#MonsoonFood: ಮಳೆಗಾಲದ ತರಕಾರಿ ಅನಾರೋಗ್ಯಕ್ಕೆ ದಾರಿ

news18
Updated:July 30, 2018, 5:22 PM IST
#MonsoonFood: ಮಳೆಗಾಲದ ತರಕಾರಿ ಅನಾರೋಗ್ಯಕ್ಕೆ ದಾರಿ
news18
Updated: July 30, 2018, 5:22 PM IST
-ನ್ಯೂಸ್ 18 ಕನ್ನಡ

ಹಸಿರು ತರಕಾರಿಗಳ ಸೇವನೆಯಿಂದ ಆರೋಗ್ಯ ಹೆಚ್ಚುತ್ತದೆ. ಅದರಲ್ಲೂ ಹಸಿರು ತರಕಾರಿಗಳ ಎಲೆಗಳಲ್ಲಿ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿರುತ್ತದೆ. ಇವುಗಳ ಸೇವನೆಯಿಂದ ದೇಹಕ್ಕೆ ಹಲವು ಲಾಭಗಳಿವೆ. ಆದರೆ ಮಳೆಗಾಲದ ಸಂದರ್ಭದಲ್ಲಿ ತರಕಾರಿ ಸೊಪ್ಪುಗಳನ್ನು ಸೇವಿಸುವುದರಿಂದ ಅನಾರೋಗ್ಯದ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆಗಾಗಿ ಮನ್ಸೂನ್​ನಲ್ಲಿ ತರಕಾರಿ ಸೊಪ್ಪುಗಳನ್ನು ಸೇವನೆ ಮಾಡದಿರುವುದು ಉತ್ತಮ ಎನ್ನಲಾಗುತ್ತದೆ.

ಮಳೆಗಾಲದಲ್ಲಿ ಹಲವು ರೀತಿಯ ಹುಳುಗಳು ಸಕ್ರಿಯವಾಗಿರುತ್ತದೆ. ಈ ಸಮಯದಲ್ಲಿ ಎಲೆಗಳ ಭಾಗಗಳಲ್ಲಿಹುಳುಗಳು ಮೊಟ್ಟೆಯನ್ನಿಡುತ್ತದೆ. ಸಾಮಾನ್ಯವಾಗಿ ಇವುಗಳ ಮೊಟ್ಟೆಗಳು ಕಣ್ಣಿಗೆ ಕಾಣಿಸುವುದಿಲ್ಲ. ಈ ಹುಳುಗಳು ಮೂಲಂಗಿ, ಎಲೆಕೋಸು, ಪಾಲಕ ಮುಂತಾದ ತರಕಾರಿಗಳಲ್ಲಿ ಕಾಣ ಸಿಗುತ್ತದೆ. ಆಹಾರಗಳೊಂದಿಗೆ ಈ ಹುಳುಗಳ ಮೊಟ್ಟೆಗಳು ಹೊಟ್ಟೆ ಸೇರಿದರೆ ಯಕೃತ್ ಮತ್ತು ಮೆದುಳು ಅಥವಾ ಕರುಳಿನ ಸಮಸ್ಯೆಗೆ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು.

ಮಳೆಗಾಲದಲ್ಲಿ ತರಕಾರಿಗಳನ್ನು ಬಳಸುವಾಗ ಕೆಲ ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಅವುಗಳೆಂದರೆ...* ತರಕಾರಿ ಸೊಪ್ಪುಗಳನ್ನು ಆಹಾರಕ್ಕಾಗಿ ಬಳಸುವುದಕ್ಕಿಂತ ಮುಂಚಿತವಾಗಿ ಎರಡು ಬಾರಿ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಏಕೆಂದರೆ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾ ಅಥವಾ ಹುಳುಗಳು ತಣ್ಣನೆಯ ನೀರಿನಿಂದ ನಾಶವಾಗುವುದಿಲ್ಲ. ಇಂತಹ ಸೂಕ್ಷ್ಮಜೀವಿಗಳನ್ನು ಮೆಡಿಕಲ್ ಸೈನ್ಸ್​​ನಲ್ಲಿ ಹೈಡಿಡ್ ಸಿಸ್ಟ್ ಎಂದು ಕರೆಯಲಾಗುತ್ತದೆ.

* ಮಾನ್ಸೂನ್​ನಲ್ಲಿ ಮೋಡ ಕವಿದ ವಾತಾವರಣ ಇರುವುದರಿಂದ ಸಸ್ಯಗಳ ಮೇಲೆ ಸೂರ್ಯನ ಬೆಳಕು ತಾಗುವುದಿಲ್ಲ. ಇದರಿಂದ ಎಲೆಗಳ ಮೇಲೆ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಅಧಿಕ ಪ್ರಮಾಣದಲ್ಲಿರುತ್ತದೆ. ಆಗಾಗಿ ತರಕಾರಿಗಳನ್ನು ಅಧಿಕ ಶಾಖದಲ್ಲಿ ಬೇಯಿಸಬೇಕಾಗುತ್ತದೆ.

* ಮಳೆಗಾಲದಲ್ಲಿ ಸಿಗುವ ತರಕಾರಿ ಎಲೆಗಳನ್ನು ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಇದರಿಂದ ಸೂಕ್ಷ್ಮಜೀವಿಗಳು ನಾಶವಾಗುತ್ತದೆ. ಅಲ್ಲದೆ ಇಂತಹ ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನುವುದು ಉತ್ತಮ.

*  ಸಾಮಾನ್ಯವಾಗಿ ಮಳೆಗಾಲದಲ್ಲಿ ಕ್ರಿಮಿ ಕೀಟಗಳು ಹೆಚ್ಚಾಗಿ  ಕಂಡು ಬರುತ್ತದೆ. ಎಲೆಗಳನ್ನು ಸೇವಿಸಿ ಬದುಕುವ ಕೀಟಗಳು ಎಲ್ಲಾ ರೀತಿಯ ತರಕಾರಿ ಗಿಡಗಳಲ್ಲಿ ಕಾಣಿಸುತ್ತದೆ. ಈ ತರಕಾರಿಗಳ ಎಲೆಗಳನ್ನು ಆಹಾರದಲ್ಲಿ ಬಳಸುವುದರಿಂದ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ತರಕಾರಿಗಳನ್ನು ಕೊಳ್ಳುವಾಗ ಗಮನ ಹರಿಸಬೇಕಾಗುತ್ತದೆ.
First published:July 30, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ