• Home
  • »
  • News
  • »
  • lifestyle
  • »
  • Life Hacks: ಇದೇ ಕಾರಣಕ್ಕೆ ನೀವು ಹೊಸ ಬಟ್ಟೆಯನ್ನು ತೊಳೆಯದೇ ಯೂಸ್​ ಮಾಡ್ಬಾರ್ದಂತೆ

Life Hacks: ಇದೇ ಕಾರಣಕ್ಕೆ ನೀವು ಹೊಸ ಬಟ್ಟೆಯನ್ನು ತೊಳೆಯದೇ ಯೂಸ್​ ಮಾಡ್ಬಾರ್ದಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Why You Should Wash New Clothes: ಹೊಸ ಬಟ್ಟೆಯನ್ನು ತೊಳೆಯದೇ ಹಾಕುವುದರಿಂದ ಅನೇಕ ಚರ್ಮದ  ಸಮಸ್ಯೆಗಳು ನಿಮ್ಮನ್ನ ಕಾಡುವುದರಲ್ಲಿ ಅನುಮಾನವಿಲ್ಲ.  ಶಾಪಿಂಗ್ ಮಾಡುವ ಖುಷಿಗಿಂತ ಬಟ್ಟೆ ಹಾಕಿಕೊಳ್ಳುವ ಆತುರ ಎಲ್ಲರಿಗೂ ಇರುತ್ತದೆ. ಆ ಆತುರದಲ್ಲಿ  ತೊಳೆಯದೇ ಧರಿಸಿ ಸಮಸ್ಯೆ ತಂದುಕೊಳ್ಳಬೇಡಿ.

ಮುಂದೆ ಓದಿ ...
  • Share this:

ನೀವು ಹೊಸ ಬಟ್ಟೆಯನ್ನು (New Clothes) ಹಾಕುವ ಮೊದಲು ತೊಳೆಯದೆಯೇ (Wash)  ಧರಿಸುವವರಾಗಿದ್ದರೆ, ಕೆಲವು ದಿನಗಳ ನಂತರ ನೀವು ಅದಕ್ಕೆ ಬೆಲೆಯನ್ನು ತೆರೆಬೇಕಾಗುತ್ತದೆ. ಕೆಂಪು, ತುರಿಕೆ, ನೋವು ಹೀಗೆ ಅನೇಕ ಸಮಸ್ಯೆಗಳನ್ನು (Skin Problems)  ಎದುರಿಸಬೇಕಾಗುತ್ತದೆ. ಹೊಸ ಬಟ್ಟೆಗಳ ನೇರವಾಗಿ ಹಾಕುವ ಮೂಲಕ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ನಾವು ಆಹ್ವಾನ ಕೊಟ್ಟಂತೆ. ನಿಮ್ಮ ಹೊಸ ಬಟ್ಟೆಗಳು ಕೆಲವು ಸೂಕ್ಷ್ಮಾಣುಗಳು ಮತ್ತು ಬ್ಯಾಕ್ಟೀರಿಯಾಗಳನ್ನು  ಹೊಂದಿರುವ ಹೆಚ್ಚಿನ ಸಾಧ್ಯತೆಗಳಿವೆ, ಅದು ಹಲವಾರು ಚರ್ಮದ ಸೋಂಕುಗಳಿಗೆ ಕಾರಣವಾಗಬಹುದು. ಇದಿಷ್ಟೇ, ಅಲ್ಲದೇ, ಈ ಬಟ್ಟೆಗಳನ್ನು ತೊಳೆಯದೇ ಬಳಸಲು ಇನ್ನೂ ಹಲವಾರು ಕಾರಣಗಳಿದೆ. ಆ ಕಾರಣಗಳು ಇಲ್ಲಿದೆ.


ಹೊಸ ಬಟ್ಟೆಗಳು ರೋಗಕಾರಕಗಳು ಮತ್ತು ಸೂಕ್ಷ್ಮಜೀವಿಗಳನ್ನು ಹೊಂದಿರುತ್ತದೆ


ಫ್ಯಾಕ್ಟರಿಯಲ್ಲಿ ಬಟ್ಟೆಗಳನ್ನು ತಯಾರಿಸಿದ ನಂತರ, ಅಂಗಡಿಯನ್ನು ತಲುಪುವ ಮೊದಲು ಅವುಗಳನ್ನು ಪ್ಯಾಕ್ ಮಾಡಿ ವಿವಿಧ ಸಾರಿಗೆ ವಿಧಾನಗಳ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸಲಾಗುತ್ತದೆ. ಬಟ್ಟೆಯನ್ನು ಎಲ್ಲಿ ತಯಾರಿಸಲಾಗಿದೆ, ಅದನ್ನು ಎಲ್ಲಿ ಇರಿಸಲಾಗಿದೆ ಮತ್ತು ಅದನ್ನು ಹೇಗೆ ಸಾಗಿಸಲಾಗಿದೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚುವುದು ಕಷ್ಟ.


ಈ ಪ್ರಕ್ರಿಯೆಯಲ್ಲಿ, ನಿಮ್ಮ ಹೊಸ ಉಡುಪು ಹಲವಾರು ಸೂಕ್ಷ್ಮಜೀವಿಗಳೊಂದಿಗೆ ಸಂಪರ್ಕಕ್ಕೆ ಬಂದಿರಬಹುದು. ನೀವು ಈ ಸೂಕ್ಷ್ಮ ಜೀವಿಗಳನ್ನು ನೋಡಲು ಸಾಧ್ಯವಿಲ್ಲ. ಆದ್ದರಿಂದ, ನಿಮ್ಮ ಸುರಕ್ಷತೆಗಾಗಿ ಧರಿಸುವ ಮೊದಲು ನಿಮ್ಮ ಬಟ್ಟೆಗಳನ್ನು ಸ್ವಚ್ಛಗೊಳಿಸುವುದು ಉತ್ತಮ.


ಹಲವಾರು ಜನರು ಬಟ್ಟೆಗಳನ್ನು ಪ್ರಯತ್ನಿಸಿರಬಹುದು


ಬಟ್ಟೆಗಳನ್ನು ಅಂಗಡಿಗಳಲ್ಲಿ ಜನರು ಮೊದಲು ಹಾಕಿ ಟ್ರೈ ಮಾಡುತ್ತಾರೆ ಮತ್ತು ಅದು ಅವರಿಗೆ ಸೂಟ್​ ಆಗುತ್ತದೆ  ಎಂದರೆ ಮಾತ್ರ ಖರೀದಿಸುತ್ತಾರೆ. ನಾವು ಅಲ್ಲಿಂದ ಬಟ್ಟೆಗಳನ್ನು ಖರೀದಿಸಿದಾಗ ನೀವು ಅದನ್ನು ಮೊದಲು ಎಷ್ಟು ಜನರು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗುವುದಿಲ್ಲ. ನೀವು ಅವುಗಳನ್ನು ಧರಿಸಿದಾಗ ಅವರ ಚರ್ಮದಿಂದ ಸತ್ತ ಚರ್ಮ ಮತ್ತು ಸೂಕ್ಷ್ಮಜೀವಿಗಳು ಬಟ್ಟೆಯ ಮೇಲೆ ಇರಬಹುದು. ಇದು ಡರ್ಮಟೈಟಿಸ್, ತುರಿಕೆಗೆ ಕಾರಣವಾಗಬಹುದು.


ಬಣ್ಣಗಳಲ್ಲಿ ಬಳಸುವ ರಾಸಾಯನಿಕಗಳು


ವಿವಿಧ ರೀತಿಯ ರಾಸಾಯನಿಕಗಳನ್ನು ಮೊದಲು ಬಟ್ಟೆಯನ್ನು ತಯಾರಿಸಲು ಬಳಸಲಾಗುತ್ತದೆ ಮತ್ತು ನಂತರ ಅವುಗಳನ್ನು ನಿರ್ದಿಷ್ಟ ಬಣ್ಣಗಳಲ್ಲಿ ಮಾಡಲಾಗುತ್ತದೆ. ಈ ಎಲ್ಲಾ ರಾಸಾಯನಿಕಗಳು ಚರ್ಮಕ್ಕೆ ತಾಗಿದಾಗ ತುರಿಕೆ ಮತ್ತು ಕೆಂಪು ಬಣ್ಣಕ್ಕೆ ಕಾರಣವಾಗಬಹುದು. ಇದಲ್ಲದೆ, ಬೆವರುವಿಕೆಯಿಂದ ಬಣ್ಣ ಬಿಡಬಹುದು. ಇದು ಚರ್ಮದೊಂದಿಗೆ ಪ್ರತಿಕ್ರಿಯಿಸಿ, ಅಲರ್ಜಿ ಸೇರಿದಂತೆ ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ.


ಇದನ್ನೂ ಓದಿ: ಮೆಹೆಂದಿ ಬಣ್ಣ ಕೆಂಪಾಗಬೇಕು ಅಂದ್ರೆ ಈ ಒಂದು ವಸ್ತು ಇದ್ರೆ ಸಾಕು


ಬಟ್ಟೆಗಳನ್ನು ಧರಿಸುವ ಮೊದಲು ತೊಳೆಯದೇ ಇರುವುದರಿಂದ ನೀವು ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಅನುಭವಿಸದಿದ್ದರೂ, ದದ್ದುಗಳು ಮತ್ತು ಕಿರಿಕಿರಿಯು ಸ್ವಲ್ಪ  ಸಮಸ್ಯೆಯನ್ನು ಉಂಟುಮಾಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಧರಿಸುವ ಮೊದಲು ಬಟ್ಟೆ ಒಗೆಯುವುದು ಉತ್ತಮ ವೈಯಕ್ತಿಕ ನೈರ್ಮಲ್ಯ ಎಂಬುದು ನೆನಪಿಡಿ.




ಬಟ್ಟೆಗಳ ಅಂದ ಹೆಚ್ಚಿಸಲು ಸಾಮಾನ್ಯವಾಗಿ ಡೈಯಿಂಗ್, ಪ್ರಿಂಟಿಂಗ್​ನಂತಹ ಬಹಳಷ್ಟು ರಾಸಾಯನಿಕಗಳನ್ನು ಬಳಸಲಾಗುತ್ತದೆ, ಇದು ನಿಮ್ಮ ಚರ್ಮವನ್ನು ಹಾಳು ಮಾಡುತ್ತದೆ. ಹಾಗಾಗಿ, ನಿಮ್ಮ ಚರ್ಮವನ್ನು ರಾಸಾಯನಿಕಗಳಿಂದ ರಕ್ಷಿಸಲು, ಬಟ್ಟೆಗಳನ್ನು ಖರೀದಿಸಿದ ನಂತರ  ತೊಳೆದು ಬಳಸುವುದು ನಿಮಗೆ ಉತ್ತಮ.


ಇದಲ್ಲದೆ, ಹೊಸ ಬಟ್ಟೆಗಳು ಬೆವರಿನ ಕಾರಣದಿಂದ ಹೆಚ್ಚು ಕಿರಿಕಿರಿಯನ್ನು ಉಂಟುಮಾಡುತ್ತದೆ. ನೀವು ಮುಖ್ಯವಾಗಿ ಶಿಶುಗಳ ಬಟ್ಟೆಗಳನ್ನು ಯಾವಾಗಲೂ ತೊಳೆಯಬೇಕು ಏಕೆಂದರೆ ಅವರ ಚರ್ಮವು ವಯಸ್ಕರಿಗಿಂತ ಮೃದುವಾಗಿರುತ್ತದೆ.


ಇದನ್ನೂ ಓದಿ: ಉಪ್ಪಿನ ಬದಲು ನಿಮ್ಮ ಆಹಾರದಲ್ಲಿ ಈ ವಸ್ತುಗಳನ್ನು ಬಳಸಿ, ಆರೋಗ್ಯಕ್ಕೆ ಬಹಳ ಒಳ್ಳೆಯದು


ಹೊಸ ಬಟ್ಟೆಯನ್ನು ತೊಳೆಯದೇ ಹಾಕುವುದರಿಂದ ಅನೇಕ ಚರ್ಮದ  ಸಮಸ್ಯೆಗಳು ನಿಮ್ಮನ್ನ ಕಾಡುವುದರಲ್ಲಿ ಅನುಮಾನವಿಲ್ಲ.  ಶಾಪಿಂಗ್ ಮಾಡುವ ಖುಷಿಗಿಂತ ಬಟ್ಟೆ ಹಾಕಿಕೊಳ್ಳುವ ಆತುರ ಎಲ್ಲರಿಗೂ ಇರುತ್ತದೆ. ಆ ಆತುರದಲ್ಲಿ  ತೊಳೆಯದೇ ಧರಿಸಿ ಸಮಸ್ಯೆ ತಂದುಕೊಳ್ಳಬೇಡಿ.

Published by:Sandhya M
First published: