Rangoli: ರಂಗೋಲಿ ಹಾಕಲು ಕಲ್ಲಿನ ಪುಡಿ ಬಿಡಿ, ಅಕ್ಕಿ ಪುಡಿ ಹಿಡಿರಿ

ಮನೆ ಮುಂದೆ ರಂಗೋಲಿ ನೋಡುವುದೇ ಒಂದು ಸುಂದರ ಅನುಭವ. ಸಾಮಾನ್ಯ ದಿನಗಳಲ್ಲಿ ರಂಗೋಲಿ ಕೆಲವೊಮ್ಮೆ ಚಿಕ್ಕದಾಗಿದ್ದರೆ, ಹಬ್ಬ-ಹರಿದಿನಗಳಲ್ಲಿ ಆ ರಂಗೋಲಿ ದೊಡ್ಡ ರೂಪವನ್ನು ಪಡೆದು ಮನೆಯ ಅಂಗಳದ ತುಂಬಾ ತನ್ನ ಚೆಲುವನ್ನು ಹರಡುತ್ತಿರುತ್ತದೆ. ಈ ರಂಗೋಲಿಯಿಂದ ಇನ್ನೊಂದು ಕುತೂಹಲಕಾರಿ ವಿಷಯ ತಿಳಿಯುತ್ತೆ ಅದು ಏನು ಎಂದು ನಿಮಗೆ ಗೊತ್ತಿರಬಹುದು ಅಥವಾ ಇಲ್ಲದೇ ಇರಬಹುದು, ಆ ವಿಚಾರ ನಾವು ನಿಮಗೆ ಈಗ ಹೇಳ್ತಿವಿ, ಕೇಳಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಪ್ರತಿದಿನ ಮುಂಜಾನೆ ಮನೆಯ ಅಂಗಳದಲ್ಲಿ ಚಂದದ ರಂಗೋಲಿ (Rangoli) ಇದ್ದರೆನೆ ಆ ಮನೆಗೆ ಒಂದು ಕಳೆ ಎಂದು ಹೇಳಬಹುದು. ಪ್ರತಿಯೊಬ್ಬರ ಮನೆಯಲ್ಲಿ ಅಮ್ಮನೆ ಬೇಗ ಎದ್ದೇಳೆವುದು, ಅವರು ಮಾಡುವ ಮೊದಲ ಕೆಲಸ ಮನೆ ಸಾರಿಸಿ, ಸುಂದರ ರಂಗೋಲಿ ಹಾಕುವುದು. ಮನೆ (Home) ಮುಂದೆ ರಂಗೋಲಿ ನೋಡುವುದೇ ಒಂದು ಸುಂದರ ಅನುಭವ. ಸಾಮಾನ್ಯ ದಿನಗಳಲ್ಲಿ ರಂಗೋಲಿ ಕೆಲವೊಮ್ಮೆ ಚಿಕ್ಕದಾಗಿದ್ದರೆ, ಹಬ್ಬ-ಹರಿದಿನಗಳಲ್ಲಿ ಆ ರಂಗೋಲಿ ದೊಡ್ಡ ರೂಪವನ್ನು ಪಡೆದು ಮನೆಯ ಅಂಗಳದ ತುಂಬಾ ತನ್ನ ಚೆಲುವನ್ನು ಹರಡುತ್ತಿರುತ್ತದೆ. ಈ ರಂಗೋಲಿಯಿಂದ ಇನ್ನೊಂದು ಕುತೂಹಲಕಾರಿ ವಿಷಯ (Interesting Topic) ತಿಳಿಯುತ್ತೆ ಅದು ಏನು ಎಂದು ನಿಮಗೆ ಗೊತ್ತಿರಬಹುದು ಅಥವಾ ಇಲ್ಲದೇ ಇರಬಹುದು, ಆ ವಿಚಾರ ನಾವು ನಿಮಗೆ ಈಗ ಹೇಳ್ತಿವಿ, ಕೇಳಿ.

ಮನೆ ಮುಂದೆ ರಂಗೋಲಿ ನೋಡಿ ಮಹಿಳೆಯರ ಮನಸ್ಥಿತಿಯನ್ನು ಅಳೆಯಬಹುದು
ಮನೆ ಮುಂದೆ ರಂಗೋಲಿ ನೋಡಿ ನೀವು ಮನೆಯ ಮಹಿಳೆಯರ ಆ ದಿನದ ಮನಸ್ಥಿತಿಯನ್ನು ಅಳೆಯಬಹುದು. ಮನೆ ಮುಂದೆ ಆ ದಿನ ತುಂಬಾ ಚೆಂದದ ರಂಗೋಲಿ ಇತ್ತೆಂದರೆ ಆ ದಿನ ಅಮ್ಮನ ಮನಸ್ಥಿತಿ ಉತ್ತಮ ಇಲ್ಲವೆಂದರೆ ಇಲ್ಲ ಎಂಬುದು ಜಗತ್ತಿಗೆ ಗೊತ್ತಿರೋ ವಿಚಾರ ಆಗಿದೆ.

ಆದರೆ ನಮ್ಮಲ್ಲಿ ಬಹುತೇಕರಿಗೆ ಗೊತ್ತಿರದೆ ಇರುವ ವಿಷಯ ಎಂದರೆ ರಂಗೋಲಿಯನ್ನು ಮನೆಯ ಮುಂದೆ ಕೇವಲ ಅಲಂಕಾರಕ್ಕೆಂದು ಸುಂದರವಾಗಿ ಹಾಕಲಾಗುವುದಿಲ್ಲ. ಈ ರಂಗೋಲಿ ಹಾಕುವುದರಲ್ಲಿ ವಿವಿಧ ರೀತಿಗಳಿವೆ. ಅವುಗಳೆಂದರೆ- ಚಿಕ್ಕಿ ಬಳಸಿ ರಂಗೋಲಿ ಹಾಕುವುದು, ಡಾಟ್ಸ್‌ ಬಳಸಿ ಹಾಕುವುದು ಮತ್ತೊಂದು ಉದ್ದದ ಗೆರೆಗಳನ್ನು ಬಳಸಿ ರಂಗೋಲಿ ಹಾಕುವುದು.

ಗಣಿತದ 6 ಗುಂಪುಗಳ ಕೌಶಲ್ಯಗಳನ್ನು ಒಳಗೊಂಡ ರಂಗೋಲಿ 
ಆಂಗ್ಲ ದಿನಪತ್ರಿಕೆಯಾದ ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನಲ್ಲಿನ ಲೇಖನವೊಂದರ ಪ್ರಕಾರ, ರಂಗೋಲಿಯು ಗಣಿತದ 6 ಗುಂಪುಗಳ ಕೌಶಲ್ಯಗಳನ್ನು ಒಳಗೊಂಡಿರುತ್ತದೆ. ಈ ರಂಗೋಲಿಗಳಲ್ಲಿ ಎಣಿಕೆ, ಅಳತೆ, ವಿನ್ಯಾಸ, ಗುರುತಿಸುವಿಕೆ, ಪ್ರಯೋಗ ಮತ್ತು ವಿವರಿಸುವ ಕಲೆಯನ್ನು ನಾವು ಕಾಣಬಹುದಾಗಿದೆ.

ಇದನ್ನೂ ಓದಿ: Expensive Cities: ಮರ್ಸರ್ ಅಧ್ಯಯನದ ಪ್ರಕಾರ ಭಾರತಕ್ಕೆ ಬರುವ ವಲಸಿಗರಿಗೆ ಈ ಎರಡು ನಗರಗಳು ದುಬಾರಿ ಅಂತೆ

"ಒಂದು ಪೂರ್ಣವಾದ ರಂಗೋಲಿ ಹಾಕಬೇಕೆಂದರೆ ಆ ಸುಂದರ ರಂಗೋಲಿಯನ್ನು ರೂಪಿಸಲು ಗಣಿತದಲ್ಲಿನ ಸುಂದರವಾದ ಜ್ಯಾಮಿತೀಯ ಮಾದರಿಗಳನ್ನು ರೂಪಿಸಬೇಕಾಗುತ್ತದೆ. ಈ ಗಣಿತದ ಜ್ಯಾಮಿತಿಯು ಚುಕ್ಕೆಗಳು, ಶೃಂಗಗಳು, ಚಾಪಗಳು ಮತ್ತು ರೇಖೆಗಳ ಎಣಿಕೆಗಳನ್ನು ಒಳಗೊಂಡಿರುತ್ತದೆ" ಎಂದು ಲೇಖನದಲ್ಲಿ ಪ್ರಕಟವಾಗಿದೆ.

ರಂಗೋಲಿ ವಿಚಾರದ ಬಗ್ಗೆ  ವರದಿ ಏನು ಹೇಳಿದೆ 
ಈ ವರದಿಯ ಕುರಿತಂತೆ ಸ್ಯಾನ್ ಫ್ರಾನ್ಸಿಸ್ಕೋ ವಿಶ್ವವಿದ್ಯಾನಿಲಯದ ದೇವತಾಶಾಸ್ತ್ರ/ಧಾರ್ಮಿಕ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ವಿಜಯ ನಾಗರಾಜನ್ ಅವರು ರಂಗೋಲಿ ವಿಚಾರದ ಬಗ್ಗೆ ಮಾತನಾಡುವ 'ಫೀಡಿಂಗ್ ಎ ಥೌಸಂಡ್ ಸೋಲ್ಸ್: ವುಮೆನ್, ರಿಚುವಲ್ ಅಂಡ್ ಇಕಾಲಜಿ ಇನ್ ಇಂಡಿಯಾ - ಆನ್ ಎಕ್ಸ್‌ಪ್ಲೋರೇಶನ್ ಆಫ್ ದಿ ಕೋಲಮ್‌' ಎಂಬ ಪುಸ್ತಕವನ್ನು ಬರೆದಿದ್ದಾರೆ. ತಮಿಳುನಾಡಿನಲ್ಲಿ ಕೋಲಮ್‌ ಎಂದರೆ ರಂಗೋಲಿ ಅರ್ಥ ಬರುತ್ತದೆ.

ಈ ಪುಸ್ತಕದಲ್ಲಿ “ನಮ್ಮ ಮನೆಗೆ ಆರೋಗ್ಯ ,ಸಂಪತ್ತು ಮತ್ತು ಎಲ್ಲಾ ಭೌತಿಕ ರೂಪಗಳ ಸೌಂದರ್ಯ ದೇವತೆಯಾದ ಮಹಾಲಕ್ಷ್ಮಿಯನ್ನು ಸ್ವಾಗತಿಸಲು ಮತ್ತು ಭೌತಿಕ ಸಂಪತ್ತು ಹಾಗೂ ಆಧ್ಯಾತ್ಮಿಕತೆ ಗುಣವನ್ನು ನಮ್ಮ ಮನೆಯ ಎಲ್ಲರಲ್ಲೂ ರೂಢಿಸುವಂತೆ ಮಾಡಲು ಮತ್ತು ಭೂತಾಯಿಗೆ ನಮ್ಮ ಕಡೆಯಿಂದ ಅನೇಕ ತೊಂದರೆಗಳು ಇತ್ತಿಚೀಗೆ ಆಗುತ್ತಿವೆ. ಆ ತೊಂದರೆಗಳಿಗೆ ಕ್ಷಮೆ ಕೇಳಲು ಕೂಡ ಈ ರಂಗೋಲಿಯನ್ನು ಮನೆ ಮುಂದೆ ಹಾಕಲಾಗುತ್ತದೆ” ಎಂದು ವಿಜಯ್‌ ನಾಗರಾಜನ್‌ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.

ಅಕ್ಕಿ ಪುಡಿಯಿಂದ ರಂಗೋಲಿ ಹಾಕುವುದೇಕೆ 
ತಮಿಳುನಾಡಿನಲ್ಲಿ ರಂಗೋಲಿಯನ್ನು ಅಕ್ಕಿ ಪುಡಿಯಿಂದ ಹಾಕಲಾಗುತ್ತದೆ. ಏಕೆಂದರೆ ಈ ಅಕ್ಕಿ ಪುಡಿಯನ್ನು ಕ್ರಿಮಿ-ಕೀಟಗಳು ತಿನ್ನಲಿ ಅವುಗಳಿಗೆ ಸ್ವಲ್ಪ ಮಟ್ಟಿಗಾದರೂ ಆಹಾರ ಆಗಲಿ ಎಂದು ಇದರಿಂದ ನಾವು ಮಾಡಿರುವ ಪಾಪ-ಕರ್ಮಗಳು ಸ್ವಲ್ಪ ಮಟ್ಟಿಗಾದರೂ ಕಡಿಮೆ ಆಗಲಿ ಎಂದು ತಮಿಳುನಾಡಿನಲ್ಲಿ ರಂಗೋಲಿಗೆ ಅಕ್ಕಿ ಪುಡಿಯನ್ನು ಬಳಸಲಾಗುತ್ತದೆ ಎಂದು ತಮ್ಮ ಪುಸ್ತಕದಲ್ಲಿ ಇದರ ಕುರಿತು ವಿಜಯ್‌ ನಾಗರಾಜನ್‌ ವಿವರಿಸಿದ್ದಾರೆ.

ಇದನ್ನೂ ಓದಿ: Dangerous Garden: ಇಲ್ಲಿ ಹೂವು, ಗಿಡ ಮೂಸಿದರೆ ನಿಮ್ಮ ಕಥೆ ಅಷ್ಟೇ! ಈ ವಿಷಕಾರಿ ಉದ್ಯಾನವನ ಸಖತ್ ಡೇಂಜರ್!

ಈಗ ಗೊತ್ತು ಆಯ್ತು ಅಲ್ವಾ ರಂಗೋಲಿಯನ್ನು ಮನೆ ಮುಂದೆ ಏಕೆ ಹಾಕುತ್ತಾರೆ ಎಂಬುದು. ನಿಮಗೂ ಈ ವಿಚಾರ ಈಗ ತಿಳಿತಲ್ವಾ, ಹಾಗಾದರೆ ನೀವೂ ಸಹ ರಂಗೋಲಿಯನ್ನು ಅಕ್ಕಿ ಪುಡಿಯಿಂದ ಹಾಕುವ ಮನಸ್ಸು ಮಾಡಿ ಮತ್ತು ಅದರಲ್ಲಿ ವಿಧ-ವಿಧವಾದ ರಂಗೋಲಿಯ ಚಿತ್ತಾರ ಬಿಡಿಸಿ ನಿಮ್ಮ ಮನೆ ಅಂಗಳದ ಚೆಂದವನ್ನು ಮತ್ತಷ್ಟು ಅಂದವನ್ನಾಗಿಸಿ.
Published by:Ashwini Prabhu
First published: