ಆರೋಗ್ಯದ (Health) ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರು (People) ಹೆಚ್ಚು ಜಾಗೃತರಾಗಿದ್ದಾರೆ. ಅದರಲ್ಲೂ ಕೊರೊನಾ ಹೊಡೆತದ ನಂತರ ಜನರು ಎಚ್ಚೆತ್ತುಕೊಂಡಿದ್ದಾರೆ. ತುಂಬಾ ಜನರು ಜಿಮ್ ಹೋಗುವುದು, ಮನೆಯಲ್ಲಿ ವ್ಯಾಯಾಮ (Exercise) ಮಾಡುವುದು ಮತ್ತು ಆರೋಗ್ಯಕರ ಆಹಾರ (Food) ಸೇವನೆ ಮಾಡುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೊತೆಗೆ ತೂಕ ಇಳಿಕೆ, ಫಿಟ್ನೆಸ್ ಕಾಯ್ದುಕೊಳ್ಳುವುದು ಇದೆ. ಹೆಚ್ಚಿನ ಜನರು ಜಂಕ್ ಫುಡ್ ಗೆ ಗುಡ್ ಬಾಯ್ ಹೇಳಿ ಹೆಲ್ದೀ ಆಹಾರ ಸೇವನೆಗೆ ಮತ್ತು ಡಯಟ್ ಗೆ ಮುಂದಾಗಿದ್ದಾರೆ. ಆರೋಗ್ಯ ಇಲ್ಲದಿದ್ದರೆ ಏನೂ ಇಲ್ಲ ಅಂತಾ ಜನರು ಅರಿತಿದ್ದಾರೆ. ಮಾರುಕಟ್ಟೆಗಳಲ್ಲಿ ಜನರು ಹೊಸ ಹೊಸ ಪದಾರ್ಥ ಮತ್ತು ಆರೋಗ್ಯ ವೃದ್ಧಿಸುವ ಪದಾರ್ಥಗಳನ್ನೇ ಹುಡುಕುವುದು ಸಾಮಾನ್ಯವಾಗಿ ಕಂಡು ಬರುತ್ತದೆ.
ವೈದ್ಯರ ಸಲಹೆಯಿಲ್ಲದೇ ಸೇವಿಸುವ ಪೂರಕಗಳು ಆರೋಗ್ಯಕ್ಕೆ ಹಾನಿಕರ
ಅನೇಕ ಜನರು ಪೂರಕಗಳನ್ನು ಸೇವಿಸುತ್ತಾರೆ. ಸಪ್ಲಿಮೆಂಟ್ ಗಳು ಆರೋಗ್ಯ ಸುಧಾರಿಸುವ ಉದ್ದೇಶದಿಂದ ತಯಾರಾಗುತ್ತದೆ. ಆದರೆ ವೈದ್ಯರ ಸಲಹೆ ಮತ್ತು ಸೂಚನೆಯಿಲ್ಲದೇ ತೆಗೆದುಕೊಳ್ಳುವ ಪೂರಕಗಳು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇಂದು ನಾವು ಕೆಲವು ಪೂರಕಗಳ ಸೇವನೆ ಹೇಗೆ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಅಂತಾ ನೋಡೋಣ.
ಡಾ. ಅಕ್ಷತ್ ಚಡ್ಡಾ ಅವರು, ಕೆಲವು ಪೂರಕಗಳ ಅಡ್ಡ ಪರಿಣಾಮಗಳ ಬಗ್ಗೆ ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ಮಾಹಿತಿ ನೀಡಿದ್ದಾರೆ. ಆಗಾಗ್ಗೆ ಜನರು ಆರೋಗ್ಯ ಸಮಸ್ಯೆ ಎದುರಾದ ಕೂಡಲೇ ತಾವಾಗಿಯೇ ಪೂರಕಗಳ ಸೇವನೆ ಮಾಡುತ್ತಾರೆ. ಮತ್ತು ಮಕ್ಕಳ ಆರೋಗ್ಯ ಸಮಸ್ಯೆಗೂ ಪೂರಕ ನೀಡುತ್ತಾರೆ. ಇದು ಆರೋಗ್ಯಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ.
ಒಂದೇ ಸಮಯಕ್ಕೆ ಎರಡು ಪೂರಕ ಸೇವನೆ
ಒಂದೇ ಸಮಯದಲ್ಲಿ ಎರಡು ಪೂರಕ ತೆಗೆದುಕೊಳ್ಳುವುದು ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಹಾಗೆ ಮಾಡಬಾರದು ಎಂದು ಡಾ.ಅಕ್ಷತ್ ಹೇಳುತ್ತಾರೆ. ಉದಾಹರಣೆಗೆ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅನ್ನು ಎಂದಿಗೂ ಒಟ್ಟಿಗೆ ತೆಗೆದುಕೊಳ್ಳಬಾರದು. ಒಟ್ಟಿಗೆ ಎರಡೂ ಪೂರಕ ಸೇವಿಸಿದರೆ ಅವು ಪರಸ್ಪರ ಪ್ರತಿಕ್ರಿಯಿಸಬಹುದು. ಇದರ ಜೊತೆಗೆ, ಕ್ಯಾಲ್ಸಿಯಂ ಕಬ್ಬಿಣದ ಹೀರಿಕೊಳ್ಳುವಿಕೆ ತಡೆಯುತ್ತದೆ.
ರಕ್ತ ಪರೀಕ್ಷೆ ಮೊದಲು ಬಯೋಟಿನ್ ಸೇವನೆ ಮಾಡಬಾರದು
ಕೂದಲ ಬೆಳವಣಿಗೆ ಸುಧಾರಿಸಲು ಬಯೋಟಿನ್ ಪೂರಕ ಸೇವನೆ ಮಾಡಲಾಗುತ್ತದೆ. ಆದರೆ ಯಾವುದೇ ಪ್ರಯೋಗಾಲಯ ಪರೀಕ್ಷೆ ಮೊದಲು ಅದನ್ನು ಸೇವಿಸಬಾರದು. ಯಾಕಂದ್ರೆ ಅದು ಪರೀಕ್ಷೆಗೆ ಅಡ್ಡಿ ಪಡಿಸಬಹುದು ಮತ್ತು ವಿಭಿನ್ನ ಫಲಿತಾಂಶ ನೀಡುತ್ತದೆ. ಹಾಗಾಗಿ ರಕ್ತ ಪರೀಕ್ಷೆಗೆ ಏಳು ದಿನಗಳ ಮೊದಲು ಬಯೋಟಿನ್ ಪೂರಕ ಸೇವನೆ ಮಾಡಬಾರದು.
ಕೆಲವು ಪೂರಕಗಳು ರಕ್ತ ತೆಳುವಾಗಿಸುತ್ತವೆ
ಕೆಲವು ಪೂರಕಗಳು ರಕ್ತ ತೆಳುಗೊಳಿಸುತ್ತವೆ. ಇದು ಯಕೃತ್ತು ಅಥವಾ ಮೂತ್ರಪಿಂಡದ ಕಾರ್ಯಕ್ಕೆ ಅಡ್ಡಿ ಮಾಡುತ್ತದೆ. ಕರ್ಕ್ಯುಮಿನ್ ರಕ್ತವನ್ನು ತೆಳುಗೊಳಿಸುತ್ತದೆ. ಆದ್ದರಿಂದ ಇದರ ಸೇವನೆ ತಪ್ಪಿಸಬೇಕು. ಹಾಗಾಗಿ ಯಾವಾಗಲೂ ವೈದ್ಯರನ್ನು ಕೇಳಿಯೇ ಸೇವನೆ ಮಾಡಬೇಕಾಗುತ್ತದೆ.
ಹೆಚ್ಚು ಜೀವಸತ್ವ ಸೇವನೆ ಅಪಾಯಕಾರಿ
ಅತಿಯಾದರೆ ಅಮೃತವೂ ವಿಷ. ಹಾಗಾಗಿ ಏನೇ ತಿಂದರೂ ಮಿತವಾಗಿ ತಿನ್ನಬೇಕು. ವಿಟಮಿನ್ ದೀರ್ಘಾವಧಿಯ ಮಿತಿ ಮೀರಿದ ಸೇವನೆ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಿಸಲು ಕಾರಣವಾಗುತ್ತದೆ. ಹೆಚ್ಚು ಕರ್ಕ್ಯುಮಿನ್ ಸೇವನೆ ನೋವು ಮತ್ತು ಅಸ್ವಸ್ಥತೆ ಉಂಟು ಮಾಡುತ್ತದೆ. ಇದು ಪಿತ್ತರಸದ ಹರಿವಿನ ಹೆಚ್ಚಳ ಉಂಟು ಮಾಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಮಧುಮೇಹಿಗಳು ಆರೋಗ್ಯ ಕಾಪಾಡಲು ಈ ಸಲಹೆಗಳನ್ನು ಪಾಲಿಸಿ
ಮಲ್ಟಿವಿಟಮಿನ್ ಸೇವನೆ
ಪ್ರತಿಯೊಬ್ಬರೂ ಮಲ್ಟಿವಿಟಮಿನ್ ಸೇವನೆ ಮಾಡ್ತಾರೆ. ಡಾ.ಅಕ್ಷತ್ ಪ್ರಕಾರ, ಮಲ್ಟಿವಿಟಮಿನ್ ಸೇವನೆ ಸರಿಯಲ್ಲ. ಡೋಸೇಜ್ ತುಂಬಾ ಕಡಿಮೆ ಇರುತ್ತದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಭಾವಿಸಿ, ಖರ್ಚು ಮಾಡಬೇಡಿ. ಹಣ ವ್ಯರ್ಥ ಮಾಡಬೇಡಿ. ಉತ್ತಮ ಆಹಾರ ಮತ್ತು ವ್ಯಾಯಾಮ ಮಾಡಿ ಎಂದು ಹೇಳಿದ್ದಾರೆ. ಸ್ವಯಂ ಔಷಧಿ ಸೇವಿಸಬೇಡಿ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ