಕೇಲ್ ಮತ್ತು ಸ್ವಿಸ್ ಚಾರ್ಡ್ ನಂತಹ ಸೊಪ್ಪು, ಸೀ ಪುಡ್, ಕೆಂಪು ಮಾಂಸ ಸೇವನೆ ಮಾಡುವುದು ಸೂಕ್ತ
4)ಸತು: ದ್ವಿದಳ ಧಾನ್ಯ, ಕಡಲೆಕಾಯಿ, ಮೊಟ್ಟೆ, ಕಲ್ಲಂಗಡಿ ಕಡಲೆಯಂತಹ ಸತುವಿರುವ ಆಹಾರಗಳನ್ನ ಚಳಿಗಾಲದಲ್ಲಿ ಸೇವನೆ ಮಾಡಿದ್ರೆ, ನಮ್ಮ ದೇಹಕ್ಕೆ ರೋಗ ನಿರೋಧಕ್ಕೆ ಶಕ್ತಿಗಳು ಲಭಿಸಲಿವೆ
ಇದನ್ನೂ ಓದಿ: ಈ ಟೈಮಲ್ಲಿ ಇದನ್ನೆಲ್ಲಾ ತಿಂದ್ರೆ ಚಳಿಗಾಲದ ಸಮಸ್ಯೆಗಳು ನಿಮ್ಮ ಹತ್ತಿರಕ್ಕೂ ಸುಳಿಯಲ್ವಂತೆ
5) ವಿಟಮಿನ್ B12: ಸಾಮಾನ್ಯವಾಗಿ ಕಂಡುಬರುವ ವಿಟಮಿನ್ ಬಿಎಕ್ಸ್‌ಎನ್‌ಯುಎಮ್‌ಎಕ್ಸ್‌ನ ಕೊರತೆ ನಮ್ಮಲ್ಲಿ ಹಲವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. B12 ಕೊರತೆಯು ಬೆಳಿಗ್ಗೆ ಆಯಾಸಗೊಳ್ಳುವುದು, ನರಗಳ ಕಾರ್ಯಚಟುವಟಿಕೆಗಳನ್ನು ಅಡ್ಡಿಪಡಿಸುವುದು, ಅರೆನಿದ್ರಾವಸ್ಥೆ ಮತ್ತು ಇಷ್ಟವಿಲ್ಲದಿರುವಿಕೆ ಮುಂತಾದ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ.ಹೀಗಾಗಿ ಮಾಂಸ, ಕೋಳಿ, ಮೀನು, ಮೊಟ್ಟೆ, ಹಾಲು, ಮೊಸರು, ಚೀಸ್ ನಂತಹ ಬಿ 12 ವಿಟಮಿನ್ ಇರುವ ಆಹಾರಗಳು ನಮ್ಮನ್ನ ಚಳಿಗಾದಲ್ಲಿ ಸುರಕ್ಷಿತವಾಗಿ ಇಡುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ