• Home
  • »
  • News
  • »
  • lifestyle
  • »
  • Ear Problems: ಚಳಿಗಾಲದಲ್ಲಿ ಕಾಡುವ ಕಿವಿ ನೋವಿಗೆ ಮನೆಯಲ್ಲೇ ಇದೆ ಮದ್ದು!

Ear Problems: ಚಳಿಗಾಲದಲ್ಲಿ ಕಾಡುವ ಕಿವಿ ನೋವಿಗೆ ಮನೆಯಲ್ಲೇ ಇದೆ ಮದ್ದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಿವಿನೋವು ಸಾಮಾನ್ಯವಾಗಿ ಒಂದು ಕಿವಿಗೆ ಸೀಮಿತವಾಗಿರುತ್ತದೆ ಮತ್ತು ತಾನಾಗಿಯೇ ಹೋಗುತ್ತದೆ. ಆದರೆ ಅದನ್ನು ನಿಭಾಯಿಸಲು ಯಾರಿಗಾದರೂ ತುಂಬಾ ಕಷ್ಟ ಆಗುತ್ತದೆ. ಯಾವುದೇ ರೀತಿಯ ಕಿವಿ ಸೋಂಕು, ನೋವು ಅಥವಾ ಊತ ಉಂಟು ಮಾಡುತ್ತದೆ. ಹಾಗಾಗಿ ಕಿವಿಯ ಆರೋಗ್ಯದ ಬಗ್ಗೆ ಗಮನ ಹರಿಸುವುದು ಮುಖ್ಯ.

ಮುಂದೆ ಓದಿ ...
  • Share this:

    ಚಳಿಗಾಲದಲ್ಲಿ (Winter) ವಿವಿಧ ಆರೋಗ್ಯ ಸಮಸ್ಯೆ (Health Problem) ಉಂಟಾಗುತ್ತವೆ. ಅವುಗಳಲ್ಲಿ ಕಿವಿ ನೋವು (Ear Pain) ಸಹ ಒಂದು. ಕಿವಿ ನೋವು ಎಷ್ಟು ಅಸಹನೀಯ ಮತ್ತು ಕೆಟ್ಟದಾಗಿರುತ್ತದೆ ಎಂಬುದು ಅನುಭವಿಸಿದವರಿಗೆ ಮಾತ್ರ ಗೊತ್ತು. ಕಿವಿ ನೋವು ನಿಮ್ಮನ್ನು ಪ್ರಕ್ಷುಬ್ಧಗೊಳಿಸುತ್ತದೆ. ಕಿವಿನೋವು ಸಾಮಾನ್ಯವಾಗಿ ಒಂದು ಕಿವಿಗೆ ಸೀಮಿತವಾಗಿರುತ್ತದೆ ಮತ್ತು ತಾನಾಗಿಯೇ ಹೋಗುತ್ತದೆ. ಆದರೆ ಅದನ್ನು ನಿಭಾಯಿಸಲು ಯಾರಿಗಾದರೂ ತುಂಬಾ ಕಷ್ಟ ಆಗುತ್ತದೆ. ಯಾವುದೇ ರೀತಿಯ ಕಿವಿ ಸೋಂಕು ಕಿವಿಯಲ್ಲಿ ನೋವು ಅಥವಾ ಊತ ಉಂಟು ಮಾಡುತ್ತದೆ. ಹಾಗಾಗಿ ಕಿವಿಯ ಆರೋಗ್ಯದ ಬಗ್ಗೆ ಗಮನ ಹರಿಸುವುದು ಮತ್ತು ನಿಮ್ಮ ಕಿವಿಗಳನ್ನು ನೋಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ.


    ಕಿವಿ ನೋವಿನ ಸಮಸ್ಯೆ


    ಡಾ. ಡಿಂಪಲ್ ಜಾಂಗ್ರಾ ಅವರು ತಮ್ಮ ಇನ್ಸ್ಟಾದಲ್ಲಿ ಚಳಿಗಾಲದಲ್ಲಿ ಕಿವಿಯ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಮತ್ತು ಕಿವಿ ನೋವು ಮತ್ತು ಉರಿಯೂತದಿಂದ ಪರಿಹಾರ ಪಡೆಯುವುದು ಹೇಗೆ ಅಂತಾ ಕೆಲವು ಪರಿಹಾರಗಳ ಕುರಿತು ಸಲಹೆ ಶೇರ್ ಮಾಡಿದ್ದಾರೆ.


    ಕಿವಿ ಸೋಂಕು ಎಂದರೇನು?


    ಕಿವಿಯಲ್ಲಿ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್ ಶೇಖರಣೆಯಾದಾಗ ಚಳಿಗಾಲದಲ್ಲಿ ಕಿವಿಯ ಸೋಂಕು ಉಂಟಾಗುತ್ತದೆ. ಕಿವಿಯ ಒಳ, ಮಧ್ಯ ಮತ್ತು ಹೊರ ಭಾಗಗಳಲ್ಲಿ ಇಯರ್‌ವಾಕ್ಸ್ ಸಂಗ್ರಹವಾದಾಗ ಇದು ಉಂಟಾಗುತ್ತದೆ.




    ಹೀಗಾಗಿ ಕಿವಿಯಲ್ಲಿ ನೋವು ಮತ್ತು ಊತ ಉಂಟಾಗುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಕಿವಿ ನೋವಿನಿಂದ ತ್ವರಿತ ಪರಿಹಾರ ಪಡೆಯಲು ಏನು ಮಾಡಬೇಕು ಅಂತಾ ತಿಳಿಯೋಣ.


    ತುಳಸಿ


    ಉರಿಯೂತ, ಉತ್ಕರ್ಷಣ ನಿರೋಧಕ, ಆಂಟಿಮೈಕ್ರೊಬಿಯಲ್ ಮತ್ತು ಇಮ್ಯುನೊಮಾಡ್ಯುಲೇಟರಿ ಗುಣಲಕ್ಷಣ ಸಮೃದ್ಧವಾಗಿರುವ ತುಳಸಿ ಕಿವಿ ನೋವು ಮತ್ತು ಸೋಂಕಿನಿಂದ ಪರಿಹಾರ ನೀಡುತ್ತದೆ. ಸ್ವಲ್ಪ ತುಳಸಿ ಎಲೆಗಳನ್ನು ಅರೆದು ಅದರ ರಸವನ್ನು ಶೋಧಿಸಿ ಕಿವಿಗೆ ಹಾಕಿ. ಒಂದರಿಂದ ಎರಡು ಹನಿ ಹಾಕಿದರೆ ನೋವು ನಿವಾರಣೆಯಾಗುತ್ತದೆ ಅಂತಾರೆ ಡಿಂಪಲ್


    ಲವಂಗದ ಎಣ್ಣೆ


    ಲವಂಗ ಎಣ್ಣೆ ನೋವು ನಿವಾರಕ ಮತ್ತು ಉರಿಯೂತ ನಿವಾರಕ ಗುಣ ಹೊಂದಿದೆ. ಒಂದು ಚಮಚ ಎಳ್ಳಿನ ಎಣ್ಣೆಯಲ್ಲಿ ಒಂದು ಲವಂಗವನ್ನು ಕುದಿಸಿ ಮತ್ತು ತಣ್ಣಗಾಗಲು ಬಿಡಿ. ಎಣ್ಣೆಯನ್ನು ಫಿಲ್ಟರ್ ಮಾಡಿ 2 ಹನಿ ಬೆಚ್ಚಗಿನ ಎಣ್ಣೆಯನ್ನು ಕಿವಿಗೆ ಹಾಕಿ.


    ಎಳ್ಳು ಅಥವಾ ಆಲಿವ್ ಎಣ್ಣೆ


    ಆಲಿವ್ ಎಣ್ಣೆಯು ಕಿವಿ ನೋವಿಗೆ ಪ್ರಯೋಜನಕಾರಿ. ಒಂದು ಟೀಚಮಚ ಆಲಿವ್ ಎಣ್ಣೆ ಬಿಸಿ ಮಾಡಿ ಮತ್ತು ತಣ್ಣಗಾದ ನಂತರ 2 ಹನಿ ಹಾಕಿ.


    ಟೀ ಟ್ರೀ ಆಯಿಲ್


    ಟೀ ಟ್ರೀ ಆಯಿಲ್ ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ, ನಂಜುನಿರೋಧಕ ಮತ್ತು ಉರಿಯೂತದ ಗುಣಲಕ್ಷಣ ಹೊಂದಿದೆ. ಇದು ಕಿವಿನೋವಿಗೆ ಪರಿಣಾಮಕಾರಿ ಮನೆಮದ್ದು. ಆಲಿವ್ ಎಣ್ಣೆ, ಎಳ್ಳಿನ ಎಣ್ಣೆ ಅಥವಾ ತೆಂಗಿನ ಎಣ್ಣೆ ಯಾವುದಾದ್ರೂ ಒಂದರಲ್ಲಿ ಎರಡು ಹನಿ ಟೀ ಟ್ರೀ ಎಣ್ಣೆ ಮಿಶ್ರಣ ಮಾಡಿ. ಎರಡು ಹನಿ ಕಿವಿಗೆ ಹಾಕಿ.


    ಕಿವಿಯ ಉರಿಯೂತ ಕಡಿಮೆ ಮಾಡಲು ಬೆಳ್ಳುಳ್ಳಿ


    ಬೆಳ್ಳುಳ್ಳಿ ಉರಿಯೂತದ ಗುಣಲಕ್ಷಣ ಹೊಂದಿದೆ. ದಟ್ಟಣೆ, ಉರಿ ನಿವಾರಿಸಲು ಮತ್ತು ಕಿವಿ ನೋವನ್ನು ಕಡಿಮೆ ಮಾಡುತ್ತದೆ. ಮೂರು ಎಸಳು ಬೆಳ್ಳುಳ್ಳಿ ಬಿಸಿ ಮಾಡಿ. ಚಿಟಿಕೆ ಉಪ್ಪು ಸೇರಿಸಿ. ಬಟ್ಟೆಯಲ್ಲಿ ಹಾಕಿ ನೋವಿರುವ ಕಿವಿಗೆ ಮಸಾಜ್ ಮಾಡಿ.


    ಇದನ್ನೂ ಓದಿ: ಯಕೃತ್ತಿನ ವೈಫಲ್ಯದ ಲಕ್ಷಣಗಳೇನು? ಯಕೃತ್ತನ್ನು ಬಲಪಡಿಸುವ ಪದಾರ್ಥಗಳು ಯಾವವು?


    ಶುಂಠಿ


    ಶುಂಠಿ ಕಿವಿಯ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಕಿವಿ ನೋವನ್ನು ಕಡಿಮೆ ಮಾಡುತ್ತದೆ. ಶುಂಠಿಯ ತುಂಡನ್ನು ತುರಿದು ಅದರ ರಸ ತೆಗೆದು ಫಿಲ್ಟರ್ ಮಾಡಿ ಮತ್ತು ಕಿವಿಯ ಸುತ್ತಲೂ ಅನ್ವಯಿಸಿ.

    Published by:renukadariyannavar
    First published: