ತೆರಿಗೆ ರಹಿತ ಬಡ್ಡಿಯ ಹಣಕ್ಕಾಗಿ EPF ಹಾಗೇ ಬಿಟ್ಟರೆ ನಿಮ್ಮ ಖಾತೆ ನಿಷ್ಕ್ರಿಯವಾಗುವುದು ಗ್ಯಾರಂಟಿ..!

ನೀವು ಕೆಲಸ ಬಿಟ್ಟ ನಂತರವೂ ನಿಮ್ಮ ಖಾತೆಯಲ್ಲಿ ತೆರಿಗೆ ಮುಕ್ತ ಬಡ್ಡಿ ಹಣವನ್ನು ನಿರೀಕ್ಷಿಸಬಹುದೇ? ಹಾಗಾದರೆ ಇಪಿಎಫ್ ಯಾವಾಗ ವಿತ್ ಡ್ರಾ ಮಾಡಬಹುದು..? ಇದೆಲ್ಲದರ ವಿವಿರ ಇಲ್ಲಿದೆ ಗಮನಿಸಿ.

EPF

EPF

  • Share this:
ನೀವು ನಿಮ್ಮ ಕೆಲಸವನ್ನು ಬಿಟ್ಟಿದ್ದೀರಾ? ಹೊಸ ಉದ್ಯಮವನ್ನು ಆರಂಭಿಸುವ ನಿರೀಕ್ಷೆಯಲ್ಲಿದ್ದೀರಾ? ಅಥವಾ ಹೊಸ ಸಂಸ್ಥೆಗೆ ಕೆಲಸಕ್ಕೆ ಸೇರಿಕೊಂಡಿದ್ದೀರಾ? ಹಾಗಿದ್ದರೆ ನೀವು ಮಾಡಬೇಕಾದ ಬಹು ಮುಖ್ಯವಾದ ಕೆಲಸವೊಂದಿದೆ. ನಿಮ್ಮ ಇಪಿಎಫ್ ಅನ್ನು ಕೂಡಲೇ ನಿಮ್ಮ ಹೊಸ ಕಂಪನಿಗೆ ವರ್ಗಾಯಿಸಿಕೊಳ್ಳಿ. 58 ವರ್ಷ ವಯಸ್ಸಿನವರೆಗೆ ತೆರಿಗೆ ಮುಕ್ತ ಬಡ್ಡಿಯನ್ನು ಪಡೆಯಲು ಕೆಲವರು ಇಪಿಎಫ್ ಅನ್ನು ವರ್ಗಾಯಿಸುವುದಿಲ್ಲ. ಜೊತೆಗೆ ವಿತ್ ಡ್ರಾ ಕೂಡ ಮಾಡುವುದಿಲ್ಲ. ಆದರೆ ನೀವು ಕೆಲಸ ಬಿಟ್ಟ ನಂತರವೂ ನಿಮ್ಮ ಖಾತೆಯಲ್ಲಿ ತೆರಿಗೆ ಮುಕ್ತ ಬಡ್ಡಿ ಹಣವನ್ನು ನಿರೀಕ್ಷಿಸಬಹುದೇ? ಹಾಗಾದರೆ ಇಪಿಎಫ್ ಯಾವಾಗ ವಿತ್ ಡ್ರಾ ಮಾಡಬಹುದು..? ಇದೆಲ್ಲದರ ವಿವಿರ ಇಲ್ಲಿದೆ ಗಮನಿಸಿ.

ನಿಮಗೆ ಈ ವಿಷಯ ತಿಳಿದಿರಲಿ

ನೀವು ಉದ್ಯೋಗ ತೊರೆದ ನಂತರವೂ 58 ವರ್ಷ ವಯಸ್ಸಿನವರೆಗೆ ನಿಮ್ಮ ಇಪಿಎಫ್ ಖಾತೆಯಲ್ಲಿ ಹೊಸದಾಗಿ ಹಣವನ್ನು ಸೇರಿಸದಿದ್ದರೂ ಸಹ ನಿಮ್ಮ ಇಪಿಎಫ್ ಬಡ್ಡಿ ಗಳಿಸುವುದನ್ನು ಮುಂದುವರಿಸುತ್ತದೆ. ನಿಮ್ಮ ನಿವೃತ್ತಿಯ ವಯಸ್ಸಿನವರೆಗೂ ಯಾವುದೇ ತೆರಿಗೆ ಬೀಳುವುದಿಲ್ಲ.

58 ವರ್ಷ ವಯಸ್ಸಿನ ಬಳಿಕ ತೆರಿಗೆ ಬಗ್ಗೆ ನೀವು ಯೋಚಿಸಲೇಬೇಕು..!

ನಿಮ್ಮ ನಿವೃತ್ತಿಯ ವಯಸ್ಸಿನ ಒಳಗಿನವರೆಗೆ ಉಳಿತಾಯ ಮಾಡಿರುವ ಇಪಿಎಫ್ ಹಣಕ್ಕೆ ಯಾವುದೇ ಬಡ್ಡಿ ಬೀಳುವುದಿಲ್ಲ. ಆದರೆ 58 ರ ವಯಸ್ಸಿನ ನಂತರ ನಿಮ್ಮ ರಾಜೀನಾಮೇ, ಇಲ್ಲವೇ ನಿವೃತ್ತಿ ನಂತರ ನಿಮ್ಮ ಇಪಿಎಫ್ ಮೇಲೆ ಕಾನೂನಿನ ಪ್ರಕಾರ ತೆರಿಗೆ ಬೀಳುತ್ತದೆ.

ಇಪಿಎಫ್ ಖಾತೆಯು ನಿಷ್ಕ್ರಿಯಗೊಳ್ಳುತ್ತದೆ

ನೀವು 58 ವರ್ಷಕ್ಕಿಂತ ಮೊದಲು ನಿವೃತ್ತಿಯನ್ನು ಪಡೆದುಕೊಂಡರೆ. ನೀವು ಅರ್ಜಿ ಸಲ್ಲಿಸಲು ಅರ್ಹರಾದ ದಿನಾಂಕದಿಂದ 36 ತಿಂಗಳೊಳಗೆ ನಿಮ್ಮ ಈ ಇಪಿಎಫ್ ವಾಪಸ್ ಪಡೆಯಲು ಅರ್ಜಿ ಸಲ್ಲಿಸದಿದ್ದರೆ ನಿಮ್ಮ ಇಪಿಎಫ್ ಖಾತೆಯು ನಿಷ್ಕ್ರಿಯಗೊಳ್ಳುತ್ತದೆ.

ಎರಡು ತಿಂಗಳಲ್ಲಿ ಹಣ ಪಡೆಯಲು ಅರ್ಹ

ನೀವು ಕೆಲಸ ಬಿಟ್ಟ ತಕ್ಷಣ ಎರಡು ತಿಂಗಳ ನಂತರ ಹಣ ಪಡೆಯಲು ನೀವು ಅರ್ಹರಾಗಿರುತ್ತೀರಿ. ಒಂದು ವೇಳೆ ನೀವು ಖಾತೆಯನ್ನು ವರ್ಗಾವಣೆ ಮಾಡಿಕೊಳ್ಳುವುದು, ಇಲ್ಲವೇ ವಿತ್ ಡ್ರಾ ಮಾಡಿಕೊಳ್ಳದಿದ್ದರೆ ನಿಮ್ಮ ಖಾತೆ ನಿಷ್ಕ್ರಿಯವಾಗುತ್ತದೆ.

ಹಾಗಾದರೆ ಯಾವ ಸಮಯದಲ್ಲಿ ಇಪಿಎಫ್ ಖಾತೆಯು ನಿಷ್ಕ್ರಿಯಗೊಳ್ಳುತ್ತದೆ?

1) 55 ವರ್ಷಗಳ ನಂತರ

ಒಬ್ಬ ಉದ್ಯೋಗಿಯು 55 ವರ್ಷಗಳ ನಂತರ ಸೇವೆಯಿಂದ ನಿವೃತ್ತರಾದರೆ, ನಿಮ್ಮ ಇಪಿಎಫ್ ಖಾತೆಯಲ್ಲಿ ತೆರಿಗೆ ರಹಿತ ಬಡ್ಡಿಯನ್ನು ನಿರೀಕ್ಷಿಸುವಂತಿಲ್ಲ. ಕೂಡಲೇ ಅದನ್ನು ವಿತ್ ಡ್ರಾ ಮಾಡಿಕೊಳ್ಳುವುದು ಉತ್ತಮ ಆಲೋಚನೆ. ಇಲ್ಲವಾದರೆ ನಿಮ್ಮ ಇಪಿಎಫ್ ಖಾತೆ ನಿಷ್ಕ್ರಿಯಗೊಳ್ಳುತ್ತದೆ.

2) ವಿದೇಶಕ್ಕೆ ವಲಸೆ

ಒಂದು ವೇಳೆ ಒಬ್ಬ ಉದ್ಯೋಗಿಯು ಶಾಶ್ವತವಾಗಿ ತಾನು ಕೆಲಸ ಮಾಡುತ್ತಿದ್ದ ಸ್ಥಳವನ್ನು ತೊರೆದು ಶಾಶ್ವತವಾಗಿ ವಿದೇಶಕ್ಕೆ ವಲಸೆ ಹೋದರೆ ಅವರ ಖಾತೆ ನಿಷ್ಕ್ರಿಯಗೊಳ್ಳುವುದು. ಆದ್ದರಿಂದ ಈ ಎಲ್ಲಾ ಇಪಿಎಫ್ ಸೆಟಲ್ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

3) ಉದ್ಯೋಗಿಯು ಮೃತಪಟ್ಟರೆ, ಆತನ ಇಪಿಎಫ್ ಖಾತೆ ನಿಷ್ಕ್ರಿಯಗೊಳ್ಳುವುದು.

4) ಅರ್ಜಿ ಸಲ್ಲಿಸಿ ಹಣ ಪಡೆದುಕೊಳ್ಳಲು ಮರೆಯಬೇಡಿ

ಕೆಲಸ ಬಿಟ್ಟು 36 ತಿಂಗಳೊಳಗೆ ನಿಮ್ಮ ಇಪಿಎಫ್ ವಾಪಸ್ ಪಡೆಯಲು ಅರ್ಜಿ ಸಲ್ಲಿಸದಿದ್ದರೆ ನಿಮ್ಮ ಇಪಿಎಫ್ ಖಾತೆಯೂ ನಿಷ್ಕ್ರಿಯಗೊಳ್ಳುತ್ತದೆ.

5) ಐದು ವರ್ಷಗಳು ಸಂಪೂರ್ಣ ಮಾಡಬೇಕು.

ಆದಾಯ ತೆರಿಗೆ ನಿಯಮಗಳಿಗೆ ಅನುಗುಣವಾಗಿ ಐದು ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸುವ ಮೊದಲು ಹಿಂತೆಗೆದುಕೊಂಡರೆ ಇಪಿಎಫ್ ಬ್ಯಾಲೆನ್ಸ್‌ನಲ್ಲಿ ಸಂಗ್ರಹವಾಗುವ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ.

6) ನಿರಂತರ ಸೇವೆ ಇರಲೇಬೇಕು

ಇಪಿಎಫ್ ಆರಂಭಿಕ ಐದು ವರ್ಷಗಳಲ್ಲಿ ಉದ್ಯೋಗಿ ಒಂದಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಆಗಾಗ ಬೇರೆ ಕೆಲಸಗಳಿಗೆ ವರ್ಗಾವಣೆಯಾದಾಗ ಇಪಿಎಫ್ ವರ್ಗಾವಣೆ ಮಾಡಿಸಿಕೊಂಡಿದ್ದರೆ ಅದು ನಿರಂತರ ಸೇವೆ ಎಂದು ಪರಿಗಣಿಸಲಾಗುತ್ತದೆ.

ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ತೆರಿಗೆ ರಹಿತ ಬಡ್ಡಿಯ ಆಸೆಗೆ 58 ವರ್ಷವಾದ ಬಳಿಕ ನೀವು ನಿಮ್ಮ ಇಪಿಎಫ್ ಖಾತೆಯನ್ನು ಹಾಗೇ ಬಿಡಬೇಡಿ. ಖಾತೆ ನಿಷ್ಕ್ರಿಯವಾಗಬಹುದು. ಆದ್ದರಿಂದ ನೀವು ಸಣ್ಣ ವಯಸ್ಸಿನಲ್ಲಿ ಉದ್ಯೋಗ ಆರಂಭಿಸಿದ್ದರೆ, ಆಗಾಗ ಕೆಲಸ ಬದಲಾಯಿಸುತ್ತಿದ್ದರೂ ನಿಮ್ಮ ಹೊಸ ಕಂಪನಿಗೆ ಇಪಿಎಫ್ ವರ್ಗಾಯಿಸಿಕೊಳ್ಳಿ. ಅಲ್ಲದೇ 58 ವರ್ಷದ ಸಮಯದಲ್ಲಿ ಇಪಿಎಫ್ ಹಣವನ್ನು ವಿತ್ ಡ್ರಾ ಮಾಡಿಕೊಳ್ಳುವುದು ಸೂಕ್ತ. ನಿಮ್ಮ ಕೆಲಸವನ್ನು ತೊರೆದ 36 ತಿಂಗಳೊಳಗೆ ನಿಮ್ಮ ಇಪಿಎಫ್ ಬಾಕಿ ಹಿಂಪಡೆಯಿರಿ.
First published: