ಸದೃಢ ಆರೋಗ್ಯಕ್ಕಾಗಿ (Health) ಮತ್ತು ದೇಹದ (Body) ಹಲವು ರೋಗಗಳನ್ನು (Disease) ಹೊಡೆದೋಡಿಸಲು ವ್ಯಾಯಾಮ (Exercise) ಮಾಡುವುದು ತುಂಬಾ ಮುಖ್ಯ. ದೇಹವು ಗಟ್ಟಿಯಾಗಲು ಮತ್ತು ಮೂಳೆಗಳು (Bones) ಚೆನ್ನಾಗಿರಲು ವ್ಯಾಯಾಮ ಮಾಡುವುದು ತುಂಬಾ ಮುಖ್ಯ. ವ್ಯಾಯಾಮ ಮಾಡಿದಾಗ ದೇಹ ಮತ್ತು ಮನಸ್ಸು ಆ್ಯಕ್ಟಿವ್ ಆಗುತ್ತದೆ. ದೇಹದಲ್ಲಿ ಚಲನಾಶಕ್ತಿಯು ಉತ್ತಮ ಭಾವನೆ ನೀಡುತ್ತದೆ. ದೇಹದ ಪ್ರತಿಯೊಂದು ಅಂಗಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಆಗ ಆರೋಗ್ಯ ವೃದ್ಧಿಯಾಗುತ್ತದೆ. ಇಲ್ಲದಿದ್ದರೆ ಕಾಯಿಲೆಗಳು ಬೇಗ ಅಂಟಿಕೊಳ್ಳುತ್ತವೆ. ಕಾಯಿಲೆಗಳಿಂದಾಗಿ ದೇಹವು ಜಡ್ಡುಗಟ್ಟುತ್ತದೆ. ದೇಹಕ್ಕೆ ವ್ಯಾಯಾಮ ಇಲ್ಲದೇ ಹೋದಾಗ ರೋಗ ನಿರೋಧಕ ಶಕ್ತಿ ಕೂಡ ಕುಂದುತ್ತದೆ. ಆಗ ಕಾಯಿಲೆಗಳ ಸಂಭವ ಮತ್ತಷ್ಟು ಹೆಚ್ಚಾಗುತ್ತದೆ.
ಮೌಂಟೇನ್ ಕ್ಲೈಂಬ್ ವ್ಯಾಯಾಮದ ಉಪಯೋಗಗಳು
ದೇಹವನ್ನು ಸದೃಢವಾಗಿಡಲು ಹಾಗೂ ಅನೇಕ ಮಾರಣಾಂತಿಕ ಕಾಯಿಲೆಗಳನ್ನು ದೂರವಿಡಲು ವ್ಯಾಯಾಮ ಮಾಡಬೇಕು. ಎದೆ, ತೋಳು, ಬೆನ್ನು, ಕೋರ್, ಕಾಲು, ಹಿಪ್ಸ್, ಸ್ಟಮಕ್ ಹೀಗೆ ಎಲ್ಲಾ ಅಂಗಗಳಿಗೂ ವ್ಯಾಯಾಮ ಬೇಕು.
ಹಾಗಾಗಿ ತುಂಬಾ ಜನರು ಫುಲ್ ಬಾಡಿ ವ್ಯಾಯಾಮ ಮಾಡುತ್ತಾರೆ. ಆದರೆ ಎಲ್ಲಾ ಅಂಗಗಳನ್ನು ಆಯ್ಕೆ ಮಾಡಿ ಮಾಡಿ ವ್ಯಾಯಾಮ ಮಾಡುವುದು ತುಂಬಾ ದಿನ ಉತ್ಸಾಹದಿಂದ ಮಾಡಲು ಸಾಧ್ಯವಾಗಲ್ಲ. ಇದು ತುಂಬಾ ಆಯಾಸ ಮತ್ತು ನೀರಸ ಭಾವ ಉಂಟು ಮಾಡುತ್ತದೆ.
ಪರ್ವತಾರೋಹಿಗಳು ಮಾಡುವ ತಾಲೀಮಿನ ಬಗ್ಗೆ ಕೇಳಿದ್ದೀರಾ? ಈ ವ್ಯಾಯಾಮವು ದೇಹದ ತೂಕದ ವ್ಯಾಯಾಮ ಆಗಿದೆ. ಇಲ್ಲಿ ಯಾವುದೇ ಉಪಕರಣಗಳು ಅಥವಾ ಯಂತ್ರಗಳು ಬೇಕಾಗುವುದಿಲ್ಲ. ನೀವು ಇದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು.
ಮೌಂಟೇನ್ ಕ್ಲೈಂಬ್ ವರ್ಕೌಟ್
ಮೌಂಟೇನ್ ಕ್ಲೈಂಬ್ ಇದು ಕಾರ್ಡಿಯೋ ಮತ್ತು ಕೋರ್ ವರ್ಕ್‌ಔಟ್ ಸಂಯೋಜಿಸುವ ತಾಲೀಮು. ಅದರಲ್ಲಿ ವೈವಿಧ್ಯತೆ ಇದ್ದರೆ ಸ್ಟ್ರೆಂತ್ ಟ್ರೈನಿಂಗ್ ಕೂಡ ಮಾಡಬಹುದು. ಈ ವ್ಯಾಯಾಮ ಮಾಡುವಾಗ ಪರ್ವತ ಏರಿದಂತೆ ಕೈ ಮತ್ತು ಪಾದಗಳನ್ನು ನೆಲದ ಮೇಲೆ ಚಲಿಸಬೇಕಾಗುತ್ತದೆ.
ಮೌಂಟೇನ್ ಕ್ಲೈಂಬ್ ವ್ಯಾಯಾಮ ಮಾಡುವುದು ಹೇಗೆ?
ಮೊದಲು ವ್ಯಾಯಾಮದ ಸ್ಥಾನದಲ್ಲಿ ಬಂದು ಕೈ ಮತ್ತು ಕಾಲುಗಳ ಮೇಲೆ ದೇಹದ ತೂಕವನ್ನು ಸಮಾನವಾಗಿ ಇರಿಸಿ. ಕೈಗಳು ಭುಜಗಳಿಗೆ ಸಮಾನವಾಗಿ ತೆರೆದಿರುವಂತೆ ನೋಡಿಕೊಳ್ಳಿ. ಈಗ ಎರಡೂ ಮಣಿಕಟ್ಟುಗಳನ್ನು ಭುಜದ ಕೆಳಗೆ ಇರಿಸಿ. ಬೆನ್ನು ನೇರವಾಗಿರಲಿ.
ಕಿಬ್ಬೊಟ್ಟೆಯ ಸ್ನಾಯುಗಳು ಬಿಗಿಯಾಗಿರಲಿ. ಕುತ್ತಿಗೆ ಸಾಮಾನ್ಯ ಸ್ಥಾನದಲ್ಲಿರಬೇಕು. ಈಗ ಸಾಧ್ಯವಾದಷ್ಟು ನಿಮ್ಮ ಬಲ ಮೊಣಕಾಲು ಎದೆಯ ಕಡೆಗೆ ತನ್ನಿ. ನಂತರ ಆರಂಭಿಕ ಸ್ಥಾನಕ್ಕೆ ಹಿಂತಿರುಗಿಸಿ. ನಂತರ ಎಡ ಮೊಣಕಾಲು ಎದೆಯ ಕಡೆಗೆ ತನ್ನಿ ನಂತರ ಸಾಮಾನ್ಯ ಸ್ಥಿತಿಗೆ ಹೋಗಿ.
ಇಡೀ ವ್ಯಾಯಾಮ ಮಾಡುವಾಗ ಉಸಿರಾಟ ಚೆನ್ನಾಗಿರಲಿ. ಇದನ್ನು ಹತ್ತು ಬಾರಿ ಮಾಡಿ. ದಿನದಿಂದ ದಿನಕ್ಕೆ ಹೆಚ್ಚಿಸುತ್ತಾ ಹೋಗಿ. 30 ವರ್ಷ ವಯಸ್ಸಿನವದಿಗೆ ಈ ವ್ಯಾಯಾಮ ಸಾಕಷ್ಟು ಪ್ರಯೋಜನಕಾರಿ. ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಮೇಲೆ ಈ ದೇಹದ ತೂಕದ ವ್ಯಾಯಾಮದ ಪರಿಣಾಮವು ಕಂಡು ಬಂದಿದೆ.
ಫಿಟ್ನೆಸ್ ಹೆಚ್ಚಿಸುವಲ್ಲಿ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. 30 ವರ್ಷ ವಯಸ್ಸಿನವರಿಗೆ ತ್ರಾಣ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳಲು ದಿನವೂ ಈ ವ್ಯಾಯಾಮ ಮಾಡುವುದು ಮುಖ್ಯ. 30 ವರ್ಷ ವಯಸ್ಸಿನ ನಂತರವೂ ಮುಂದುವರೆಸಿ.
ಇದನ್ನೂ ಓದಿ: ಹೃದಯಾಘಾತಕ್ಕೂ ಮುನ್ನಈ ಲಕ್ಷಣಗಳು ಕಾಣಿಸಿಕೊಳ್ಳುತ್ತಂತೆ, ಎಚ್ಚರ!
ಮೌಂಟೇನ್ ಕ್ಲೈಂಬ್ ವ್ಯಾಯಾಮದ ಲಾಭಗಳು
ದೇಹದೊಳಗೆ ತ್ರಾಣ ಹೆಚ್ಚುತ್ತದೆ, ತೂಕ ನಷ್ಟ ಸಂಭವಿಸುತ್ತದೆ, ಹೊಟ್ಟೆಯ ಕೊಬ್ಬು ಕರಗುತ್ತದೆ, ಕೈಗಳು ಬಲಿಷ್ಠವಾಗುತ್ತವೆ, ಭುಜಗಳ ಬಲ ಹೆಚ್ಚುತ್ತದೆ, ಕಾಲಿನ ಶಕ್ತಿ ಹೆಚ್ಚುತ್ತದೆ, ಹೃದಯದ ಕೆಲಸ ಉತ್ತಮವಾಗಿ ಆಗುತ್ತದೆ, ಇದು ಶ್ವಾಸಕೋಶದ ಆಮ್ಲಜನಕ ಸಾಗಿಸುವ ಸಾಮರ್ಥ್ಯ ಹೆಚ್ಚಿಸುತ್ತದೆ, ಎದೆಯ ಸ್ನಾಯುಗಳು ಬೆಳೆಯುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ