ಸಾಮಾನ್ಯವಾಗಿ ಚಳಿಗಾಲದಲ್ಲಿ (Winter) ಜನರ ದೇಹದ ತೂಕ (Weight) ಬೇರೆ ಋತುಮಾನಗಳಿಗಿಂತ ಸ್ವಲ್ಪ ಹೆಚ್ಚಾಗುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ, ಚಳಿ ಆಗ್ತಾ ಇದೆ ಅಂತ ದೇಹವನ್ನು ಬಿಸಿಯಾಗಿಟ್ಟುಕೊಳ್ಳಲು ಬಿಸಿ ಬಿಸಿಯಾದ ತಿಂಡಿ (Food) ಮತ್ತು ಆಹಾರ ಹಾಗೆಯೇ ನಮ್ಮ ಹೊಟ್ಟೆ ಸೇರುತ್ತಿರುತ್ತದೆ ಅಂತ ಹೇಳಬಹುದು. ಹೀಗಾಗಿ ಚಳಿಗಾಲದಲ್ಲಿ ಜನರ ದೇಹದ ತೂಕ ಹೆಚ್ಚಾಗುವುದು ಬಹುತೇಕರಿಗೆ ತಿಳಿದಿರುವ ವಿಚಾರವೇ ಆಗಿದೆ. ಈ ಕೊರೆಯುವ ಚಳಿಯಲ್ಲಿ ನಾವು ಬಿಸಿ ಬಿಸಿ ಆಹಾರವನ್ನು ಸೇವಿಸುವುದನ್ನು ಬಿಡುವುದಿಲ್ಲ ಮತ್ತು ಹೀಗಾಗಿ ದೇಹದ ತೂಕ ಮತ್ತು ಹೊಟ್ಟೆ ಭಾಗದಲ್ಲಿ ಅತಿಯಾದ ಬೊಜ್ಜು ಸಹ ಸಂಗ್ರಹವಾಗುತ್ತದೆ ಅಂತ ಹೇಳಬಹುದು. ಹೀಗಾದಾಗ ‘ಏನಪ್ಪಾ ಮಾಡೋದು, ಚಳಿಗಾಲದಲ್ಲಿ ತುಂಬಾನೇ ತೂಕ ಜಾಸ್ತಿ ಆಯ್ತಲ್ಲಾ’ ಅಂತ ಬೇಸರ ಮಾಡಿಕೊಳ್ಳುವ ಜನರಿಗೆ ಇಲ್ಲಿದೆ ಒಂದು ಒಳ್ಳೆಯ ಸುದ್ದಿ.
ಹೌದು., ಚಳಿಗಾಲದಲ್ಲಿ ನಿಮ್ಮ ದೇಹದ ತೂಕ ಹೆಚ್ಚಳವನ್ನು ನಿಭಾಯಿಸಲು ಅನೇಕ ಮಾರ್ಗಗಳಿವೆ ಮತ್ತು ನಾವು ನಿಮಗಾಗಿ ಸುಲಭವಾದ ಪರಿಹಾರಗಳನ್ನು ಇಲ್ಲಿ ತಂದಿದ್ದೇವೆ.
ಡಿಟಾಕ್ಸ್ ಪಾನೀಯದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದು ಹಿಂದಿನ ದಿನ ನೀವು ಗಳಿಸಿದ ಕೊಬ್ಬನ್ನು ಸುಡುತ್ತದೆ ಮತ್ತು ಪ್ರಸ್ತುತ ದಿನಕ್ಕೆ ಚಯಾಪಚಯ ಕ್ರಿಯೆಯನ್ನು ಪುನರುಜ್ಜೀವನಗೊಳಿಸುತ್ತದೆ.
ಡಯಟಿಷಿಯನ್ ಅಂಬಿಕಾ ದಾಂಡೋನಾ ಕೆಲವು ಡಿಟಾಕ್ಸ್ ಪಾನೀಯಗಳ ಆಯ್ಕೆಗಳನ್ನು ಸೂಚಿಸಿದ್ದಾರೆ ನೋಡಿ, ಇವುಗಳು ಚಳಿಗಾಲದಲ್ಲಿ ನಿಮ್ಮ ದೇಹದ ತೂಕವನ್ನು ಸಾಧ್ಯವಾದಷ್ಟು ಬೇಗ ಇಳಿಸಲು ನಿಮಗೆ ಸಹಾಯ ಮಾಡುತ್ತವೆ.
ದೇಹದ ತೂಕವನ್ನು ಮತ್ತು ಹೊಟ್ಟೆಯಲ್ಲಿನ ಕೊಬ್ಬನ್ನು ಕರಗಿಸುತ್ತೆ ಈ 4 ಡಿಟಾಕ್ಸ್ ಪಾನೀಯಗಳು
1. ಶುಂಠಿ ಮತ್ತು ಪುದೀನಾ ನೀರು
ಶುಂಠಿಯು ವಿಶೇಷವಾಗಿ ಚಳಿಗಾಲದಲ್ಲಿ ನಮಗೆ ನೀಡುವ ವಿವಿಧ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆ ಗೊತ್ತೇ ಇದೆ. ಅವುಗಳಲ್ಲಿ ತೂಕ ನಷ್ಟವೂ ಒಂದು ಆಗಿದೆ. ಶುಂಠಿಯನ್ನು ಪುದೀನಾದೊಂದಿಗೆ ಸಂಯೋಜಿಸುವ ಮೂಲಕ ನೀವು ಈ ಕೊಬ್ಬನ್ನು ಬರ್ನ್ ಮಾಡುವ ಪಾನೀಯವನ್ನು ಪಡೆಯುತ್ತೀರಿ.
ಇದನ್ನೂ ಓದಿ: ಚಳಿಗಾಲದಲ್ಲಿ ಪ್ರತಿದಿನ ಸ್ನಾನ ಮಾಡೋದು ಒಳ್ಳೆಯದಾ? ತಜ್ಞರು ಹೇಳೋದೇನು?
ಒಂದು ಲೋಟ ನೀರಿಗೆ ಒಂದು ಸಣ್ಣ ತುಂಡು ಶುಂಠಿಯನ್ನು ಸೇರಿಸಿ. ಕೆಲವು ಪುದೀನಾ ಎಲೆಗಳನ್ನು ಸೇರಿಸಿ ಮತ್ತು ಕೆಲವು ಗಂಟೆಗಳ ಕಾಲ ಬಿಡಿ. ಮುಂಜಾನೆ ಈ ನೀರನ್ನು ಕುಡಿಯಿರಿ.
2. ಗ್ರೀನ್ ಟೀ ಮತ್ತು ನಿಂಬೆಹಣ್ಣು
ನೀವು ತಿನ್ನುವ ಆಹಾರವನ್ನು ಜೀರ್ಣಿಸಿಕೊಳ್ಳಲು ಮತ್ತು ಸ್ವಲ್ಪ ತೂಕ ಇಳಿಸುವ ನಿರೀಕ್ಷೆಯಲ್ಲಿ ಪ್ರತಿದಿನ ಬೆಚ್ಚಗಿನ ಗ್ರೀನ್ ಟೀ ಯನ್ನು ಕುಡಿಯುತ್ತಿರಬಹುದು.
ಅದಕ್ಕೆ ನಿಂಬೆಹಣ್ಣನ್ನು ಸೇರಿಸುವ ಮೂಲಕ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸಿ. ನಿಂಬೆಹಣ್ಣು ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ಗ್ರೀನ್ ಟೀ ಯ ತೂಕ ಇಳಿಸುವ ಗುಣಲಕ್ಷಣಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ.
3. ಜೀರಿಗೆ ನೀರು
ಜೀರಿಗೆ ನೀರಿನ ಸರಳ ಪಾನೀಯವು ನಿಮ್ಮ ತೂಕವನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಲೋಟ ನೀರಿಗೆ ಎರಡು ಟೇಬಲ್ ಸ್ಪೂನ್ ಜೀರಿಗೆಯನ್ನು ಸೇರಿಸಿ ಮತ್ತು ರಾತ್ರಿಯಿಡೀ ಹಾಗೆ ಬಿಡಿ.
ಮರುದಿನ ಬೆಳಗ್ಗೆ, ನೀವು ಎದ್ದಾಗ, ಆ ನೀರನ್ನು ಸೋಸಿ, ಒಂದು ಚಮಚ ನಿಂಬೆ ರಸವನ್ನು ಅದಕ್ಕೆ ಸೇರಿಸಿಕೊಂಡು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಈ ಡಿಟಾಕ್ಸ್ ನೀರು ಹೆಚ್ಚುವರಿ ಕ್ಯಾಲೋರಿಗಳೊಂದಿಗೆ ದೇಹದಲ್ಲಿರುವ ವಿಷವನ್ನು ಸಹ ಹೊರ ಹಾಕುತ್ತದೆ.
ಇದನ್ನೂ ಓದಿ:ಈ ಪದಾರ್ಥಗಳನ್ನು ಅಪ್ಪಿತಪ್ಪಿಯೂ ಮೊಸರಿನೊಂದಿಗೆ ತಿನ್ನಬೇಡಿ!
4. ಮೆಂತ್ಯೆ ಬೀಜದ ನೀರು
ಡೈಟಿಷಿಯನ್ ಅಂಬಿಕಾ ದಂಡೋನಾ ಅವರು ತೂಕ ಇಳಿಸಿಕೊಳ್ಳಲು ಮೆಂತ್ಯೆ ಬೀಜದ ನೀರು ಸೂಕ್ತವಾದ ಡಿಟಾಕ್ಸ್ ಪಾನೀಯವಾಗಿದೆ ಅಂತ ಹೇಳುತ್ತಾರೆ. ಈ ಪಾನೀಯವು ಮಧುಮೇಹಕ್ಕೂ ಉತ್ತಮವಾಗಿದೆ ಅಂತ ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ