ಮೂಕ ಜೀವಿಗಳ ರೋದನೆ: ಪ್ರಾಣಿ-ಪಕ್ಷಿಗಳ ಮೇಲಿರಲಿ ನಿಮ್ಮ ನೀರಿನ ಆಸರೆ

ಇನ್ನು ನೀವು ಪ್ರಾಣಿ ಪ್ರೇಮಿ ಆಗಿದ್ದಲ್ಲಿ ಜಾಸ್ತಿ ಬೇಡ ಒಂದು ಬಕೆಟ್​ ನೀರನ್ನು ಅವುಗಳಿಗೆ ನೀಡಬಹುದು. ಹಾಗಂತ ಕಾಡಿನ ಒಳಗೆ ಹೋಗಬೇಕೆಂದೇನಿಲ್ಲ. ಕಾಡಿನ ಸ್ವಲ್ಪ ಒಳ ಭಾಗದಲ್ಲಿಟ್ಟರೂ ಪ್ರಾಣಿಗಳು ನೀರಿಗಾಗಿ ಅಲೆಯುತ್ತಿರುವಾಗ ಬಂದು ಕುಡಿಯುತ್ತವೆ.

zahir | news18
Updated:March 21, 2019, 4:27 PM IST
ಮೂಕ ಜೀವಿಗಳ ರೋದನೆ: ಪ್ರಾಣಿ-ಪಕ್ಷಿಗಳ ಮೇಲಿರಲಿ ನಿಮ್ಮ ನೀರಿನ ಆಸರೆ
@Matos Blog
  • News18
  • Last Updated: March 21, 2019, 4:27 PM IST
  • Share this:
ಮಾರ್ಚ್​ ತಿಂಗಳು ಬಂತು ಅಂದರೆ ಎಲ್ಲೆಲ್ಲೂ ಬರಗಾಲದ ಛಾಯೆ. ಬಾವಿಲಿ ಹುಡುಕ್ತೀನಿ ಅಂದರು 20 ಅಡಿ ನೀರು ಸಿಗಲ್ಲ. ಹೊಳೆ-ಕೊಳ್ಳಗಳನ್ನ ಬಿಟ್ಟು ಬಿಡಿ, ಇವತ್ತಿದ್ದ ನೀರು ನಾಳೆ ಬಿಸಿಲಿಗೆ ಬತ್ತಿ ಹೋಗುತ್ತದೆ. ನಮಗೆ ಬಾಯಾರಿಕೆಯಾದಾಗ ನೀರು ಕೇಳಿ ಕುಡಿತೀವಿ. ಒಂದು ವೇಳೆ ನೀರು ಸಿಗಲಿಲ್ಲ ಅಂದರೆ, 20 ರೂಪಾಯಿ ಕೊಟ್ಟು ವಾಟರ್​ ಬಾಟಲ್​ ತಗೊಂಡು ನೀರು ಕುಡಿತೀವಿ.

ಅದೇ ಆ ಮೂಕ ಪ್ರಾಣಿಗಳು ಅಮ್ಮಾ ದಣಿವಾಗಿದೆ, ಸಾಯ್ತಿದ್ದೀವಿ.. ನೀರು ಕೊಡಿ ಅಂತ ಯಾರ ಬಳಿ ತಮ್ಮ ಅಳಲನ್ನು ಹೇಳಿಕೊಳ್ಳಬೇಕು.ಇದು ಮನುಷ್ಯನಾಗಿ ಹುಟ್ಟಿದ ಮೇಲೆ ಮಾನವೀಯತೆಯ ಒಂದು ಭಾಗ. ಈಗಾಗಲೇ ಬಿಸಿಲಿನ ಬೇಗೆಯಿಂದ ಪ್ರಾಣಿ-ಪಕ್ಷಿ ಸಂಕುಲವೇ ತತ್ತರಿಸಿಹೋಗಿದೆ. ಕಾಡಿನಲ್ಲಿರುವ ಹೊಳೆ-ನದಿ-ಕೊಳ-ಗುಂಡಿಗಳೆಲ್ಲಾ ಬತ್ತಿ ಹೋಗಿ ದಾಹದಿಂದ ಪ್ರಾಣಿಗಳು ಅಲ್ಲಲ್ಲೇ ಪ್ರಾಣ ಬಿಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ಬಲ್ಲರಾದ ನಾವು-ನೀವುಗಳು ಸಣ್ಣ ಅಳಿಲು ಸೇವೆ ಮಾಡೋದರಿಂದ ಬಸವಳಿದ ಪ್ರಾಣಿ-ಪಕ್ಷಿಗಳನ್ನು ಸಾವಿನ ದವಡೆಯಿಂದ ರಕ್ಷಿಸಿ, ಅವುಕ್ಕೂ ಬಾಳಿ ಬದುಕಲು ಒಂದು ಜೀವನವನ್ನು ಕಟ್ಟಿಕೊಟ್ಟಂತಾಗುತ್ತದೆ.

ನೀರಿಡುವ ಮೂಲಕ ಅಳಿಲು ಸೇವೆ:

ಕೈ-ಕಾಲು ತೊಳೆಯಲು ಒಂದು ಬಕೆಟ್​ ನೀರು ವೇಸ್ಟ್​ ಮಾಡುವ ನಾವು ಅದರಲ್ಲಿ ಒಂದು ಬೊಗಸೆ ನೀರನ್ನು ಪ್ರಾಣಿ-ಪಕ್ಷಿಗಳಿಗಾಗಿ ಮೀಸಲಿಡಬಹುದಾಗಿದೆ. ಚಿಪ್ಪಿನಲ್ಲೋ ಅಥವಾ ಒಂದು ಸಣ್ಣ ಪ್ಲಾಸ್ಟಿಕ್ ಅಥವಾ ಇನ್ನಿತರೆ ಪಾತ್ರೆಯಲ್ಲಿ ನೀರನ್ನು ತಮ್ಮ ಮನೆಯ ಹಂಚು-ಟೆರೇಸ್​ ಮೇಲೆ ಇಡಬಹುದು. ​ಹೀಗೆ ಮಾಡೋದ್ರಿಂದ ದಣಿದ ಪಕ್ಷಿಗಳು ಬಾಯಾರಿಕೆ ಹಾಗೂ ದಣಿವಾರಿಸಿಕೊಳ್ಳುತ್ತವೆ.

ಇನ್ನು ನೀವು ಪ್ರಾಣಿ ಪ್ರೇಮಿ ಆಗಿದ್ದಲ್ಲಿ ಜಾಸ್ತಿ ಬೇಡ ಒಂದು ಬಕೆಟ್​ ನೀರನ್ನು ಅವುಗಳಿಗೆ ನೀಡಬಹುದು. ಹಾಗಂತ ಕಾಡಿನ ಒಳಗೆ ಹೋಗಬೇಕೆಂದೇನಿಲ್ಲ. ಕಾಡಿನ ಸ್ವಲ್ಪ ಒಳ ಭಾಗದಲ್ಲಿಟ್ಟರೂ ಪ್ರಾಣಿಗಳು ನೀರಿಗಾಗಿ ಅಲೆಯುತ್ತಿರುವಾಗ ಬಂದು ಕುಡಿಯುತ್ತವೆ. ನೀವು ಎರಡ್ಮೂರು ದಿನ ಹೀಗೆ ಮಾಡೋದರಿಂದ ಆ ಪ್ರಾಣಿ ದಿನ ನಿಮ್ಮ ಆಗಮನಕ್ಕಾಗಿಯೇ ಕಾಯುತ್ತಿರುತ್ತದೆ. ಈ ಪ್ರಾಣಿಯನ್ನ ಬಾಕಿಯುಳಿದ ಪ್ರಾಣಿಗಳು ಫಾಲೋ ಮಾಡಿ ತಮ್ಮ ದಣಿವನ್ನ ಆರಿಸಿಕೊಳ್ಳುತ್ತವೆ.

ಬೇಸಿಗೆಯಲ್ಲಿ ಮನೆ ಮುಂದೆ ಅದೇಷ್ಟೋ ಪ್ರಾಣಿಗಳು ಬಂದು ಇಲ್ಲಾದ್ರು ನೀರು ಸಿಗುತ್ತಾ ಅಂತ ಕಾಯುತ್ತಿರುತ್ತದೆ. ಆ ಸಂದರ್ಭದಲ್ಲಿ ಅವುಗಳಿಗೆ ಕಾಯುವ ಅವಕಾಶ ಕೊಡದೇ  ಬೊಗಸೆ ನೀರು ಇಡೋದರಿಂದ ಅವುಗಳು ಖುಷಿಯಾಗಿ ನೀರು ಕುಡಿದು ತಂಪಾರಿಸಿಕೊಂಡು ಹೋಗುವಂತಹ ವ್ಯವಸ್ಥೆ ಮಾಡಿಕೊಡಬಹುದು.

ಒಟ್ಟಿನಲ್ಲಿ, ಮಾತು-ನೋಟ ಎಲ್ಲಾ ಬಲ್ಲವರಾದ ನಾವು ಹೀಗೂ ಮಾಡಬಹುದು ಅಂತ ಒಬ್ಬರು ಮುಂದೆ ಬಂದು ನೀರಿನ ಸಹಾಯ ಮಾಡಿದಾಗ, ಎಲ್ಲರೂ  ನಾ ಮುಂದು-ತಾಮುಂದು ಅಂತ ಬಂದು ಇಡೀ ರಾಜ್ಯಕ್ಕೆ ರಾಜ್ಯ, ದೇಶಕ್ಕೆ ದೇಶವೇ ಪ್ರಾಣಿ-ಪಕ್ಷಿಗಳನ್ನ ಉಳಿಸಿ ಬೆಳೆಸಿ ಪ್ರೀತಿಸಲು ಒಂದು ಅವಕಾಶ ಸಿಕ್ಕಂತಾಗುತ್ತದೆ.

  • ವಿದ್ಯಾ, ನ್ಯೂಸ್ 18 ಕನ್ನಡ

First published:March 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ