Benefits Of Rice: ಸಣ್ಣಗಾಗ್ಬೇಕು ಅಂತ ಅನ್ನ ತಿನ್ನೋದು ಬಿಡ್ಬೇಡಿ, ಇನ್ನೂ ದಪ್ಪಗಾಗ್ತೀರಾ ಅಷ್ಟೇ

Health Benefits Of Rice: ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಅನ್ನವನ್ನು ತಿನ್ನುವುದಿಲ್ಲ ಅಥವಾ ಕಡಿಮೆ ಅನ್ನವನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳುತ್ತಾರೆ.  ಅವರ ಪ್ರಕಾರ  ಅನ್ನ ತಿನ್ನದರೆ ತೂಕ ಹೆಚ್ಚಾಗುತ್ತದೆ.  ಆದರೆ, ಪೌಷ್ಟಿಕತಜ್ಞರು ನಮ್ಮ ದೈನಂದಿನ ಆಹಾರದಲ್ಲಿ ಸಾಕಷ್ಟು ಅಕ್ಕಿಯನ್ನು ಅಥವಾ ಅನ್ನವನ್ನು ಸೇವನೆ ಮಾಡಬೇಕು ಎಂದು ಸಲಹೆ ನೀಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜನರು ತಮ್ಮ ಆಹಾರ ಪದ್ಧತಿಯನ್ನು(Foods Habit) ತಮ್ಮ ಇಚ್ಛೆಯ ಅನುಸಾರ ಬದಲಾಯಿಸಿಕೊಂಡು ಹೋಗುತ್ತಾರೆ. ಅವರು ತೂಕ ಇಳಿಸುವ(Weight Loss) ಬರದಲ್ಲಿ ಹೊಸ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅನೇಕ ಜನರು ವಿವಿಧ ಕಾರಣಗಳಿಗಾಗಿ ಅನ್ನ ತಿನ್ನುವುದನ್ನು ನಿಲ್ಲಿಸುತ್ತಾರೆ ಮತ್ತು ಅದಕ್ಕೆ ಪರ್ಯಾಯ ಮಾರ್ಗಗಳನ್ನು ಆರಿಸಿಕೊಳ್ಳುತ್ತಾರೆ. ಆದರೆ, ತಜ್ಞರ ಸಲಹೆಯನ್ನು ಪಡೆಯದೆ ಅಂತಹ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಸೂಕ್ತವಲ್ಲ ಎಂಬುದನ್ನು ಮರೆಯಬಾರದು.  ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಅನ್ನವನ್ನು(Rice) ತಿನ್ನುವುದಿಲ್ಲ ಅಥವಾ ಕಡಿಮೆ ಅನ್ನವನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳುತ್ತಾರೆ.  ಅವರ ಪ್ರಕಾರ  ಅನ್ನ ತಿನ್ನದರೆ ತೂಕ ಹೆಚ್ಚಾಗುತ್ತದೆ.  ಆದರೆ, ಪೌಷ್ಟಿಕತಜ್ಞರು ನಮ್ಮ ದೈನಂದಿನ ಆಹಾರದಲ್ಲಿ ಸಾಕಷ್ಟು ಅಕ್ಕಿಯನ್ನು ಅಥವಾ ಅನ್ನವನ್ನು ಸೇವನೆ ಮಾಡಬೇಕು ಎಂದು ಸಲಹೆ ನೀಡುತ್ತಾರೆ.ಆರೋಗ್ಯ ಕಾಪಾಡಿಕೊಳ್ಳಲು ಅನ್ನದ ವಿಚಾರದಲ್ಲಿ ನಿರ್ಲಕ್ಯ ಮಾಡಬಾರದು ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ.

ಹಾಗಾದ್ರೆ ಅನ್ನವನ್ನು ಯಾಕೆ ಸಂಪೂರ್ಣವಾಗಿ ತ್ಯಜಿಸಬಾರದು ಎಂಬುದು ಇಲ್ಲಿದೆ

ಪ್ರೊಬಯಾಟಿಕ್

ಅಕ್ಕಿಯು ಒಂದು ಪ್ರೊಬಯಾಟಿಕ್ ಆಗಿದೆ, ಅದು ನಿಮಗೆ ಕೇವಲ ಆಹಾರವನ್ನು ನೀಡುವುದಿಲ್ಲ, ಆದರೆ ನಿಮ್ಮೊಳಗಿನ  ಕೆಟ್ಟ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆದು ಉತ್ತಮ ಜೀವಿಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಪುಡಿ ಮಾಡಿದ ಅಕ್ಕಿಯನ್ನು ಗಂಜಿಮ ಖೀರ್ ಸೇರಿದಂತೆ ವಿವಿಧ ಆರೋಗ್ಯಕರ ಆಹಾರ ಪದಾರ್ಥಗಳನ್ನು ತಯಾರಿಸಲು ಬಳಸಬಹುದು. ಅವು ಆರೋಗ್ಯಕ್ಕೂ ಉತ್ತಮ ಹಾಗೂ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಸುಲಭವಾಗಿ ಜೀರ್ಣವಾಗುತ್ತದೆ

ಭಾರತೀಯರು ವಿವಿಧ ಬೇಳೆಕಾಳುಗಳು, ಮಾಂಸ, ತರಕಾರಿಗಳು ಮತ್ತು ಮೊಸರನ್ನು  ಸೇರಿಸಿ ಅನ್ನವನ್ನು ತಿನ್ನುತ್ತಾರೆ. ಇಂತಹ ಅಭ್ಯಾಸ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.  ಅಕ್ಕಿ ಸುಲಭವಾಗಿ ಜೀರ್ಣವಾಗುವ ಆಹಾರ. ಇತರ ಕರಿಗಳ ಜೊತೆಗೆ ಸಾಕಷ್ಟು ಪ್ರಮಾಣದ ಅನ್ನವನ್ನು ತಿನ್ನುವುದರಿಂದ, ದೇಹವು ಯಾವುದೇ ಅಡ್ಡಪರಿಣಾಮಗಳಿಲ್ಲದೆ ತನಗೆ ಬೇಕಾದ ಶಕ್ತಿಯನ್ನು ಪಡೆಯುತ್ತದೆ. ನಿಮಗೆ ನಿದ್ರೆಯ ಸಮಸ್ಯೆ ಇದ್ದಲ್ಲಿ ಇದು ಉತ್ತಮ ನಿದ್ರೆ ಬರಲು ಕಾರಣವಾಗಬಹುದು. ಅಲ್ಲದೇ ಇದು ಉತ್ತಮ ಹಾರ್ಮೋನುಗಳನ್ನು ಸಮತೋಲನವಾಗಿರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Cabbage ಎಂದರೆ ಮೂಗು ಮುರಿಯಬೇಡಿ, ಸಂಧಿವಾತಕ್ಕೆ ಎಲೆಕೋಸು ರಾಮಬಾಣ!

ಚರ್ಮದ ಆರೋಗ್ಯಕ್ಕೆ ಉತ್ತಮ

ಅಕ್ಕಿಯು ಚರ್ಮದ ಆರೋಗ್ಯವನ್ನೂ ಸುಧಾರಿಸುತ್ತದೆ. ಇದರಲ್ಲಿ ಪ್ರೊಲ್ಯಾಕ್ಟಿನ್ ಅಧಿಕವಾಗಿದ್ದು ಚರ್ಮದ ಸಮಸ್ಯೆಗಳನ್ನು ನಿವಾರಿಸುವ ಗುಣ ಹೊಂದಿದೆ ಎಂಬುದು ಸಾಬೀತಾಗಿದೆ. ಥೈರಾಯ್ಡ್  ಸಮಸ್ಯೆ ಇದ್ದಲ್ಲಿ ಅದರಿಂದ  ಕೂದಲು ಉದುರುವುದು ಸಾಮಾನ್ಯ, ಆದರೆ ಅಕ್ಕಿ ಈ ಕುದಲು ಉದುರುವ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುವ ಗುಣಗಳನ್ನು ಹೊಂದಿದೆ ಎನ್ನಲಾಗುತ್ತದೆ.  ಸಾವಯಾವವಾಗಿ ಬೆಳೆದ ಅಕ್ಕಿಯನ್ನು ಅನ್ನ ಮಾಡಿ  ತಿನ್ನುವುದರಿಂದ  ಆರೋಗ್ಯಕ್ಕೆ ಸಂಬಂಧಿಸಿದ ಇತರ ಅಡ್ಡಪರಿಣಾಮಗಳಿಂದ ಮುಕ್ತಿ ಪಡೆಯಬಹುದು.

ಅಕ್ಕಿಯ ಬೇರೆ ಪ್ರಯೋಜನಗಳು  

ಅಕ್ಕಿಯ ಪ್ರತಿಯೊಂದು ಭಾಗವು ಉಪಯುಕ್ತವಾಗಿದೆ. ಅಕ್ಕಿ ಹೊಟ್ಟುಗಳಿಂದ ಮಾಡಿದ ಹೊಟ್ಟು ಜಾನುವಾರುಗಳಿಗೆ ಮೇವಾಗಿ ಬಳಸಲಾಗುತ್ತದೆ. ಹಾಗಾಗಿ ಇದರಲ್ಲಿ ಯಾವುದೇ ತ್ಯಾಜ್ಯವಿಲ್ಲ ಲಭ್ಯವಾಗುವುದಿಲ್ಲ. ನಿಮ್ಮ ಜೀವನ ಶೈಲಿಯನ್ನು ಅವಲಂಬಿಸಿ ದಿನಕ್ಕೆ ಒಂದು ಬಾರಿಯಾದರೂ ಅನ್ನವನ್ನು ನಿಮ್ಮ ಆಹಾರದಲ್ಲಿ ಸೇರಿಸಬೇಕೆಂದು ತಜ್ಞರು ಸೂಚಿಸುತ್ತಾರೆ. ಅಕ್ಕಿಯು ನಮ್ಮ ಸ್ನಾಯುಗಳನ್ನು ಬಲಪಡಿಸಲು ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚು ಮಾಡಲು ನಮಗೆ ಬೇಕಾದ ಶಕ್ತಿಯನ್ನು ನೀಡುತ್ತದೆ.

ಇದನ್ನೂ ಓದಿ: ಪಿರಿಯಡ್ಸ್​ ಸಮಯದಲ್ಲಿ ಯಾವ ಆಹಾರ ತಿನ್ಬೇಕು? ಯಾವುದನ್ನ ತಿನ್ನಬಾರದು ಇಲ್ಲಿದೆ

ಸ್ಥಳೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪಾಕವಿಧಾನಗಳಲ್ಲಿ ಅನ್ನಕ್ಕೆ ಹೆಚ್ಚಿ ಮಹತ್ವವಿದೆ. ಅನ್ನದಿಂದ ಹಲವಾರು ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಒಟ್ಟಾರೆಯಾಗಿ, ಅಕ್ಕಿಯನ್ನು ಸೇವಿಸುವ ಅಭ್ಯಾಸ, ನಮ್ಮ ಆನುವಂಶಿಕ ಆಹಾರ ಪದ್ಧತಿಯಾಗಿದೆ. ಇದರ ನಿಯಮಿತ ಸೇವನೆಯು ಆರೋಗ್ಯ, ಆರ್ಥಿಕತೆ ಮತ್ತು ಪರಿಸರವನ್ನು ಸಮತೋಲನಗೊಳಿಸುತ್ತದೆ. ಹೆಚ್ಚು ತೂಕದ ಸಮಸ್ಯೆಯಿಂದ ಬಳಲುತ್ತಿದ್ದರೆ, ಅಕ್ಕಿಯನ್ನು ಕಡಿಮೆ ಬಳಕೆ ಮಾಡಿ ಹೊರತು ಅದನ್ನು ತ್ಯಜಿಸಬೇಡಿ.
Published by:Sandhya M
First published: