• Home
  • »
  • News
  • »
  • lifestyle
  • »
  • Solar Eclipse 2022: ಸೂರ್ಯ ಗ್ರಹಣವನ್ನು ಬರಿಗಣ್ಣಿನಿಂದ ಯಾವುದೇ ಕಾರಣಕ್ಕೂ ನೋಡ್ಬೇಡಿ, ವೈದ್ಯರು ಕೊಟ್ಟ ಕಾರಣ ಇದು

Solar Eclipse 2022: ಸೂರ್ಯ ಗ್ರಹಣವನ್ನು ಬರಿಗಣ್ಣಿನಿಂದ ಯಾವುದೇ ಕಾರಣಕ್ಕೂ ನೋಡ್ಬೇಡಿ, ವೈದ್ಯರು ಕೊಟ್ಟ ಕಾರಣ ಇದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Solar Eclipse 2022: ನಿಮಗೆ ಗ್ರಹಣ ನೋಡಬೇಕು ಎನಿಸಿದರೆ ವಿಶೇಷ ಸೂರ್ಯಗ್ರಹಣದ ಕನ್ನಡಕವನ್ನು ಬಳಸಿ ನೋಡುವುದು ಸೂಕ್ತ ಎನ್ನುತ್ತಾರೆ. ಗ್ರಹಣದಿಂದ ಕಣ್ಣಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.  

  • News18 Kannada
  • Last Updated :
  • New Delhi, India
  • Share this:

ಜನರೆಲ್ಲರೂ ದೀಪಾವಳಿ ಹಬ್ಬದ (Deepavali Festival) ಸಂಭ್ರಮದಲ್ಲಿದ್ದಾರೆ. ಆದರೆ, ಈ ನಡುವೆ  ಇಂದು ಸೂರ್ಯ ಗ್ರಹಣ (Solar Eclipse )ಸಂಭವಿಸಿದೆ. ಈ ಒಂದು ದಶಕದಲ್ಲಿ ಮೊದಲ ಬಾರಿಗೆ, ಭಾಗಶಃ ಸೂರ್ಯಗ್ರಹಣವು ಭಾರತದಾದ್ಯಂತ ಗೋಚರಿಸುತ್ತದೆ. ಇನ್ನೂ 10 ವರ್ಷಗಳವರೆಗೆ ಮತ್ತೆ ಈ ರೀತಿಯ ಗ್ರಹಣ ಕಾಣಿಸುವುದಿಲ್ಲ. ಬರಿಗಣ್ಣಿನಿಂದ (Naked Eye) ಸೂರ್ಯಗ್ರಹಣವನ್ನು ನೋಡುವುದರಿಂದ ಕಣ್ಣುಗಳ ಸಮಸ್ಯೆ (Eye Problem)  ಬರಬಹುದು. ಸೂರ್ಯಗ್ರಹಣವನ್ನು ನೇರವಾಗಿ ಬರಿಗಣ್ಣಿನಿಂದ ನೋಡುವುದರಿಂದ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರ ಕಿರಣಗಳು ನಿಮ್ಮ ರೆಟಿನಾವನ್ನು ಹಾನಿಗೊಳಿಸಬಹುದು ಅಥವಾ ಕುರುಡುತನಕ್ಕೂ ಸಹ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ನಿಮಗೆ ಗ್ರಹಣ ನೋಡಬೇಕು ಎನಿಸಿದರೆ ವಿಶೇಷ ಸೂರ್ಯಗ್ರಹಣದ ಕನ್ನಡಕವನ್ನು ಬಳಸಿ ನೋಡುವುದು ಸೂಕ್ತ ಎನ್ನುತ್ತಾರೆ. ಗ್ರಹಣದಿಂದ ಕಣ್ಣಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.  


ಡಾಕ್ಟರ್ ಹೇಳೋದು ಏನು?


ಫರಿದಾಬಾದ್‌ನ ಫೋರ್ಟಿಸ್ ಎಸ್ಕಾರ್ಟ್ಸ್ ಆಸ್ಪತ್ರೆಯ ನೇತ್ರವಿಜ್ಞಾನದ ಹಿರಿಯ ಸಲಹೆಗಾರ ಮತ್ತು ಎಚ್‌ಒಡಿ ಡಾ.ಅರವಿಂದ್ ಕುಮಾರ್ ಅವರ ಪ್ರಕಾರ, ಬರಿಗಣ್ಣಿನಿಂದ ಸೂರ್ಯಗ್ರಹಣವನ್ನು ನೋಡುವುದು ಸೋಲಾರ್ ರೆಟಿನೋಪತಿ ಎಂದು ಕರೆಯಲ್ಪಡುವ ಪ್ರಮುಖ ರೆಟಿನಾ ಸುಡಲು ಕಾರಣವಾಗಬಹುದು.


ಸಾಮಾನ್ಯವಾಗಿ ಸೂರ್ಯನಿಂದ ಬಿಡುಗಡೆಯಾಗುವ ತೀವ್ರವಾದ ಬೆಳಕಿನ ಕಿರಣದಿಂದ ನಾವು ಸೂರ್ಯನನ್ನು ಬರಿಗಣ್ಣಿನಿಂದ ನೋಡಲಾಗುವುದಿಲ್ಲ, ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನ ಬೆಳಕಿನ ತೀವ್ರತೆಯು ಬಹಳ ಕಡಿಮೆಯಾಗುವುದರಿಂದ ನಾವು ಬರಿಗಣ್ಣಿನಿಂದ ಸೂರ್ಯನನ್ನು ನೋಡಬಹುದು. ಆದರೆ, ನಾವು ಬರಿಗಣ್ಣಿನಿಂದ ಸೂರ್ಯನನ್ನು ನೋಡುವಾಗ ಸೂರ್ಯನಿಂದ ಬರುವ ನೇರಳಾತೀತ ಕಿರಣಗಳು ನಮ್ಮ ಕಣ್ಣುಗಳಿಗೆ ತಾಗುತ್ತದೆ ಇದು ದೃಷ್ಟಿ ನಷ್ಟಕ್ಕೂ ಸಹ ಕಾರಣವಾಗುತ್ತದೆ.


ಈ ಗ್ರಹಣದ ಸಮಯದಲ್ಲಿ ಉಂಟಾಗುವ ದೃಷ್ಟಿ ಸಮಸ್ಯೆ  ತಾತ್ಕಾಲಿಕ ಅಥವಾ ಶಾಶ್ವತ ದೃಷ್ಟಿ ಸಮಸ್ಯೆಗೆ ಕಾರಣವಾಗಬಹುದು.ಈ ಸೋಲಾರ್ ರೆಟಿನೋಪತಿ ನೀವು ಎಷ್ಟು ಸಮಯ ನೇರವಾಗಿ ಗ್ರಹಣದ ಸಮಯದಲ್ಲಿ ಸೂರ್ಯನನ್ನ ನೋಡಿದ್ದೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಸೂರ್ಯ ಗ್ರಹಣವು ರೆಟಿನಾದ ಮ್ಯಾಕುಲದ ಮೇಲೆ ಒಂದು ನಿರ್ದಿಷ್ಟ ಪ್ರಮಾಣದ ಹಾನಿಯನ್ನು ಉಂಟುಮಾಡಬಹುದು.


ಇದನ್ನೂ ಓದಿ: ಬಲಿಪಾಡ್ಯಮಿ ದಿನ ಈ ಕೆಲಸ ಮಾಡಿದ್ರೆ ಮನೆಯಲ್ಲಿ ಹಣದ ಸಮಸ್ಯೆ ಬರಲ್ಲ


ಶಾಶ್ವತವಾಗಿ ಸಮಸ್ಯೆ ಬರಬಹುದು


ಈ ಮ್ಯಾಕುಲಾದ (ರೆಟಿನಾದ ಮಧ್ಯಭಾಗ) ಹಾನಿ ವಿವಿಧ ಕಣ್ಣಿನ ಸಮಸ್ಯೆಗಳಿಗೆ ಸಹ ಕಾರಣವಾಗಬಹುದು.  ಇನ್ನು ಗ್ರಹಣವನ್ನು ನೋಡಬೇಕಾದರೆ ಸೋಲಾರ್ ಫಿಲ್ಟರ್ ಇಲ್ಲದೆ ಕ್ಯಾಮೆರಾ ಲೆನ್ಸ್, ಬೈನಾಕ್ಯುಲರ್ ಅಥವಾ ದೂರದರ್ಶಕದ ಮೂಲಕ ಸೂರ್ಯನ ಯಾವುದೇ ಭಾಗವನ್ನು ನೋಡುವುದು ಸೌರ ರೆಟಿನೋಪತಿ, ವಿವಿಧ ದೃಷ್ಟಿ ಸಮಸ್ಯೆ ಅಥವಾ ಬದಲಾದ ದೃಷ್ಟಿ ಬಣ್ಣಕ್ಕೆ ಕಾರಣವಾಗುತ್ತದೆ.


ರೆಟಿನಾವು ಯಾವುದೇ ರೀತಿಯ ನೋವನ್ನು ಗ್ರಹಿಸುವುದಿಲ್ಲ ಹಾಗಾಗಿ ಕುರುಡುತನ ಉಂಟಾಗಿದೆಯಾ ಅಥವಾ ಇಲ್ಲವೇ ಎಂದು ತಿಳಿಯುವುದು ಕಷ್ಟ. ಅಲ್ಲದೇ, ಈ ಸಮಸ್ಯೆ ಶಾಶ್ವತವಾಗಿ ಆದರೆ, ಅದನ್ನು ಸರಿ ಮಾಡಲು ಯಾವುದೇ ದಾರಿ ಇಲ್ಲ. ಜೀವನ ಪರ್ಯಾಂತ ಆ ನರಗಳ ಸಮಸ್ಯೆ ಇರುತ್ತದೆ.




ಸಾಮಾನ್ಯವಾಗಿ ಸೂರ್ಯನ ಪ್ರಖರ ಬೆಳಕಿನಿಂದಾಗಿ ನಾವು ನಮ್ಮ ಕಣ್ಣುಗಳನ್ನು ನಾವು ಮುಚ್ಚಿ ಬಿಡುತ್ತೇವೆ, ಆದರೆ ಗ್ರಹಣದ ಸಮಯದಲ್ಲಿ ನಾವು ನಮ್ಮ ಕಣ್ಣುಗಳಿಗೆ ಯಾವುದೇ ರಕ್ಷಣೆಯಿಲ್ಲದೆ ಸೂರ್ಯಗ್ರಹಣವನ್ನು ನೋಡಿ ಅಪಾಯವನ್ನು ತಂದುಕೊಳ್ಳಬೇಡಿ.


ಇದನ್ನೂ ಓದಿ: ಸೂರ್ಯ ಗ್ರಹಣದ ಸಮಯದಲ್ಲಿ ತಪ್ಪು ಮಾಡಿದ್ರೆ ಈ ಆರೋಗ್ಯ ಸಮಸ್ಯೆಗಳು ಬರಬಹುದು


ಹಾಗಾದರೆ ಕಣ್ಣಿಗೆ ಹಾನಿಯಾಗದಂತೆ ಸೂರ್ಯಗ್ರಹಣವನ್ನು ನೋಡುವುದು ಹೇಗೆ? ಗ್ರಹಣದ ಸಮಯದಲ್ಲಿ ಸೂರ್ಯನನ್ನು  ನೋಡಲು ಸೋಲರ್ ಫಿಲ್ಟರ್‌ಗಳನ್ನು ಅಳವಡಿಸಲಾಗಿರುವ ಎಕ್ಲಿಪ್ಸ್ ಗ್ಲಾಸ್‌ಗಳನ್ನು ಬಳಸಬಹುದು. ಎಕ್ಲಿಪ್ಸ್ ಗ್ಲಾಸ್‌ಗಳು ಸಾಮಾನ್ಯ ಸನ್‌ಗ್ಲಾಸ್‌ಗಳಂತೆ ಇರುವುದಿಲ್ಲ, ಗ್ರಹಣದ ಕನ್ನಡಕವು ಸಾವಿರ ಪಟ್ಟು ದಪ್ಪವಾಗಿರುವುದರಿಂದ ಅವುಗಳಿಗೆ ಪರ್ಯಾಯವಾಗಿ ಯಾವುದೇ ವಸ್ತುವಿರಲು ಸಾಧ್ಯವಿಲ್ಲ ಎಂದು ನಾಸಾ ತಿಳಿಸಿದೆ.

Published by:Sandhya M
First published: