Black Pepper Benefits: ಕರಿಮೆಣಸು ಟೆಸ್ಟ್​​​ಗೆ​​ ಮಾತ್ರವಲ್ಲ, ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ

ಕರಿಮೆಣಸು ಒಂದು ಔಷಧೀಯ ಗುಣಗಳನ್ನು ಹೊಂದಿರುವ ಮಸಾಲೆ ಪದಾರ್ಥವಾಗಿದೆ. ಇದನ್ನು ನಾವು ಹೆಚ್ಚಾಗಿ ಆಹಾರದಲ್ಲಿ ಬಳಸುತ್ತೇವೆ. ಆದರೆ, ಇದು ಇತರೆ ಕೆಲ ಆರೋಗ್ಯಕರ ಲಾಭಗಳನ್ನು ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕರಿಮೆಣಸು (Black Pepper) ಅಥವಾ ಕಾಳು ಮೆಣಸನ್ನು ನಾವು ನಾನಾ ರೀತಿಯಿ ಅಡುಗೆಯಲ್ಲಿ ಬಳಸುತ್ತೆವೆ. ಅಷ್ಟೇ ಅಲ್ಲದೆ ಕೆಲವೊಮ್ಮೆ ಆಯುರ್ವೇದಿಕ್ ( Ayurvedic) ಔಷಧಿಗಳಲ್ಲೂ ಇದನ್ನು ಬಳಸುತ್ತಾರೆ. ನಮ್ಮ ಅಡುಗೆಮನೆ (Kitchen Room) ಯಲ್ಲಿರುವ ಈ ಸಣ್ಣ ಮಸಾಲೆ ಪದಾರ್ಥವು ಎಷ್ಟೊಂದು ಆರೋಗ್ಯಕರ ಗುಣಗಳನ್ನು ಹೊಂದಿದೆ.  ಕರಿಮೆಣಸು ಒಂದು ಔಷಧೀಯ ಗುಣಗಳನ್ನು ಹೊಂದಿರುವ ಮಸಾಲೆ ಪದಾರ್ಥವಾಗಿದೆ. ಇದನ್ನು ನಾವು ಹೆಚ್ಚಾಗಿ ಆಹಾರದಲ್ಲಿ ಬಳಸುತ್ತೇವೆ. ಆದರೆ, ಇದು ಇತರೆ ಕೆಲ ಆರೋಗ್ಯಕರ ಲಾಭಗಳನ್ನು ಹೊಂದಿದೆ.  ಇದು ಲಭ್ಯವಿರುವ ಶ್ರೀಮಂತ ಮಸಾಲೆಗಳಲ್ಲಿ ಒಂದಾಗಿದೆ ಮತ್ತು ಪ್ರಪಂಚದಾದ್ಯಂತ ಮಸಾಲೆ ವ್ಯಾಪಾರದಲ್ಲಿ ಪ್ರಮುಖವಾಗಿತ್ತು. ಹಾಗಾದ್ರೆ ಕರಿಮೆಣಸಿನಿಂದ ಆರೋಗ್ಯ (Health) ಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ನೋಡೋಣ.

    ಕೂದಲಿನ ಆರೋಗ್ಯಕ್ಕೆ ಉತ್ತಮ

    ಕರಿಮೆಣಸನ್ನು ನೀವು ಮೊಸರಿನ ಜೊತೆಗೆ ಮಿಶ್ರಣ ಮಾಡಿ ಆ ಮಿಶ್ರಣವನ್ನು ಕೂದಲಿಗೆ ಹಚ್ಚಬಹುದು. ಹೀಗೆ ಮಾಡುವುದರಿಂದ ಬಿಳಿ ಕೂದಲು ಕಪ್ಪಾಗಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಮೊದಲು ಕರಿಮೆಣಸನ್ನು ಮಿಕ್ಸಿಯಲ್ಲಿ ಪುಡಿಮಾಡಿ ಮತ್ತು ಅದರ ಉತ್ತಮ ಪುಡಿಯನ್ನು ಬೇರ್ಪಡಿಸಿ. ಈಗ ಅರ್ಧ ಟೀಚಮಚ ಉತ್ತಮ ಕರಿಮೆಣಸಿನ ಪೌಡರ್ ಅನ್ನು ಒಂದು ಬಟ್ಟಲಿನಲ್ಲಿ ಅದರ ಎರಡು ಪಟ್ಟು ಮೊಸರಿನ ಜೊತೆಗೆ ಬೆರೆಸಿ ಅದನ್ನು ಕೂದಲಿಗೆ ಹಚ್ಚಿ. 20 ರಿಂದ 25 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ.

    ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಪ್ರಮಾಣವನ್ನು ನಿರ್ವಹಿಸುತ್ತದೆ

    ಕರಿ ಮೆಣಸಿನಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಹಾಗೂ ಸಕ್ಕರೆ ಪ್ರಮಾಣವನ್ನು ನೀವು ನಿಯಂತ್ರಿಸಬಹುದು. ಕರಿಮೆಣಸು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ, ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಪೈಪರಿನ್ ಎಂಬ ಪ್ರಬಲವಾದ ಉತ್ಕರ್ಷಣ ನಿರೋಧಕದಿಂದ ಕೂಡಿದೆ. ಈ ಪೋಷಕಾಂಶವು ನಿಮ್ಮ ಜೀವಕೋಶಗಳಿಗೆ ಸ್ವತಂತ್ರ ರಾಡಿಕಲ್ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: Herbal Tea Shops: ಹರ್ಬಲ್​ ಟೀ ಕುಡಿಬೇಕಾ? ಹಾಗಾದ್ರೆ ಬೆಂಗಳೂರಿನ ಈ ಶಾಪ್​ಗಳಿಗೆ ಹೋಗಿ ರಿಫ್ರೆಶ್​ ಆಗಿ

    ಕೀಲು ನೋವು ನಿವಾರಕ

    ಸಂಧಿವಾತ, ಕೀಲುನೋವು ಹಾಗೂ ತುರಿಕೆಯಂತಹ ಆರೋಗ್ಯದ ಸಮಸ್ಯೆಗಳನ್ನು ನಿವಾರಿಸಲು ಕೂಡ ನೀವು ಕರಿಮೆಣಸನ್ನು ಬಳಸಬಹುದು. ಇದಕ್ಕಾಗಿ ನೀವು ಕರಿಮೆಣಸನ್ನು ಬೇಯಿಸಿದ ಎಣ್ಣೆಯನ್ನು ನೋವಿನ ಜಾಗಕ್ಕೆ ಹಚ್ಚಿ ಮಾಲೀಶ್ ಮಾಡಬೇಕು.

    ಕೀಲು ನೋವು ನಿವಾರಕ

    ಸಂಧಿವಾತ, ಕೀಲುನೋವು ಹಾಗೂ ತುರಿಕೆಯಂತಹ ಆರೋಗ್ಯದ ಸಮಸ್ಯೆಗಳನ್ನು ನಿವಾರಿಸಲು ಕೂಡ ನೀವು ಕರಿಮೆಣಸನ್ನು ಬಳಸಬಹುದು. ಇದಕ್ಕಾಗಿ ನೀವು ಕರಿಮೆಣಸನ್ನು ಬೇಯಿಸಿದ ಎಣ್ಣೆಯನ್ನು ನೋವಿನ ಜಾಗಕ್ಕೆ ಹಚ್ಚಿ ಮಾಲೀಶ್ ಮಾಡಬೇಕು.

    ಫ್ರೀ ರಾಡಿಕಲ್ ಗಳ ಹಾನಿಯ ವಿರುದ್ಧ ಹೋರಾಡುತ್ತದೆ

    ಕರಿಮೆಣಸು ಉತ್ಕರ್ಷಣ ನಿರೋಧಕ  ಗುಣಗಳನ್ನು ಹೊಂದಿದೆ, ಇದು ಸ್ವತಂತ್ರ ರಾಡಿಕಲ್ ಹಾನಿಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಚರ್ಮ ಮತ್ತು ದೇಹದ ಅಕಾಲಿಕ ವಯಸ್ಸಿಗೆ ಫ್ರೀ ರಾಡಿಕಲ್ ಹಾನಿ ಮುಖ್ಯ ಕಾರಣ. ಕರಿಮೆಣಸು ಮತ್ತು ಅದರ ಸಾರಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಮ್ಮ ನರಮಂಡಲದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ.

    ಇದನ್ನೂ ಓದಿ: Dates Benefits: ದಿನಕ್ಕೊಂದು ಖರ್ಜೂರ ತಿಂದ್ರೆ ಮೂಳೆ ಆರೋಗ್ಯಕ್ಕೆ ಒಳ್ಳೆಯದಂತೆ

    ಚರ್ಮಕ್ಕೂ ಒಳ್ಳೆಯದು

    ಇದನ್ನು ನಿಮ್ಮ ಆಹಾರಕ್ಕೆ ಸೇರಿಸುವುದರಿಂದ ಅನಗತ್ಯ ಚರ್ಮದ ಸುಕ್ಕುಗಳನ್ನೂ ತಡೆಯುತ್ತದೆ. ಪ್ರಕೃತಿಯು ನಮಗೆ ಒದಗಿಸಿದ ಅತ್ಯುತ್ತಮ ಎಕ್ಸ್‌ಫೋಲಿಯೇಟರ್‌ಗಳಲ್ಲಿ ಒಂದಾಗಿದೆ. ಆದರೂ ಇದನ್ನು ನೇರವಾಗಿ ಬಳಸಬೇಡಿ, ಇದಕ್ಕೆ ಸ್ವಲ್ಪ ಜೇನುತುಪ್ಪ, ಮೊಸರು ಅಥವಾ ತಾಜಾ ಕೆನೆ ಸೇರಿಸಿ. ಇದು ರಕ್ತ ಪರಿಚಲನೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಚರ್ಮಕ್ಕೆ ಹೆಚ್ಚಿನ ಆಮ್ಲಜನಕವನ್ನು ಒದಗಿಸುತ್ತದೆ.
    Published by:Swathi Nayak
    First published: