ದಣಿದ ದೇಹಕ್ಕೆ ದೈನಂದಿನ ವ್ಯಾಯಾಮದಿಂದ ಬ್ರೇಕ್​ ನೀಡಿ, ಆರೋಗ್ಯ ಕಾಪಾಡಿಕೊಳ್ಳಿ!

news18
Updated:July 8, 2018, 3:49 PM IST
ದಣಿದ ದೇಹಕ್ಕೆ ದೈನಂದಿನ ವ್ಯಾಯಾಮದಿಂದ ಬ್ರೇಕ್​ ನೀಡಿ, ಆರೋಗ್ಯ ಕಾಪಾಡಿಕೊಳ್ಳಿ!
news18
Updated: July 8, 2018, 3:49 PM IST
-ನ್ಯೂಸ್ 18 ಕನ್ನಡ

ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಅತ್ಯಗತ್ಯ. ವಾರದಲ್ಲಿ ಏಳು ದಿನಗಳ ಕಾಲ ವ್ಯಾಯಾಮ ಮಾಡುವುದರಿಂದ ಆರೋಗ್ಯವನ್ನು ವೃದ್ದಿಸಿಕೊಳ್ಳಬಹುದು ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ ದೈನಂದಿನ ಚಟುವಟಿಕೆಗಳ ನಡುವೆ ವ್ಯಾಯಾಮ ಎಷ್ಟು ಅಗತ್ಯವೊ, ವ್ಯಾಯಾಮಕ್ಕೂ ವಿಶ್ರಾಂತಿ ಅಷ್ಟೇ ಅಗತ್ಯವಾಗಿದೆ. ವಾರ ಪೂರ್ತಿ ದಣಿದಿರುವ ದೇಹಕ್ಕೆ ಒಂದು ದಿನ ವಿಶ್ರಾಂತಿ ನೀಡುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು.

*  ಜಿಮ್​ನಲ್ಲಿ ಅಥವಾ ಪಾರ್ಕ್​ನಲ್ಲಿ ಪ್ರತಿನಿತ್ಯ ವ್ಯಾಯಾಮ ಮಾಡುತ್ತಿದ್ದರೆ, ವಾರದಲ್ಲಿ ಒಂದು ದಿನ ದೇಹಕ್ಕೆ ವಿಶ್ರಾಂತಿ ನೀಡಿ. ಇದು ದೇಹದ ದಣಿವನ್ನು ನಿವಾರಿಸುತ್ತದೆ. ಅಲ್ಲದೆ ವ್ಯಾಯಾಮದಿಂದ ಉಂಟಾಗುವ ನೋವು ನಿರಾವಣೆಗೆ ವಿಶ್ರಾಂತಿ ಅಗತ್ಯವಾಗಿದೆ

*  ವ್ಯಾಯಾಮದ ಪರಿಣಾಮದಿಂದಾಗಿ ದೇಹದ ತೂಕವು ಸಮಸ್ಥಿತಿಗೆ ಬರುತ್ತದೆ. ಹಿತವಾದ ಪ್ರಮಾಣದ ತೂಕ ಯಾರಿಗೆ ತಾನೇ ಬೇಡ ?. ವ್ಯಾಯಾಮ ಮತ್ತು ಆರೋಗ್ಯಕರ ಆಹಾರದಿಂದ ಹೆಚ್ಚಿನ ತೂಕವನ್ನು ಇಳಿಸಬಹುದು. ವಾರದಲ್ಲಿ ಆರು ದಿನಗಳ ಕಾಲ ವ್ಯಾಯಾಮ ಮಾಡಿ, ಆಹಾರದ ಕಡೆ ಹೆಚ್ಚಿನ ಗಮನ ಹರಿಸಿದರೆ ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು.

ಜೀರ್ಣಕ್ರಿಯೆ ಉತ್ತಮಗೊಳ್ಳಲು ವ್ಯಾಯಾಮ ಸಹಕಾರಿಯಾಗಿದೆ. ದೈನಂದಿನ ವ್ಯಾಯಾಮದಿಂದ ಸ್ನಾಯುಗಳು ಸಡಿಲಗೊಳ್ಳುತ್ತದೆ. ಆದರೆ ಕೊಬ್ಬಿನಾಂಶವಿರುವ ಆಹಾರಗಳನ್ನು ಸೇವನೆ ದೇಹದಲ್ಲಿ ಕ್ಯಾಲೊರಿಗಳನ್ನು ಹೆಚ್ಚಿಸುತ್ತದೆ. ಹೀಗಾಗಿ ಫ್ಯಾಟ್​ ಫುಡ್​ಗಳ ಸೇವನೆ ನಿಯಂತ್ರಿಸಿ, ದೇಹ ದಂಡಿಸುವುದನ್ನು ಕಡಿಮೆ ಮಾಡಬಹುದು.

*   ವಿಶ್ರಾಂತಿ ಇಲ್ಲದೆ ವ್ಯಾಯಾಮ ಮಾಡುವುದರಿಂದ ಸ್ನಾಯುಗಳು ದುರ್ಬಲಗೊಳ್ಳುವ ಸಾಧ್ಯೆತೆ ಇರುತ್ತದೆ. ವಾರಪೂರ್ತಿ ವ್ಯಾಯಾಮದಿಂದ ಶರೀರದ ಭಾಗಗಳು ದಣಿದಿರುತ್ತದೆ. ವಾರದಲ್ಲಿ ಒಂದು ದಿನ ವ್ಯಾಯಾಮಕ್ಕೆ ರಜೆ ನೀಡಿದರೆ ಆರೋಗ್ಯಕ್ಕೆ ಒಳ್ಳೆಯದು.
First published:July 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ