• Home
 • »
 • News
 • »
 • lifestyle
 • »
 • Heart Attack: ಮಹಿಳೆಯರೇ ಕೇಳಿ, ಇದು 'ಹೃದಯ'ಗಳ ವಿಷಯ! ಪ್ರತಿ ನಿಮಿಷಕ್ಕೊಬ್ಬಳು ಹೃದಯಾಘಾತಕ್ಕೆ ಬಲಿ

Heart Attack: ಮಹಿಳೆಯರೇ ಕೇಳಿ, ಇದು 'ಹೃದಯ'ಗಳ ವಿಷಯ! ಪ್ರತಿ ನಿಮಿಷಕ್ಕೊಬ್ಬಳು ಹೃದಯಾಘಾತಕ್ಕೆ ಬಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೃದ್ರೋಗ ಕಾಯಿಲೆಯು ಪುರುಷರು ಮತ್ತು ಮಹಿಳೆಯರ ಸಾವಿನ ಮೊದಲ ಕಾರಣವಾಗಿದೆ. ವರದಿ ಪ್ರಕಾರ ಪ್ರತಿ ನಿಮಿಷಕ್ಕೆ ಒಬ್ಬ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪುತ್ತಾಳಂತೆ!

 • Share this:

  ನಮ್ಮ ಆಧುನಿಕ ಜೀವನಶೈಲಿ (Lifestyle), ಆಹಾರ (Food) ಪದ್ಧತಿ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತಿದೆ. ‘ನಾವು ಏನನ್ನು ಕೊಡುತ್ತೇವೆಯೋ ಅದನ್ನೇ ಪಡೆಯುತ್ತೇವೆ’ ಎಂಬ ಮಾತಿದೆ. ಅಂದರೆ ನಮ್ಮ ದೇಹಕ್ಕೆ (Body) ನಾವು ಯಾವ ರೀತಿಯ ಆಹಾರ, ಆರೈಕೆ (Care), ಚಟುವಟಿಕೆ, ಹವ್ಯಾಸಗಳನ್ನು ರೂಢಿಸುತ್ತೇವೆಯೋ ಅದು ಕೂಡ ಅದೇ ತರದ ಪರಿಣಾಮಗಳನ್ನು ನೀಡುತ್ತದೆ. ಕೆಟ್ಟ ಆಹಾರ, ಜೀವನಶೈಲಿ ಅನಾರೋಗ್ಯವನ್ನು ನೀಡುತ್ತದೆ. ಹಾಗೇ ಒಳ್ಳೆಯ ಜೀವನಶೈಲಿ, ಆಹಾರ ಪದ್ಧತಿ ಉತ್ತಮ ಆರೋಗ್ಯ (Health) ನೀಡುತ್ತದೆ. ಆದರೆ ಇಂದಿನ ಪರಿಸರ ನಮಗೇನು ನೀಡುತ್ತಿದೆ..? ನಾವು ಪರಿಸರಕ್ಕೇನು ನೀಡುತ್ತಿದ್ದೇವೆ ಎಂಬುದು ಕೂಡ ತುಂಬಾ ಮುಖ್ಯ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಹೃದ್ರೋಗ (Heart Disease) ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.


  ಮಹಿಳೆಯರಲ್ಲೂ ಹೃದ್ರೋಗ ಸಮಸ್ಯೆ ಹೆಚ್ಚು


  ಸಾಮಾನ್ಯವಾಗಿ ಪುರುಷರಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂದೇ ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ ಮಹಿಳೆಯರಲ್ಲೂ ಹೃದ್ರೋಗ ಸಮಸ್ಯೆ ಹೆಚ್ಚು ಕಾಣಿಸುತ್ತಿದೆ ಅನ್ನುತ್ತೆ ಟೈಂ ಮ್ಯಾಗಜಿನ್ ನ ಈ ಸಂದರ್ಶನ. ಪುರುಷರು ಹೃದಯಾಘಾತದಿಂದ ಮೃತಪಟ್ಟಿರುವ ಹೆಚ್ಚು ಕೇಸ್ ಗಳನ್ನು ನಾವು ನೋಡಿದ್ದೇವೆ. ಆದರೆ ಮಹಿಳೆಯರಲ್ಲೂ ಹೃದ್ರೋಗ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸಾವಿಗೂ ಕಾರಣವಾಗಿದೆ.


  ಯು.ಎಸ್ ನಲ್ಲಿ ಪ್ರತಿ ನಿಮಿಷಕ್ಕೆ ಒಬ್ಬ ಮಹಿಳೆ ಹೃದಯಾಘಾತದಿಂದ ಸಾವು


  ಟೈಮ್ ಮ್ಯಾಗಜೀನ್ ಇತ್ತೀಚೆಗೆ ಮಹಿಳೆಯರಲ್ಲಿ ಹೃದಯಾಘಾತ ಕಾಯಿಲೆಯ ಬಗ್ಗೆ ಸ್ಮಿಡ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿರುವ ಬಾರ್ಬರಾ ಸ್ಟ್ರೈಸೆಂಡ್ ವುಮೆನ್ಸ್ ಹಾರ್ಟ್ ಸೆಂಟರ್‌ನ ನಿರ್ದೇಶಕರಾದ ನೋಯೆಲ್ ಬೈರಿ ಮೆರ್ಜ್ ಅವರನ್ನು ಸಂದರ್ಶನ ಮಾಡಿದೆ. ಹೃದ್ರೋಗ ಕಾಯಿಲೆಯು ಪುರುಷರು ಮತ್ತು ಮಹಿಳೆಯರ ಸಾವಿನ ಮೊದಲ ಕಾರಣವಾಗಿದೆ. ಯು.ಎಸ್ ನಲ್ಲಿ ಪ್ರತಿ ನಿಮಿಷಕ್ಕೆ ಒಬ್ಬ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪುತ್ತಾಳೆ ಎಂದು ಅಮೇರಿಕನ್ ಹಾರ್ಟ್ ಅಸೋಸಿಯೇಷನ್‌ ನ ಅಂಕಿ ಅಂಶಗಳು ತಿಳಿಸಿವೆ.


  ಇದನ್ನೂ ಓದಿ: ಹೃದಯದ ಆರೋಗ್ಯ ಕಾಪಾಡೋಕೆ ಈ ಆಹಾರಗಳು ಬೆಸ್ಟ್​ ಅಂತೆ


  ಹೃದ್ರೋಗ ಸಾವಿನ ಪ್ರಮಾಣದ ಅಂಕಿ ಅಂಶಗಳು 


  ಈ ಅಂಕಿ ಅಂಶಗಳು ಯಾವಾಗಲೂ ಒಂದೇ ರೀತಿ ಇರುವುದಿಲ್ಲ. 1987 ರ ಮೊದಲು ಜೀವಶಾಸ್ತ್ರ ಮತ್ತು ಆರೋಗ್ಯ ಪದ್ಧತಿಯಲ್ಲಿ, ಲಿಂಗಗಳ ನಡುವಿನ ವಿವಿಧ ರೀತಿಯ ವ್ಯತ್ಯಾಸಗಳಿಂದಾಗಿ ಹೃದಯಾಘಾತದಿಂದ ಸಾಯುವವರಲ್ಲಿ ಪುರುಷರ ಪ್ರಮಾಣ ಹೆಚ್ಚಿತ್ತು. ಆಗ ಮಹಿಳೆಯರ ಹೃದ್ರೋಗ ಸಮಸ್ಯೆಯಿಂದ ಸಾಯುವವರ ಸಂಖ್ಯೆ ಕಡಿಮೆಯಿತ್ತು. ಹೆಚ್ಚಿನ ಪುರುಷರು ಸಿಗರೇಟ್ ಸೇದುತ್ತಾರೆ ಮತ್ತು ಹೆಚ್ಚು ಮದ್ಯಪಾನ ಮಾಡುತ್ತಾರೆ ಹೀಗಾಗಿ ಹೆಚ್ಚು ಹೃದ್ರೋಗ ಕಾಯಿಲೆಗೆ ತುತ್ತಾಗುತ್ತಾರೆ ಎಂದು ಟೈಂ ಲೇಖನ ಹೇಳಿದೆ.


  1980 ರ ದಶಕದ ಉತ್ತರಾರ್ಧದಲ್ಲಿ ಹೃದ್ರೋಗಕ್ಕೆ ಸಂಬಂಧಿಸಿದ ಸಾವುಗಳ ಸಂಖ್ಯೆಯ ಪ್ರಮಾಣಕ್ಕೆ ಮಹಿಳೆಯರು ಹೃದಯಾಘಾತದಿಂದ ಸಾಯುವ ಸಂಖ್ಯೆಯ ಪ್ರಮಾಣ ಸಮನಾಗಿ ಹೊಂದಿಕೆಯಾಯಿತು ಎಂದು ಟೈಂ ಲೇಖನ ತಿಳಿಸಿದೆ.


  ಮಹಿಳೆಯರಲ್ಲಿ ಹೃದಯಾಘಾತದಿಂದ ಸಾವು ಪ್ರಕರಣ ಅಧಿಕ


  ಆದರೆ 1987 ರ ನಂತರ ಹೃದಯಾಘಾತದಿಂದ ಸಾಯುವ ಪುರುಷರ ಪ್ರಕರಣಗಳ ಪ್ರಮಾಣ ಇಳಿಕೆಯಾಗಿದೆ. ಆದರೆ ಹೃದಯಾಘಾತದಿಂದ ಸಾಯುವ ಮಹಿಳೆಯರ ಪ್ರಕರಣಗಳ ಪ್ರಮಾಣ ಅಧಿಕಗೊಂಡಿದೆ. 2017 ರಲ್ಲಿ ಹೃದಯಾಘಾತದಿಂದ ಸಾಯುವ ಪುರುಷರು ಮತ್ತು ಮಹಿಳೆಯರ ಪ್ರಕರಣಗಳ ಪ್ರಮಾಣ ಒಂದೇ ಸಮ ಪ್ರಮಾಣ ಹೊಂದಿತ್ತು.


  ಮಹಿಳೆಯರಲ್ಲಿ ಹೆಚ್ಚಿದ ಹೃದ್ರೋಗ ಸಮಸ್ಯೆ ಗುರುತಿಸದ ವೈದ್ಯರು


  ಸಂಶೋಧನೆ ಮಾಹಿತಿಯ ಪ್ರಕಾರ, ಮಹಿಳೆಯರಲ್ಲಿ ಪುರುಷರಿಗಿಂತ ಹೃದಯಾಘಾತ ಪ್ರಕರಣಗಳು ಅಧಿಕಗೊಂಡಿದ್ದನ್ನು ಪ್ರಾಥಮಿಕ-ಆರೈಕೆ ವೈದ್ಯರು ಮತ್ತು ಹೃದ್ರೋಗಶಾಸ್ತ್ರಜ್ಞರು ಗುರುತಿಸಿರಲಿಲ್ಲ. ಆದರೆ ಈಗ ವೈದ್ಯಕೀಯ ಕ್ಷೇತ್ರದ ಪ್ರಮುಖರು, ಲೈಂಗಿಕ-ನಿರ್ದಿಷ್ಟ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ನೀಡಲು ಹಾಗೂ ಹೃದ್ರೋಗ ಕಾಯಿಲೆ ಹೊಂದಿರುವ ಮಹಿಳೆಯರಿಗೆ CVD ಚಿಕಿತ್ಸೆಯನ್ನು ನೀಡುವ ಮೂಲಕ ಅವರ ಆರೋಗ್ಯವನ್ನು ಸುಧಾರಿಸಬಹುದು.


  ಪುರುಷರ ಹಾಗೂ ಮಹಿಳೆಯರ ಹೃದ್ರೋಗ ಲಕ್ಷಣಗಳು ವಿಭಿನ್ನ


  "ಐತಿಹಾಸಿಕವಾಗಿ, ಹೃದ್ರೋಗದಲ್ಲಿ ನಡೆದ ಸಂಶೋಧನೆಗಳು ಮತ್ತು ಆವಿಷ್ಕಾರವು ಪುರುಷರು ಮತ್ತು ಪುರುಷರಿಗಾಗಿ ಮಾತ್ರವೇ ಇತ್ತು. ಮತ್ತು ಮಹಿಳೆಯರ ಸಾಯುವ ಪ್ರಕರಣಗಳ ಪ್ರಮಾಣವನ್ನು ಗುರುತಿಸದೇ ಹಾಗೆಯೇ ಬಿಟ್ಟರು ಎಂದು ಬೈರಿ ಮೆರ್ಜ್ ಟೈಮ್‌ ಗೆ ತಿಳಿಸಿದ್ದಾರೆ. ಪುರುಷರಲ್ಲಿ ಕಂಡು ಬರುವ ಹೃದ್ರೋಗ ರೋಗ ಲಕ್ಷಣಗಳಿಗಿಂತ ಭಿನ್ನವಾದ ಹೃದ್ರೋಗ ರೋಗ ಲಕ್ಷಣಗಳನ್ನು ಮಹಿಳೆಯರು ಹೆಚ್ಚಾಗಿ ಹೊಂದಿರುತ್ತಾರೆ ಎಂದು ಮಹಿಳೆಯರು ತಿಳಿದುಕೊಳ್ಳಬೇಕು  ಎಂದು ಬೈರಿ ಮೆರ್ಜ್ ಪ್ರತಿಪಾದಿಸುತ್ತಾರೆ.


  ಮಹಿಳೆಯರಲ್ಲಿ ಹೃದ್ರೋಗ ರೋಗ ಲಕ್ಷಣಗಳು:


  ಮಹಿಳೆಯರಲ್ಲಿನ ಹೃದ್ರೋಗ ಲಕ್ಷಣಗಳು, ಪುರುಷರಿಗಿಂತ ಸ್ವಲ್ಪ ಭಿನ್ನವಾಗಿವೆ.


  • ಮಹಿಳೆಯರಲ್ಲಿ ಹೆಚ್ಚು ವಾಕರಿಕೆ, ವಾಂತಿ ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ.

  • ಮಹಿಳೆಯರಿಗೆ ಹೃದಯಾಘಾತವಾದಾಗ ಅವರು ಎದೆಯ ಮೂಲಕ ಒತ್ತಡ ಅಥವಾ ಬಿಗಿತವನ್ನು ಅನುಭವಿಸುತ್ತಾರೆ. ಅದು ಪುರುಷರ ಎದೆನೋವಿಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ.

  • ಮಹಿಳೆಯರಲ್ಲಿನ ರೋಗ ಲಕ್ಷಣಗಳನ್ನು ತಮ್ಮ ವೈದ್ಯರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದ ಅನ್ನಿಸಿದರೆ ಹೆಚ್ಚಿನ ಪರೀಕ್ಷೆಗೆ ಒತ್ತಾಯಿಸಬೇಕಾಗುತ್ತದೆ.


  ಇದನ್ನೂ ಓದಿ: ಫಿಟ್​ ಇರುವವರಲ್ಲೇ ಹೆಚ್ಚಾಗ್ತಿದೆ ಹೃದಯಾಘಾತ- ಇದೇ ನೋಡಿ ಕಾರಣ


  ಮಹಿಳೆಯರು ತಮ್ಮ ದೇಹ ಮತ್ತು ಆರೋಗ್ಯದತ್ತ ಹೆಚ್ಚು ಗಮನ ಕೊಡಬೇಕು. ತಮ್ಮ ಆರೋಗ್ಯ ಸಮಸ್ಯೆಗಳನ್ನು ಚೆನ್ನಾಗಿ ವಿವರಿಸುವಂತವರಾಗಬೇಕು ಎಂದು ಬೈರಿ ಮೆರ್ಜ್ ಹೇಳಿದ್ದಾರೆ.

  Published by:renukadariyannavar
  First published: