ಹೊಟ್ಟೆ ಏಕೆ ಹಸಿಯುತ್ತೆ ಎಂದು ಕಾರಣ ನಿಮಗೆ ಗೊತ್ತಾ?

news18
Updated:May 28, 2018, 6:43 PM IST
ಹೊಟ್ಟೆ ಏಕೆ ಹಸಿಯುತ್ತೆ ಎಂದು ಕಾರಣ ನಿಮಗೆ ಗೊತ್ತಾ?
news18
Updated: May 28, 2018, 6:43 PM IST
ನ್ಯೂಸ್ 18 ಕನ್ನಡ

ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ಮಾತಿದೆ. ಪ್ರತಿಯೊಬ್ಬರು ಸಂಪಾದನೆಯ ಒಂದು ಭಾಗವನ್ನು ಆಹಾರಕ್ಕಾಗಿ ಖರ್ಚು ಮಾಡುತ್ತಾರೆ. ಹೀಗಾಗಿ ಹಸಿವುವಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಹಸಿವು ಉಂಟಾಗಲು ಮುಖ್ಯ ಕಾರಣವೇನು ಎಂಬುದನ್ನು ಕೆಲ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ವಿಜ್ಞಾನಿಗಳ ಪ್ರಕಾರ, ಮನುಷ್ಯನ ಮಿದುಳಿನಲ್ಲಿರುವ ಹೈಪೋಥಾಲಮಸ್ (Hypothalamus)ನಲ್ಲಿ ಎರಡು ಕೇಂದ್ರಗಳಿವೆ. ಇದು ಆಹಾರಕ್ಕೆ ಸಂಬಂಧಿಸಿದಂತೆ ಕಾರ್ಯಾ ನಿರ್ವಹಸಿಸುತ್ತದೆ. ಇದರಲ್ಲಿ ಒಂದು ಕೇಂದ್ರವು ಆಹಾರದ ಬಯಕೆಯನ್ನು ಪ್ರಚೋದಿಸಿದರೆ, ಮತ್ತೊಂದು ಹಸಿವಿನ ನಿವಾರಣೆಯನ್ನು ಮಾಡುತ್ತದೆ. ಈ ಎರಡು ಕೇಂದ್ರಗಳ ಕ್ರಿಯೆಯಿಂದ ಆಹಾರದ ಬಯಕೆ ಉಂಟಾಗುತ್ತದೆ.

ಹಾರ್ಮೋನುಗಳು ಸಹ ಹಸಿವು ಮತ್ತು ಅದರ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಸಂದರ್ಭದಲ್ಲಿ ಪ್ರೋಟೀನ್​ಗಳು ಹಸಿವಿನ ಸಮತೋಲನವನ್ನು ನಿಯಂತ್ರಿಸುತ್ತದೆ ಎಂದು ಹಾವಾರ್ಡ್​ ಮೆಡಿಕಲ್​ ಇನ್ಸಿಟಿಟ್ಯೂಟ್ ಜೆಫ್ರೆ ಫ್ರಿಡ್​ಮ್ಯಾನ್ ಕಂಡು ಹಿಡಿದಿದ್ದಾರೆ.

ಲೆಪ್ಟಿನ್ ಎಂಬ ಪ್ರೋಟೀನ್​ ವ್ಯಕ್ತಿಯ ಹಸಿವು ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಮತ್ತು ನಿಯಂತ್ರಿಸಲು ಮುಖ್ಯ ಕಾರಣವಾಗಿದೆ. ಈ ಪ್ರೋಟೀನ್​ಗಳು ಕೋಶಗಳಿಗೆ ಪ್ರವೇಶಿಸುವುದರಿಂದ ಚಯಾಪಚಯ ಕ್ರಿಯೆ ಪ್ರಾರಂಭವಾಗುತ್ತದೆ. ಅಲ್ಲದೆ ಜೀನ್ ಅಥವಾ ಗ್ರಹಿಕೆಯ ಪ್ರೋಟೀನ್​ನಲ್ಲಿ ಯಾವುದೇ ದೋಷ ಕಂಡು ಬಂದರೆ ಚಯಾಪಚಯ ಕ್ರಿಯೆಗೆ ತೊಂದರೆ ಉಂಟಾಗುತ್ತದೆ. ಇದು ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
First published:May 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...