Winter Tips: ಚಳಿಗಾಲದಲ್ಲಿ ತಣ್ಣನೆಯ ಇಲ್ಲವೇ ಬಿಸಿ ಆಹಾರದಲ್ಲಿ ಯಾವುದು ಸೂಕ್ತ..?
Hot Food: ಆಯುರ್ವೇದದ ಪ್ರಕಾರ ಬೆಳಗ್ಗಿನ ಉಪಹಾರದಲ್ಲಿ ಬಿಸಿಯಾದ ಆಹಾರ ಪದಾರ್ಥ ಸೇವನೆ ಮಾಡುವುದು ಉತ್ತಮ.. ಹೀಗೆ ಬಿಸಿಯಾದ ಆಹಾರ ಸೇವನೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿ ಇರಲಿದೆ. ತಜ್ಞರ ಪ್ರಕಾರ ಚಳಿಗಾಲದಲ್ಲಿ ತಣ್ಣನೆಯ ವಸ್ತುಗಳನ್ನು ತಿನ್ನದಂತೆ ಕಾಳಜಿವಹಿಸಬೇಕು
ಚಳಿಗಾಲ (Winter) ಬಂತು ಅಂದ್ರೆ ಸಾಕು ದೇಹವನ್ನು(Body) ಬೆಚ್ಚಗಿಡುವುದು ಒಂದು ದೊಡ್ಡ ಸವಾಲು. ಕೊಂಚವೂ ಕೂಡ ದೇಹಕ್ಕೆ ಚಳಿ (Cold) ಆಗದಂತೆ ನಮ್ಮ ದೇಹವನ್ನು ರಕ್ಷಣೆ ಮಾಡಿಕೊಂಡು ಎಷ್ಟು ಸಾಧ್ಯವೋ ಅಷ್ಟು ಬೆಚ್ಚಗೆ ಇರಲು ಬಯಸುತ್ತೇವೆ.. ಅಲ್ಲದೆ ಮನೆಯಲ್ಲಿ ಬಿಸಿಬಿಸಿಯಾದ ಆಹಾರಪದಾರ್ಥ (Hot Food) ಬಿಸಿ ನೀರು (Hot Water) ಸೇವನೆ ರೂಗಳನ್ನು ಮಾಡುವ ಮೂಲಕ ಮತ್ತಷ್ಟು ದೇಹವನ್ನು ಬೆಚ್ಚಗೆ ಇರಿಸಿ ಶೀತದಿಂದ ರಕ್ಷಣೆ ಪಡೆಯಲು ಪ್ರಯತ್ನಪಡುತ್ತೇವೆ.. ಹೀಗಾಗಿ ಚಳಿಗಾಲದಲ್ಲಿ ತಣ್ಣಗೆ ಇರುವ ಆಹಾರ ಪದಾರ್ಥಗಳ ಸೇವನೆಯ ತಂಟೆಗೆ ಅನೇಕ ಜನರು ಹೋಗುವುದಿಲ್ಲ.. ತಣ್ಣನೆ ಆಹಾರ ಪದಾರ್ಥ ತಿನ್ನುವುದರಿಂದ ಎಲ್ಲಿ ಆರೋಗ್ಯ ಹಾಳಾಗುತ್ತದೆ ಎಂಬ ಭಯವಿರುತ್ತದೆ.. ಹೀಗಾಗಿ ಬಿಸಿ ಆಹಾರದ ಮೊರೆಹೋಗುತ್ತಾರೆ.. ಹಾಗಿದ್ರೆ ಚಳಿಗಾಲದಲ್ಲಿ ಬಿಸಿ ಬಿಸಿಯಾದ ಆಹಾರ ಸೇವನೆ ಮಾಡುವುದರಿಂದ ದೇಹಕ್ಕೆ ಸಿಗುವ ಪ್ರಯೋಜನಗಳು ಏನು.. ಚಳಿಗಾಲದಲ್ಲಿ ಬಿಸಿ ಆಹಾರ ಸೇವಿಸುವುದು ಎಷ್ಟು ಉತ್ತಮ ಎನ್ನುವ ಮಾಹಿತಿ ಇಲ್ಲಿದೆ..
ತಣ್ಣನೆ ಆಹಾರಸೇವನೆಯ ಮಾಡದಂತೆ ವೈದ್ಯರ ಸಲಹೆ
ಚಳಿಗಾಲದಲ್ಲಿ ಸೂರ್ಯನ ಶಾಖ ಇರುವ ಹಿನ್ನೆಲೆಯಲ್ಲಿ ದೇಹಕ್ಕೆ ಹೆಚ್ಚಿನ ಉಷ್ಣಾಂಶ ಬೇಕಾಗುತ್ತದೆ.. ಹೀಗಾಗಿ ಆಯುರ್ವೇದದ ಪ್ರಕಾರ ಬೆಳಗ್ಗಿನ ಉಪಹಾರದಲ್ಲಿ ಬಿಸಿಯಾದ ಆಹಾರ ಪದಾರ್ಥ ಸೇವನೆ ಮಾಡುವುದು ಉತ್ತಮ.. ಹೀಗೆ ಬಿಸಿಯಾದ ಆಹಾರ ಸೇವನೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿ ಇರಲಿದೆ. ತಜ್ಞರ ಪ್ರಕಾರ ಚಳಿಗಾಲದಲ್ಲಿ ತಣ್ಣನೆಯ ವಸ್ತುಗಳನ್ನು ತಿನ್ನದಂತೆ ಕಾಳಜಿವಹಿಸಬೇಕು. ಹೀಗಾಗಿ ವೈದ್ಯರು ತನ್ನ ವಸ್ತುಗಳನ್ನು ಚಳಿಗಾಲದಲ್ಲಿ ಸೇವನೆ ಮಾಡದಂತೆ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಹೇಳುತ್ತಾರೆ.
ಆಯುರ್ವೇದದ ಪ್ರಕಾರ ನಮ್ಮ ಜೀರ್ಣಿಸಿಕೊಳ್ಳುವ ಸಾಮರ್ಥ್ಯವು ಸೂರ್ಯನಿಂದ ಶಕ್ತಿಯನ್ನು ಪಡೆಯುತ್ತದೆ.. ಸೂರ್ಯನ ಬೆಳಕು ಚಯಾಪಚಯ ಕ್ರಿಯೆಯ ಮೂಲವಾಗಿದೆ.. ಚಳಿಗಾಲದಲ್ಲಿ ಸೂರ್ಯನ ಬೆಳಕು ಬೀಳದೆ ಇರುವುದರಿಂದ ಹೆಚ್ಚು ಬಿಸಿಯಾದ ಆಹಾರ ಸೇವನೆ ಮಾಡುವುದು ಆರೋಗ್ಯಕರ ಎಂದು ಕರೆಯಲಾಗುತ್ತದೆ . ನಮ್ಮ ಜೀರ್ಣಕ್ರಿಯೆಯ ಸಂಪೂರ್ಣ ಸಾಮರ್ಥ್ಯವು ದಿನವಿಡಿ ಸೂರ್ಯನ ಶಕ್ತಿ ಸ್ಥಾನ ಮತ್ತು ಚಲನೆಯ ಅವಲಂಬನೆ ಮಾಡಿರುವುದರಿಂದ, ಸರಿಯಾದ ಆಹಾರ ಪದಾರ್ಥಗಳು ದೇಹವನ್ನು ಬೆಚ್ಚಗಿಡಲು ಸಹಕರಿಸುತ್ತದೆ.
ಇನ್ನು ಬೆಳಗಿನ ಉಪಾಹಾರವು ದಿನದ ಮೊದಲ ಊಟವಾಗಿದೆ. ಮುಂಜಾನೆ ಸೂರ್ಯೋದಯದೊಂದಿಗೆ, ಅಗ್ನಿ ಎಂದರೆ ನಮ್ಮ ಹೊಟ್ಟೆಯ ಜೀರ್ಣಕಾರಿ ಬೆಂಕಿ ಮತ್ತು ಹಸಿವು ಸಹ ಜಾಗೃತಗೊಳ್ಳುತ್ತದೆ. ಆದಾಗ್ಯೂ, ಅದರ ಸಾಮರ್ಥ್ಯವು ಪೂರ್ಣವಾಗಿಲ್ಲ, ಆದ್ದರಿಂದ ನೀವು ದಿನವಿಡೀ ಆಹಾರ ಪದಾರ್ಥಗಳನ್ನು ಜೀರ್ಣಿಸಿಕೊಳ್ಳುವ ರೀತಿಯಲ್ಲಿ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸಿದ್ಧಪಡಿಸಲು ಬಯಸಿದರೆ, ನಂತರ ಲಘು ಮತ್ತು ಬಿಸಿ ಉಪಹಾರವನ್ನು ಸೇವಿಸಿ. ಇದರ ಜೀರ್ಣಕ್ರಿಯೆಯು ಸುಲಭವಾಗುತ್ತದೆ ಮತ್ತು ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಸಾಮರ್ಥ್ಯವನ್ನು ಸುಧಾರಿಸುತ್ತದೆ.
ಬಿಸಿ ಆಹಾರ ಸೇವನೆಯಿಂದ ಉತ್ತಮ ಜೀರ್ಣಕ್ರಿಯೆ
ಇನ್ನು ಬೆಳ್ಳಂಬೆಳಗ್ಗೆ ನಾವು ಬಿಸಿ ಆಹಾರ ಸೇವನೆ ಮಾಡುವುದು ಅದು ನಮ್ಮ ದೇಹಕ್ಕೆ ಒಂದು ವ್ಯಾಯಾಮ ಇದ್ದಂತೆ.. ಬಿಸಿ ವಸ್ತು ಸೇವನೆಯ ಬಳಿಕ ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಅಲ್ಲದೆ 12.00 ರಿಂದ 02.00 ಘಂಟೆಯ ಒಳಗೆ ಊಟ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆಯ ಸಾಮರ್ಥ್ಯ ಅಧಿಕವಾಗಿ ಊಟ ಸರಾಗವಾಗಿ ಜೀರ್ಣವಾಗಲಿದೆ.
ಚಳಿಗಾಲದಲ್ಲಿ ದೇಹ ಎಷ್ಟು ಸಾಧ್ಯವೋ ಅಷ್ಟು ಬೆಚ್ಚಗೆ ಇರಬೇಕು.. ಹೀಗಾಗಿ ತಜ್ಞರು ಹೇಳುವ ಪ್ರಕಾರ ಚಳಿಗಾಲದಲ್ಲಿ ತಣ್ಣನೆಯ ಉಪಹಾರವನ್ನು ಮಾಡಿದಾಗ ಅದು ಬೆಂಕಿಗೆ ನೀರು ಸುರಿದಂತೆ ಇರುತ್ತದೆ. ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಬದಲಾಗಿ ಸಾಕಷ್ಟು ಹಾನಿಯಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಬಿಸಿ ಮತ್ತು ತಾಜಾ ಲಘು ಉಪಹಾರವನ್ನು ಸೇವಿಸಿದರೆ ದೇಹ ಸದಾ ವಾರ್ಮ್ ಆಗಿರುತ್ತದೆ.. ಇನ್ನು ಅಧಿಕ ಪಿತ್ತ ದೋಷದಿಂದ ಬಳಲುತ್ತಿರುವವರು ತಣ್ಣನೆಯ ಉಪಹಾರ ಸೇವನೆ ಮಾಡಿದರೆ ಅದು ಅವರಿಗೆ ಉತ್ತಮವಾಗಿದೆ.. ಹೀಗಾಗಿ ಕೆಲವರು ತಮ್ಮ ರೋಗ ಹಾಗೂ ಸ್ಥಿತಿಯ ಅನುಸಾರ ತಣ್ಣಗಿನ ಉಪಹಾರ ಸೇವನೆ ಮಾಡಬೇಕು ಇಲ್ಲದಿದ್ದರೆ ಆರೋಗ್ಯದ ಕಾಳಜಿಯಿಂದ ಬಿಸಿ ಆಹಾರ ಸೇವನೆ ಮಾಡುವುದು ಸೂಕ್ತ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ