Weight Loss : ಚಳಿಗಾಲದಲ್ಲಿ ಸೋಮಾರಿತನ ಕಾಡ್ತಾ ಇದ್ರೆ ಈ 5 ಟ್ರಿಕ್ಸ್ ಫಾಲೋ ಮಾಡಿ ತೂಕ ಇಳಿಸಿ

ಚಳಿಗಾಲ

ಚಳಿಗಾಲ

Weight Loss Tricks : ಸಾಮಾನ್ಯವಾಗಿ ಶೀತದ ಕಾಲದಲ್ಲಿ ಜನರು ಬೆಚ್ಚಗಿನ ನೀರನ್ನು ಕುಡಿಯಲು ಬಯಸುತ್ತಾರೆ. ಆದ್ರೆ ನೀವು ಚಳಿಗಾಲದಲ್ಲಿ ತೂಕ ಕಳೆದುಕೊಳ್ಳಲು ಬಯಸುತ್ತಿದ್ದು, ಸೋಮಾರಿ ಯಾಗಿದ್ದರೆ, ತೂಕ ಇಳಿಕೆಗಾಗಿ ತಣ್ಣೀರು ಕುಡಿಯುವುದು ಉತ್ತಮ.

 • Share this:

  ಚಳಿಗಾಲ (Winter)ಬಂತು ಅಂದ್ರೆ ಬೆಳಿಗ್ಗೆ(Morning) ಏಳೋಕೂ ಸೋಮಾರಿತನ...(laziness) ಮಲಗಿದಲ್ಲಿಗೇ ಯಾರಾದ್ರೂ ಬಿಸಿ(Hot) ಬಿಸಿಯಾಗಿ ಕಾಫಿ(Coffee) ಮಾಡಿ ತಂದುಕೊಟ್ಟರೆ ಸ್ವರ್ಗವೇ(Heaven) ಧರೆಗಿಳಿದ ಅನುಭವ. ಸ್ವಲ್ಪ ಥಂಡಿ ಗಾಳಿ, ಸೂರ್ಯನ(Sun) ಬೆಚ್ಚನೆ ಕಿರಣ(Sun light) ಕಚಗುಳಿ ಇಡ್ತಾ ಇದ್ದರೆ ಬೆಚ್ಚಗೆ ಬೆಡ್ಶೀಟ್(Bed Sheet) ಹೊಲಿಸಿಕೊಂಡು ಇನ್ನು ಸ್ವಲ್ಪ ಹೊತ್ತು ನಿದ್ರೆ(Sleep) ಮಾಡಬೇಕು ಎನ್ನುವ ಬಯಕೆ ಎಲ್ಲರಲ್ಲೂ ಕಾಡುತ್ತೆ.. ಬೇರೆ ಸಮಯದಲ್ಲಿ ವ್ಯಾಯಾಮ(exercise) ಫಿಟ್ನೆಸ್(Fitness) ಜಿಮ್(Gym) ವಾಕಿಂಗ್ (Walking)ಎಂದು ಓಡುತ್ತಿದ್ದವರು ಸೂರ್ಯನ ಕಿರಣಗಳು ಮೈ ತಾಕುವವರೆಗೂ ಮಲಗಿ ನಿದ್ರಿಸಲು ಇಚ್ಛೆ ಪಡುತ್ತಾರೆ.. ಹೀಗಾಗಿ ದೈಹಿಕ ಚಟುವಟಿಕೆಗಳು ಎಂಬುದು ಇಲ್ಲವೇ ಇಲ್ಲ..ಅದ್ರಲ್ಲೂ ವ್ಯಾಯಾಮ ಎಂಬುದು ಮರೀಚಿಕೆಯೇ ಸರಿ..ಇದ್ರಿಂದ ನಮ್ಮ ದಿನಚರಿ ಏರುಪೇರಾಗಿ ನಮ್ಮ ಆರೋಗ್ಯವ ಜೊತೆಗೆ ನಿಮ್ಮ ಮೂಡನ್ನು ಹಾಳು ಮಾಡಬಹುದು.ಹೀಗಾಗಿ ಚಳಿಗಾಲದಲ್ಲಿ ಸೋಮಾರಿತನ ಅನುಭವಿಸುತ್ತಿರುವವರು ಆಲಸ್ಯದ ನಡುವೆಯೂ ಈ 5 ರೀತಿಯ ಟ್ರಿಕ್ಸ್ ಮಾಡಿ ದೇಹವನ್ನ ಆರೋಗ್ಯಯುತವಾಗಿ ಇಟ್ಟುಕೊಳ್ಳಬಹುದು.


  1) ಹೆಚ್ಚು ನಡುಗುವುದು


  ಚಳಿಗಾಲದಲ್ಲಿ ಹೆಚ್ಚು ನಡುಗುತ್ತಿವೆ ಎಂಬ ಕಾರಣಕ್ಕೆ ಬೆಚ್ಚನೆಯ ಉಡುಪು ಧರಿಸದೆ ಮನೆಯಿಂದ ಹೊರಗೆ ಹೋಗುವುದೇ ಇಲ್ಲ..ಸೂರ್ಯನ ಬಿಸಿಲು ಪ್ರಕಾಶಮಾನವಾಗಿ ಬೀಳುವವರೆಗೂ ಹಾಸಿಗೆ ಬಿಟ್ಟು ಹೇಳುವುದಿಲ್ಲ.. ಆದರೆ ಅಧ್ಯಯನಗಳ ಪ್ರಕಾರ ಬೆಳಿಗ್ಗೆ ಅಥವಾ ಸಂಜೆ ಚಳಿಗಾಲದಲ್ಲಿ 10 ರಿಂದ 15 ನಿಮಿಷಗಳ ಕಾಲ ನಡುಗುವುದು ಒಂದು ಗಂಟೆಯ ಮೌಲ್ಯದ ಮಧ್ಯಮ ವ್ಯಾಯಾಮದಷ್ಟು ಕ್ಯಾಲೊರಿಗಳನ್ನು ಸುಡುತ್ತದೆ. ಇದು ಮಾತ್ರವಲ್ಲದೆ ನಿಮ್ಮ ಸ್ನಾಯುಗಳನ್ನು ಸಂಕೋಚನಗೊಳಿಸುತ್ತದೆ.


  ಇದನ್ನೂ ಓದಿ :ತೂಕ ಇಳಿಸೋಕೆ ರೆಡ್​ ವೈನ್​ ಕುಡಿಬೇಕಂತೆ -ಆಶ್ಚರ್ಯವಾದ್ರೂ ಸತ್ಯ


  2) ಸಮಯಕ್ಕೆ ಸರಿಯಾಗಿ ಆಹಾರ ಸೇವನೆ


  ಚಳಿಗಾಲವು ನಮ್ಮನ್ನು ಹೆಚ್ಚು ತಿನ್ನುವಂತೆ ಮಾಡುತ್ತದೆ ಎಂದು ಸಾಬೀತಾಗಿದೆ. ತಣ್ಣನೆಯ ಉಷ್ಣತೆಯು ದೇಹವನ್ನು ಬೆಚ್ಚಗಾಗಲು ನಮ್ಮ ದೈನಂದಿನ ಕ್ಯಾಲೋರಿ ಅಗತ್ಯಗಳನ್ನು ಹೆಚ್ಚಿಸುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ಆರೋಗ್ಯಕರ ಮತ್ತು ಫೈಬರ್ ನಿಂದ ಕೂಡಿದ ಆಹಾರವನ್ನು ಸೇವನೆ ಮಾಡುವುದು. ಫೈಬರ್ ಹೊಟ್ಟೆಯನ್ನುತುಂಬಿಸಿ, ಸಿಕ್ಕಿದ್ದನ್ನೆಲ್ಲಾ ತಿನ್ನುವ ಪ್ರಮಾಣವನ್ನು ಕಡಿಮೆ ಮಾಡುತ್ತದೆ..


  3)ತಣ್ಣೀರು ಕುಡಿಯುವುದು :


  ಸಾಮಾನ್ಯವಾಗಿ ಶೀತದ ಕಾಲದಲ್ಲಿ ಜನರು ಬೆಚ್ಚಗಿನ ನೀರನ್ನು ಕುಡಿಯಲು ಬಯಸುತ್ತಾರೆ. ಆದ್ರೆ ನೀವು ಚಳಿಗಾಲದಲ್ಲಿ ತೂಕ ಕಳೆದುಕೊಳ್ಳಲು ಬಯಸುತ್ತಿದ್ದು, ಸೋಮಾರಿ ಯಾಗಿದ್ದರೆ, ತೂಕ ಇಳಿಕೆಗಾಗಿ ತಣ್ಣೀರು ಕುಡಿಯುವುದು ಉತ್ತಮ.. ನಮ್ಮ ದೇಹದ ಉಷ್ಣತೆಗಿಂತ ಕಡಿಮೆ ಪ್ರಮಾಣದ ತಣ್ಣನೆ ದ್ರವವನ್ನು ಸೇವನೆ ಮಾಡುವುದರಿಂದ ಅದು ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ


  4) ಹರ್ಬಲ್ ಟೀ ಹಾಗೂ ಬ್ಲಾಕ್ ಕಾಫಿ ಸೇವನೆ


  ಸಕ್ಕರೆ ಮತ್ತು ಹಾಲು ತುಂಬಿದ ನಿಮ್ಮ ಸಾಮಾನ್ಯ ಕಾಫಿ ಮತ್ತು ಚಹಾದ ಬದಲಿಗೆ ಗಿಡಮೂಲಿಕೆ ಚಹಾ ಮತ್ತು ಕಪ್ಪು ಕಾಫಿ, ಊಲಾಂಗ್ ಟೀ, ದಾಸವಾಳ ಚಹಾ, ಕಪ್ಪು ಚಹಾ ಸೇವನೆಯ ಮಾಡುವುದು ಚಳಿಗಾಲದಲ್ಲಿ ಉತ್ತಮ. ಹರ್ಬಲ್ ಟೀ ಹಾಗೂ ಬ್ಲಾಕ್ ಕಾಫಿ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ಚಯಾಪಚಯಾ ಕ್ರಿಯೆಯನ್ನು ವೇಗ ಗೊಳಿಸಿ, ಕೊಬ್ಬು ಕರಗಲು ಸಹಾಯ ಮಾಡುತ್ತದೆ.


  ಇದನ್ನೂ ಓದಿ :ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ತಿನ್ನಬೇಡಿ, ಎಚ್ಚರ!


  5) ಹೆಚ್ಚು ಮನೆಗೆಲಸದಲ್ಲಿ ತೊಡಗಿಸಿಕೊಳ್ಳಿ


  ಸೋಮಾರಿಗಳ ಕಾಲವಾಗಿರುವ ಚಳಿಗಾಲದಲ್ಲಿ ಯಾವುದರ ಮೇಲೆ ಅಷ್ಟಾಗಿ ಆಸಕ್ತಿ ಇರುವುದಿಲ್ಲ. ಹೀಗಾಗಿ ವ್ಯಾಯಾಮ ಮಾಡುವುದಿರಲಿ ಮನೆಗೆಲಸ ಮಾಡುವುದರಲ್ಲೂ ಅಷ್ಟಾಗಿ ಆಸಕ್ತಿ ಇರುವುದಿಲ್ಲ.. ಆದರೆ ಚಳಿಗಾಲದಲ್ಲಿ ಮನೆಕೆಲಸಗಳಾದ ಶುಚಿಗೊಳಿಸುವಿಕೆ, ತೊಳೆಯುವುದು, ಒರೆಸುವುದು, ತೋಟಗಾರಿಕೆ ಇತರೆ ಮನೆಗೆಲಸದಲ್ಲಿ ತೊಡಗಿಕೊಳ್ಳುವುದರಿಂದ 30 ನಿಮಿಷಗಳಷ್ಟು ವ್ಯಾಯಾಮ ಮಾಡಿದಂತೆ ಆಗಿರುತ್ತದೆ..

  Published by:ranjumbkgowda1 ranjumbkgowda1
  First published: