• Home
 • »
 • News
 • »
 • lifestyle
 • »
 • Immunity Power: ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ಸೂಪರ್ ಪಾನೀಯ

Immunity Power: ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ಸೂಪರ್ ಪಾನೀಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Drink For Immunity Power: ಶುಂಠಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಲು ಮತ್ತು ಮಧುಮೇಹ, ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 • Share this:

ಚಳಿಗಾಲ (Winter) ಶುರುವಾಯಿತೆಂದರೆ ಸಾಕು ನಮ್ಮಲ್ಲಿ ಈ ಶೀತ, ಕೆಮ್ಮು, (Cold And Cough)  ಗ್ಯಾಸ್ಟ್ರಿಕ್ ಸಮಸ್ಯೆಗಳು ಮತ್ತು ತಲೆನೋವಿನಂತಹ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ. ಆದ್ದರಿಂದ, ಈ ಋತುವಿನಲ್ಲಿ ಪೌಷ್ಟಿಕ ಆಹಾರ ಮತ್ತು ಸಮತೋಲಿತ ಜೀವನಶೈಲಿಯನ್ನು (Lifestyle)  ಅನುಸರಿಸುವುದು ತುಂಬಾನೇ ಮುಖ್ಯವಾಗುತ್ತದೆ. ಆರೋಗ್ಯಕರ ಆಹಾರಗಳನ್ನು ಸೇವಿಸುವುದರ ಜೊತೆಗೆ, ನೀವು ಪ್ರತಿದಿನ ಬೆಳಿಗ್ಗೆ ಆರೋಗ್ಯಕರ ಆಯುರ್ವೇದ ಪಾನೀಯವನ್ನು ಸಹ ಕುಡಿಯಬೇಕು ಎಂದು ಆಯುರ್ವೇದ ತಜ್ಞ ಡಾ. ದಿಕ್ಷಾ ಭಾವ್ಸರ್ ಹೇಳುತ್ತಾರೆ.


ಏನಿದು ವಿಂಟರ್ ಡ್ರಿಂಕ್? ಚಳಿಗಾಲಕ್ಕೆ ಹೇಳಿ ಮಾಡಿಸಿದ ಪಾನೀಯ...


"ಕೂದಲು ಉದುರುವಿಕೆ, ಮೈಗ್ರೇನ್, ತೂಕ ಇಳಿಸುವಿಕೆ, ಹಾರ್ಮೋನುಗಳ ಸಮತೋಲನ, ಸಕ್ಕರೆ ಮಟ್ಟವನ್ನು ನಿರ್ವಹಿಸುವುದು, ಇನ್ಸುಲಿನ್ ಪ್ರತಿರೋಧ, ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಲು ಈ ಚಳಿಗಾಲದ ಪಾನೀಯದೊಂದಿಗೆ ನಿಮ್ಮ ಬೆಳಗ್ಗೆಯನ್ನು ಪ್ರಾರಂಭಿಸಿ" ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.


ಈ ಚಳಿಗಾಲದ ಬೆಳಗಿನ ಪಾನೀಯವನ್ನು ಮನೆಯಲ್ಲಿ ಹೇಗೆ ತಯಾರಿಸುವುದು?


ಬೇಕಾಗುವ ಸಾಮಗ್ರಿಗಳು:


- 2 ಲೋಟ ನೀರು (500 ಮಿಲಿ ಲೀಟರ್)


- 7-10 ಕರಿಬೇವಿನ ಎಲೆಗಳು


- 3 ಅಜ್ವೈನ್ ಎಲೆಗಳು


- 1 ಟೇಬಲ್ ಸ್ಪೂನ್ ಕೊತ್ತಂಬರಿ ಬೀಜಗಳು


- 1 ಟೀ ಸ್ಪೂನ್ ಜೀರಿಗೆ ಬೀಜಗಳು


- 1 ಪುಡಿ ಏಲಕ್ಕಿ


- 1 ಇಂಚಿನ ಶುಂಠಿ ಚೂರು


ಮಾಡುವ ವಿಧಾನ:


- ಮೇಲೆ ತಿಳಿಸಿದ ಎಲ್ಲಾ ಮಸಾಲೆ ಪದಾರ್ಥಗಳನ್ನು ನೀರಿಗೆ ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿರಿ.


- ಆ ಮಿಶ್ರಣವನ್ನು ಕುದಿಸಿದ ನಂತರ ಅದನ್ನು ಸೋಸಿ ಮತ್ತು ನಿಮ್ಮ ಚಳಿಗಾಲದ ಬೆಳಗಿನ ಪಾನೀಯವು ಸಿದ್ಧವಾಗಿರುತ್ತದೆ.


- ಇದರಲ್ಲಿ ಕೇವಲ 100 ಮಿಲಿ ಲೀಟರ್ ನಷ್ಟು ಪಾನೀಯವನ್ನು ಕುಡಿದರೆ ಸಾಕು. ತೂಕ ಇಳಿಸಿಕೊಳ್ಳಲು, ಅದರಲ್ಲಿ ಅರ್ಧ ನಿಂಬೆಹಣ್ಣನ್ನು ಸೇರಿಸಿಕೊಳ್ಳಿ ಎಂದು ತಜ್ಞರು ಹೇಳಿದರು.


ಈ ಪಾನೀಯವನ್ನು ತಯಾರಿಸಲು ಬಳಸುವ ಪದಾರ್ಥಗಳ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿ.


 • ಕರಿಬೇವಿನ ಎಲೆಗಳು ಕೂದಲು ಉದುರುವಿಕೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹಿಮೋಗ್ಲೋಬಿನ್ ಅನ್ನು ಸುಧಾರಿಸುತ್ತದೆ ಮತ್ತು ತೂಕ ಕಡಿಮೆ ಮಾಡಿಕೊಳ್ಳುವುದಕ್ಕೂ ಸಹ ಸಹಾಯ ಮಾಡುತ್ತದೆ.

 • ಅಜ್ವೈನ್, ಹೊಟ್ಟೆ ಉಬ್ಬರ, ಅಜೀರ್ಣ, ಕೆಮ್ಮು, ಶೀತ, ಮಧುಮೇಹ, ಅಸ್ತಮಾ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ


ಇದನ್ನೂ ಓದಿ: ಸಂತಾನೋತ್ಪತ್ತಿ ಮೇಲೆ ಪ್ರಭಾವ ಬೀರುತ್ತಂತೆ ದಂಪತಿ ವಯಸ್ಸು! ತಜ್ಞರು ಹೇಳೋದೇನು?
 • ಸಕ್ಕರೆ ನಿಯಂತ್ರಣ, ಕೊಬ್ಬು ನಷ್ಟ, ಆಮ್ಲೀಯತೆ, ಮೈಗ್ರೇನ್, ಕೊಲೆಸ್ಟ್ರಾಲ್ ಮತ್ತು ಹೆಚ್ಚಿನವುಗಳಿಗೆ ಜೀರಿಗೆ ಬೀಜಗಳು ಉತ್ತಮ ಎಂದು ಡಾ.ಡಿಕ್ಸಾ ಹೇಳಿದರು.

 • ಏಲಕ್ಕಿಯು ಉತ್ಕರ್ಷಣ ನಿರೋಧಕಗಳಾಗಿರುವುದರಿಂದ ವಾಕರಿಕೆ, ಮೈಗ್ರೇನ್, ಅಧಿಕ ರಕ್ತದೊತ್ತಡ ಮತ್ತು ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ತುಂಬಾನೇ ಒಳ್ಳೆಯದು ಎಂದು ಆಯುರ್ವೇದ ತಜ್ಞರು ಉಲ್ಲೇಖಿಸಿದ್ದಾರೆ.

 • ಶುಂಠಿಯು ಚಳಿಗಾಲದ ಎಲ್ಲಾ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಅಜೀರ್ಣ, ಅನಿಲ, ಹಸಿವಾಗದಿರುವುದು ಮತ್ತು ತೂಕ ಇಳಿಸುವದಕ್ಕೆ ಸಹ ಸಹಾಯ ಮಾಡುತ್ತದೆ ಎಂದು ಅವರು ವಿವರಿಸಿದರು.


ಆರೋಗ್ಯವಾಗಿರಲು, ನಿಮ್ಮ ಸಾಮಾನ್ಯ ಚಾಯ್ ಗೆ ಪರ್ಯಾಯವಾಗಿ ಪ್ರತಿದಿನ ಬೆಳಿಗ್ಗೆ ಈ ಮಿಶ್ರಣವನ್ನು ಸೇವಿಸಲು ಅವರು ಸಲಹೆ ನೀಡಿದ್ದಾರೆ.


ಕರ್ಮ ಆಯುರ್ವೇದದ ಸ್ಥಾಪಕ ಡಾ.ಪುನೀತ್ ಮಾತನಾಡಿ, ಈ ಸರಳ ಪದಾರ್ಥಗಳನ್ನು ಸಾಮಾನ್ಯವಾಗಿ ದೈನಂದಿನ ಜೀವನದಲ್ಲಿ ಬಳಸಲಾಗುತ್ತದೆ ಆದರೆ ಸಂಭಾವ್ಯ ಪ್ರಯೋಜನಕಾರಿ ಪರಿಣಾಮಗಳನ್ನು ಹೊಂದಿರುತ್ತದೆ ಎಂದು ಹೇಳುತ್ತಾರೆ.


ಈ ಪಾನೀಯವನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ?


ಈ ಪಾನೀಯವು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ, ಇದು ಅಂತಿಮವಾಗಿ ತೂಕ ಇಳಿಕೆಗೆ  ಕಾರಣವಾಗುತ್ತದೆ. "ಉದಾಹರಣೆಗೆ, ಅಜ್ವೈನ್ ಆಮ್ಲೀಯತೆಗೆ ಚಿಕಿತ್ಸೆ ನೀಡುತ್ತದೆ ಮತ್ತು ಹೊಟ್ಟೆಯುಬ್ಬರಿಕೆಯನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ: ನೀವು ಯೋಗಾಸನ ಮಾಡುವಾಗ ಈ 7 ತಪ್ಪುಗಳನ್ನು ಮಾಡ್ಲೇಬೇಡಿ


ಶುಂಠಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಲು ಮತ್ತು ಮಧುಮೇಹ, ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಲಕ್ಕಿಯು ಅದರ ಪರಿಮಳದ ಜೊತೆಗೆ, ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ" ಎಂದು ವೈದ್ಯೆ ದಿಕ್ಷಾ ಹೇಳುತ್ತಾರೆ.

Published by:Sandhya M
First published: