ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಅಪಾಯ ಕಟ್ಟಿಟ್ಟ ಬುತ್ತಿ!

ಅದೇ ರೀತಿ ಕಡಿಮೆ ಹಾಲು ಬಳಸಿ ಸ್ಟ್ರಾಂಗ್ ಟೀ ಕುಡಿಯುವುದು ಕೂಡ ಹಾನಿಕಾರಕ ಎನ್ನುತ್ತೆ ಅಧ್ಯಯನ ತಂಡ.

zahir | news18
Updated:March 19, 2019, 5:27 PM IST
ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಅಪಾಯ ಕಟ್ಟಿಟ್ಟ ಬುತ್ತಿ!
ಸಾಂದರ್ಭಿಕ ಚಿತ್ರ
 • News18
 • Last Updated: March 19, 2019, 5:27 PM IST
 • Share this:
ಚುಮು ಚುಮು ಚಳಿಯಲ್ಲಿ ಬೆಳಗ್ಗೆ ಎದ್ದಾಗ ಬಿಸಿ ಬಿಸಿ ಕಾಫಿ ಅಥವಾ ಚಹಾ ಕುಡಿದರೆ ಮನಸ್ಸಿಗೆ ಅದೇನೋ ಮುದ ಸಿಗುತ್ತದೆ. ಒಂದು ಕಪ್ ಟೀ ಕುಡಿದರೆ ಹೊಸ ಉಲ್ಲಾಸದೊಂದಿಗೆ ದಿನಚರಿ ಆರಂಭವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಹೀಗಾಗಿಯೇ ಭಾರತ ಸೇರಿದಂತೆ ಹಲವು ದೇಶಗಳ ಮುಖ್ಯ ಪೇಯವಾಗಿ ಇಂದು ಚಹಾ ಗುರುತಿಸಿಕೊಂಡಿದೆ. ಆದರೆ ಫ್ರೆಶ್​ನೆಸ್​ಗಾಗಿ ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಕೂಡ ಅಪಾಯಕಾರಿ ಎನ್ನುತ್ತದೆ ಒಂದು ಅಧ್ಯಯನ.

ಚಹಾ ಪಾನೀಯ ಅನೇಕ ರೀತಿಯ ಆಮ್ಲಗಳನ್ನು ಒಳಗೊಂಡಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಟೀ ಕುಡಿದಾಗ ಇದು ನೇರವಾಗಿ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಮುಖ್ಯವಾಗಿ ಹೊಟ್ಟೆ ಹುಣ್ಣು ಅಥವಾ ಗ್ಯಾಸ್ ಸಮಸ್ಯೆಗಳಿಗೆ ಬರೀ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಕಾರಣವಾಗಬಹುದು. ಹೀಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವ ಅಭ್ಯಾಸ ಒಳ್ಳೆಯದಲ್ಲ ಎನ್ನುತ್ತಾರೆ ಸಂಶೋಧಕರು.

ಹಾಗೆಯೇ ಬರೀ ಹೊಟ್ಟೆಯಲ್ಲಿ ಹಾಲಿನ ಟೀ ಕುಡಿಯುವುದು ಸಹ ಹಾನಿಯುಂಟು ಮಾಡುತ್ತದೆ. ಏಕೆಂದರೆ ಹೆಚ್ಚು ಹಾಲು ಬಳಸಿ ಚಹಾ ಕುಡಿದರೆ ನಿಮ್ಮಲ್ಲಿ ಆಯಾಸ ಕಾಣಿಸಿಕೊಳ್ಳುತ್ತದೆ. ಹಾಲು ಹಾಕಿದ ಚಹಾ ದೇಹದ ಉತ್ಕರ್ಷಣ ನಿರೋಧಕ ಅಂಶವನ್ನು ನಿರ್ನಾಮ ಮಾಡುತ್ತದೆ. ಇದರಿಂದ ಬಳಲಿಕೆಯಂತಹ ತೊಂದರೆಗಳು ಕಾಡಬಹುದು.

ಅದೇ ರೀತಿ ಕಡಿಮೆ ಹಾಲು ಬಳಸಿ ಸ್ಟ್ರಾಂಗ್ ಟೀ ಕುಡಿಯುವುದು ಕೂಡ ಹಾನಿಕಾರಕ ಎನ್ನುತ್ತೆ ಅಧ್ಯಯನ ತಂಡ. ಖಾಲಿ ಹೊಟ್ಟೆಯಲ್ಲಿ ಸ್ಟ್ರಾಂಗ್ ಟೀ ಕುಡಿಯುವುದರಿಂದ ಜೀರ್ಣ ಕ್ರಿಯೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಅನೇಕ ರೀತಿ ಹೊಟ್ಟೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಲು ಇದು ಕೂಡ ಕಾರಣ.

ಇದನ್ನೂ ಓದಿ: VIDEO: ಸಚಿವರ ತಲೆಗೆ ಮೊಟ್ಟೆ ಹೊಡೆದ ಬಾಲಕ: ಸಾಮಾಜಿಕ ಜಾಲತಾಣದಲ್ಲಿ ಎಗ್​​ಬಾಯ್ ಫುಲ್ ಫೇಮಸ್ಸು!

ಕೆಲವರು ಆಹಾರ ಸೇವಿಸಿದ ಬಳಿಕ ಚಹಾ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಇದು ಕೂಡ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಚಹಾ ಟಾನಿಕ್ ಅಂಶಗಳನ್ನು ಹೊಂದಿದ್ದು, ಆಹಾರದ ಬಳಿಕ ಕುಡಿದರೆ ದೇಹದ ಕಬ್ಬಿಣಾಂಶದ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಆಹಾರದಲ್ಲಿರುವ ಪೋಷಕಾಂಶಗಗಳು ನಷ್ಟವಾಗುವ ಸಾಧ್ಯತೆಯಿರುತ್ತದೆ. ಹಾಗೆಯೇ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆಯನ್ನು ತಂದೊಡುತ್ತದೆ ಎನ್ನುತ್ತಾರೆ ಸಂಶೋಧಕರು.

First published:March 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,203,280

   
 • Total Confirmed

  1,677,298

  +73,646
 • Cured/Discharged

  372,439

   
 • Total DEATHS

  101,579

  +5,887
Data Source: Johns Hopkins University, U.S. (www.jhu.edu)
Hospitals & Testing centres