ಹೌದು, ನವಜಾತ ಶಿಶುಗಳನ್ನು ಚುಂಬಿಸುವುದು ಸರಿಯಲ್ಲ. ತಾಯಂದಿರು ಮಾತ್ರವಲ್ಲ ಬೇರೆ ಯಾರೂ ಕೂಡ ಶಿಶುಗಳಿಗೆ ಚುಂಬಿಸುವುದು ಸರಿಯಲ್ಲ. ಶಿಶುಗಳ ಲಾಲನೆ-ಪಾಲನೆ ಮಾಡುವ ತಾಯಂದಿರು ಈ ವಿಚಾರದಲ್ಲಿ ಕೆಲ ವಿಷಯಗಳನ್ನು ಗಮನಿಸಲೇಬೇಕು ಹಾಗೂ ಕಟ್ಟುನಿಟ್ಟಾಗಿ ಅವುಗಳನ್ನು ಪಾಲಿಸಬೇಕು.
ಶಿಶುಗಳನ್ನು ಚುಂಬಿಸಲು ಬಿಡಬಾರದು
ಶಿಶುಗಳು ತುಂಬಾ ಮುದ್ದಾಗಿರುತ್ತವೆ ಮತ್ತು ಬಹುತೇಕರೂ ಅವುಗಳ ಕಡೆಗೆ ಆಕರ್ಷಿತರಾಗಿರುತ್ತಾರೆ. ಸಣ್ಣ ಪಾದಗಳು, ಮುದ್ದಾದ ನಗು, ದುಂಡುಮುಖದ ಕೆನ್ನೆ - ಹೀಗೆ ಅವುಗಳನ್ನು ನೋಡಿದ ಯಾರೇ ಆದರೂ ಮಗುವನ್ನು ಮುದ್ದಾಡಬೇಕೆಂದು ಅನಿಸುತ್ತದೆ. ಆದರೆ ಗಮನವಿರಲಿ, ಅವುಗಳನ್ನು ನಿಮ್ಮ ತೋಳುಗಳಲ್ಲಿ ಹಿಡಿದಿಟ್ಟುಕೊಳ್ಳುವುದು ಅಥವಾ ಕೆನ್ನೆಗೆ ಚುಂಬಿಸುವುದು ಅಪಾಯಕಾರಿ.
ಚುಂಬನವು ವಾತ್ಸಲ್ಯವನ್ನು ತೋರಿಸುವ ಒಂದು ಮಾರ್ಗವಾಗಿದೆ ಮತ್ತು ಅದರಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ ನೀವು ನವಜಾತ ಶಿಶುವಿನ ಪೋಷಕರಾಗಿದ್ದರೆ, ಈಗ ನಾವು ನೀಡುವ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನಿಮ್ಮ ಮಗುವನ್ನು ಚುಂಬಿಸಬಾರದೆಂದು ಎಲ್ಲರಿಗೂ ಹೇಳುವುದು ಸರಿಯಲ್ಲದಂತೆ ಕಂಡರೂ ನೀವು ಅದನ್ನು ನಂಬಲೇಬೇಕು. ಬೇರೆಯವರು ನಿಮ್ಮ ಮಗುವಿಗೆ ಚುಂಬಿಸುವುದು ಸರಿಯಲ್ಲ. ನಿಮ್ಮ ಪುಟ್ಟ ವ್ಯಕ್ತಿಯ ಸುರಕ್ಷತೆಗಾಗಿ ನೀವು ಮತ್ತು ನಿಮ್ಮ ಸಂಗಾತಿ ಕೂಡ ಇದನ್ನು ಮಾಡಬಾರದು.
ಸೆಂಚುರಿ ಬಾರಿಸಿರುವ ಈ ಅಜ್ಜಿ ನೀಡಿದ್ದಾಳೆ ಜೀವನಕ್ಕೆ 5 ಸಲಹೆಗಳು: ವಿಡಿಯೋ ವೈರಲ್
ನವಜಾತ ಶಿಶುಗಳನ್ನು ನೀವು ಏಕೆ ಚುಂಬಿಸಬಾರದು
ನವಜಾತ ಶಿಶುಗಳು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು, ಮೊದಲ ಕೆಲವು ವಾರಗಳಲ್ಲಿ ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ನಿರ್ಣಾಯಕ. ಯಾವುದೇ ರೀತಿಯ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ತಗುಲುವ ಸಾಧ್ಯತೆ ಇರುವುದರಿಂದ ಅದರ ಜೀವಕ್ಕೆ ಅಪಾಯವಿದೆ. ನಮ್ಮ ಕೈಗಳು ಸಾವಿರಾರು ರೋಗಕಾರಕಗಳಿಗೆ ನೆಲೆಯಾಗಿರುವುದರಿಂದ ಮಕ್ಕಳನ್ನು ಮುಟ್ಟುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆಯಬೇಕು ಎಂದು ಹೇಳಲಾಗುತ್ತದೆ. ಅಂತೆಯೇ ನಮ್ಮ ಮುಖವು ಸಹ ಸಾವಿರಾರು ಸೂಕ್ಷ್ಮ ಜೀವಿಗಳಿಂದ ಆವೃತವಾಗಿರುತ್ತದೆ. ನಾವು ಚುಂಬಿಸಿದಾಗ ಈ ರೋಗಕಾರಕಗಳು ಚಿಕ್ಕಮಗುವಿನ ಚರ್ಮಕ್ಕೆ ವರ್ಗಾವಣೆಯಾಗುತ್ತವೆ.
ನಿಮ್ಮ ಶಿಶುಗಳ ಜೀವಕ್ಕೆ ಅಪಾಯವನ್ನುಂಟು ಮಾಡುವ ವೈರಸ್
ಶಿಶುಗಳು ವಿಶೇಷವಾಗಿ ಎಚ್‌ಎಸ್‌ವಿ -1 ಗೆ ಗುರಿಯಾಗುತ್ತವೆ. ಇದನ್ನು ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ ಎಂದು ಕರೆಯಲಾಗುತ್ತದೆ. ವೈರಸ್ ವಯಸ್ಕರಲ್ಲಿ ಬಾಯಿ ಮತ್ತು ತುಟಿಗಳ ಸುತ್ತ ಹುಣ್ಣುಗಳನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ವಯಸ್ಕರಲ್ಲಿ ನಿರ್ದಿಷ್ಟ ರೋಗಲಕ್ಷಣಗಳನ್ನು ಸಹ ತೋರಿಸುವುದಿಲ್ಲ. ಆದರೆ ಶಿಶುಗಳಿಗೆ ಇದು ಮಾರಕವಾಗಬಹುದು. ಕೆಲವು ಜನರು ತಮ್ಮ ತುಟಿಗಳ ಸುತ್ತಲೂ ಶೀತದ ಹುಣ್ಣುಗಳನ್ನು ಹೊಂದಿರುತ್ತಾರೆ. ಅವರು ಚುಂಬಿಸಿದಾಗ ವೈರಸ್ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
40ರ ಹರೆಯದ ಹೊತ್ತಿಗೆ ಶೇ.90ಕ್ಕಿಂತಲೂ ಹೆಚ್ಚು ಜನರು ಈ ನಿರ್ದಿಷ್ಟ ವೈರಸ್‌ಗೆ ತುತ್ತಾಗುತ್ತಾರೆ. ಇದು ನವಜಾತ ಶಿಶುಗಳಿಗೆ ಹರಡಬಹುದು ಎಂದು ಅಂದಾಜಿಸಲಾಗಿದೆ. ವೈರಸ್ ಸೋಂಕಿತ ವ್ಯಕ್ತಿಯು ಮಗುವಿನ ಕೈಗಳನ್ನು, ಅದರ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿದರೂ ಕೂಡ ವೈರಸ್ ಲೋಳೆಯ ಪೊರೆಗಳನ್ನು ತಲುಪಬಹುದು. ಇದು ಮುಂದೆ ಸೋಂಕಿಗೆ ಕಾರಣವಾಗುತ್ತದೆ. ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ವೈರಸ್ ವೇಗವಾಗಿ ಮಗುವಿಗೆ ಹರಡುತ್ತದೆ. ಇದು ಮೆದುಳು ಮತ್ತು ಬೆನ್ನುಹುರಿಯಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ.
ನೀವು ಏನು ಮಾಡಬೇಕು..?
ಮೊದಲ ಕೆಲವು ತಿಂಗಳುಗಳು ಶಿಶುಗಳಿಗೆ ಬಹಳ ಸೂಕ್ಷ್ಮವಾಗಿರುತ್ತದೆ. ಪೋಷಕರು ಹೆಚ್ಚು ಹೆಚ್ಚು ಜಾಗರೂಕರಾಗಿರಬೇಕು. ಅನಾರೋಗ್ಯದಿಂದ ಬಳಲುತ್ತಿರುವ ಯಾರಾದರೂ ಕೂಡ ಮಗುವಿನಿಂದ ದೂರವಿರಬೇಕು. ಯಾರಾದರೂ ಮಗು ಸ್ಪರ್ಶಿಸಲು ಅಥವಾ ಅವರ ತೋಳುಗಳಲ್ಲಿ ಹಿಡಿದಿಡಲು ಬಯಸಿದರೆ ಅವರಿಗೆ ನೀವು ಕೆಲ ವಿಷಯಗಳನ್ನು ಹೇಳಲೇಬೇಕು. ಅವರು ಮೊದಲು ತಮ್ಮ ಕೈಗಳನ್ನು ಸರಿಯಾಗಿ ತೊಳೆಯಬೇಕು. ಸ್ಯಾನಿಟೈಸರ್ ನಿಂದ ಕೈಗಳನ್ನು ಸ್ವಚ್ಛಗೊಳಿಸುವುದು ಕೂಡ ಪರಿಣಾಮಕಾರಿ ಮಾರ್ಗವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ