Woollen ಬಟ್ಟೆ ಧರಿಸಿ ಮಲಗಬೇಡಿ, ಈ ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಜೋಕೆ!

ಉಣ್ಣೆ ಬಟ್ಟೆಗಳಲ್ಲಿ ಮಲಗಿದರೆ, ನಿಮಗೆ ಅಲರ್ಜಿಯ ಪ್ರತಿಕ್ರಿಯೆ ಮತ್ತು ಚರ್ಮದ ಮೇಲೆ ತುರಿಕೆ ಉಂಟಾಗಬಹುದು. ಒಣ ಚರ್ಮ ಹೊಂದಿರುವ ಜನರು ಈ ಸಮಸ್ಯೆಯನ್ನು ಅನುಭವಿಸುವ ಸಾಧ್ಯತೆ ಹೆಚ್ಚು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಳಿಗಾಲ (Winter) ಬಂತೆಂದರೆ ಸಾಕು ನಾವೆಲ್ಲಾರೂ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವ ಮೈ ಕೊರೆಯುವ ಚಳಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು (Protect) ಉಣ್ಣೆ ಬಟ್ಟೆಗಳನ್ನು ಧರಿಸುವುದನ್ನು ಶುರು ಮಾಡುತ್ತೇವೆ. ಇಡೀ ದಿನ ನಾವು ಈ ಉಣ್ಣೆ ಬಟ್ಟೆಗಳನ್ನು ಧರಿಸಬಹುದು, ಆದರೆ ಇದನ್ನೇ ಹಾಕಿಕೊಂಡು ರಾತ್ರಿ ಹೊತ್ತು ಮಲಗುವುದರಿಂದ(Sleeping) ಕೆಲವು ಸಮಸ್ಯೆಗಳು ತಲೆದೋರಬಹುದು. ಚಳಿಗಾಲದ ಚಳಿಗೆ ಬಹುತೇಕರು ಅವರು ಮಲಗುವ ಕೋಣೆಯಲ್ಲಿನ ಕಿಟಕಿ ಸಹ ತೆಗೆಯಲು ಹಿಂಜರಿಯುತ್ತಾರೆ ಮತ್ತು ರಾತ್ರಿಯೂ ತಾವು ಬೆಚ್ಚಗಿರಲು ಇದೇ ಉಣ್ಣೆಯ ಬಟ್ಟೆಗಳನ್ನು(Woolen Clothes) ಧರಿಸಿಕೊಂಡು ಮಲಗುವುದನ್ನು ಸಹ ನಾವು ನೋಡುತ್ತೇವೆ. ಆದರೆ ನಿಜಕ್ಕೂ ಈ ಸ್ವೆಟರ್ ನಂತಹ ಉಣ್ಣೆ ಬಟ್ಟೆಗಳನ್ನು ಧರಿಸಿ ಮಲಗುವುದು ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಒಳ್ಳೆಯದು ಎಂದು ತಿಳಿದುಕೊಳ್ಳೋಣ ಬನ್ನಿ.

ಚಳಿಗಾಲದ ಋತುವಿನಲ್ಲಿ ಬೆಚ್ಚಗಿರಲು ಕೆಲವರು ಈ ಉಣ್ಣೆಯ ಬಟ್ಟೆಯನ್ನು ಧರಿಸಿ ಮಲಗುತ್ತಾರೆ. ಉಣ್ಣೆಯ ಬಟ್ಟೆಗಳು ಶಾಖ ವಾಹಕವಾಗಿ ಕಾರ್ಯನಿರ್ವಹಿಸುತ್ತವೆ, ದೇಹವು ಹೊರಸೂಸುವ ಶಾಖವನ್ನು ಹಾಗೆಯೇ ತಡೆಯುತ್ತದೆ ಮತ್ತು ನಿಮ್ಮನ್ನು ಬೆಚ್ಚಗಿಡುತ್ತದೆ. ಅನೇಕ ಜನರು ರಾತ್ರಿಯಲ್ಲಿ ಸ್ವೆಟರ್ ಗಳು ಅಥವಾ ಉಣ್ಣೆಯ ಸಾಕ್ಸ್ ಗಳನ್ನು ಮಾತ್ರ ಧರಿಸಿ ಮಲಗಲು ಬಯಸುತ್ತಾರೆ. ಆದಾಗ್ಯೂ, ಈ ಅಭ್ಯಾಸವು ನಿಮ್ಮ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಬಹುದು, ಏಕೆಂದರೆ ಮಲಗುವಾಗ ಉಣ್ಣೆ ಬಟ್ಟೆಗಳನ್ನು ಧರಿಸುವುದರಿಂದ ಹಲವಾರು ಅನಾನುಕೂಲತೆಗಳಿವೆ ಎಂದು ತಜ್ಞರು ಹೇಳುತ್ತಾರೆ.

ಆತಂಕ ಅಥವಾ ಚಡಪಡಿಕೆ
ತಜ್ಞರ ಪ್ರಕಾರ, ಚಳಿಗಾಲದ ಅವಧಿಯಲ್ಲಿ ರಕ್ತನಾಳಗಳು ಕಿರಿದಾಗಿ, ಉಣ್ಣೆಯ ಬಟ್ಟೆ ಧರಿಸಿ ಮಲಗುವುದರಿಂದ ಚಡಪಡಿಕೆ, ತಳಮಳ, ಕಡಿಮೆ ರಕ್ತದೊತ್ತಡದಂತಹ ಸಮಸ್ಯೆಗಳು ಉಂಟಾಗುತ್ತವೆ. ಇದನ್ನು ತಪ್ಪಿಸಲು ನೀವು ಹತ್ತಿ ಬಟ್ಟೆಯಲ್ಲಿ ಮಾತ್ರ ಮಲಗಬೇಕು ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Vitamin D ಸಪ್ಲಿಮೆಂಟ್ಸ್‌ ತೆಗೆದುಕೊಳ್ತಿದ್ರೆ ಹುಷಾರಾಗಿರಿ... ಯಾಕೆ ಅಂತಾ ಈ ಸ್ಟೋರಿ ಓದಿ..!

ದದ್ದುಗಳು ಅಥವಾ ತುರಿಕೆ ಉಂಟಾಗುತ್ತವೆ
ನೀವು ಆಗಾಗ್ಗೆ ರಾತ್ರಿ ಉಣ್ಣೆ ಬಟ್ಟೆಗಳಲ್ಲಿ ಮಲಗಿದರೆ, ನಿಮಗೆ ಅಲರ್ಜಿಯ ಪ್ರತಿಕ್ರಿಯೆ ಮತ್ತು ಚರ್ಮದ ಮೇಲೆ ತುರಿಕೆ ಉಂಟಾಗಬಹುದು. ಒಣ ಚರ್ಮ ಹೊಂದಿರುವ ಜನರು ಈ ಸಮಸ್ಯೆಯನ್ನು ಅನುಭವಿಸುವ ಸಾಧ್ಯತೆ ಹೆಚ್ಚು ಮತ್ತು ಚರ್ಮದ ದದ್ದುಗಳು ಮತ್ತು ಮೊಡವೆಗಳಂತಹ ಸಮಸ್ಯೆಗಳನ್ನು ಎದುರಿಸಬಹುದು.

ಆದ್ದರಿಂದ, ಚರ್ಮವು ತೇವಾಂಶದಿಂದ ಇದ್ದಾಗ ಅಲರ್ಜಿಯ ಸಾಧ್ಯತೆಗಳು ಕಡಿಮೆಯಾಗುವುದರಿಂದ ಮಲಗುವ ಮೊದಲು ನೀವು ನಿಮ್ಮ ಇಡೀ ದೇಹಕ್ಕೆ ಬಾಡಿ ಲೋಷನ್ ಅನ್ನು ಹಚ್ಚಿಕೊಂಡು ಮಲಗುವಂತೆ ಹೇಳಲಾಗುತ್ತದೆ.

ಹೃದ್ರೋಗಿಗಳು ಮತ್ತು ಮಧುಮೇಹಿಗಳಿಗೆ ತುಂಬಾ ಸಮಸ್ಯೆಗಳು
ಹೃದಯದ ಅಸ್ವಸ್ಥತೆಯನ್ನು ಹೊಂದಿರುವ ಜನರು ರಾತ್ರಿ ಉಣ್ಣೆ ಬಟ್ಟೆಯನ್ನು ಹಾಕಿಕೊಂಡು ಮಲಗಬಾರದು, ಏಕೆಂದರೆ ಹತ್ತಿ ಬಟ್ಟೆಯ ನಾರುಗಳಿಗೆ ಹೋಲಿಸಿದರೆ ಉಣ್ಣೆ ಬಟ್ಟೆಗಳ ನಾರುಗಳು ದಪ್ಪವಾಗಿರುತ್ತವೆ ಮತ್ತು ಇನ್ಸುಲೇಟರ್‌ಗಳಾಗಿ ಕಾರ್ಯನಿರ್ವಹಿಸುವ ಅನೇಕ ಸಣ್ಣ ಗಾಳಿಯ ಪಾಕೆಟ್ ಗಳನ್ನು ಹೊಂದಿರುತ್ತವೆ.

ಚಳಿಗಾಲದಲ್ಲಿ ನಾವು ಹೊದಿಕೆ ಅಥವಾ ಕಂಬಳಿಯಲ್ಲಿ ಸುತ್ತಿಉಣ್ಣೆಯ ಬಟ್ಟೆಗಳನ್ನು ಧರಿಸಿದಾಗ, ಉಣ್ಣೆಯ ಬಟ್ಟೆಯ ನಾರುಗಳು ನಮ್ಮ ದೇಹದ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತವೆ. ಈ ಶಾಖವು ಮಧುಮೇಹ ರೋಗವನ್ನು ಹೊಂದಿರುವ ವ್ಯಕ್ತಿಗಳು ಮತ್ತು ಹೃದ್ರೋಗಿಗಳಿಗೆ ಅಪಾಯಕಾರಿಯಾಗಬಹುದು.

ಇದನ್ನೂ ಓದಿ: Zinc ಇರೋ ಈ ಆಹಾರಗಳನ್ನು ತಿಂದ್ರೆ ಕೊರೊನಾ ನಿಮ್ಮ ಹತ್ತಿರಕ್ಕೂ ಬರಲ್ವಂತೆ, ಸೋಂಕಿತರಿಗೆ ವೈದ್ಯರು ಹೇಳೋದು ಇದನ್ನೇ!

ವಿಪರೀತ ಚಳಿ ಇದ್ದರೆ ಮೊದಲು ಹತ್ತಿ ಅಥವಾ ರೇಷ್ಮೆ ಬಟ್ಟೆ, ನಂತರ ಉಣ್ಣೆ ಬಟ್ಟೆಗಳ ಪದರವನ್ನು ಹಾಕುವುದು ಉತ್ತಮ. ಆದರೆ ಇದನ್ನು ವಿಪರೀತ ಚಳಿಗಾಲದಲ್ಲಿ ಮಾತ್ರ ಮಾಡಬೇಕು. ಇವೆಲ್ಲಾ ಕಾರಣಗಳಿಗಾಗಿ ತಜ್ಞರು ಈ ಉಣ್ಣೆ ಬಟ್ಟೆಗಳನ್ನು ರಾತ್ರಿ ಧರಿಸಿ ಮಲಗಬೇಡಿ ಎಂದು ಹೇಳುತ್ತಾರೆ. ಮೈ ಕೊರೆಯುವ ಚಳಿಯನ್ನು ತಪ್ಪಿಸಿಕೊಳ್ಳಲು ಹೋಗಿ ಇನ್ನ್ಯಾವುದೋ ಸಮಸ್ಯೆಗಳಿಗೆ ನಾವು ಗುರಿ ಆಗಬಾರದಲ್ಲವೇ? ಅದಕ್ಕೆ ಎಲ್ಲಾ ಕಾಲದಲ್ಲಿಯೂ ಎಂತಹ ಬಟ್ಟೆಗಳನ್ನು ಧರಿಸಬೇಕು ಎನ್ನುವುದನ್ನು ತಜ್ಞರಿಂದ ತಿಳಿದುಕೊಳ್ಳುವುದು ಸೂಕ್ತ.
Published by:vanithasanjevani vanithasanjevani
First published: