World Kidney Day 2023: ಅತಿಯಾದ ಉಪ್ಪು ತಿಂದ್ರೆ ಕಿಡ್ನಿ ಸಮಸ್ಯೆಗೆ ಕಾರಣವೇ? ಇಲ್ಲಿದೆ ಉತ್ತರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉಪ್ಪು ತಿನ್ನುವುದರಿಂದ ಕಿಡ್ನಿಯಲ್ಲಿ ಆಗುವ ಸಮಸ್ಯೆಗಳ ಕುರಿತು ಫೋರ್ಟಿಸ್‌ ಆಸ್ಪತ್ರೆ ಮೂತ್ರಪಿಂಡ ಶಾಸ್ತ್ರಜ್ಞರಾದ ಡಾ ರಾಜಣ್ಣ ಶ್ರೀಧರ ಮಾಹಿತಿ ನೀಡಿದ್ದಾರೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

    ಪ್ರತಿಯೊಬ್ಬ ಮನುಷ್ಯನ ಆರೋಗ್ಯ ಉತ್ತಮವಾಗಿರಬೇಕೆಂದರೆ ಕಿಡ್ನಿ (Kidney) ಆರೋಗ್ಯ ಸಹ ಮುಖ್ಯ. ಮಾ.9ರಂದು ವಿಶ್ವ ಕಿಡ್ನಿ ದಿನವನ್ನಾಗಿ (World Kidney Day) ಆಚರಿಸಲಾಗುತ್ತಿದೆ. ಹೆಚ್ಚು ಉಪ್ಪು ತಿನ್ನುವುದರಿಂದ ಕಿಡ್ನಿಯಲ್ಲಿ ಆಗುವ ಸಮಸ್ಯೆಗಳ ಕುರಿತು ಫೋರ್ಟಿಸ್‌ ಆಸ್ಪತ್ರೆ ಮೂತ್ರಪಿಂಡ ಶಾಸ್ತ್ರಜ್ಞರಾದ ಡಾ ರಾಜಣ್ಣ ಶ್ರೀಧರ ಮಾಹಿತಿ ನೀಡಿದ್ದಾರೆ.


    ಕಿಡ್ನಿ ಸಮಸ್ಯೆಗೆ ಹೆಚ್ಚು ಉಪ್ಪು ಸೇವನೆ ಕಾರಣವೇ?


    ಹೌದು, ಹೆಚ್ಚು ಉಪ್ಪು ಅಥವಾ ಸೋಡಿಯಂಯುಕ್ತ ಆಹಾರ ಸೇವನೆಯಿಂದ ಕಿಡ್ನಿಯಲ್ಲಿ ಲವಣಾಂಶ ಹೆಚ್ಚಾಗಿ ಶೇಖರಣೆಯಾಗುತ್ತದೆ. ಇದು ಕ್ರಮೇಣ ಕಿಡ್ನಿಯಲ್ಲಿ ಕಲ್ಲಾಗಿ ಮಾರ್ಪಾಡಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಸಾಧ್ಯವಾದಷ್ಟು ಉಪ್ಪು ಸೇವನೆಯನ್ನು ಕಡಿಮೆ ಮಾಡುವುದು ಕಿಡ್ನಿ ಆರೋಗ್ಯವಷ್ಟೇ ಅಲ್ಲದೆ, ಇತರೆ ಆರೋಗ್ಯ ಸಮಸ್ಯೆಯೂ ಕಡಿಮೆಯಾಗಲಿದೆ.


    ಇದನ್ನೂ ಓದಿ: How to Eat: ಕಂಡವರ ಮದುವೆ ಅಂತ ಕಂಡಿದ್ದೆಲ್ಲ ತಿನ್ನಬೇಡ್ರೀ! ಹೇಗೆ ತಿನ್ನಬೇಕು, ಎಷ್ಟು ತಿನ್ನಬೇಕು ಅಂತ ಇಲ್ಲಿದೆ ಓದ್ರಿ


    ಕಿಡ್ನಿ ಸಮಸ್ಯೆ ಇರುವವರು ಎಷ್ಟು ಉಪ್ಪು ತಿನ್ನಬೇಕು?


    ಈಗಾಗಲೇ ಕಿಡ್ನಿ ಸಮಸ್ಯೆ ಹೊಂದಿದ್ದರೆ, ದೇಹದಲ್ಲಿ ಉಪ್ಪಿನ ಅಂಶ ಹೆಚ್ಚಾಗಿ ಇರಲಿದೆ ಎಂದರ್ಥ. ಹೀಗಾಗಿ ಪ್ರತಿ ದಿನ ಒಬ್ಬ ವ್ಯಕ್ತಿ ಗರಿಷ್ಠ ೫ ಗ್ರಾಂ ಸಾಲ್ಟ್‌ ಸೇವನೆ ಮಾಡಬಹುದು. ಚಿಪ್ಸ್‌, ಜಂಕ್‌ಫುಡ್‌ಗಳಿಗೆ ಸಂಪೂರ್ಣ ಕಡಿವಾಣ ಹಾಕುವುದು ಒಳಿತು. ಏಕೆಂದರೆ, ಈ ಆಹಾರದಲ್ಲಿ ಹೆಚ್ಚು ಉಪ್ಪನ್ನು ಬಳಕೆ ಮಾಡಲಾಗಿರುತ್ತದೆ. ಜೊತೆಗೆ ಅಡುಗೆ ಮಾಡುವ ವೇಳೆ ಕಡಿಮೆ ಉಪ್ಪು ಬಳಸುವುದು, ಉಪ್ಪಿನಕಾಯಿ ಬಳಸುವುದನ್ನು ಸಹ ನಿಲ್ಲಿಸುವುದು ಉತ್ತಮ. ಜೊತೆಗೆ, ರೆಡ್‌ಮೀಡ್‌, ಆರ್ಗನ್‌ ಮೀಟ್‌ ತಿನ್ನುವುದನ್ನು ನಿಯಂತ್ರಿಸಿ.


    ಹೆಚ್ಚು ಉಪ್ಪು ತಿನ್ನುವುದರಿಂದ ಆಗುವ ಸಮಸ್ಯೆಗಳೇನು?


    ಉಪ್ಪು ಸೇವನೆ ಕೇವಲ ಕಿಡ್ನಿಯಷ್ಟೇ ಅಲ್ಲದೆ, ಇತರೆ ಅಂಗಾಂಗಗಳ ಮೇಲೂ ಪರಿಣಾಮ ಬೀರಲಿದೆ. ಕಿಡ್ನಿ ಸ್ಟೋನ್‌ ಆಗುವುದು, ರಕ್ತದೊತ್ತಡ, ಕಾಲಿನಲ್ಲಿ ಊತ ಸೇರಿದಂತೆ ಅನೇಕ ಸಮಸ್ಯೆಗಳು ಕಾಡಬಹುದು. ಇದು ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಈಗಾಗಲೇ ಕಿಡ್ನಿ ಸ್ಟೋನ್‌ ಇದ್ದರೆ, ಕಲ್ಲಿನ ಪ್ರಮಾಣ ಇನ್ನಷ್ಟು ದೊಡ್ಡದಾಗಲೂ ಬಹುದು.




    ಲೋ ಬಿಪಿ ಇರುವವರು ಏನು ಮಾಡಬೇಕು?


    ಭಾರತೀಯ ಆಹಾರದ ಪ್ರಕಾರ ಅತ್ಯಂತ ಕಡಿಮೆ ಜನರಲ್ಲಿ ಲೋ ಬಿಪಿ ಇರಲಿದೆ. ಇಂಥವರು ವೈದ್ಯರನ್ನು ಸಂಪರ್ಕಿಸಿ ಉಪ್ಪನ್ನು ಎಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಿಕೊಳ್ಳಬೇಕು ಎಂಬುದನ್ನು ಅರ್ಥೈಸಿಕೊಳ್ಳಿ. ಕೇವಲ ಉಪ್ಪಿನಿಂದ ಮಾತ್ರ ಲೋ ಬಿಪಿ ಸಮಸ್ಯೆಯನ್ನು ಸರಿ ಮಾಡಬಹುದು ಎಂಬುದು ಸುಳ್ಳು. ಕೆಲವರಿಗೆ ಇತರೆ ಆರೋಗ್ಯ ಸಮಸ್ಯೆಯಿಂದಲೂ ಲೋ ಬಿಪಿ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ ಲೋ ಬಿಪಿ ಇರುವವರು ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆಯುವುದು ಒಳಿತು. ಇತರರ ಮಾತು ಕೇಳಿ, ಕೇವಲ ಉಪ್ಪಿನ ಸೇವನೆ ಜಾಸ್ತಿ ಮಾಡುವುದು ಒಳ್ಳೆಯದಲ್ಲ.


    ಇದನ್ನೂ ಓದಿ: ದಾರದಲ್ಲಿ ಅರಳಿದ ಮೋದಿ; ಹೇಗಿದೆ ಗೊತ್ತಾ ಗಿಫ್ಟ್ ಹೇಗಿದೆ? ಅಭಿಮಾನಿ ಹೇಳಿದ್ದೇನು?


    ಕಿಡ್ನಿ ಸಮಸ್ಯೆ ಇರುವವರು ಎಷ್ಟು ನೀರು ಕುಡಿಯಬೇಕು?


    ಸಾಮಾನ್ಯವಾಗಿ ಕಿಡ್ನಿಯಲ್ಲಿ ಸ್ಟೋನ್‌ ಇರುವವರು ಮಾತ್ರ ವೈದ್ಯರ ಸಲಹೆ ಮೇರೆಗೆ ೨ ರಿಂದ ೩ ಲೀಟರ್‌ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳೀ. ಎಲ್ಲರೂ ಇಷ್ಟು ಪ್ರಮಾಣದಲ್ಲಿ ನೀರು ಕುಡಿಯಲೇ ಬೇಕು ಎಂದೇನಿಲ್ಲ. ಕೆಲವರಿಗೆ ಕಾಲಿನಲ್ಲಿ ಊತ, ಲಂಗ್ಸ್‌ನಲ್ಲಿ ಸಮಸ್ಯೆ ಇರುವವರು ಕಡಿಮೆ ನೀರು ಕುಡಿಯಬೇಕು. ಹೀಗಾಗಿ ನಿಮಗೆ ದಾಹವಾದಾಗ ಮರೆಯದೇ ನೀರು ಕುಡಿಯಿರಿ. ಈಗಂತೂ ಬೇಸಿಗೆಯಾಗಿರುವ ಕಾರಣ, ದೇಹ ವೇಗವಾಗಿ ನಿರ್ಜಲೀಕರಣಗೊಳ್ಳುತ್ತದೆ. ಹೀಗಾಗಿ ದೇಹ ಎಷ್ಟು ನೀರು ಬಯಸುತ್ತದೆಯೋ ಅಷ್ಟು ನೀರು ಕುಡಿಯಿರಿ. ದಾಹವಾದಾಗ ನೀರು ಕುಡಿಯುವುದನ್ನು ಸ್ಕಿಪ್‌ ಮಾಡಬೇಡಿ.


    ಹೆಚ್ಚು ನೀರು ಕುಡಿಯುವುದರ ಉಪಯೋಗ


    ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ನೀರಿನಿಂದಲೇ ಬಗೆಹರಿಯಲಿದೆ. ಹೀಗಾಗಿ ನೀರಿನ ಅವಲಂಬನೆ ಹೆಚ್ಚಿರಲಿ. ಸೂಕ್ತ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆ ಬಗೆಹರಿಯಲಿದೆ. ನೀರು ಕುಡಿಯಲು ಕೆಲವರು ಪದ್ಧತಿ ಬಳಸುತ್ತಾರೆ. ಆದರೆ, ವೈದ್ಯಕೀಯವಾಗಿ ಯಾವ ಪದ್ಧತಿಯೂ ಇಲ್ಲ. ನಿಮಗೆ ನೀರು ಕುಡಿಯಬೇಕು ಎಂದೆನಿಸಿದಾಗಲೆಲ್ಲಾ ನೀರು ಕುಡಿಯಿರಿ.

    Published by:Precilla Olivia Dias
    First published: