Periods: ಮುಟ್ಟಾದ ಮಹಿಳೆಯರು ಉಪ್ಪಿನಕಾಯಿ ಮುಟ್ಟಿದರೆ ಕೊಳೆತು ಹೋಗುವುದು ನಿಜವೇ? ಇಲ್ಲಿದೆ ಉತ್ತರ

ಮುಟ್ಟಿನ ದಿನಗಳಲ್ಲಿ ಆಹಾರವನ್ನು ಮುಟ್ಟಿದರೆ ಅದು ಅಶುದ್ಧವಾಗುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ, ಉಪ್ಪಿನಕಾಯಿಯನ್ನು ಜಾಡಿ ಅಥವಾ ಬಾಟಲಿಯನ್ನು ಮುಟ್ಟಿದರೆ, ಅದು ಅಶುದ್ಧವಾಗುತ್ತದೆ ಮತ್ತು ಕೊಳೆತು ಹೋಗುತ್ತದೆ ಎನ್ನುತ್ತಾರೆ. ಓಬಿರಾಯನ ಕಾಲನ ಈ ನಂಬಿಕೆ ಎಷ್ಟು ಸತ್ಯ? ಬನ್ನಿ ತಿಳಿಯೋಣ.

ಉಪ್ಪಿನಕಾಯಿ

ಉಪ್ಪಿನಕಾಯಿ

  • Share this:
ಬಹುಪಾಲು ಭಾರತೀಯ (India) ಮಹಿಳೆಯರಿಗೆ (Women's) ಮುಟ್ಟಿನ (Periods) ದಿನಗಳು ಅನ್ಯ ದೇಶಗಳ ಮಹಿಳೆಯರಂತಲ್ಲ. ಅವರು ಮುಟ್ಟಿನ ದಿನದ ದೈಹಿಕ ಮಾನಸಿಕ ವೇದನೆಯಲ್ಲದೆ (Physical mental agony), ಹತ್ತು ಹಲವು ಕಟ್ಟುಪಾಡುಗಳು, ಸಂಪ್ರದಾಯಗಳ (Tradition) ಕಿರಿಕಿರಿಯನ್ನು ಕೂಡ ಅನುಭವಿಸಬೇಕು. ಆ ಕಟ್ಟುಪಾಡುಗಳು ಈಗ ಹಿಂದಿನ (past) ಕಾಲದಲ್ಲಿ ಇದ್ದಷ್ಟು ಕಟ್ಟುನಿಟ್ಟಾಗಿ ಇಲ್ಲ ಎಂಬುವುದಷ್ಟೇ ನೆಮ್ಮದಿಯ (Relax) ಸಂಗತಿ. ನಮ್ಮ ದೇಶದ ಹಲವು ಹಳ್ಳಿಗಾಡಿನ (village) ಪ್ರದೇಶಗಳಲ್ಲಿ ಮತ್ತು ಕಟ್ಟಾ ಸಂಪ್ರದಾಯವಾದಿ ಮನೆಗಳಲ್ಲಿ, ಈಗಲೂ ಮುಟ್ಟಿನ ಮಹಿಳೆಯರ ಮೇಲೆ ಹಿಂದಿನ ಕಾಲದ ನಿಯಮಗಳನ್ನು (rules) ಹೇರಲಾಗುತ್ತದೆ.

ಮುಟ್ಟಾದ ಮಹಿಳೆಯರಿಗೆ ಕೆಲವು ನಿರ್ಬಂಧಗಳು
ಮುಟ್ಟಿನ ದಿನಗಳಲ್ಲಿ ಮನೆಯಿಂದ ಹೊರಗಿರುವುದು, ಅಡುಗೆ ಮನೆ ಪ್ರವೇಶಿಸದಿರುವುದು, ದೇವತಾ ಕಾರ್ಯಗಳಲ್ಲಿ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದಕ್ಕೆ ನಿಷೇಧ, ಯಾರನ್ನೂ ಮುಟ್ಟಿಸಿಕೊಳ್ಳದಿರುವುದು. ಹೀಗೆ ಮುಟ್ಟಿನ ದಿನಗಳಲ್ಲಿ ಮಹಿಳೆಯರ ಮೇಲೆ ಹೇರಲಾಗುವ ನಿಯಮಗಳು ಒಂದಲ್ಲ ಎರಡಲ್ಲ ಲೆಕ್ಕವಿಲ್ಲದಷ್ಟು. ಎಷ್ಟೋ ಬಾರಿ ಪ್ರದೇಶದಿಂದ ಪ್ರದೇಶಕ್ಕೆ ಈ ನಿಯಮಗಳು ಭಿನ್ನವಾಗಿರುತ್ತವೆ.

ಮುಟ್ಟಿನ ದಿನಗಳಲ್ಲಿ ಆಹಾರ ಮುಟ್ಟಿದರೆ ಅದು ಅಶುದ್ಧ?
ಆದೇನೇ ಇದ್ದರೂ ಮುಟ್ಟಿನ ಮಹಿಳೆಯರಿಗೆ ಕಿರಿಕಿರಿ ಮಾತ್ರ ತಪ್ಪಿದ್ದಲ್ಲ. ಹಿಂದಿನ ಕಾಲದಲ್ಲಿ ಮನೆಯ ಹಿರಿಯರು ಅಥವಾ ಅಜ್ಜಿಯರು, ಮುಟ್ಟಾದ ಹೆಣ್ಣು ಮಕ್ಕಳಿಗೆ ಉಪ್ಪಿನಕಾಯಿ ಜಾಡಿಗೆ ಕೈ ಹಾಕಲು ಬಿಡುತ್ತಿರಲಿಲ್ಲ. ಈಗಲೂ ಕೆಲವು ಕಡೆ ಈ ನಿಯಮ ಚಾಲ್ತಿಯಲ್ಲಿದೆ. ಮುಟ್ಟಿನ ದಿನಗಳಲ್ಲಿ ಆಹಾರವನ್ನು ಮುಟ್ಟಿದರೆ ಅದು ಅಶುದ್ಧವಾಗುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ, ಉಪ್ಪಿನಕಾಯಿಯನ್ನು ಜಾಡಿ ಅಥವಾ ಬಾಟಲಿಯನ್ನು ಮುಟ್ಟಿದರೆ, ಅದು ಅಶುದ್ಧವಾಗುತ್ತದೆ ಮತ್ತು ಕೊಳೆತು ಹೋಗುತ್ತದೆ ಎನ್ನುತ್ತಾರೆ. ಓಬಿರಾಯನ ಕಾಲನ ಈ ನಂಬಿಕೆ ಎಷ್ಟು ಸತ್ಯ? ಬನ್ನಿ ತಿಳಿಯೋಣ.

ಇದನ್ನೂ ಓದಿ:   Periods And Health: ಋತುಚಕ್ರದ ಸಮಯದಲ್ಲಿ ರಕ್ತಸ್ರಾವದ ಬಣ್ಣ ಬದಲಾವಣೆ ಯಾವ ಕಾಯಿಲೆಯ ಸಂಕೇತ?

ಹಿಂದಿನ ಕಾಲದ ನಂಬಿಕೆಯ ಪ್ರಕಾರ, ಮುಟ್ಟಿದ ದಿನಗಳಲ್ಲಿ ಹೆಂಗಸರು ಅಪವಿತ್ರವಾಗಿರುತ್ತಾರೆ. ಹಾಗಾಗಿ, ಅವರು ಅಡುಗೆ ಮನೆಗೆ ಹೋಗಬಾರದು ಮತ್ತು ಉಪ್ಪಿನಕಾಯಿ ಬಾಟಲಿಗಳನ್ನು ಸ್ಪರ್ಶಿಸಬಾರದು ಎಂಬ ನಿಯಮಗಳನ್ನು ಮಾಡಿದ್ದರು ಎನ್ನಲಾಗುತ್ತದೆ. ಏಕೆಂದರೆ, ಆಗ ಆಹಾರವನ್ನು ಪವಿತ್ರ ಎಂದು ಪರಿಗಣಿಸಲಾಗುತ್ತಿತ್ತು, ಅಶುದ್ಧವಾಗಿರುವವರು ಮುಟ್ಟಿದರೆ ಅದು ಅಪವಿತ್ರ ಆಗುತ್ತದೆ ಎಂದು ನಂಬಲಾಗುತ್ತಿತ್ತು. ಈಗಲೂ ದೇಶದ ಹಲವಾರು ಭಾಗಗಳಲ್ಲಿ ಮಹಿಳೆಯರನ್ನು ಮುಟ್ಟಿನ ದಿನಗಳಲ್ಲಿ ಅಡುಗೆ ಮನೆಯಿಂದ 4-5 ದಿನಗಳ ಕಾಲ ದೂರ ಇಡಲಾಗುತ್ತದೆ.

ಸತ್ಯವೇ ಅಥವಾ ಮಿಥ್ಯವೇ?
ಹೆಣ್ಣು ಮುಟ್ಟಾದಾಗ, ದೇಹದಲ್ಲಿ ಅಶುದ್ಧ ರಕ್ತವು ಹರಿಯುತ್ತದೆ. ಹಾಗಾಗಿ ಸೋಂಕುಗಳು ಮತ್ತು ಕಾಯಿಲೆಗಳನ್ನು ತಪ್ಪಿಸಲು ಉತ್ತಮ ರೀತಿಯಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ಅಗತ್ಯ ಇರುತ್ತದೆ. ಹಿಂದಿನ ಕಾಲದಲ್ಲಿ, ಮಹಿಳೆಯರು ಮುಟ್ಟಿನ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್‍ಗಳನ್ನು ಬಳಸುತ್ತಿರಲಿಲ್ಲ, ಬದಲಿಗೆ ಅವರು ಕೇವಲ ಬಟ್ಟೆಗಳನ್ನು ಅವಲಂಬಿಸಬೇಕಾಗಿತ್ತು. ಆದರೆ ಕಾಲ ಬದಲಾಗಿದೆ, ಸಮಯ ಕಳೆದಂತೆ ಮುಟ್ಟಿನ ದಿನಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಮತ್ತು ಸೋಂಕು ಉಂಟಾಗುವ ಸಾಧ್ಯತೆಗಳನ್ನು ಕಡಿಮೆ ಮಾಡಲು ಅನೇಕ ಮಾರ್ಗಗಳನ್ನು ಕಂಡು ಹಿಡಿಯಲಾಗಿದೆ.

ಇದನ್ನೂ ಓದಿ:  Periods: ಪಿರಿಯಡ್ಸ್ ಸಮಯದಲ್ಲಿ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ

ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಅಷ್ಟೊಂದು ನಿಯಮಗಳನ್ನು, ಕಟ್ಟುಪಾಡುಗಳನ್ನ ಹೇರುತ್ತಿದ್ದರು ಏಕೆ ಎಂಬುವುದು ಗೊತ್ತೆ? ಈ ಕುರಿತು ಹಲವರು ಹಲವು ರೀತಿಯ ಊಹೆಗಳನ್ನು ಮತ್ತು ವಾದಗಳನ್ನು ಮಂಡಿಸುತ್ತಾರೆ. ಒಂದು ಚಿಂತನೆಯ ಪ್ರಕಾರ, ಹಿಂದಿನ ಕಾಲದವರು, ಮಲಿನಗೊಳ್ಳುವಿಕೆಯನ್ನು ತಡೆಯಲು ಮತ್ತು ನೈರ್ಮಲ್ಯವನ್ನು ಕಾಪಾಡುವ ದೃಷ್ಟಿಯಿಂದ ಈ ರೀತಿಯ ನಿಯಮಗಳನ್ನು ರೂಪಿಸಿದ್ದಾರೆ.

ಮಹಿಳೆಯರಿಗೆ ಶ್ರಮದಿಂದ ವಿನಾಯಿತಿ
ಕೆಲವರು ಹೇಳುವ ಪ್ರಕಾರ, ಹೆಂಗಸರಿಗೆ ವಿಶ್ರಾಂತಿ ಕೊಡಲು ಈ ನಿಯಮಗಳನ್ನು ಮಾಡಿದ್ದರೆ, ಇನ್ನು ಕೆಲವು ಊಹೆಗಳ ಪ್ರಕಾರ, ಹಿಂದಿನ ಕಾಲದಲ್ಲಿ ಉಪ್ಪಿನಕಾಯಿ ಮಾಡುವುದು ಹೆಚ್ಚಿನ ಮನೆಗಳಲ್ಲೂ ದೊಡ್ಡ ಮಟ್ಟದ ಕೆಲಸವಾಗಿರುತ್ತಿತ್ತು, ಮಹಿಳೆಯರಿಗೆ ಆ ಶ್ರಮದಿಂದ ವಿನಾಯಿತಿ ಸಿಗಲಿ ಎಂದು, ಮುಟ್ಟಿನ ದಿನಗಳಲ್ಲಿ ಉಪ್ಪಿನಕಾಯಿ ಜಾಡಿಯನ್ನು ಮುಟ್ಟಬಾರದು ಎಂಬ ನಿಯಮವನ್ನು ರೂಪಿಸಲಾಗಿತ್ತು ಎಂದು ಹೇಳಲಾಗುತ್ತದೆ.
Published by:Ashwini Prabhu
First published: